LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೈಜ್ಞಾನಿಕ ಚಿಂತನೆ, ಬಹು ಉಪಯೋಗಿ ಸಂಸ್ಥೆಗಳೊಂದಿಗೆ ಭಾರತವನ್ನು ನಿರ್ಮಿಸಿದ ನೆಹರು

1947ರಲ್ಲಿ ದೇಶಕ್ಕೆ ಸ್ವಾತಂತ್ರ ಬಂದ ಸಂದರ್ಭದಲ್ಲಿ ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಅರಿವಿಲ್ಲದಂತಹ ಜನ ನೆಹರುರವರು ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೆ. 

ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಏನೇನು ಇಲ್ಲದೆ ಇದ್ದಾಗ ಸಾಕ್ಷರತೆಯನ್ನ ಹೆಚ್ಚಿಸುವ ಸಲುವಾಗಿ, ಜನರಲ್ಲಿ ವೈಜ್ಞಾನಿಕವಾದ ಮನೋಭಾವವನ್ನು ಬೆಳೆಸುವ ಕಾರಣದಿಂದ ಮತ್ತು ಭಾರತವನ್ನು ವಿಶೇಷವಾದ ಸಂಸ್ಥೆಗಳ ಮೂಲಕ ಕಟ್ಟುವಂತಹ ಪ್ರಯತ್ನ ನಡೆಸಿದ ಫಲವೇ ಅನೇಕ ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಕೈಗಾರಿಕೆಗಳು. 

ನೆಹರು ರವರು ಅಣೆಕಟ್ಟುಗಳು ಮತ್ತು ಕೈಗಾರಿಕೆಗಳು ಜನರ ಬದುಕನ್ನು ಬದಲಾಯಿಸಬಲ್ಲ ಗುಡಿಗಳೆಂದು ಭಾವಿಸಿ ಅವುಗಳನ್ನು ಸ್ಥಾಪಿಸಿದರು. ಅಂದು ಅವರು ಅಡಿಪಾಯ ಹಾಕಿದ ಕೈಗಾರಿಕಾ ಕ್ರಾಂತಿ ಮತ್ತು ಸಂಶೋಧನಾ ಸಂಸ್ಥೆಗಳ ಫಲವೇ ಭಾರತದಿಂದ ಜಗತ್ತಿಗೆ ಮಾನವ ಸಂಪನ್ಮೂಲ ಹಂಚಿಕೆಯಾಗುತ್ತಿರುವುದು. 

ನೆಹರು ರವರು ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆಮನೆ ವಾಸವನ್ನ ಅನುಭವಿಸಿದ್ದಾರೆ ,ಇವೆಲ್ಲವನ್ನೂ ಲೆಕ್ಕ ಹಾಕಿದರೆ ಏಳು ವರ್ಷಕ್ಕೂ ಹೆಚ್ಚು ಕಾಲ ಸೆರೆಮನೆ ವಾಸ ಇವರ ಪಾಲಿಗೆ ಬಂದಿದೆ. ಸೆರೆಮನೆಯಲ್ಲಿ ಸುಮ್ಮನೆ ಕುಳಿತಿರದೆ ತಮ್ಮ ಪಾಂಡಿತ್ಯ ಮತ್ತು ಅನುಭವವನ್ನು ಬಳಸಿಕೊಂಡು ಇವರು ಬರೆದಂತಹ ಡಿಸ್ಕವರಿ ಆಫ್ ಇಂಡಿಯಾ, ಮಗಳಿಗೆ ನೆಹರುರವರು ಬರೆದ ಪತ್ರಗಳ ಸಂಪುಟ, glimpses world history, ಪುಸ್ತಕಗಳು ಜಗತ್ತಿನಾದ್ಯಂತ ಎಲ್ಲರ ಗಮನವನ್ನು ಸೆಳೆಯಿತು, ಭಾರತದ ಹಿರಿಮೆ, ಭಾರತದ ವಿಚಾರಗಳು ಜಗತ್ತಿಗೆ ಪರಿಚಯವಾಯಿತು, ಇವರ ಕೃತಿಗಳು ಅನೇಕ ಭಾಷೆಗಳಿಗೆ ಭಾಷಾಂತರವಾಯಿತು , ಇಂದಿಗೂ ಸಹ ನೆಹರುರವರ ಕೃತಿಗಳು ಅತ್ಯಂತ ಮಹತ್ವ ಪಡೆದಿದೆ. 

ಶ್ರೀಮಂತ ಮನೆಯಲ್ಲಿ ಹುಟ್ಟಿ, ಶ್ರೀಮಂತಿಕೆಯೊಂದಿಗೆ ಬೆಳೆದು, ಮಹಾತ್ಮ ಗಾಂಧೀಜಿ ರವರ ಸಂಪರ್ಕಕ್ಕೆ ಬಂದು ಅವರ ಅನುಯಾಯಿಯಾಗಿ ಸರಳತೆಯನ್ನು ಮೈಗೂಡಿಸಿಕೊಂಡು ಗಾಂಧಿ ಕಂಡ ಸಮೃದ್ಧ, ಸಮಾನತೆಯ, ಸದೃಢ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರಮಾಣಿಕವಾದ ಹೆಜ್ಜೆಗಳನ್ನು ಇಟ್ಟ ಕಾರಣದಿಂದಲೇ, ಭಾರತ ಇಂದು ವಿಶ್ವದ ಶ್ರೇಷ್ಠ ದೇಶಗಳಲ್ಲಿ ಒಂದಾಗಿದೆ. 

ನೆಹರುರವರು ಕಟ್ಟಿದಂತಹ ಅಣೆಕಟ್ಟುಗಳು ಭಾರತ ದೇಶದ ಗ್ರಾಮೀಣ ಪ್ರದೇಶದ ಜನರಿಗೆ ನೆರವಾಗುವುದರ ಜೊತೆಗೆ ಕೃಷಿ ಚಟುವಟಿಕೆಗಳು ಚಿಗುರಲು ಕಾರಣವಾಯಿತು. ಭಾರತದಲ್ಲಿ ಆಹಾರ ಉತ್ಪಾದನೆಗೆ ನೀರಾವರಿ ಸೌಲಭ್ಯಗಳು ಪ್ರಮುಖ ಎಂಬುದನ್ನ ಅರಿತಿದ್ದರು, ರೈತರ ಹೊಲಗದ್ದೆಗಳಿಗೆ ನೀರು ಹರಿಸಿದರೆ ಹಸಿರು ಕಂಗೊಳಿಸಿದರೆ ಸಮೃದ್ಧ ಭಾರತ ಸಾಧ್ಯ ಎಂಬುದ ಅರಿತಿದ್ದರು. 

ಪ್ರಜಾಪ್ರಭುತ್ವದ ಆಶಯಗಳ ಅನುಗುಣವಾಗಿ ರಾಗ, ದ್ವೇಷ, ಅಸೂಯೆಗಳಿಲ್ಲದೆ ವಿರೋಧ ಪಕ್ಷದ ನಾಯಕರನ್ನು ಸೈದಾಂತಿಕವಾದ ಭಿನ್ನಾಭಿಪ್ರಾಯಗಳ ಕಾರಣದಿಂದ ಮಾತ್ರವೇ ಕಾಣುತ್ತ, ವಿರೋಧ ಪಕ್ಷದ ನಾಯಕರುಗಳಿಗೂ ಸಹ ಮನ್ನಣೆ ಅವರ ಪ್ರತಿಭೆಗಳಿಗೆ ಗೌರವವನ್ನು ಕೊಡುತ್ತಾ ಪ್ರಜಾಪ್ರಭುತ್ವದ ಪ್ರೇಮಿಯಾಗಿ ಮೆರೆದಿದ್ದಾರೆ ಎಂಬುದಕ್ಕೆ ದೇಶದ ಅನೇಕ ಪಕ್ಷದ ನಾಯಕರುಗಳ ಮಾತುಗಳು ಉದಾಹರಣೆಯಾಗಿ ಚರಿತ್ರೆಯಲ್ಲಿ ದಾಖಲಾಗಿದೆ. 

ಹತ್ತಾರು ಒಳಿತುಗಳನ್ನು ಮಾಡಿರುವ ಸಂದರ್ಭದಲ್ಲಿ ರಾಜಕೀಯವಾಗಿ ಮತ್ತು ಅಂದಿನ ಸಂದರ್ಭದಲ್ಲಿ ಅನುಗುಣವಾಗಿ ಅಥವಾ ಅನಿವಾರ್ಯವಾಗಿ ತೆಗೆದುಕೊಂಡಂತಹ ಕೆಲವು ನಿರ್ಣಯಗಳನ್ನು ದೊಡ್ಡದಾಗಿ ಮಾಡುತ್ತಾ ದೇಶದ ಎಲ್ಲ ಅನಾಹುತಗಳಿಗೆ ನೆಹರೂರವರೆ ಕಾರಣ ಎಂದು ಬಿಂಬಿಸುತ್ತ ಸಣ್ಣತನವನ್ನ ತೋರುತ್ತಿರುವ ಜನರು, ನೆಹರುರವರ ವಿಚಾರಗಳನ್ನು ಸರಿಯಾದ ದೃಷ್ಟಿಕೋನದಿಂದ ಅಧ್ಯಯನ ಮಾಡಿದಾಗ ಅವರ ದೂರದೃಷ್ಟಿತ್ವದ, ಮುಂದಾಲೋಚನೆಯ ನಾಯಕತ್ವ ಅರಿವಾಗುತ್ತದೆ. 

ಪಂಚವಾರ್ಷಿಕ ಯೋಜನೆಗಳು ಭಾರತ ದೇಶದ ಚಿತ್ರಣವನ್ನೇ ಬದಲಾಯಿಸಿತು ಎನ್ನುವುದು ವಿಶ್ವದ ಎಲ್ಲ ರಾಜಕೀಯ ವಿಶ್ಲೇಷಕರ ಮಾತುಗಳಾಗಿದೆ, ಪಂಚವಾರ್ಷಿಕ ಯೋಜನೆಗಳ ಮೂಲಕ ಭಾರತ ದೇಶದಲ್ಲಿ ಸೌಲಭ್ಯ ಸೌಕರ್ಯಗಳನ್ನು ಎಲ್ಲರಿಗೂ ತಲುಪಿಸುವಂತಹ ಕೆಲಸವನ್ನು ನೆಹರೂರವರು ಮಾಡಿದ ಕಾರಣದಿಂದಲೇ ,ಇಂದು ಭಾರತ ದೇಶದಲ್ಲಿ ಅನೇಕ ಕ್ಷೇತ್ರದಲ್ಲಿ ನಾವು ವಿಶ್ವದ ಗಮನವನ್ನು ಸೆಳೆದಿದ್ದೇವೆ. 

ನೆಹರುರವರು ಸುಧೀರ್ಘವಾದ ಅವಧಿಗೆ ದೇಶದ ಪ್ರಧಾನಿಯಾಗಿ ಹಲವಾರು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ದುರಂತವೆಂದರೆ ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಮುಖರು ನೆಹರುರವರನ್ನ ವಿಕೃತವಾಗಿ ಚಿತ್ರಿಸುತ್ತ ಸಂಭ್ರಮಿಸುತ್ತಿದ್ದಾರೆ. ಯಾರು ಏನೇ ಮಾಡಿದರು ನೆಹರುರವರು ಕೈಗಾರಿಕೆಗಳನ್ನ ಸ್ಥಾಪಿಸಿ ಲಕ್ಷಾಂತರ ಮಂದಿಗೆ ಉದ್ಯೋಗದ ಅವಕಾಶವನ್ನ ಕಲ್ಪಿಸಿ ಕೊಟ್ಟಿರುವುದನ್ನು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. 

ಐಐಎಂ, ಐಐಟಿ ,ವೈಜ್ಞಾನಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು, ಇವುಗಳನ್ನು ನೆಹರುರವರು ಪ್ರಗತಿಪರವಾದ ಆಲೋಚನೆಗಳ ಹಿನ್ನೆಲೆಯಲ್ಲಿ ನಿರ್ಮಿಸಿದ್ದಾರೆ ಎನ್ನುವುದನ್ನು ಯಾರು  ನಿರಾಕರಿಸಲು ಸಾಧ್ಯವಿಲ್ಲ.

ಲೋಹಿಯಾ ರವರನ್ನು, ಅಟಲ್ ಬಿಹಾರಿ ವಾಜಪೇಯಿ ಅವರನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಕಾಣುತ್ತಿದ್ದರು, ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಬಾರದಂತೆ ನಡೆದುಕೊಂಡಿದ್ದಾರೆ ಎನ್ನುವುದನ್ನು ಯಾರು ಒಪ್ಪದಿರಲು ಸಾಧ್ಯವಿಲ್ಲ.

ನೆಹರುರವರ ಪುಣ್ಯ ಸ್ಮರಣೆ ದಿನದಂದು ಅವರ ವಿಶಾಲ ಮನೋಭಾವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಅವರು ಹಾಕಿದ ಗಟ್ಟಿಯಾದ ಅಡಿಪಾಯಗಳ ಬಗ್ಗೆ ಸ್ಮರಿಸಿಕೊಳ್ಳುತ್ತಾ ಗೌರವದ ನಮನಗಳನ್ನು ಸಲ್ಲಿಸುತ್ತಿದ್ದೇವೆ. 

-ಕೆಎಸ್ ನಾಗರಾಜ್ .

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಜ್ಞಾನಿಕ ಚಿಂತನೆ, ಬಹು ಉಪಯೋಗಿ ಸಂಸ್ಥೆಗಳೊಂದಿಗೆ ಭಾರತವನ್ನು ನಿರ್ಮಿಸಿದ ನೆಹರುನುರಿತ ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : ಆಯುಕ್ತ ಕೆ ಎನ್ ರಮೇಶ್ಪಾದಚಾರಿ ಮಾರ್ಗ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಸುರಕ್ಷ 75 ಸಂಬಂಧ ಇಂಜಿನೀಯರ್ ಗಳಿಗೆ ಕಾರ್ಯಗಾರFCC,ಗೌಶುಭಮ್, ರಾಜ್ಯ ರೈತ ಸಂಘ  ದೊಂದಿಗೆ ರೈತರನ್ನ ಉತ್ತೇಜಿಸಲು ನಡಿಗೆ ಜಾಥಭಾರತದ ಶ್ರೇಷ್ಠ ಗಣಿತಜ್ಞ 'ಆರ್ಯಭಟ'ರ ವಿಡಂಬನೆ ಪ್ರಕರಣ: ಅಮೆಜಾನ್ ಇಂಡಿಯಾಗೆ ಕಾನೂನು ನೋಟಿಸ್ ಬಿಡದಿ ರೈತರು ಅಸಲಿ ರೈತರೋ ಅಲ್ಲವೋ; ಮುಖ್ಯಮಂತ್ರಿಗೆ ಸವಾಲು ಹಾಕಿದ ಹೆಚ್.ಡಿ.ಕುಮಾರಸ್ವಾಮಿಸಿಎಂಟಿಐಗೆ ಹೆಚ್ಚಿನ ಆರ್ಥಿಕ ನೆರವು; ವಿಸ್ತರಣಾ ಯೋಜನೆ ಕೈಗೊಳ್ಳುವುದಾಗಿ HDK ಘೋಷಣೆಘನತ್ಯಾಜ್ಯ ವಿಲೇವಾರಿ ಬಗ್ಗೆ ಆರ್ ಅಶೋಕ್ ಅಪಪ್ರಚಾರ:ಕೆಪಿಸಿಸಿ ವಕ್ತಾರರಾದ ಎಂ ಲಕ್ಷ್ಮಣ್ ಉತ್ತರ ನರಶಸ್ತ್ರಚಿಕಿತ್ಸಾ ದಲ್ಲಿ KIMS ಆಸ್ಪತ್ರೆಗಳೊಂದಿಗೆ ಬ್ರೈನ್‌ಲ್ಯಾಬ್ ಪಾಲುದಾರಿಕೆನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದ ಮತದಾರರಿಗೆ, ಅರ್ಹ ಫಲಾನುಭವಿಗಳಿಗೆ