LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಘುನಾಥ್ ಗೆ ಜಯ

ಬೆಂಗಳೂರು:   ಬ್ರಾಹ್ಮಣ ಪೌರೋಹಿತ್ಯ, ಅಡುಗೆ ಕೆಲಸ ಮಾಡುವವರು ಹಾಗೂ ಅರ್ಚಕ ವೃತ್ತಿ  ಸೇರಿ ಇನ್ನಿತರೆ ವೃತ್ತಿ ಮಾಡುವವರ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು ಮತ್ತು ವೃತ್ತಿ ಭಾಂದವರಿಗೆ ಆರ್ಥಿಕವಾಗಿ ಶಕ್ತಿ ತುಂಬಬೇಕು ಅವರು ಸಹ ಎಲ್ಲರಂತೆ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆಯಲ್ಲಿ ಗೆದ್ದಿರುವ ಎಸ್ ರಘುನಾಥ್ ಹೇಳಿಕೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷಗಿರಿಗೆ ನಡೆದ ಚುನಾವಣೆಯಲ್ಲಿ  ವೇದ ಪಂಡಿತ ಡಾ.ಭಾನುಪ್ರಕಾಶ್ ಶರ್ಮಾ ಹಾಗು ಎಸ್ ರಘುನಾಥ್ ಸ್ಪರ್ಧೆ ಮಾಡಿದ್ದರು, ಬೆಂಗಳೂರಿನ APS ಕಾಲೇಜಿನಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೂ ನಡೆದ ಎಲೆಕ್ಷನ್ ನಲ್ಲಿ ಕೊನೆದಾಗ ಅಧಿಕ ಮತಗಳಿಂದ ಗೆದ್ದು ಬೀಗಿದ್ದಾರೆ.

ಅಧ್ಯಕ್ಷೀಯ ಅಭ್ಯರ್ಥಿಯಾದ ಎಸ್. ರಘುನಾಥ್ ರವರು ಮತ್ತು ವೇದಬ್ರಹ್ಮ ಭಾನುಪ್ರಕಾಶ್ ರವರು ನಡುವೆ ಸ್ಪರ್ಧೆ ನಡೆದಿತ್ತು, ಅದರಲ್ಲಿ ಅಭ್ಯರ್ಥಿ ಎಸ್.ರಘುನಾಥ್ ರವರು 13399ಮತಗಳು ಪಡೆದು ಅಭೂತಪೂರ್ವ ಗೆಲುವು ಸಾಧಿಸಿದರು. ಭಾನುಪ್ರಕಾಶ್ ಶರ್ಮರವರು 11235ಮತಗಳು ಪಡೆದು ಸೋಲನ್ನು ಅನುಭವಿಸಿದ್ದರು. ಈ ಮೂಲಕ ಎಸ್.ರಘುನಾಥ್ ರವರು 2164ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಸಂಘಕ್ಕೆ ನೂತನವಾಗಿ ಗೆದ್ದಿರುವ  ಎಸ್.ರಘುನಾಥ್ ಮಾತನಾಡಿ, ರಾಜ್ಯದಲ್ಲಿ 45ಲಕ್ಷ ಬ್ರಾಹ್ಮಣರ ಜನಸಂಖ್ಯೆ ಇದೆ, ನಮ್ಮಲ್ಲಿ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಜನಸಂಖ್ಯೆಯಲ್ಲಿ ಇದ್ದಾರೆ. ವಿಪ್ರ ಹಿರಿಯ ಸಾಧಕರುಗಳಾದ ಸಿ.ವಿ.ಎಲ್.ಶಾಸ್ತ್ರಿ, ಬಿ.ಎನ್.ಸುಬ್ರಮಣ್ಯರವರ ಅಭಿಮಾನಿಗಳು ಸ್ನೇಹಿತರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಮತ್ತು ಮಾಜಿ ಅಧ್ಯಕ್ಷರಾದ ಎಂ.ಆರ್.ವಿ.ಪ್ರಸಾದರವರು, ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ಆರ್.ಲಕ್ಷ್ಮಿಕಾಂತ್ ರವರು ಸಹ ಸಹಕಾರ ನೀಡಿದರು.

ಎಸ್ ರಘುನಾಥ್ ಅವರ ಮುಂದಿನ ಯೋಜನೆಗಳು


ವಿಪ್ರ ಸಮುದಾಯದ ಏಳಿಗೆಗಾಗಿ 100ಕೋಟಿ ದೇಣಿಗೆ ಸಂಗ್ರಹ ಮಾಡಿ ದತ್ತಿ ನಿಧಿ ಸ್ಥಾಪನೆ ಮಾಡಿ , ಅದರಿಂದ ಶಿಕ್ಷಣ ಸಂಸ್ಥೆ ನಿರ್ಮಾಣ, ವಿಪ್ರ ಸಮುದಾಯದ ಮಕ್ಕಳಿಗೆ ಅವಕಾಶ ನೀಡುವುದು ಹಾಗೂ ವಿಶ್ರಾಂತಿ ಭವನ ನಿರ್ಮಾಣ .ಉದ್ಯೋಗ ಮೇಳ , ಸಾಮೂಹಿಕ ಉಪನಯನ ಮತ್ತು ವಧು-ವರ ಆನ್ವೇಷಣೆ ಕೇಂದ್ರ, ವಿಕಲಚೇತನರಿಗೆ ಸಹಾಯಧನ ಮತ್ತು ಸದಸ್ಯತ್ವ ಅಭಿಯಾನ ರಾಜ್ಯಾದ್ಯಂತ ಚುರುಕುಗೊಳಿಸುವುದು ವಿಪ್ರ ಸಮುದಾಯದ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ನಮ್ಮ ಜೊತೆಯಲ್ಲಿ ಉತ್ತಮ ತಂಡವಿದೆ ಸಾಧನೆ ಮತ್ತು ಯೋಜನೆಗಳನ್ನು ವಿಪ್ರರಿಗೆ ತಿಳಿಸಿ ಮತಯಾಚನೆ ಮಾಡಲಾಗುತ್ತಿದೆ. ಸರ್ಕಾರದಲ್ಲಿ ಮೇಲ್ವರ್ಗದವರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕಡ್ಡಾಯಗೊಳಿಸಲು ಹೋರಾಟ.

ನನ್ನ ಗೆಲುವಿಗೆ ವಿಪ್ರ ಸಮುದಾಯದ ಮುಖಂಡರು, ಕಾರ್ಯಕರ್ತರು ಸ್ನೇಹಿತರು ನಾಡಿನ ಸಮಸ್ತ ವಿಪ್ರ ಕುಲ ಭಾಂದವರಿಗೆ ಹೃತ್ವೂರ್ವಕ ಧನ್ಯವಾದಗಳು ಎಂದು ಹೇಳಿದರು..

ಬೆಂಗಳೂರುನಗರ ಪ್ರದೇಶದಲ್ಲಿ 8 ಜಿಲ್ಲಾ ಪ್ರತಿನಿಧಿ ಸ್ಥಾನಗಳಿಗೂ ಚುನಾವಣೆ ನಡೆಯಿತು. ದಕ್ಷಿಣ ಜಿಲ್ಲಾ ಪ್ರತಿನಿಧಿ 4ಸ್ಥಾನ ಹಾಗೂ ಕೇಂದ್ರ ಜಿಲ್ಲಾ ಪ್ರತಿನಿಧಿ 2 ಸ್ಥಾನ, ಉತ್ತರ ಜಿಲ್ಲಾ ಪ್ರತಿನಿಧಿ 2ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
ಮತದಾನ ಕೇಂದ್ರಗಳು ಮೂರು ಕಡೆಗಳಲ್ಲಿ ಸ್ಥಾಪಿಸಲಾಗಿತ್ತು ರಾಯರಾಯ ಕಲ್ಯಾಣ ಮಂಟಪ, ಚಂದ್ರಶೇಖರಭಾರತಿ ಕಲ್ಯಾಣ ಮಂಟಪ ಮತ್ತು ಎ.ಪಿ.ಎಸ್.ಕಾಲೇಜು ಮತ್ತು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ 1000ಕ್ಕೂ ಮತ ಇರುವ ಜಿಲ್ಲೆಗಳಲ್ಲಿ ಮತಗಟ್ಟೆ ಸ್ಥಾಪನೆ ಆಯಾ ಜಿಲ್ಲೆಯವರು ಅಲ್ಲಿಯೆ ಮತ ಮಾಡುವಂತೆ ವ್ಯವಸ್ಥೆ ಮಾಡಲಾಗಿತ್ತು.

ಅಂತಿಮವಾಗಿ ಎಸ್ ರಘುನಾಥ್ ಅವರು ಅಭೂತಪೂರ್ವ ಮತಗಳಿಂದ ಗೆದ್ದು ಸಂಘದ ಗದ್ದುಗೆ ಇಡಿದಿದ್ದಾರೆ. ಗೆದ್ದಿರುವ ರಘುನಾಥ್ ಅವರಿಗೆ ಸಮುದಾಯದ ಹಲವಾರು, ಸಂಘದ ಪದಾಧಿಕಾರಿಗಳು, ಸಂಘದ ನೌಕರರು ಸನ್ಮಾನ, ಶಾಲು,ಪುಷ್ಪಗುಚ್ಛ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ