ಬೆಂಗಳೂರು: ಭೂಮಿ ಪರಭಾರೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ಕಂದಾಯ ಇಲಾಖೆಯ ಅಪರ ಮುಖ್ಯ ಆಯುಕ್ತ ಕಿರಣ್ ಕುಮಾರ್ ಅವರು ಕೆಲಸಕಾರ್ಯ ಮಾಡದೆ ಬೇವಾಬ್ದಾರಿ ತೋರುತ್ತಿದ್ದಾರೆ, ಇದರಿಂದ ರೈತರು ನಿತ್ಯ ಪರಿತಪ್ಪಿಸುತ್ತಿದ್ದಾರೆ.
PTCL ಕಾಯ್ದೆ ಮೂಲಕ ಜಮೀನುಗಳನ್ನು ಪರಭಾರೆಯನ್ನು ತಡ ಮಾಡದೆ ಮಾಡಬೆಡಕ್ಕೆನ್ನುವ ನಿಯಮವಿದೆ, ಆದರೆ ಕಾಯಿದೆಯನ್ನು ಉಲ್ಲಂಘನೆ ಮಾಡಿ ಇಲಾಖೆಯಲ್ಲಿ ಸರಿಯಾಗಿ ಕೆಲಸ ಮಾಡದೆ ಸಾರ್ವಜನಿಕರಿಗೆ ಅದರಲ್ಲೂ ರೈತರಿಗೆ ಅಲೆದಾಡಿಸುವ ಕೆಲಸವನ್ನು ಕಿರಣ್ ಕುಮಾರ್ ಮಾಡುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳ ಕಳ್ಳಾಟದ ವಿರುದ್ದ ದಲಿತ ಪರ ಸಂಘಟನೆಗಳು ಸಾಕಷ್ಟು ಹೋರಾಟವನ್ನು ರಾಜ್ಯದಾಧ್ಯಂತ ಮಾಡಿವೆ ಮಾಡುತ್ತಿದ್ದಾರೆ.
PTCL ಕಾಯ್ದೆಯಡಿ ಕಂದಾಯ ಇಲಾಖೆ ಅಪರ ಮುಖ್ಯ ಆಯುಕ್ತ ಕಿರಣ್ ಕುಮಾರ್ ಅವರು ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಸೋಮಾರಿ ಅಧಿಕಾರಿ ಎಂದು ಹಣೆ ಪಟ್ಟಿಕಟ್ಟಿಸಿಕೊಂಡಿದ್ದಾರೆ. ಕಂದಾಯ ಸಚಿವರು ಇಂತಹ ಅಧಿಕಾರಿ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಜೊತೆಗೆ ಅಮಾನತ್ತು ಮಾಡಿ ಆದೇಶ ಮಾಡಬೇಕೆಂದು ಆಗ್ರಹಿಸಿದರು.
ಸೋಮಾರಿಗಳಾಗಿರುವ ತಹಶಿಲ್ದಾರ್,ಸಬ್ ರಿಜಿಸ್ಟರ್, ಕೇಸ್ ವರ್ಕರ್, RI,VA ಸೇರಿಕೊಂಡು ಇಡೀ ಕಂದಾಯ ಇಲಾಖೆಯನ್ನು ಕುಲಗೆಡಿಸುತ್ತಿರುವ,ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧಿಕಾರಿಗಳನ್ನು ಈ ಕೂಡಲೇ ಮಾನ್ಯ ಮುಖ್ಮ ಮಂತ್ರಿಗಳು ಸಂಬಂಧಪಟ್ಟ ಇಲಾಖೆಗೆ ನಿರ್ದೆಶನ ನೀಡಬೇಕೆಂದು ಒತ್ತಾಯವನ್ನು ದಲಿತಪರ ಸಂಘಟನೆಗಳ ಮುಖಂಡರು ಮಾಡಿದರು.
ಈಗಾಗಲೇ PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೃಹತ್ ಹೋರಾಟ ಮಾಡಿದ್ದಾರೆ.
ಬೆಂಗಳೂರಿನಲ್ಲೂ ಏಪ್ರಿಲ್ 30 ರಂದು ಫ್ರೀಡಂಪಾರ್ಕ್ ನಲ್ಲಿ ಆಹೋರಾತ್ರಿ ಧರಣಿ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ಸಹಾ ನೀಡಲಾಗಿತ್ತು, ಆದರೆ ಇಲ್ಲಿಯ ತನಕ ಯಾವುದೇ ಸುಧಾರಣೆಗಳು ಕಂದಾಯ ಇಲಾಖೆಯಲ್ಲಿ ಕಂಡುಬಂದಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಇನ್ನು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ PTCL ಕಾಯ್ದೆಯಡಿಯಲ್ಲಿ ಬರುವ ಭೂಮಿಯನ್ನು ರಕ್ಷಣೆ ಮಾಡಿ ಇಲ್ಲ ಅಂದ್ರೆ ದಲಿತರಿಗೆ ಒಂದು ಹನಿ ವಿಷ ಹಾಕಿ ಎಂದು PTCL ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ PTC ಮಂಜುನಾಥ್ ಆಕ್ರೋಷ ವ್ಯಕ್ತಪಡಿಸಿದರು.