LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಐತಿಹಾಸಿಕ ಕೆಂಪಾಂಬುಧಿ ಕೆರೆ ಅಭಿವೃದ್ಧಿಗೆ ಡಿಪಿಆರ್ ತಯಾರಿಸಿ: ಡಾ: ರಾಜೇಂದ್ರ ಕೆ. ವಿ

ಬೆಂಗಳೂರು : ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ರವರು ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ *ರವಿ ಸುಬ್ರಹ್ಮಣ್ಯ* ರವರು ಇಂದು ಬಸವನಗುಡಿ ವಿಭಾಗದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.news_1781186779_0_201.webp

ವೈಟ್ ಟಾಪಿಂಗ್ ಸೇರಿದಂತೆ ರಸ್ತೆ ಕಾಮಗಾರಿ ಪರಿವೀಕ್ಷಿಸಿದರಲ್ಲದೆ, ಉದ್ಯಾನ, ಕೆರೆ ಅಭಿವೃದ್ಧಿ ಕುರಿತಂತೆ ನಿರ್ದೇಶನಗಳನ್ನು ನೀಡಿದರು. ಹಕ್ಕುಪತ್ರ ಸಂಬಂಧಿತ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸಿದರು.

*ಕೆಂಪಾಂಬುಧಿ ಕೆರೆ:*
ಐತಿಹಾಸಿಕ ಕೆಂಪಾಂಬುಧಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಗಬೇಕಾದ ಕೆಲಸಗಳ ಬಗ್ಗೆ ವಿಶೇಷ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಿ ಬೇಗ ಕೆಲಸ ಆರಂಭಿಸಲು ಸೂಚಿಸಿದರು.

*ಸಿಎಂಐಡಿಪಿ ರಸ್ತೆ:*
ಹನುಮಂತನಗರದಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (ಸಿಎಂಐಡಿಪಿ) ರಸ್ತೆ (50 ಫೀಟ್‌ ರೋಡ್) ಕಾಮಗಾರಿಗೆ ಚಾಲನೆ ನೀಡಿದರು. ಮಳೆಗಾಲ ಆರಂಭವಾಗಿದ್ದು, ಶೀಘ್ರವಾಗಿ ಕೆಲಸ ಆರಂಭಿಸಿ ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸುವಂತೆ ತಿಳಿಸಿದರು.news_1781186779_1_323.webp

*ವೈಟ್ ಟಾಪಿಂಗ್:*
ಬ್ಯಾಂಕ್‌ ಕಾಲೊನಿ ಮುಖ್ಯ ರಸ್ತೆಯಲ್ಲಿ ವೈಟ್ ಟಾಪಿಂಗ್ ಕೆಲಸಗಳನ್ನು ಶೀಘ್ರವಾಗಿ ಆರಂಭಿಸಿ. ಪಾದಚಾರಿ ಮಾರ್ಗಗಳು ವ್ಯವಸ್ಥಿತವಾಗಿ ಇರುವಂತೆ, ಮಳೆನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

*ಹಕ್ಕುಪತ್ರ ಸಮಸ್ಯೆ:*
ಈ ಸಂದರ್ಭದಲ್ಲಿ ಕೆಲವು ನಾಗರಿಕರು ಹಕ್ಕುಪತ್ರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಹವಾಲು ಸಲ್ಲಿಸಿದಾಗ, ಕಾನೂನು ಪರಿಧಿಯೊಳಗೆ ಅಗತ್ಯ ಕ್ರಮ ಕೈಗೊಂಡು ಸಂತ್ರಸ್ತರಿಗೆ ನೆರವಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರರು ಬಸವರಾಜ್ ಕಬಾಡೆ, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಕಂದಾಯ ಹಾಗೂ ಆರೋಗ್ಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಕಚೇರಿ, ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಕಾರ್ಯಾರಂಭಸಮ್ಯಕ್ ಪ್ರತಿಷ್ಠಾನಮ್ ನಿಂದ ಗುರುವಂದನಾ, ಸಾಧಕರಿಗೆ ಸಂಸ್ಕೃತ ಶ್ರೀ: ಪ್ರಶಸ್ತಿ ಪ್ರದಾನತಮಿಳುನಾಡಿಗೆ ಬಿಡುವಷ್ಟು  ಕಾವೇರಿ‌ ನೀರಿಲ್ಲ: ಎಂ ಬಿ ಪಾಟೀಲಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭ: ಎಂ ಬಿ ಪಾಟೀಲಬೆಳ್ಳಂದೂರು ಎಸ್‌ಟಿಪಿಯ ಸಮಗ್ರ ತನಿಖೆ ಮುಂದುವರಿಕೆ; ಕಾರ್ಮಿಕರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳಾಮೇಕೆದಾಟು ಯೋಜನೆಯನ್ನು ತಕ್ಷಣ ಆರಂಭಿಸಿ  2 ವರ್ಷಗಳೊಳಗೆ ಪೂರ್ಣಗೊಳಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ ಸರ್ಕಾರಿ ಶಿಕ್ಷಣ ಸಂಸ್ಥೆಯ ಜಾಗ ಕಬಳಿಸಲು ಕೇಂದ್ರ ಸಚಿವರ ಉನ್ನಾರಕಾಮನ್ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಕಂಚಿನ ಮುಕುಟಮಾಲೂರು ನ್ಯಾಯಾಧೀಶೆಯ ಬೀದಿಜಗಳ? ನೊಂದವರ ಕಣ್ಣೀರು! ವಕೀಲರ ಸಂಘದಿಂದ ಹೈ ಮೆಟ್ಟಿಲುಆ.5ಕ್ಕೆ ಮುಜರಾಯಿ ದೇವಾಲಯಗಳ ಅರ್ಚಕರ,ಆಗಮಿಕರ ನೌಕರರ ಸಂಘದಿಂದ ಸಮಾವೇಶ ಅಭಿನಂದನ ಸಮಾರಂಭ