LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೆಡಿಎಸ್ ಹೋರಾಟದ ವಿಷಯ ಕೇಳಿ ಸರ್ಕಾರಕ್ಕೆ ತಳಮಳ ಶುರುವಾಗಿದೆ, ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಇದು ಜೆಡಿಎಸ್ ಪಕ್ಷದ ಸ್ಲೋಗನ್ ಅಲ್ಲ. ರಾಜ್ಯದ ಏಳೂವರೆ ಕೋಟಿ ಜನರ ಮನದಾಳದ ಮಾತನ್ನ ನಾವು ಹೇಳಿದ್ದೇವೆ. ನಮ್ಮ ಈ ಹೋರಾಟ ಒಂದು ದಿನದ ಅಭಿಯಾನ ಅಲ್ಲ. ಈ ಹೋರಾಟ ಕಾಂಗ್ರೆಸ್ ಅಧಿಕಾರ ಇರುವವರೆಗೂ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರವನ್ನ ಅವರು ತರಾಟೆಗೆ ತೆಗೆದುಕೊಂಡರು.

ಸಾಕಪ್ಪ ಸಾಕು ಎಂಬ ಘೋಷವಾಕ್ಯ ದೊಂದಿಗೆ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡು ಶೂನ್ಯವಾಗಿದೆ. ಕಾಂಗ್ರೆಸ್ ಎರಡು ವರ್ಷಗಳ ಅಧಿಕಾರದಲ್ಲಿ ರಾಜ್ಯದ ಜನತೆಗೆ ಸಂಕಷ್ಟದ ದಿನಗಳನ್ನ ತಂದೊಡ್ಡಿದೆ. ಬರ್ತ್ ಸರ್ಟಿಫಿಕೇಟ್ ನಿಂದ ಡೆತ್ ಸರ್ಟಿಫಿಕೇಟ್ ವರೆಗೂ ದರ ಹೆಚ್ಚಳ ಮಾಡಿದ್ದಾರೆ. ಬಸ್,ಮೆಟ್ರೋ,ಆಸ್ಪತ್ರೆ ಶುಲ್ಕ ಎಲ್ಲದರ ಬೆಲೆ ಏರಿಕೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಈ ಸರ್ಕಾರದಲ್ಲಿ ನಾವು ತೆಗೆದುಕೊಳ್ಳುವ ಗಾಳಿ ಒಂದು ಬಿಟ್ಟು ಇನ್ನೆಲ್ಲ‌ದರ ಬೆಲೆ ಏರಿಕೆ ಮಾಡಿದ್ದಾರೆ. ಸಿಎಂ ಆರ್ಥಿಕ ಸಲಹೆಗಾರರೇ ಕರ್ನಾಟಕದಲ್ಲಿ ಭ್ರಷ್ಟಾಚಾರ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಸತ್ಯವಾದ ಮಾತನ್ನ ಹೇಳಿದ್ದಾರೆ, ಬಸವರಾಜ ರಾಯರೆಡ್ಡಿ ಅವರೇ ನಮಗೊಂದು ಅವಕಾಶ ಕೊಡಿ ಕಮೀಷನ್ ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆ ಮಾಡ್ತೀವಿ. ಸ್ವ ಪಕ್ಷದ ಸಚಿವರ ಕುಟುಂಬಸ್ಥರು ಕಮಿಷನ್ ಏಜೆಂಟ್ ಆಗಿ ಕೆಲಸ ಮಾಡ್ತಿದ್ದಾರೆ ಎಂದು ಅವರು ಆರೋಪಿಸಿದರು.

*ರಾಜ್ಯದಲ್ಲಿ ಆರ್ಥಿಕ ಸುನಾಮಿ ದಿನ ಹತ್ತಿರ ಬಂದಿದೆ*

ಈ ಸರ್ಕಾರದಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿರುವವರು ಜೆಡಿಎಸ್ ಪಕ್ಷದಲ್ಲಿ ತುಂಬಾ ಜನ ಇದ್ದಾರೆ. ಮುಂದಿನ ಚುನಾವಣೆಗೆ ಅವರುಗಳು ಹೇಗೆ ಜನಗಳ ಬಳಿ ಹೋಗಿ ಮತಯಾಚನೆ ಮಾಡ್ಬೇಕು. ಹಿಮಾಚಲದಲ್ಲಿ ನಿಮ್ಮದೆ ಪಕ್ಷದವರು ಗ್ಯಾರಂಟಿ ಕೊಡ್ತೀವಿ ಎಂದು ಹೇಳಿ ಆರ್ಥಿಕ ಸುನಾಮಿ ಮಾಡಿದ್ದಾರೆ. ಕಾಂಗ್ರೆಸ್ ಎರಡೇ ವರ್ಷಕ್ಕೆ ಎರಡು ಲಕ್ಷ ಕೋಟಿ ಸಾಲ ಮಾಡಿದ್ದೀರಿ ರಾಜ್ಯದ ಜನರನ್ನ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.

*ಎರಡು ವರ್ಷದಲ್ಲಿ ಎರಡು ಲಕ್ಷ ಕೋಟಿ ಸಾಲ*

ಈ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದಲ್ಲಿ 16ನೇ ಬಜೆಟ್ ಮಂಡಿಸಿದ್ದಾರೆ. ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಎರಡು ಲಕ್ಷ ಕೋಟಿ ಸಾಲ ಮಾಡಿದ್ದೀರಿ. ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಐದು ಗ್ಯಾರಂಟಿ ಕೊಡ್ತೀವಿ ಅಂದರ ಈಗ ಪರಿಸ್ಥಿತಿ ಏನಾಗಿದೆ. ಜನರೇ ಗ್ಯಾರಂಟಿ ಬೇಡ ಅಂತ ಹೇಳ್ತಿದ್ದಾರೆ. ತೆಲಂಗಾಣದಲ್ಲಿ ಸಿಎಂ ರೇವಂತರೆಡ್ಡಿ ಗ್ಯಾರಂಟಿ ಇಷ್ಟು ಕಷ್ಟ ಅಂತ ಗೊತ್ತಿರಲಿಲ್ಲ ಅಂತ ಹೇಳಿದ್ದಾರೆ ಎಂದು ಕಿಡಿಕಾರಿದರು.

*ಹನಿ ಟ್ರಾಪ್, ಮನಿ ಟ್ರಾಪ್,ತೆರಿಗೆ ಟ್ರಾಪ್, ಕಮೀಷನ್ ಟ್ರಾಪ್*

ಸದನದ ಒಳಗೆ, ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಿಷಯಾಧಾರಿತ ಚರ್ಚೆ ಆಗಬೇಕು ಅಂತ ನಿರೀಕ್ಷೆ ಇತ್ತು.ನಮ್ಮಂತಹಾ ಯುವಕರು ಸದನದ ಬಗ್ಗೆ ಗೌರವಯುತ ಭಾವನೆ ಇಟ್ಟು ಕೊಂಡಿರುತ್ತೇವೆ,

ಅದರೆ ಮಿನಿಸ್ಟರ್‌ಗಳಿಗೆ ಹನಿ ಟ್ರಾಪ್, ಹೈಕಮಾಂಡ್‌ಗೆ ಮನಿ ಟ್ರಾಪ್, ಜನರಿಗೆ ತೆರಿಗೆ ಟ್ರಾಪ್, ಕಂಟ್ರಾಕ್ಟರ್‌ಗಳಿಗೆ ಕಮೀಷನ್ ಟ್ರಾಪ್ ಬಗ್ಗೆ ಚರ್ಚೆಮಾಡ್ತಾರೆ.ಅಭಿವೃದ್ಧಿ ಬಿಟ್ಟು, ಬೇರೆಲ್ಲಾ ಚರ್ಚೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

*ಯುದ್ಧಕ್ಕೆ ಜನತಾದಳ ಪಕ್ಷ ಸಿದ್ದ*

ಒಂದು ಲಕ್ಷ ಕೋಟಿ ಅಭಿವೃದ್ಧಿಗೆ ಮಾಡ್ತೀರಾ.? ವೇತನ ಕೊಡ್ತೀರಾ.? ಇಲ್ಲ ಗ್ಯಾರಂಟಿ ಕೊಡ್ತೀರಾ.? ಹಿಂದೆ ಸಮ್ಮಿಶ್ರ ಸರ್ಕಾರ ಇದ್ದಾಗ, ಪ್ರತಿನಿತ್ಯ ಕುಮಾರಸ್ವಾಮಿ ಅವರಿಗೆ ನೋವನ್ನ ಕೊಟ್ಟರು. ನೋವನ್ನ ಮೆಟ್ಟಿ, ಸಾಲ ಮನ್ನ ಮಾಡಿದ್ರು.ಎಷ್ಟು ಬಾರಿ ಕುಮಾರಣ್ಣ ಅವರಿಗೆ ಅಪಮಾನ ಮಾಡಿದ್ರಿ ಈಗ ಹೋರಾಟಕ್ಕೆ ಕಾಲಿಟ್ಟಿದ್ದೇವೆ.ಯುದ್ಧಕ್ಕೆ ಜನತಾದಳ ಪಕ್ಷ ಸಿದ್ದವಿದೆ ಎಂದರು

*ಕಾಂಗ್ರೆಸ್ ಜನ ಸಾಮಾನ್ಯರಿಗೆ ವಿಷ ಬೀಜ ಬಿತ್ತುತ್ತಿದೆ*

ಕಳೆದ ಎರಡು ವರ್ಷಗಳಿಂದ SIT, ಲೋಕಾಯುಕ್ತ ಇಂಡಿಪೆಂಡೆಂಟ್ ಬಾಡಿ ಇದೆ.ಅದರ ಮೇಲೆ ನನಗೆ ಗೌರವ ಇದೆ.ಆದರೆ ಅವುಗಳ ದುರ್ಬಳಕೆ ಮಾಡಿಕೊಳ್ತಿದ್ದೀರಿ.

ಇಂದು ಕಾಂಗ್ರೆಸ್ ಜನ ಸಾಮಾನ್ಯರಿಗೆ ವಿಷ ಬೀಜ ಬಿತ್ತುತ್ತಿದೆ.ಈಗ ನೀವು ಏನು ಮಾಡ್ತಿದ್ದೀರಿ.? ಕಾಲ ಚಕ್ರ ಉರುಳಲಿದೆ.ಮತ್ತೆ ನಮ್ಮ ಕಡೆ ಕಾಲಚಕ್ರ ಬರಲಿದೆ ಎಂದು ಕಿಡಿಕಾರಿದರು.

*2028ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತೆ*

ದೇವೇಗೌಡರು ಹೋರಾಟದ ಮೂಲಕ ಪಕ್ಷವನ್ನ ಸ್ಥಾಪನೆ ಮಾಡಿದ್ದಾರೆ.ಪ್ರಾದೇಶಿಕ ಪಕ್ಷವನ್ನ ನಿಷ್ಠಾವಂತ ಕಾರ್ಯಕರ್ತರು ಕಟ್ಟಿ ಬೆಳೆಸಿದ್ದಾರೆ.ನನಗೆ ಒಂದೇ ಕನಸು.ಏನೂ ನಿರೀಕ್ಷೆ, ಬಯಕೆ ಇಲ್ಲದೆ ಕಾರ್ಯಕರ್ತರು ಪಕ್ಷ ಬೆಳೆಸಿದ್ದೀರಿ.ಅವರನ್ನು ಗುರುತಿಸಿ ಮೇಲೆ ತರಬೇಕಿದೆ. ಮುಂದೆ ಜನ ಪಕ್ಷವನ್ನ ಸ್ವತಂತ್ರವಾಗಿ ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ