LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂ.ಮ.ಸಾ.ಸಂಸ್ಥೆ ನೌಕರರಿಗೆ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತ ಪಾವತಿ

ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಿರುವ ರಾಜ್ಯ ಸಾರಿಗೆ ನೌಕರರ ಕಣ್ಣೀರನ್ನು ಒರೆಸುವ ಹಾಗೂ ಅವರ ಸಮಸ್ಯೆಗೆ ಪ್ರೊಜೆಸರ್ಕಾರ ಸ್ಪಂದನೆಯನ್ನು ನೀಡಿದ್ದು ಹಿಂಬಾಕಿ ಮೊತ್ತವನ್ನು ನೀಡಿರುವುದು ವಿಚಾರ

ಬೆಂಗಳೂರು:  ಸರ್ಕಾರದ ಆದೇಶದಂತೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಅಧಿಕಾರಿ/ನೌಕರರಿಗೆ ದಿನಾಂಕ: 01.01.2021 ರಿಂದ 28.02.2023 ರವರೆಗೆ ಒಟ್ಟು 26 ತಿಂಗಳ 2020ರ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತ ರೂ.1271.92 ಕೋಟಿಗಳನ್ನು ಪಾವತಿಸಲು ಅನುಮೋದನೆ ನೀಡಲಾಗಿದೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

 ಸರ್ಕಾರವು ನಾಲ್ಕು ಸಾರಿಗೆ ನಿಗಮಗಳ ಅಧಿಕಾರಿ/ನೌಕರರ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತದಲ್ಲಿ ಪ್ರಸ್ತುತ ರೂ.450.00 ಕೋಟಿಗಳನ್ನು ಬಿಡುಗಡೆಗೊಳಿಸಿದ್ದು, ಅದರ ಹಂಚಿಕೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ರೂ.137.24 ಕೋಟಿಗಳು ಮಂಜೂರಾಗಿವೆ.
ಈ ಅನುದಾನದಡಿ ದಿನಾಂಕ: 01.01.2021 ರಿಂದ 30.11.2021 ರವರೆಗೆ 11 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತ ಪಾವತಿಸುವ ಸಂಬಂಧ ಕೆಳಕಂಡಂತೆ ಕ್ರಮ ಕೈಗೊಳ್ಳಲಾಗಿದೆ.

 *ಸಂಸ್ಥೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರಿಗೆ 11 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಇಂದು ದಿನಾಂಕ: 16.05.2026 ರಂದು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.* 

ದಿನಾಂಕ: 01.01.2021 ರಿಂದ 30.11.2021 ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಸೇವಾ ವಿಮುಕ್ತರಾದ (ನಿವೃತ್ತಿ/ಸ್ವಯಂ ನಿವೃತ್ತಿ/ವಜಾ/ಮರಣ/ರಾಜೀನಾಮೆ ಸೇರಿದಂತೆ) ಅರ್ಹ ಅಧಿಕಾರಿ/ನೌಕರರಿಗೆ ಹಿಂಬಾಕಿ ಮೊತ್ತವನ್ನು ದಿನಾಂಕ: 21.05.2026 ರಂದು ಪಾವತಿಸಲಾಗುವುದು.

ಇದೇ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಅಂತರ ನಿಗಮ/ಸಂಸ್ಥೆಗಳಿಗೆ ವರ್ಗಾವಣೆಗೊಂಡ ಅಧಿಕಾರಿ/ನೌಕರರ ಹಿಂಬಾಕಿ ಮೊತ್ತವನ್ನು ದಿನಾಂಕ: 22.05.2026 ರಂದು ಸಂಬಂಧಿತ ನಿಗಮ/ಸಂಸ್ಥೆಗಳಿಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಸಂಸ್ಥೆಯ ಅಧಿಕಾರಿ ಹಾಗೂ ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಆದೇಶದಂತೆ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಾಗಿದೆ ಎಂದು ಬೆಂ.ಮ.ಸಾ.ಸಂಸ್ಥೆ ತಿಳಿಸಿದೆ. 

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಡದಿ ರೈತರ ಪರ ನನ್ನ ಹೋರಾಟ  ಆರಂಭ; ಹೆಚ್.ಡಿ. ದೇವೇಗೌಡರ ಘೋಷಣೆ ಬೆಂ.ಮ.ಸಾ.ಸಂಸ್ಥೆ ನೌಕರರಿಗೆ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತ ಪಾವತಿಹಟ್ಟಿ ಚಿನ್ನದ ಗಡಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿಹಾಳ ಲಾಭ ಹೆಚ್ಚಳ :ಸಿಎಂ ಅಭಿನಂದನೆಕನಕದಾಸರು ಸಾಮಾಜಿಕ ಅವ್ಯವಸ್ಥೆ ಸರಿಮಾಡಲು ಪ್ರಾಮಾಣಿಕ ಪ್ರಯತ್ನದಿಂದ ವಿಶ್ವಮಾನವರಾಗಿ ಕಾಣಬೇಕು: ಸಿಎಂ ಸಿದ್ದರಾಮಯ್ಯಪೆಟ್ರೋಲ್ ಹಾಗೂ ಡೀಸೆಲ್‌ ದರ ಏರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಸರ್ಕಾರಿ ಪರವಾಹಣೆಗೆ ಭೂ ಮಾಪಕರ ಬೇಡಿಕೆ ಈಡೇರಿಕೆಗೆ ಆಗ್ರಹಉಚಿತ 'ರೀ-ನೀಟ್' ಬೆಂಬಲಕ್ಕೆ ನಿಂತ ದೀಕ್ಷಾ ವೇದಾಂತಹಿಜಾಬ್ ವಿಚಾರ ಕೋರ್ಟ್ ನಲ್ಲಿ ಇರುವಾಗಲೇ ಸರ್ಕಾರ ತರಾತುರಿಯಲ್ಲಿ ಆದೇಶ: ಹಿಂದೂ ಪರ ಸಂಘಟನೆಗಳ ಖಂಡನೆದಾವಣಗೆರೆ ಉಪ ಚುನಾವಣೆ ಫಲಿತಾಂಶ ನಂತರ ಕಾಂಗ್ರೆಸ್ಸಿಗೆ ದಿಢೀರ್ ಜ್ಞಾನೋದಯಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ಮತ್ತೆ ದನಿಯೆತ್ತಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ