LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿ

ಬೆಂಗಳೂರು: ಭೂಮಿ ಪರಭಾರೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ಕಂದಾಯ ಇಲಾಖೆಯ ಅಪರ ಮುಖ್ಯ ಆಯುಕ್ತ  ಕಿರಣ್ ಕುಮಾರ್  ಅವರು ಕೆಲಸಕಾರ್ಯ ಮಾಡದೆ ಬೇವಾಬ್ದಾರಿ ತೋರುತ್ತಿದ್ದಾರೆ, ಇದರಿಂದ ರೈತರು ನಿತ್ಯ ಪರಿತಪ್ಪಿಸುತ್ತಿದ್ದಾರೆ ಎಂದು PTCL ಕಾಯ್ದೆ ಹೋರಾಟ ಸಮಿತಿಯ ಸದಸ್ಯ ಧನಂಜಯ ಅವರು ತಿಳಿಸಿದರು.news_1777778225_1_268.webp

ನಗರದ ಕಂದಾಯ ಭವನದಲ್ಲಿ PTCL ಕಾಯ್ದೆ ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿ, ದಲಿತರಿಗೆ ಅದರಲ್ಲೂ SC,ST ಅವರಿಗೆ PTCL ಕಾಯ್ದೆ ಮೂಲಕ ಜಮೀನುಗಳ ಪರಭಾರೆಯನ್ನು ತಡ ಮಾಡದೆ ಮಾಡಬೇಕ್ಕೆನ್ನುವ ನಿಯಮವಿದೆ, ಆದರೆ ಕಾಯಿದೆಯನ್ನು ಉಲ್ಲಂಘನೆ ಮಾಡಿ ಇಲಾಖೆಯಲ್ಲಿ ಸರಿಯಾಗಿ ಕೆಲಸ ಮಾಡದೆ ಸಾರ್ವಜನಿಕರಿಗೆ ಅದರಲ್ಲೂ ರೈತರಿಗೆ ಅಲೆದಾಡಿಸುವ ಕೆಲಸವನ್ನು ಕಿರಣ್ ಕುಮಾರ್ ಮಾಡುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳ ಕಳ್ಳಾಟದ ವಿರುದ್ದ ದಲಿತ ಪರ ಸಂಘಟನೆಗಳು ಸಾಕಷ್ಟು ಹೋರಾಟವನ್ನು ರಾಜ್ಯದಾಧ್ಯಂತ ಮಾಡಿವೆ.. ಮಾಡುತ್ತಿದ್ದಾರೆ. 

PTCL ಕಾಯ್ದೆಯಡಿ ಕಂದಾಯ ಇಲಾಖೆ ಅಪರ ಮುಖ್ಯ ಆಯುಕ್ತ  ಕಿರಣ್ ಕುಮಾರ್ ಅವರು ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಸೋಮಾರಿ ಅಧಿಕಾರಿ ಎಂದು ಹಣೆ ಪಟ್ಟಿಕಟ್ಟಿಸಿಕೊಂಡಿದ್ದಾರೆ.  ನನ್ನ ಬಳಿ ಸುಮಾರು 30 ಜನ ರೈತರ ಆವಾಲುಗಳು ನನ್ನಲ್ಲಿವೆ, ಸಹವಾಲುಗಳನ್ನು ಹೊತ್ತು ಬರುವ ಯಾವೊಬ್ಬ ಸಾರ್ವಜನಿಕರಿಗೂ ಕಿರಣ್ ಕುಮಾರ್ ಅವರು ಕೇರ್ ಮಾಡದೆ ತನ್ನ ಚೇಲಗಳನ್ನು ಮುಂದಿಟ್ಟುಕೊಂಡು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂದಾಯ ಇಲಾಖೆಗೆ ಕೆಟ್ಟ ಹೆಸರು ಬರುತ್ತೆ.

ಸಚಿವ ಕೃಷ್ಣ ಬೈರೇಗೌಡ ಅವರು ದಿಢೀರ್ ಆಗಿ ಕಂದಾಯ ಭವನಕ್ಕೆ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಕರಿ ಬಗ್ಗೆ ಕೆಂಡಮಂಡಲರಾದರು, ಆಹ್ವಾಲಗಳನ್ನು ಹೊತ್ತು ಬರುವ ಸಾರ್ವಜನಿಕರಾಗಲಿ ರೈತರಾಗಲಿ ಅವರ ಭೂಪರಾಬಾರಿಯನ್ನು ಯಾವುದೇ ಕಾರಣಕ್ಕೂ ತಡ ಮಾಡದೆ ಶೀಘ್ರ ಮಾಡಿಕೊಡಬೇಕೆಂದು ಈಗಾಗಲೇ ಸೂಚನೆಯನ್ನು ನೀಡಿ ಆದೇಶವನ್ನು ಸಹ ನೀಡಿದ್ದಾರೆ ಆದರೆ ಕಿರಣ್ ಕುಮಾರ್ ಅವರು ಸಚಿವರಿಗೂ ಕಿ ಮತ್ತು ನೀಡದೇ ಉದ್ಧಟತನವನ್ನು ಮೆರೆಯುತ್ತಿರುವುದು ಇಲಾಖೆಗೆ ಶೋಭಿತ ಇರುವಂತದ್ದಲ್ಲ ಎಂದರು.

ಸೋಮಾರಿಗಳಾಗಿರುವ ಕುಲಗೆಡಿಸುತ್ತಿರುವ,ದುರ್ಬಳಕೆ ಮಾಡಿಕೊಳ್ಳುತ್ತಿರುವ  ಅಧಿಕಾರಿಗಳನ್ನು ಈ ಕೂಡಲೇ ಕಂದಾಯ ಮಂತ್ರಿಗಳಾದ ಕೃಷ್ಣ ಬೈರೇಗೌಡ ಅವರು ಅಮಾನತು ಮಾಡಿ ಇಲ್ಲ ಬೇರೆ ಕಡೆ ವರ್ಗಾವಣೆ ಮಾಡಬೇಕೆಂದು  PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿಯಿಂದ ಬೆಂಗಳೂರು. 

ಪಿಟಿಸಿಎಲ್ ಕಾಯ್ದೆ ಹೋರಾಟ ಸಮಿತಿಯ ಜೊತೆಗೆ ಸರ್ವ ಸಂಘಟನೆಗಳ ರಾಜ್ಯಾಧ್ಯಕ್ಷರಾದ ಶಿವಕುಮಾರ್ ನಾಯಕ್ ಬಣವು ಸಹ ಕೈಜೋಡಿಸಿದ್ದು ರೈತರಿಗೆ ಅನ್ಯಾಯ ಆದರೆ ನಮ್ಮ ಸಂಘಟನೆ ಸುಮ್ಮನೆ ಕೂರುವುದಿಲ್ಲ ಎಂದು ಸರ್ಕಾರಕ್ಕೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಸಹ ಇದೇ ವೇಳೆ ನೀಡಿದರು.

ಇಷ್ಟಕ್ಕೂ ಅಧಿಕಾರಿಗಳು ಬಗ್ಗದಿದ್ದರೆ ಮುಂದಿನ ದಿನಗಳಲ್ಲಿ ಪಿ ಟಿ ಸಿ ಎಲ್ ಕಾಯಿದೆ ಹೋರಾಟ ಸಮಿತಿಯಿಂದ ಕಂದಾಯ ಭವನದ ಮುಂದೆ ಅನಿರ್ದಿಷ್ಟ ಅವಧಿ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಸಹ ನೀಡಿದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ