ಬೆಂಗಳೂರು: ವಿಶೇಷ ಚೇತನರಿಗೆ ಅನುಕಂಪ ಆಧಾರ ಬೇಡ ಅವಕಾಶಗಳನ್ನು ಕೊಟ್ಟರೆ ಜನಸಾಮಾನ್ಯರಂತೆ ಅವರು ಸಹ ಸಮಾಜದಲ್ಲಿ ಉತ್ತಮ ಸ್ಥಿತಿಗೆ ಕೊಂಡೊಯ್ಯಲು ಹಾಗೂ ತಲುಪಲು ಸಾಧ್ಯ ವಾಗುತ್ತದೆ ಎಂದು ಸಂಸದ ಡಾಕ್ಟರ್ ಸಿಎನ್ ಮಂಜುನಾಥ್ ತಿಳಿಸಿದರು.
ರಾಷ್ಟ್ರೀಯ ಅಂದರ ಒಕ್ಕೂಟ ಕರ್ನಾಟಕ ವಿಭಾಗಸಂಸ್ಥೆಯ 21ನೇ ವಾರ್ಷಿಕ ದಿನಾಚರಣೆ ಸಮಾರಂಭ ಹಾಗೂ ಸರ್ ಲೂಯಿ ಬ್ರ್ರೈಲ್ ರವರ 217ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು,
ಸಂಸ್ಥೆಯು ಹಲವು ಯೋಜನೆಗಳನ್ನು ಮಾಡುತ್ತಾ ಬಂದಿದೆ. ಭಾರತದಲ್ಲಿ ಸುಮಾರು 50 ಲಕ್ಷ ಅಂದರು ಇದ್ದಾರೆ, ಇಂತಹ ಆಘಾತಕಾರಿ ವಿಚಾರ ನೋವಿನ ಸಂಗತಿಯಾಗಿದೆ . ಇದಕ್ಕೆ ಸರ್ಕಾರ ಸಂಘಟನೆ ಸಹಕಾರ ನಿಗಾ ವಹಿಸಬೇಕಾಗಿದೆ. ಸಮಾಜದಲ್ಲಿ ಇರುವ ಸಾಕಷ್ಟು ವಿಶೇಷ ಚೇತನರಿಗೆ ವಿವಿಧ ರೀತಿಯಲ್ಲಿ ದೃಷ್ಟಿ ದೋಷ ಬಂದಿದೆ. ಸಕ್ಕರೆ ಕಾಯಿಲೆ ನಿಯಂತ್ರಣ ಮಾಡದಿದ್ದರೆ ಕಣ್ಣು ಕಳೆದುಕೊಳ್ಳುವ ಸಂಭವ ಇರುತ್ತದೆ. ಸಕ್ಕರೆ ಕಾಯಿಲೆ ಇರುವವರು ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ ಎಂದರು.
ಕಣ್ಣಿನ ದೋಷವನ್ನು ಕೆಲವರಿಗೆ ದೋಷ ಸರಿ ಮಾಡಬಹುದು ಕೆಲವರಿಗೆ ಮಾಡಲು ಸಾಧ್ಯವಾಗಲ ,ಅದು ದೇವರ ವರ ಎನ್ನಬಹುದು. ರೋಟರಿಯಿಂದ ಸಾಕಷ್ಟು ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಕಣ್ಣಿನ ದೃಷ್ಟಿ ದೋಷ ಇರಬಹುದು ಆದರೆ ಮೆದುಳಿಗೆ ಅಲ್ಲ ಎಂದರು. ವಿಶೇಷ ಚೇತನರೂ ಸಹಾ ಸಾಕಷ್ಟು ದೂರದೃಷ್ಟಿ ಹೊಂದಿದ್ದಾರೆ. ಹಾಗೆ ಸಾಕಷ್ಟು ಸಾಧನೆ ಮಾಡಿದ್ದಾರೆ.
ಟ್ರಾಫಿಕ್ ರೂಲ್ಸ್ ಅಳವಡಿಸಿಕೊಳ್ಳುವಲ್ಲಿ ವಿಶೇಷ ಚೇತನರೆ ಮುಂದು:
ಟ್ರಾಪಿಕ್ ರೂಲ್ಸ್ ಅನ್ನು ಪಕ್ಕಾ ಮಾಡುವವರು ದೃಷ್ಟಿ ದೋಷ ಇರುವವರು, ಜಯದೇವದಲ್ಲಿ 75 ಸಾವಿರ ರೊಗಿಗಳನ್ನು ತಪಾಸಣೆ ಮಾಡಿದ್ದಾರೆ. ಸಾವಿರಾರು ಶಸ್ತ್ರ ಚಿಕಿತ್ಸೆ ಮಾಡಿದ್ದೇನೆ.ನಾನು ಸಂಸದರಾದರೂ ಸಹಾ ವೈದ್ಯಕೀಯ ವೃತ್ತಿ ಬಿಟ್ಟಿಲ್ಲ, ವರ್ಷಕ್ಕೆ ಒಮ್ಮೆ ರುದ್ರೊಗ ತಪಾಸಣೆ ಉಚಿತವಾಗಿ ಮಾಡಿಕೊಡಲಾಗುತ್ತದೆ. ಅದಕ್ಕೆ ಸಂಸ್ಥೆಯವರು ಆಗಮಿಸಿ ಮಾತನಾಡಿದರೆ ವಿಶಿತ ನರಿಗೆ ವಿಶೇಷವಾದಂತಹ ಹೃದ್ರೋಗ ತಪಾಸಣೆ ನಡೆಸಿಕೊಡಲಾಗುತ್ತದೆ ನಮ್ಮ ಸಹಕಾರ ಸದಾ ಇರುತ್ತದೆ.
ವಿಶೇಷ ಚೇತನರಿಗೆ ಹಲವು ಸ್ಪರ್ದೆ ಆಯೋಜನೆ ಮಾಡಲಾಗಿತ್ತು. ಅದರಲ್ಲಿ ಗೆದ್ದವರಿಗೆ ಪ್ರಥಮ , ದ್ವಿತೀಯ, ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು.
ಕಾಸಿಯಾ ಅಧ್ಯಕ್ಷ ಗಣೇಶ್ ಮಾತನಾಡಿ, 20 ವರ್ಷಗಳ ಕಾಲ ನಿರಂತರವಾಗಿ ಸಮಾಜಸೇವೆ ಮಾಡಿಕೊಂಡು ಬರಲಾಗುತ್ತಿದೆ. ಒಂದು ದೇಶದ ಅಭಿವೃದ್ದಿ ಆರ್ಥಿಕತೆಯಿಂದ ಮಾತ್ರವಲ್ಲ ,ಬದಲಿಗೆ ಅಂದರನ್ನು ಒಂದು ದೇಶದ ಪಾಲುದಾರನ್ನಾಗಿ ಮಾಡಬೇಕು. ರಾಷ್ಟ್ರ ನಿರ್ಮಾಣದಲ್ಲಿ ಅಂದರ ಪಾತ್ರ ಬಹಳ ಮುಖ್ಯವಾಗುತ್ತದೆ. ಸಮಗ್ರ ಉದ್ಯೊಗ, ನೀಡಬೇಕು.
ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗ ನೀಡಬೇಕು. ಇವೆಲ್ಲದಕ್ಕೂ ಕಾಸಿಯಾ ಮುಂದೆ ಬರಲು ಬದ್ದವಾಗಿದೆ. ದಾನಧರ್ಮ ಮಾಡುವುದು ಬೇಡ ಅವರಿಗೆ ಅವಕಾಶ ಕೊಡಬೇಕು ಎಂದು ಜನಸಾಮಾನ್ಯರಿಗೆ ತಿಳಿಹೇಳಿದರು.
ದೂರದರ್ಶನದ ಉಪನಿರ್ದೇಶಕೆ ಮೇಘನಾ ಮಾತನಾಡಿ, ಎನ್ ಎಫ್ ಬಿ ಪ್ರತಿ ವರ್ಷ ನನಗೆ ಪ್ರಮೋಷನ್ ಕೊಡುತ್ತಿದ್ದಾರೆ. ಯಾರು ದೇವರು ದಿಂಡರು, ಗುಡಿ, ಗೋಪುರ ದೇವರ ಜಾಣಲು ಸೇವೆ ಮಾಡಲು ಹೊಗುವ ಬದಲು ಅಂದರ ಸೇವೆ ಮಾಡಿದರೆ ಅದು ನಿಜವಾದ ಸೇವೆ. ಅಂದರು ಅವರವರ ಕಾರ್ಯದಲ್ಲಿ ಸೇವೆ ಮಾಡಿದಾಗ ಅದು .
ಅಂದರಲ್ಲಿ ಶ್ರೇಷ್ಟ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಹಾಗು SSLCಯಲ್ಲಿ ಪಾಸಾದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಅದನ್ನು ಪ್ರತಿ ವರ್ಷ ಮಾಡುತ್ತಾ ಬಂದಿದ್ದೇವೆ. ಅದಕ್ಕೆ ಪ್ರತಿ ವರ್ಷವೂ ಸಹ ನಾನು ಸಾಕ್ಷಿಯಾಗುತ್ತಿದ್ದೇನೆ ಎಂದರು. ನಾನು ಸಹ ಮೊದಲಿಂದಲೂ ಸಂಸ್ಥೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ. ಸಂಸ್ಥೆಯು ನನ್ನನ್ನು ಗುರುತಿಸಿದ್ದು ನನ್ನ ಸಾಧನೆಗೆ ಮತ್ತೊಂದು ಸಾಕ್ಷಿಯಾಗಿದೆ.
ಕಾರ್ಯಕ್ರಮದಲ್ಲಿ ಗೌತಮ್ ಅಗರ್ ವಾಲ್, ಡಾ.ಸಿಎನ್ ಮಂಜುನಾಥ್, , ಭಾರತೀಯ ಅಂದರ ಆಯೋಗದ ಆಯುಕ್ತರು ಗೋವಿಂದರಾಜ್ , ದೂರದರ್ಶನದ ಅಪರ ನಿರ್ದೇಸಕಿ ಮೇಘನಾ, ಕೃಷ್ಣ ಮೂರ್ತಿ, ಸಂಸ್ಥೆಯ ರಾಜ್ಯಾಧ್ಯಕ್ಷರಾದ ನಾಗರಾಜು, ದಶರತ್, ರೋಟರಿ ನಿರ್ದೇಶಕರಾದ ಸೋಮಶೇಕರ್ ,ಮಧು ಸಿಂಗಮ್ ಸೇರಿದಂತೆ ರಾಜ್ಯದ ಅನೇಕ ವಿಶೇಷ ಚೇತನರ ಸಂಘ-ಸಂಸ್ಥೆಗಳು ಹಾಗೂ ವಿಶೇಷ ಚೇತನರು ಇದೇ ವೇಳೆ ಉಪಸ್ಥಿತರಿದ್ದರು.