LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಸರ್ಕಾರ ಮಟ್ಟದಲ್ಲಿ ಆಗಬೇಕು

ಬೆಂಗಳೂರು: ಮೈಸೂರು ರಾಜಮನೆತನದ ಉನ್ನತ ರಾಜರಲ್ಲಿ ಒಬ್ಬರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕರ್ನಾಟಕ ರಾಜ್ಯ ಸೇರಿದಂತೆ ದೇಶಕ್ಕೆ ಪ್ರಪಂಚಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು  ಜಯಚಾಮರಾಜೇಂದ್ರ ಒಡೆಯರ್  ಅವರ ಮೊಮ್ಮಕ್ಕಳು, ಮಂಟೇಸ್ವಾಮಿ ಮಠ ಪೀಠಾಧಿಪತಿಗಳಾದ ಪೂಜ್ಯ ಶ್ರೀ ವರ್ಚಸ್ವಿನ್ ಶ್ರೀಕಂಠ ಸಿದ್ಧಲಿಂಗರಾಜೇ ಅರಸ್ ತಿಳಿಸಿದರು.news_1781972557_4_909.webp

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಕ್ರೀಡಾ ಮತ್ತು ಸಾಂಸ್ಕೃತಿ ವೇದಿಕೆ,  ಕರ್ನಾಟಕ ರಾಜ್ಯ ಭೋವಿ ಯೂತ್ ಬ್ರಿಗೇಡ್ ಒಕ್ಕೂಟ,ಕರ್ನಾಟಕ ಅರಸು ಮತ್ತು ರಾಜು ಕ್ಷತ್ರಿಯ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ ಮಾಡಲಾಯಿತು ಈ ಒಂದು ಕಾರ್ಯಕ್ರಮದ ಘನ ಉಪಸ್ಥಿತಿಯಲ್ಲಿ ಪೂಜ್ಯರು ಭಾಗವಹಿಸಿ ಮಾತನಾಡಿ, ಇದು ಕೇವಲ ಸಂಘ ಸಂಸ್ಥೆಗಳು ದಿನಾಚರಣೆಗಳನ್ನು ಮಾಡಿಕೊಂಡು ಬರಲಾಗುತ್ತದೆ ಆದರೆ ಅವರು ಬೆಂಗಳೂರು ಸೇರಿದಂತೆ ಮೈಸೂರು ಹಳೆ ಮೈಸೂರು ಭಾಗ ಇಡೀ ಕರ್ನಾಟಕಕ್ಕೆ ಅವರ ಕೊಡುಗೆ ಅಪಾರವಾಗಿದೆ ಹೀಗಾಗಿ ಸರ್ಕಾರದ ಮಟ್ಟದಲ್ಲಿ ದಿನಾಚರಣೆಯನ್ನು ಮಾಡಬೇಕಾಗಿದೆ ಹಾಗೂ ವಿಧಾನಸೌಧದ ಆವರಣದಲ್ಲಿ ಅವರ ಪುತ್ತಲೆಯನ್ನು ಪ್ರತಿಷ್ಠಾಪಿಸಬೇಕಾಗಿದೆ ಅದರ ಜೊತೆಗೆ ಗೌರ್ಮೆಂಟ್ಸ್ ದಿನಾಚರಣೆಯನ್ನು ಯು ಸಹ ಮಾಡುವುದರಲ್ಲಿ ಯಾವುದೇ ರೀತಿಯ ತಪ್ಪು ಇಲ್ಲ ಈ ಬಗ್ಗೆ ತಾವೆಲ್ಲರೂ ಸೇರಿಕೊಂಡು ಸಂಘ ಸಂಸ್ಥೆಗಳು ಒಟ್ಟಾಗಿ ಸರ್ಕಾರಕ್ಕೆ ಒಂದು ಸಂದೇಶವನ್ನು ತಿಳಿಸುವ ಕೆಲಸವನ್ನು ನಾವೆಲ್ಲ ಸೇರಿಕೊಂಡು ಮಾಡಬೇಕಾಗಿದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಅಧ್ಯಯನ ಪೀಠ ವಾಗಿ ಸಾಕಷ್ಟು ವಿಸೃತವಾದಂತಹ ಚರ್ಚೆಗಳು ಇವರ ಬಗ್ಗೆ ನಡೆಯಬೇಕಾಗಿದೆ ರಾಜ್ಯ ಮಟ್ಟದಲ್ಲಿ. ಈ ಸಂಬಂಧ ನಾನು ಅಂಕಿ ಅಂಶಗಳನ್ನೆಲ್ಲಾ ಒಳಗೊಂಡ ದಾಖಲಾತಿಗಳನ್ನು ಕಲೆ ಹಾಕುತ್ತಿದ್ದೇನೆ ಬುದ್ಧಿಜೀವಿಗಳ ಸಮಕ್ಷಮದಲ್ಲಿ ಎಲ್ಲರೂ ಸೇರಿಕೊಂಡು ಸರ್ಕಾರಕ್ಕೆ ಮನವಿ ಮಾಡುವ ಒಂದು ಆಶಾಭಾವನೆಯನ್ನು ವ್ಯಕ್ತಪಡಿಸಿದರು ಇದರಿಂದ ನಾಡಿನ ಜನಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯವರ ಕೊಡುಗೆ ವಿಚಾರಗಳು ತಿಳಿಸುವ ಕೆಲಸ ತಮ್ಮಿಂದ ಆದರೆ ಅದರಷ್ಟು ಮಾತು ಅಂತ ಕೆಲಸ ಮತ್ತೊಂದು ಇಲ್ಲ ಎಂದು ಅಭಿಪ್ರಾಯಪಟ್ಟರು.

ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಭೋವಿ ಮಠ ಅವರು ಮಾತನಾಡಿ, ನಾಡಿನ ಸಮಸ್ತ ಜನತೆಯೂ ಸಹ ದಿನ ಎದ್ದು ಯಾರ್ಯಾರ ನೆನೆಯಲಿ ಎಂಬುದಕ್ಕೆ ಸಮರ್ಪಕವಾದಂತಹ ಉತ್ತರ ದಿನ ಬೆಳಿಗ್ಗೆ ಸಹ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದರು.  ಕೇವಲ ನಾಲ್ವಡಿ ಅವರು ರಾಜಮಾನತನದಲ್ಲಿ ರಾಜರಾಗಿ ಆಳ್ವಿಕೆ ಮಾಡಿದ್ದಲ್ಲದೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಕೆರೆಕಟ್ಟೆಗಳನ್ನು ಡ್ಯಾಮ್ಗಳನ್ನು ನೀರಾವರಿ ಸಂಬಂಧಿಸಿದಂತೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರ ಪ್ರದೇಶಗಳಿಗೆ ಸಂಬಂಧಿಸಿದಂತೆ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಆಡಳಿತದ ವಿಚಾರವಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ದಿವಾನರ ಅಡಿಯಲ್ಲಿ ಕೆಲಸ ಮಾಡಿರುವುದು ಶ್ರೇಷ್ಠತೆಯ ಸಂಗತಿಯಾಗಿದೆ ಎಂದರು.news_1781972551_0_365.webp

ಇಂತಹ ಮಹಾನ್ ಪುರುಷರನ್ನು ಸರ್ಕಾರ ಕಡೆಗಣಿಸುತ್ತಿರುವುದು ದುರಂತ ಹಾಗೂ ಸೂಚನೆಯ ಸಂಗತಿ ಆಗಿದೆ ಎಂದರು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಬುದ್ಧಿಜೀವಿಗಳು ಮನವಿ ಮಾಡಬೇಕಾಗಿದೆ ಎಂದರು.

ಇತಿಹಾಸ ಸಾರುವ ಕೆಲಸವನ್ನು ಮಾಡುತ್ತಿರುವ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರು ಮಾತನಾಡಿ ,ನಾಲ್ವಾಡಿಬಕೃಷ್ಣರಾಜ ಒಡರಯರ್ ಅವರ ದಿನಾಚಾರಣೆಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಬೇಕಾಗಿದೆ.  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತ ಮಾಡದೆ ನಾವೆಲ್ಲಾ 365 ದಿನಗಳನ್ನು  ನೆನೆಯಬೇಕು.  ಅವರು ನಾಡಿನ ಜನತೆಗೆ ಕೊಟ್ಟ ಕೊಡುಗೆ ಅಪಾರ.  ಮೈಸೂರಿಗೂ ಬೆಂಗಳೂರಿಗೂ ಅವಿನ ಭಾವ ಸಂಬಂಧವನ್ನು ನಾಲ್ವಡಿ ಅವರು ಇಟ್ಟುಕೊಂಡಿದ್ದರು. ಹೀಗಾಗಿ ಸಾಕಷ್ಟು ಹೆಸರುಗಳು ಅವರ ಆಳ್ವಿಕೆಯಲ್ಲಿ ಬೆಂಗಳೂರಿನಲ್ಲಿ ನೋಡಬಹುದಾಗಿದೆ ಅದರಲ್ಲಿ ಕೋಟೆ ಕೊತ್ತಲಗಳು ಮಾರುಕಟ್ಟೆಗಳು ಆಸ್ಪತ್ರೆಗಳು ವಿದ್ಯಾ ಕೇಂದ್ರಗಳು ಪ್ರಮುಖ ಯಾತ್ರಾ ಸ್ಥಳಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಅವರ ಆಳ್ವಿಕೆಯ ಕುರುಹುಗಳು ಇಂದಿಗೂ ಹಜರಾಮರವಾಗಿವೆ.

ಲೇಖಕರು ಹಾಗೂ ಉಪನ್ಯಾಸಕರಾದ ಲಕ್ಷ್ಮಿ ಕಿಶೋರ್  ಅರಸ್  ಮಾತನಾಡಿ ನಾಲ್ವಡಿ  ಕೃಷ್ಣರಾಜ ಒಡೆಯರ್ ಅವರು ಕರ್ನಾಟಖ್ಕೆ ಮಾತ್ರವಕ್ಕ, ದೇಶಕ್ಕೆ ಮಾತ್ರವಲ್ಲ, ಪ್ರಪಂಚಕ್ಕೆ ನೀಡಿರುವ ಕೊಡುಗೆ ಮಾತ್ರ ಅಪಾರವಾಗಿದೆ. ಅಡಿಯಿಂದ ಮುಡಿಯ ವರೆಗೆ ಬೆಂಗಳೂರಿಗೆ ನೀಡಿತುವ ಕೊಡುಗೆ ಇದೆ. ಕೇವಲ ಕೆಆರ್ ಎಸ್ ಮಾತ್ರವಲ್ಲದೆ, ಹಳೆ ಮೈಸೂರಿನ ಜನರಾಗಿರುವ ನಾವು ನಾಲ್ವಡಿ ಅವರನ್ನು  ದಿನ ಎದ್ದು ನಾವು ನಾಲ್ವಡಿಯವರನ್ನು ನೆನೆಯಬೇಕು ಎಂದರು.news_1781972552_2_630.webp

ಕಾರ್ಯಕ್ರಮದಲ್ಲಿ  ನಾಲ್ವಡಿ ಕೃಷ್ಣ ರಾಜ ಒಡೆಯರ್ ಕ್ರೀಡಾ ಮತ್ತು ಸಾಂಸ್ಕೃತಿ ವೇದಿಕೆ - ಅಧ್ಯಕ್ಷ ಧನುಷ್ ಎಸ್ ,ಕರ್ನಾಟಕ ರಾಜ್ಯ ಭೋವಿ ಯೂತ್ ಬ್ರಿಗೇಡ್ ಒಕ್ಕೂಟ- .ಮುನಿ ಕುಮಾರ್ ಎಂ, ಕರ್ನಾಟಕ ಅರಸು ಮತ್ತು ರಾಜು ಕ್ಷತ್ರಿಯ ಪ್ರತಿಷ್ಠಾನ

ಸಂಯುಕ್ತಾಶ್ರಯದಲ್ಲಿ -ದಿನೇಶ್ ಅರಸ್, ಪೂಜ್ಯ ಶ್ರೀ ಕೃಷ್ಣಕುಮಾರ್  ಮಹಾರಾಜ್ ಮೂಡಲಗಿ ಮಠ,ವಿಶ್ವ ಒಕ್ಕಲಿಗ ಮಠದ ಪೀಠಾಧಿಪತಿ ನಿಶ್ಚಲಾನಂದ್ ನಾಥ ಸ್ವಾಮಿಜಿ , ಚಂದ್ರಶೇಖರ್,ನಿ.ನ್ಯಾಯಾಧೀಶರು

ಮುನಿಕುಮಾರ್, ಸಂಗಮೇಶ್ ಶರಣರು, ಸುಭಾಷ್ ಚಂದ್ರ ರಾತೋಡ್, ನಾಗರಾಜ ಮೂರ್ತಿ ಸೇರಿದಂತೆ ಸಂಘಟನೆಗಳ ಅಧ್ಯಕ್ಷರು ಉಪಾಧ್ಯಕ್ಷರು ಖದಾಂಸೆ ಕಾರ್ಯದರ್ಶಿ ಹಾಗೂ ಸಂಘದ ಪದಾಧಿಕಾರಿಗಳು ಇದೆ ವೇಳೆ ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೋದಿ ಆಡಳಿತಾವಧಿಯಲ್ಲಿ ಅನ್ನದಾತನ ಆರ್ಥಿಕ ಸ್ಥಿತಿ ಸುಧಾರಣೆ: ಹೆಚ್.ಡಿ. ಕುಮಾರಸ್ವಾಮಿನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಸರ್ಕಾರ ಮಟ್ಟದಲ್ಲಿ ಆಗಬೇಕುವಿವಾದದ ಕೇಂದ್ರವಾದ ಉತ್ತರ ಪ್ರದೇಶದ ಬಾಲ ಶ್ರೀರಾಮ ಮಂದಿರಸ್ವರ್ಣರಶ್ಮೀ ಕೌಶಲ್ಯಾಭಿವೃದ್ಧಿ, ತರಬೇತಿ ಸಂಸ್ಥೆಯ ನೂತನ ಕಟ್ಟಡದ ಶಿಲಾನ್ಯಾಸSIR ವೇಳೆ ಮತಗಟ್ಟೆ ಮಟ್ಟದ ಅಧಿಕಾರಿಗಳು (BLOs) ನಡುವೆ ಸುವ್ಯವಸ್ಥಿತ ಸಂವಹನಕ್ಕೆ ಅವಕಾಶ ಕಲ್ಪಿಸಿಕೊಡಿ: ರಮೇಶ್ ಬಾಬು ಮನವಿವರ್ತೂರು ಎಸ್‌ಟಿಪಿ (𝗦𝗧𝗣) ಘಟಕದಲ್ಲಿ ಕಾರ್ಯಾಚರಣೆ ಚುರುಕು - ಮೃತ ಕಾರ್ಮಿಕರ ಪತ್ತೆಗಾಗಿ ಎನ್‌ಡಿಆರ್‌ಎಫ್ (𝗡𝗗𝗥𝗙) ನಿಯೋಜನೆಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿದಿದ್ದಕ್ಕೆ ಪೆಟ್ರೋಲ್,ಡೀಸೆಲ್ ಬೆಲೆಗಳನ್ನು  ಕಡಿತಗೊಳಿಸಿ- ಕೇಂದ್ರಕ್ಕೆ ಆಗ್ರಹಮೈಸೂರಿನಲ್ಲಿ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 2026ರ ಅಧಿಕೃತ ಗೀತೆ ಬಿಡುಗಡೆ; ಮೈಸೂರು ವಾರಿಯರ್ಸ್ನ ನಾಯಕ ವೈಶಾಖ್  ಆಯ್ಕೆಛತ್ರಪತಿ ಶಿವಾಜಿ ಮಹಾರಾಜರು ಪ್ರಾರಂಭಿಸಿದ ಮತಾಂತರಿತರ ‘ಶುದ್ಧೀಕರಣ’ಕ್ಕೆ 350 ವರ್ಷಗಳು ಪೂರ್ಣ!ಸಮತಾ ಸೈನಿಕ ದಳ ಯುವ ಘಟಕದಿಂದ ಸಮಾನತೆಯ ಸಮಾವೇಶ