LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾರ್ವಜನಿಕರು ಸಮುದಾಯ ಶ್ವಾನಗಳ ದತ್ತು ಪಡೆದುಕೊಳ್ಳಿ:ದಲ್ಜಿತ್ ಕುಮಾರ್

ಬೆಂಗಳೂರು:  ಮೋತಿ ನಂಬಿಕೆ ಮತ್ತು ಒಳಗೊಳ್ಳುವಿಕೆಯ ಆಂದೋಲನ ಮೂಲಕ ಸಾರ್ವಜನಿಕರು ಸಮುದಾಯ ಶ್ವಾನಗಳ ದತ್ತು ಪಡೆದುಕೊಳ್ಳಿ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ದಲ್ಜಿತ್ ಕುಮಾರ್ ಹೇಳಿದರು.news_1777823029_4_307.webp

"ಮೋತಿ" ಸಮುದಾಯದ ಶ್ವಾನಗಳ ದತ್ತು ನೀಡುವ ಕಾರ್ಯಕ್ರಮಕ್ಕೆ ಇಂದು ಚಾಲನೆ ಮಕ್ಕಳಿಂದ ಪೇಂಟಿಂಗ್ ಮೂಲಕ ಸಮುದಾಯದ ಶ್ವಾನ ದತ್ತು ಪಡೆಯಲು ಅರಿವು ಮೂಡಿಸುವ ಚಿತ್ರಗಳ ಅನಾವರಣ ಮಾಡಿ, ಪೇಂಟಿಂಗ್ ಮಾಡಿದ ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಮಾತನಾಡಿದ ಅವರು, ಮೋತಿ ನಂಬಿಕೆ ಮತ್ತು ಒಳಗೊಳ್ಳುವಿಕೆಯ ಆಂದೋಲನ" (MOTI) – Movement of Trust & Inclusion ಎಂಬ ವಿಶಿಷ್ಟ ಸಹಜೀವನವನ್ನು ಉತ್ತೇಜಿಸುವ ಉಪಕ್ರಮ ಅಡಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಕಬ್ಬನ್ ಪಾರ್ಕ್ ನಲ್ಲಿ  ಸಮುದಾಯದ ಶ್ವಾನಗಳನ್ನು ಸಾರ್ವಜನಿಕರು ದತ್ತು ಪಡೆಯಲು ಶ್ವಾನಗಳಲ್ಲಿ ಸಹಾನುಭೂತಿ ಮತ್ತು ಸಹಜೀವನವನ್ನು ಉತ್ತೇಜಿಸಲು ಆಯೋಜಿಸಲಾದ "ಮೋತಿ" ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.* 

ಶ್ವಾನಗಳಿಗೆ ಬಿಸಿಲಿನ ಬೇಗೆಯಿಂದ ತಣಿಕೊಳ್ಳಲು ಬೌಲ್ ನಲ್ಲಿ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ರವರು ಸಮುದಾಯ ಶ್ವಾನಗಳಿಗೆ ಬಾಯಾರಿಕೆಯಾದಾಗ ಕೇಳಲು ಮನುಷ್ಯನಂತೆ ಕೇಳಲು ಬಾಯಿ ಇರುವುದಿಲ್ಲ ಆದ್ದರಿಂದ ತಮ್ಮ ತಮ್ಮ ಮನೆಯ ಆವರಣದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶ್ವಾನಗಳಿಗೆ ಬಾಯಾರಿಕೆಯನ್ನು ನೀಗಿಸಲು ಒಂದು ಪಾತ್ರೆಯಲ್ಲಿ ನೀರನ್ನು ಇಡಲು ಕೋರಿದರು.  *ಕೇಂದ್ರ ನಗರ ಪಾಲಿಕೆಯ ವತಿಯಿಂದ ನೀಡಲಾಗುವ "ಮೋತಿ" ಶ್ವಾನಗಳನ್ನು ದತ್ತು ಪಡೆಯಲು ಅವರು ಮನವಿ ಮಾಡಿದರು.

news_1777823026_1_934.webp

ಕಂದಾಯ ಅಪರ ಆಯುಕ್ತರಾದ ಕೆ.ರಂಗನಾಥ್ ಹಾಗೂ ವಲಯ ಜಂಟಿ ಆಯುಕ್ತರಾದ ಹೇಮಂತ್ ಶರಣ್ ರವರಿಂದ *(Dogathon) ಡಾಗ್ ಥಾನ್* ಚಾಲನೆ ನೀಡಿದರು. ಸಾರ್ವಜನಿಕರು, ಪ್ರಾಣಿ ಪ್ರಿಯರು, ಸಂಘ ಸಂಸ್ಥೆಗಳು, ಎನ್.ಜಿ.ಓ ಗಳು, ಮಕ್ಕಳು ಸಮುದಾಯದ ಶ್ವಾನಗಳೊಂದಿಗೆ ಸಂಕೇತಾತ್ಮಕ (ಡಾಗಥಾನ್) ಕಾಲ್ನಡಿಗೆ ಜಾಥಾವನ್ನು ಪಾಲ್ಗೊಂಡಿದ್ದರು. 

*ಪೈಂಟ್ ವಿಥ್ ಪಪ್ಪೀಸ್ ಹಾಗೂ ಮಕ್ಕಳಿಗೆ ಪ್ರಶಂಸೆ ಪತ್ರ*

"ಮೋತಿ" ಕಾರ್ಯಕ್ರಮದ ಭಾಗವಾದ ಪೈಂಟ್ ವಿಥ್ ಪಪ್ಪೀಸ್ ಕಾರ್ಯಕ್ರಮಕ್ಕೆ ಕಂದಾಯ ಅಪರ ಆಯುಕ್ತರಾದ ರಂಗನಾಥ್.ಕೆ ಹಾಗೂ ವಲಯ ಜಂಟಿ ಆಯುಕ್ತರಾದ ಹೇಮಂತ್ ಶರಣ್ ರವರಿಂದ ಸಮುದಾಯ ಮರಿ ಶ್ವಾನಗಳ ಪಾದದ ಗುರುತುಗಳನ್ನು  ಕಾಗದದ ಮೇಲೆ ಹಾಕಿಸುವುದರ ಮೂಲಕ ಮಕ್ಕಳಿಗೆ ಹಾಗೂ ಶ್ವಾನ ಪ್ರಿಯರಿಗೆ ಪೇಂಟಿಂಗ್ ಚಟುವಟಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು ನಂತರ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು.news_1777823028_3_424.webp

*ಲಸಿಕೆ ಹಾಗೂ ಕಿಟ್ ವಿತರಣೆ*: 

ಪ್ರೀತಿಯ ಮನೆಯನ್ನು ಹುಡುಕುತ್ತಿರುವ ಸಮುದಾಯದ 4 ಶ್ವಾನಗಳನ್ನು (Indie Dogs) ಸಾರ್ವಜನಿಕರು ದತ್ತು ಪಡೆದುಕೊಂಡರು. ಈ ಸಂದರ್ಭದಲ್ಲಿ ಅಗತ್ಯ ಲಸಿಕೆಗಳನ್ನು ನೀಡಿ, ಶ್ವಾನಗಳಿಗೆ ಆಹಾರ ಕಿಟ್ ಕುತ್ತಿಗೆ ಪಟ್ಟಿ, ಚೈನ್, ವಾಟರ್ ಬೌಲ್ ಒಳಗೊಂಡ ಕಿಟ್ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಪಶು ಪಾಲನೆ ಸಹಾಯಕ ನಿರ್ದೇಶಕ ಬಸವರಾಜೇಂದ್ರ ಬಿರಾದಾರ, ಹೆಚ್.ಓ.ಡಿ. ವೀಣಾ, ಇತರೆ ನಗರ ಪಾಲಿಕೆಗಳ ಸಹಾಯಕ ನಿರ್ದೇಶಕರು, ಎನ್.ಜಿಓ ಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು, ಮಕ್ಕಳು ಭಾಗವಹಿಸಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಕಚೇರಿ, ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಕಾರ್ಯಾರಂಭಸಮ್ಯಕ್ ಪ್ರತಿಷ್ಠಾನಮ್ ನಿಂದ ಗುರುವಂದನಾ, ಸಾಧಕರಿಗೆ ಸಂಸ್ಕೃತ ಶ್ರೀ: ಪ್ರಶಸ್ತಿ ಪ್ರದಾನತಮಿಳುನಾಡಿಗೆ ಬಿಡುವಷ್ಟು  ಕಾವೇರಿ‌ ನೀರಿಲ್ಲ: ಎಂ ಬಿ ಪಾಟೀಲಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭ: ಎಂ ಬಿ ಪಾಟೀಲಬೆಳ್ಳಂದೂರು ಎಸ್‌ಟಿಪಿಯ ಸಮಗ್ರ ತನಿಖೆ ಮುಂದುವರಿಕೆ; ಕಾರ್ಮಿಕರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳಾಮೇಕೆದಾಟು ಯೋಜನೆಯನ್ನು ತಕ್ಷಣ ಆರಂಭಿಸಿ  2 ವರ್ಷಗಳೊಳಗೆ ಪೂರ್ಣಗೊಳಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ ಸರ್ಕಾರಿ ಶಿಕ್ಷಣ ಸಂಸ್ಥೆಯ ಜಾಗ ಕಬಳಿಸಲು ಕೇಂದ್ರ ಸಚಿವರ ಉನ್ನಾರಕಾಮನ್ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಕಂಚಿನ ಮುಕುಟಮಾಲೂರು ನ್ಯಾಯಾಧೀಶೆಯ ಬೀದಿಜಗಳ? ನೊಂದವರ ಕಣ್ಣೀರು! ವಕೀಲರ ಸಂಘದಿಂದ ಹೈ ಮೆಟ್ಟಿಲುಆ.5ಕ್ಕೆ ಮುಜರಾಯಿ ದೇವಾಲಯಗಳ ಅರ್ಚಕರ,ಆಗಮಿಕರ ನೌಕರರ ಸಂಘದಿಂದ ಸಮಾವೇಶ ಅಭಿನಂದನ ಸಮಾರಂಭ