LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಿಸ್ಕೂಲ್ ಉಳಿಸಿ ಮಹಿಳೆಯರ ಜೀವನೋಪಾಯ ರಕ್ಷಿತ್ ಆಂದೋಲನ

ಬೆಂಗಳೂರು: ರಾಜ್ಯ ಸರ್ಕಾರದ ನಿಯಮಾವಳಿಗಳ ಪರಿಣಾಮದಿಂದಾಗಿ ಹಾಗೂ ಶಿಕ್ಷಣ ಸಂಸ್ಥೆಗಳ ನೀತಿ ನಿಯಮಗಳಿಂದ ಕರ್ನಾಟಕದ ಬೆಂದ ಸುಮಾರು 25 ಸಾವಿರಕ್ಕಿಂತ ಹೆಚ್ಚು ಸ್ವತಂತ್ರ ಫ್ರೀ ಸ್ಕೂಲ್ ಗಳನ್ನು ಮುಚ್ಚುವ ಅಪಾಯದಲ್ಲಿದೆ ಎಂದು ಕರ್ನಾಟಕ ಕೌನ್ಸಿಲ್ ಸಂಘದ ಅಧ್ಯಕ್ಷರಾದ ಡಾಕ್ಟರ್ ಅರಣ್ಯ ಪ್ರಸಾದ್ ಅವರು ವಿಷಾದ ವ್ಯಕ್ತಪಡಿಸಿದರು.news_1793881583_2_136.webp

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಸಾಕಷ್ಟು ಪರಿಣಾಮಕಾರಿಯದಂತಹ ನಿರ್ಧಾರಗಳನ್ನು ತೆಗೆದುಕೊಂಡಿರುವ ಪರಿಣಾಮದಿಂದಾಗಿ ಸುಮಾರು ಹತ್ತಕ್ಕಿಂತ ಹೆಚ್ಚು ಕಾರಣಗಳನ್ನು ಪ್ರಿಸ್ಕೊಲ್ನ ಆಡಳಿತ ಮಂಡಳಿಯವರು ಸರ್ಕಾರಕ್ಕೆ ಮನವಿಯನ್ನು ನೀಡಿದ್ದಾರೆ ಇವೆಲ್ಲದರ ದುಷ್ಪರಿಣಾಮಗಳಿಂದ ಲಕ್ಷಾಂತರ ಮಕ್ಕಳಿಗೆ ದುಷ್ಪರಿಣಾಮ ಬೀಳುವ ಸಾಧ್ಯತೆಗಳಿದ್ದು, ಪ್ಲೀಸ್ ಸ್ಕೂಲುಗಳು ಬೇಡವೇ ಬೇಡ ಎನ್ನುವ ನಿಟ್ಟಿನಲ್ಲಿ ಸರ್ಕಾರ ಖಡಕ್ಕಾಗಿ ಸೂಚನೆ ಕೊಟ್ಟಿರುವುದಕ್ಕೆ ಮಕ್ಕಳ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಲಿದೆ ಎಂದರು.

ಪ್ರಿ ಸ್ಕೂಲ್ ಮುಚ್ಚುವುದರಿಂದ ನಾಲ್ಕು ಲಕ್ಷಕ್ಕಿಂತ ಹೆಚ್ಚು ಮಹಿಳೆಯರು ಉದ್ಯೋಗ, ಹಾಗೂ ಜೀವನೋಪಾಯ ಕಳೆದುಕೊಳ್ಳಲಿದ್ದಾರೆ. ಮಕ್ಕಳು ತಮ್ಮ ಪ್ರಾಥಮಿಕ ಬಾಲ್ಯದ ಹಂತಗಳನ್ನು ಹಾಗೂ ಶಿಕ್ಷಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಎಲ್ಲಾ ಸೂಚನೆಗಳು ಇದ್ದಾವೆ. 

ಕೆಳ ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಮಕ್ಕಳ ಶಿಕ್ಷಣದ ಆರ್ಥಿಕ ವರು ಹೆಚ್ಚಾಗಲಿದೆ ಕರ್ನಾಟಕದ ಸ್ವಾತಂತ್ರ್ಯ ಪ್ರಿಸ್ಕೂಲ್ ಗಳು ಅಸ್ತಿತ್ವ ಮಕ್ಕಳ ಆರಂಭಿಕ ಶಿಕ್ಷಣ ಮತ್ತು ಮಹಿಳೆಯರ ಉದ್ಯಮಶೀಲತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ನಿಯಮಾವಳಿಗಳನ್ನು ತಕ್ಷಣ ಮರುಪೋರಿಸಿ ಸರಳಿಕರಣ ಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ಹಾಗೂ ಶಿಕ್ಷಣ ಇಲಾಖೆಗೆ ಮನವಿಯನ್ನು ಸಹ ಇದೇ ವೇಳೆ ಮಾಡಿದರು.

ಅಲ್ಲದೆ ಸ್ವತಂತ್ರ ಫ್ರೀ ಸ್ಕೂಲುಗಳನ್ನು ಉಳಿಸಿ ಮಕ್ಕಳ ಬಾಲ್ಯ ಶಿಕ್ಷಣವನ್ನು ರಕ್ಷಿಸಿ ಎಂಬ ಘೋಷವಾಕ್ಯದೊಂದಿಗೆ ಇಡೀ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆಯನ್ನು ಹಾಗೂ ಆಂದೋಲವನ್ನು ಮಾಡಲಾಗುತ್ತದೆ ಎಂದು ಇದೇ ವೇಳೆ ಅವರು ಮಾಧ್ಯಮಕ್ಕೆ ತಿಳಿಸಿದರು.

ಸರ್ಕಾರದ ಶರತ್ತುಗಳಿಂದ ಆಗುತ್ತಿರುವ ತೊಂದರೆಗಳು: 

ಪಾಲಿಸಲು ಅಸಾಧ್ಯವಾದ ನಿಯಮಗಳು ವಿಫಲತೆಗೆ ದಾರಿ ಮಾಡಿ ಕೊಡುವ ವ್ಯವಸ್ಥೆ.

30 ವರ್ಷಗಳ  ನೋಂದಾಯಿತ ಗುತ್ತಿಗೆ ಕರಾರು ಶಾಲೆಗಳ ಆಸ್ತಿತ್ವಕ್ಕೆ ಮಾರಕವಾದ ಶರತ್ತು.

ಅವಾಸ್ತವಿಕ ಕಟ್ಟಡ ವಿನ್ಯಾಸದ ಮಾನದಂಡಗಳು.

ಭೂ ಪರಿವರ್ತನೆ ಅಡೆತಡೆ.

ಸಾಮಾಜಿಕ ಆರ್ಥಿಕ ಪರಿಣಾಮ ಮಹಿಳೆಯರು ಹಾಗೂ ಪೋಷಕರಿಗೆ ದೊಡ್ಡ ಹೊಡೆತ.

ಬೃಹತ್ ಪ್ರಮಾಣದ ಉದ್ಯೋಗ ನಷ್ಟ.

ಕೆಸಿಪಿಎಸ್ ನ ಅಧಿಕೃತ ಬೇಡಿಕೆಗಳು.

ತಕ್ಷಣದಿಂದಲೇ ಕಿರುಕುಳ ನಿಲ್ಲಿಸಬೇಕು.

ಹೀಗೆ ಹತ್ತು ಹಲವು ಅಂಶಗಳನ್ನು ಸರ್ಕಾರದ ಮುಂದೆ ಇಟ್ಟು ಕರ್ನಾಟಕ ಕೌನ್ಸಿಲ್ ನವರು ನಮಗೆ ನ್ಯಾಯ ಕೊಡಿ ಎನ್ನುವ ನಿಟ್ಟಿನಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜದಾದ್ಯಂತ ಎಲ್ಲಾ ಪ್ರಿ ಸ್ಕೂಲ್ ನ ಆಡಳಿತ ಮಂಡಳಿಯವರು ಹಾಗೂ ಪೋಷಕರು ಬೀದಿಗೆ ಬಂದು ಸರ್ಕಾರದ ವಿರುದ್ಧ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಇದೆ ವೇಳೆ ಎಚ್ಚರಿಕೆಯನ್ನು ಸಹ ನೀಡಿದರು.

ಇನ್ನು ಸುದ್ದಿಗೋಷ್ಠಿಯಲ್ಲಿ ಕೌನ್ಸಿಲ್ ಉಪಾಧ್ಯಕ್ಷರಾದ ಸಂಪತ್ ಕುಮಾರ್, ಕಾರ್ಯದರ್ಶಿಯಾದ ಪೃಥ್ವಿಯಪ್ಪನವಾಸಿ, ಸೇರಿದಂತೆ ಸುಮಾರು ನೂರಕ್ಕಿಂತ ಹೆಚ್ಚು ಪ್ರಿಸ್ಕೂಲ್ನ ಮಾಲೀಕರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಓ ಮನಸೇ ಧಾರಾವಾಹಿ ನವಂಬರ್ 10 ರಿಂದ ಪ್ರತಿ ದಿನ 8:30 ಕ್ಕೆಪ್ರಿಸ್ಕೂಲ್ ಉಳಿಸಿ ಮಹಿಳೆಯರ ಜೀವನೋಪಾಯ ರಕ್ಷಿತ್ ಆಂದೋಲನಬೆಂಗಳೂರಿನಲ್ಲಿ ಪ್ಯೂರ್‌ಪವರ್ (PuREPower) ಹಾಜರಾತಿ ವಿಸ್ತರಣೆನ5ಕ್ಕೆ ಎಸ್ಐಆರ್ ಪ್ರಕ್ರಿಯೆ ಜ್ಞಾನೇಶ್ ಕುಮಾರ್ ವಿರುದ್ಧ ಬೃಹತ್ ಪ್ರತಿಭಟನೆಮೋದಿ, ಜ್ಞಾನೇಶ್ ಕುಮಾರ್ ಅವರನ್ನು ಹೊರಹಾಕಲು ವಿರೋಧ ಪಕ್ಷದ ನಾಯಕರ ಕಹಳೆಮೋದಿ, ಜ್ಞಾನೇಶ್ ಕುಮಾರ್ ಅವರನ್ನು ಹೊರಹಾಕಲು ವಿರೋಧ ಪಕ್ಷದ ನಾಯಕರ ಕಹಳೆಕನ್ನಡ ರಾಜ್ಯೋತ್ಸವಕ್ಕೆ :'hmt ಕನ್ನಡಿಗ' ನೂತನ ಕೈ ಗಡಿಯಾರಗಳನ್ನು ರಾಜ್ಯಕ್ಕೆ HDK  ಸಮರ್ಪಣೆಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ ಆರೋಪಿ ಜತೆ ಸಿಎಂ ಡಿಕೆಶಿ ನಂಟು! HDK ಹೊಸ ಬಾಂಬ್ತನಿಖೆ ದಾರಿ ತಪ್ಪಿಸಿದ ಪೊಲೀಸ್ ಆಯುಕ್ತರು; ಸುಪ್ರೀಂನ ಮಾರ್ಗಸೂಚಿ ಉಲ್ಲಂಘನೆ ಎಂದು ಆರೋಪಿಸಿದ ಕೇಂದ್ರ ಸಚಿವರುವಕೀಲರ ಮೇಲಿನ ಹಲ್ಲೆ ಕೊಲೆ ಕೊಲೆ ಯತ್ನಗಳಿಗೆ ಖಂಡನೆ