
ಎಂ.ಜಿ. ರಸ್ತೆಯಲ್ಲಿರುವ ಪಿ.ಯು.ಬಿ. ಕಟ್ಟಡದ ಕೆನೋಪಿ ಹಾಲ್ ನಲ್ಲಿ ಜನಗಣತಿ-2027ಕ್ಕೆ ಸಂಬಂಧಿಸಿದಂತೆ, ಚಾರ್ಜ್ ಆಫೀಸರ್ಸ್, ಹೆಚ್ಚುವರಿ ಚಾರ್ಜ್ ಆಫೀಸರ್ಸ್, ಟೆಕ್ನಿಕಲ್ ಅಸಿಸ್ಟಂಟ್ ಗಳಿಗೆ, ಕಾರ್ಯಪಾಲಕ ಇಂಜಿನೀಯರ್, ಸಹಾಯಕ ಕಾರ್ಯಪಾಲಕ ಇಂಜಿನೀಯರ್ ಗಳಿಗೆ, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಮೌಲ್ಯಮಾಪಕರು, ಕಂದಾಯ ನಿರೀಕ್ಷಕರು, ಕಂದಾಯ ಪರಿವೀಕ್ಷಕರು, ಗಣಕಯಂತ್ರ ನಿರ್ವಾಹಕರು, ಇತರೆ ಜನಗಣತಿ ಕಾರ್ಯಕ್ಕೆ ನೇಮಿಸಲಾದ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಎಲ್ಲಾ ವಿಭಾಗಗಳ ಅಧಿಕಾರಿ/ಸಿಬ್ಬಂದಿಗಳು ಜನಗಣತಿ ಕಾರ್ಯವನ್ನು ಒಂದು ತಂಡವಾಗಿ ಕಾರ್ಯನಿರ್ವಹಿಸಿ, ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಲು ಸೂಚಿಸಿದರು.
*ತರಬೇತಿ ಕಾರ್ಯಕ್ಕೆ ಸಜ್ಜು: ತರಬೇತಿ ಕೇಂದ್ರಗಳ ಉಸ್ತುವಾರಿಗೆ ಅಧಿಕಾರಿಗಳ ನೇಮಕ:*
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ರಾಷ್ಟ್ರೀಯ ಜನಗಣತಿ-2027 ಕ್ಕೆ ಗಣತಿಗೆ ನೇಮಿಸಲು ತರಬೇತಿಗೆ ಹಾಜರಾಗುವ ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳಿಗೆ ತರಬೇತಿ ನೀಡಲು 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 6 ಕೇಂದ್ರಗಳನ್ನು ಗುರುತಿಸಿದ್ದು, ತರಬೇತಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪ್ರತಿ ತರಬೇತಿ ಕೇಂದ್ರಗಳ ಉಸ್ತುವಾರಿಗೆ ಕಂದಾಯ ಅಧಿಕಾರಿ ನೇತೃತ್ವದಲ್ಲಿ 10 ಅಧಿಕಾರಿಗಳ ತಂಡವನ್ನು ರಚಿಸಿ ಆದೇಶಿಸಲಾಗಿದೆ.
*6 ತರಬೇತಿ ಕೇಂದ್ರಗಳ ವಿವರ*
1). *ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ*: ಸೆಂಟ್ ಅಲೊಸಿಯಸ್ ಪದವಿ ಪೂರ್ವ ಹಾಗೂ ಪದವಿ ಕಾಲೇಜು, ಆಸ್ಸೆಯ ರಸ್ತೆ, ಕಾಕ್ಸ್ ಟೌನ್, ಬೆಂಗಳೂರ-55
2) *ಶಿವಾಜಿನಗರ ಕ್ಷೇತ್ರದಲ್ಲಿ*: ಎಸ್.ಕೆ.ಇ.ಐ. ಶ್ರೀಮತಿ ಕಮಲಾಬಾಯಿ ಎಜುಕೇಷನಲ್ ಇನ್ಸಿಟ್ಯೂಷನ್,, ಎಡ್ವರ್ಡ್ ರಸ್ತೆ ಎದುರುಗಡೆ, ಕ್ವೀನ್ಸ್ ರಸ್ತೆ, ವಸಂತನಗರ, ಬೆಂಗಳೂರು-560002.
3) *ಶಾಂತಿನಗರ ಕ್ಷೇತ್ರದಲ್ಲಿ*: ಬಾಲ್ಡ್ ವಿನ್ ಬಾಯ್ಸ್ ಹೈಸ್ಕೂಲ್ (ಬ್ಯಾಕ್ ಗೇಟ್), ಶಾಂತಿನಗರ, ಬೆಂಗಳೂರು-560025
4) *ಗಾಂಧಿನಗರ ಕ್ಷೇತ್ರದಲ್ಲಿ:* ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆ, ಆನಂದರಾವ್ ವೃತ್ತ, ಬೆಂಗಳೂರು-560020
5) *ಚಾಮರಾಜಪೇಟೆ ಕ್ಷೇತ್ರದಲ್ಲಿ:* ಆದರ್ಶ ವಿದ್ಯಾ ಸಂಘ, 5ನೇ ಮುಖ್ಯ ರಸ್ತೆ, ದೇವನಾಥಾಚಾರ್ ಬೀದಿ, ಚಾಮರಾಜಪೇಟೆ, ಬೆಂಗಳೂರು-560018
6) *ಚಿಕ್ಕಪೇಟೆ ಕ್ಷೇತ್ರದಲ್ಲಿ:* ದಿ ಪ್ರಿನ್ಸಿಪಾಲ್ / ಅಡ್ಮಿನಿಸ್ಟ್ರೇಟಿವ್ ಕಮ್ಯೂನಿಟಿ ಸೆಂಟರ್ ಎಜುಕೇಷನ್ ಇನ್ಸಿಟಿಟ್ಯೂಷನ್, ಜಯನಗರ, 2ನೇ ಬ್ಲಾಕ್, ಬೆಂಗಳೂರು-560011

*ಜನಗಣತಿ -2027 ಕಾರ್ಯಕ್ಕೆ ಗೈರಾಗುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ*
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜನಗಣತಿ-2027 ಮನೆಪಟ್ಟಿ ಮತ್ತು ವಸತಿ ಗಣತಿ ಕಾರ್ಯವು ದಿನಾಂಕ ಏಪ್ರಿಲ್ 16, 2026 ರಿಂದ ಮೇ 15, 2026 ರವರೆಗೆ ನಡೆಯಲಿದ್ದು, ಈ ಸಮೀಕ್ಷಾ ಕಾರ್ಯಕ್ಕೆ ನೇಮಿಸಲಾಗಿರುವ ಗಣತಿದಾರರು, ಮತ್ತು ಮೇಲ್ವಿಚಾರಕರನ್ನು ನೇಮಕ ಮಾಡಲಾಗಿರುತ್ತದೆ.
ಜನಗಣತಿ ಸಿಬ್ಬಂದಿಗೆ ದಿನಾಂಕ: 06-04-2026 ರಿಂದ ದಿನಾಂಕ 08-04-2026 ರವರೆಗೆ ಒಟ್ಟು 6 ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ ನೀಡಿರುವ ಆದೇಶದಲ್ಲಿ ತರಬೇತಿ ಸ್ಥಳ ಹಾಗೂ ದಿನಾಂಕಗಳನ್ನು ನಿಗದಿಪಡಿಸಲಾಗಿರುತ್ತದೆ.
ತರಬೇತಿ ಕಾರ್ಯಕ್ಕೆ ಜನಗಣತಿ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗತಕ್ಕದ್ದು. ತಪ್ಪಿದಲ್ಲಿ, ಅಂತಹ ಸಿಬ್ಬಂದಿ ವಿರುದ್ಧ ಈ ಕೆಳಕಂಡಂತೆ ಕ್ರಮ ಜರುಗಿಸಲಾಗುವುದು.
1. ಜನಗಣತಿ ಕಾಯ್ದೆ, 1948 ರ ಸೆಕ್ಷನ್ 11 ಪ್ರಕಾರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
2. ನೀಡಲಾದ ಆದೇಶಗಳನ್ನು ಪಾಲಿಸದಿದ್ದಕ್ಕಾಗಿ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, 2023 ರ ಕಲಂ 223 ಅಡಿಯಲ್ಲಿ ಪ್ರಥಮ ವರ್ತಮಾನ ವರದಿ (FIR) ದಾಖಲಿಸುವುದು.
3. ಸಂಪೂರ್ಣ ದುರ್ನಡತೆ ಮತ್ತು ಅವಿಧೇಯತೆಗಾಗಿ ಅಮಾನತ್ತು ಮತ್ತು ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು.
4. ಅನಧಿಕೃತ ಗೈರುಹಾಜರಿಯನ್ನು Dies - non (ಕೆಲಸ ಮಾಡದ ದಿನ) ಎಂದು ಪರಿಗಣಿಸಲಾಗುವುದು.

ಸಭೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಕಂದಾಯ ಅಪರ ಆಯುಕ್ತರಾದ ಶ್ರೀ ಕೆ. ರಂಗನಾಥ್, ಉಪ ಆಯುಕ್ತರು, ಕಂದಾಯ ಅಧಿಕಾರಿಗಳು, ಹಾಜರಿದ್ದರು.