
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮಾವಲಿಪುರ ಬಿ.ಶ್ರೀನಿವಾಸ್ ಮಾತನಾಡಿ, ಬಿಡಿಎ ಕಾಯ್ದೆಯ ಸೆಕ್ಷನ್ 27 ಪ್ರಕಾರ ಯಾವುದೇ ಅಧಿಸೂಚನೆ ಹೊರಡಿಸಿದ ಬಳಿಕ ಅದು ಜಾರಿಯಾಗದೇ ಹೋದಲ್ಲಿ 5 ವರ್ಷಗಳ ನಂತರ ಆ ಯೋಜನೆಯೇ ರದ್ದಾಗುತ್ತದೆ. ಪಿರ್ಆಆರ್‌ಯೋಜನೆಗಾಗಿ 20 ವರ್ಷಗಳಿಂದ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಈ ಭಾಗದ ರೈತರು ಆರ್ಥಿಕ ನಷ್ಟ, ಮಾನಸಿಕ ಯಾತನೆ ಅನುಭವಿಸಿದ್ದಾರೆ. ಸ್ವಂತ ಆಸ್ತಿಯ ಮೇಲೆ ಅಧಿಕಾರ ಇಲ್ಲದೆ ಬದುಕುತ್ತಿದ್ದೇವೆ. ಆದರೆ, ಬಿಡಿಎ ನಮಗಾಗಿ ಏನೂ ಮಾಡಲಿಲ್ಲ. ಈಗ ಹಳೆಯ ಪೆರಿಫೆರಲ್ ರಿಂಗ್ ರಸ್ತೆ-1 ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಭೂ ಸಂತ್ರಸ್ತ ರೈತರಿಗೆ ಪರಿಹಾರ ಪಡೆಯಲು ಸರ್ಕಾರ ಕಲ್ಪಿಸಲಾಗಿರುವ 5 ಆಯ್ಕೆಗಳು ರೈತರ ಮರಣ ಶಾಸನವಾಗಲಿದ್ದು, ಇದನ್ನು ನನ್ನು ನಾವು ನಾವು ಒಪ್ಪುವುದಿಲ್ಲ.
ಈ ಸಂಬಂಧ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಬಿಡಿಎ ಕಾಯ್ದೆ 1894ರ ಸೆಕ್ಷನ್ 27ರ ಪ್ರಕಾರ 5 ವರ್ಷಗಳ ಅವಧಿ ಮುಗಿದಿರುವುದರಿಂದ పిఆరా ఆరా ಭಾಗ-1 ಯೋಜನೆಯನ್ನು ರದ್ದುಗೊಳಿಸಿ, ಎಲ್ಲ ಭೂ ಮಾಲಿಕರಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‌ಒಸಿ) ನೀಡಬೇಕು ಎಂದು ಆಗ್ರಹಿಸಿದರು.