ಬೆಂಗಳೂರು: ಮೂಡಗೆರೆ ಶಾಸಕರಾದ ನಯನ ಮೋಟಮ್ಮ ರವರನ್ನು ಮಹಿಳಾ ಕೋಟಾದಲ್ಲಿ ಮಂತ್ರಿ ಮಾಡಬೇಕೆಂದು ಡಾಕ್ಟರ್ ಬಿಆರ್ ಅಂಬೇಡ್ಕರ್ ರಾಜ ಹೋರಾಟ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಸುಮ ಬಸವಲಿಂಗಯ್ಯ ಒತ್ತಾಯವನ್ನು ಮಾಡಿದರು.
ಬೆಂಗಳೂರಿನ ಸೇನೆಯ ವತಿಯಿಂದ ಮಹಿಳಾ ಮುಖಂಡರ ಸಹಯೋಗದಲ್ಲಿ ಪ್ರತಿಭಟನೆಯನ್ನು ನಡೆಸಿ ಸರ್ಕಾರಕ್ಕೆ ಮನವಿಯನ್ನು ಮಾಡಿಕೊಳ್ಳಲಾಯಿತು ಮೂಡಿಗೆರೆ ವಿಧಾನಸಬಾ ಕ್ಷೇತ್ರದ ಶಾಸಕರಾದ ನಯನಮೋಟಮ್ಮ ರವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಮಹಿಳೆಯರಿಗೆ ಒಂದು ಸ್ಥಾನವನ್ನು ಕೊಟ್ಟಿಲ್ಲ ಈ ಕಾರಣದಿಂದ ಇವರು ಕಾಂಗ್ರೇಸ್ ಪಕ್ಷದ ಶಿಸ್ತು ಮತ್ತು ಕೆಲಸದಲ್ಲಿ ಕ್ಷೇತ್ರದಲ್ಲಿ ಜನ ಮೆಚ್ಚಿದ ನಾಯಕಿಯಾಗಿ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಇಲ್ವಂತೆ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ.
ಇವರ ತಾಯಿ ಮೋಟಮ ರವರು ಸಚಿವರಾಗಿ ಸ್ರ್ತೀ ಶಕ್ತಿ ಗುಂಪನ್ನು 2.00ಕ್ಕಿಂತ ಹೆಚ್ಚು ಮಹಿಳೆಯರಿಗೆ ಮತ್ತು ಎ.ಐ.ಸಿಸಿಯಲ್ಲಿ ಕಾರ್ಯಕಾರಣಿ ಸದಸ್ಯರಾಗಿ ಮತ್ತು ವಿಧಾನಪರಿಷತ್‌ನಲ್ಲಿ ವಿರೋಧಪಕ್ಷದ ನಾಯಕಿಯಾಗಿ ರಾಜ್ಯ ಕಂಡ ದಕ್ಷ ಆಡಳಿತ ನೀಡಿದ್ದಾರೆ. ಈಗ ನಯನ ಮೋಟಮ್ಮ ರವರು ಮತ್ತು ವಿದ್ಯಾರ್ಹತೆ, ಪಕ್ಷದಲ್ಲಿ ಶಿಸ್ತಿನ ಶಿಫಾಯಿ ಇರುವುದರಿಂದ ಪಕ್ಷದ ಯುವ ತರುಣೆ ರಾಜ್ಯದಲ್ಲಿ ಕೆಲಸ ಮಾಡುವುದಕ್ಕೆ ಆಸಕ್ತಿ ಇರುತ್ತದೆ. ಡಿ.ಕೆ. ಶಿವಕುಮಾರ ಸಂಪುಟದಲ್ಲಿ ಮಹಿಳೆರಾದ ನಯನ ಮೋಟಮ್ಮ ರವರಿಗೆ ಮಂತ್ರಿ ಮಾಡಬೇಕಾಗಿ ಕೋರುತ್ತೇವೆ.
AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರು ಸೋನಿಯಾ ಗಾಂಧಿಯವರು, ರಾಹೂಲ್ ಗಾಂಧಿಯವರು ಪ್ರಿಯಾಂಕ ಗಾಂಧಿಯವರು ಮತ್ತು ಬಿ.ಕೆ. ಹರಿಪ್ರಸಾದ್ ರವರು ಕೆ.ಪಿ.ಸಿಸಿ ಕರ್ನಾಟಕ ಮತ್ತು ಮುಖ್ಯ ಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರು ಮತ್ತು ಉಪ ಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ್ ರವರು ನಯನ ಮೋಟಮ್ಮ ರವರನ್ನು ಸಚಿವರನ್ನಾಗಿ ಮಾಡಬೇಕೆಂದು ನಮ್ಮ ಸಂಘಟನೆಯ ಬೇಡಿಕೆ ಮತ್ತು ಆಗ್ರಹವಾದ ಒತ್ತಾಯ.
ಇನ್ನು ನಯನ ಮೋಟಮ್ ಅವರು ಪಕ್ಷಕ್ಕೆ ಯಾವುದೇ ರೀತಿಯ ಕಪ್ಪು ಚುಕ್ಕೆ ಬಾರದ ಹಾಗೆ ಪಕ್ಷ ಕಟ್ಟುವಾಗ ಸಂಘಟಿಸುವ ವಿಚಾರದಲ್ಲಿ ಮುಂದೆ ನಿಂತು ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ ಹೀಗಾಗಿ ಯುವ ಸಮೂಹವನ್ನು ಮುಂದೆ ಬಿಟ್ಟು ಸಚಿವ ಸ್ಥಾನ ಕೊಟ್ಟು ಅವರ ಶಕ್ತಿ ಏನೆಂಬುದನ್ನು ರಾಜ್ಯ ಹಾಗೂ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನ ಮಾಡಬೇಕಾಗಿದೆ ಎಂದರು.
ಪ್ರತಿಭಟನೆಯಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ರಾಜ್ಯ ಹೋರಾಟ ಸೇನೆಯ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಸೇನೆಯ ಉಪಾಧ್ಯಕ್ಷರು ಕರೆನ್ಸಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಅಧ್ಯಕ್ಷರು ಹಾಗೂ ಸೇನೆಯ ಪದಾಧಿಕಾರಿಗಳು ಸಚಿವ ಸ್ಥಾನ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.