LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನ5ಕ್ಕೆ ಎಸ್ಐಆರ್ ಪ್ರಕ್ರಿಯೆ ಜ್ಞಾನೇಶ್ ಕುಮಾರ್ ವಿರುದ್ಧ ಬೃಹತ್ ಪ್ರತಿಭಟನೆ

ಬೆಂಗಳೂರು : ನ.5ರಂದು ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ಎಸ್ಐಆರ್ ಪ್ರಕ್ರಿಯೆ ಹಾಗೂ ಮುಖ್ಯಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಬೃಹತ್ ಸಭೆ ಏರ್ಪಡಿಸಿದ್ದೇವೆ ಇಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರು ತಿಳಿಸಿದರು.news_1793707827_1_587.webp

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ಬಳಿಕ ಮಾತನಾಡಿದ ಅವರು, ಎಸ್ಐಆರ್ ಹಾಗೂ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನ.1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಒಕ್ಕೂಟ ವತಿಯಿಂದ ನಡೆದ ಪ್ರತಿಭಟನೆಯ ಪ್ರತಿರೋಧದ ಮುಂದುವರಿದ ಭಾಗವಾಗಿ ಈ ಬೃಹತ್ ಸಭೆ ಹಮ್ಮಿಕೊಳ್ಳಲಾಗಿದೆ.

ದೇಶದಾದ್ಯಂತ ತಾಲ್ಲೂಕು ಹಾಗೂ ಬ್ಲಾಕ್ ಮಟ್ಟದಲ್ಲಿ ಈ ಪ್ರತಿಭಟನೆ ನಡೆಸಬೇಕು ಎಂದು ಇಂಡಿಯಾ ಒಕ್ಕೂಟದ ನಾಯಕರು ದೆಹಲಿಯಲ್ಲಿ ತೀರ್ಮಾನಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಮೈತ್ರಿಕೂಟದ ನಾಯಕರು ತೀರ್ಮಾನಿಸಿದ್ದೇವೆ.

ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಿಜೆಪಿ ಹಾಗೂ ಆರ್ ಎಸ್ಎಸ್ ಪ್ರಯತ್ನ ವಿರುದ್ಧ ಹಾಗೂ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಈ ಹೋರಾಟ ಮುಂದುವರಿಯಲಿದೆ. ರಾಜ್ಯಮಟ್ಟದಲ್ಲಿ ಹೋರಾಟ ಮಾಡಿದ ಬಳಿಕ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು.   

*ಸಿಪಿಎಂ ಪಕ್ಷದ ಕಾರ್ಯದರ್ಶಿ ಕೆ. ಪ್ರಕಾಶ್*

ಎಸ್ಐಆರ್ ರದ್ದಾಗಬೇಕು, ಜ್ಞಆನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಮುಖ್ಯ ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ ಪ್ರಜಾಸತಾತ್ಮಕಗೊಳಿಸಬೇಕು. ಸುಪ್ರೀಂ ಕೋರ್ಟ್ ಸೂಚನೆ ಅನುಸಾರ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಮುಖ್ಯ ಚುನಾವಣಾ ಆಯುಕ್ತರಿಗೆ ಶಾಶ್ವತ ವಿನಾಯಿತಿ ನೀಡಿರುವ ಕಾಯ್ದೆ ಹಿಂಪಡೆಯಬೇಕು ಎಂಬುದು ನಮ್ಮ ಪ್ರಮುಖವಾದ ವಿಚಾರ. ಈ ಬೇಡಿಕೆಗಳನ್ನು ಆಗ್ರಹಿಸಿ ನ.5ರಂದು ಹೋರಾಟ ಮಾಡುತ್ತಿದ್ದೇವೆ.

ನಂತರದ ದಿನಗಳಲ್ಲಿ ರಾಜ್ಯದಲ್ಲಿ ಈ ಹೋರಾಟವನ್ನು ವಿಕೇಂದ್ರಿಕರಣಗೊಳಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದ್ದು, ಇಂಡಿಯಾ ಒಕ್ಕೂಟ ಇದನ್ನು ವಿಸ್ತಾರವಾಗಿ ತೆಗೆದುಕೊಂಡು ಹೋಗಲು ತೀರ್ಮಾನಕ್ಕೆ ಬಂದಿದ್ದೇವೆ. ಈ ಪ್ರತಿಭಟನೆಯಲ್ಲಿ ಎಲ್ಲಾ ಪಕ್ಷಗಳು ಭಾಗವಹಿಸಲಿವೆ.

ಭಾರತವನ್ನು ಸರ್ವಾಧಿಕಾರಿ ನೆಲೆಗಟ್ಟಿಗೆ ಪರಿವರ್ತಿಸುವ ಹಾಗೂ ಕೋಮುವಾದಿ ಹಿಂದುತ್ವ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿರುವ ಬಿಜೆಪಿ ಪ್ರಯತ್ನಕ್ಕೆ ಈ ದೇಶದಲ್ಲಿ ಅವಕಾಶವಿಲ್ಲ ಎಂಬ ಸಂದೇಶ ನೀಡಲು ನಾವು ಮುಂದಾಗಿದ್ದೇವೆ. 

ಮಾಧ್ಯಮಗೋಷ್ಠಿಯಲ್ಲಿ ಸಿಪಿಎಂ ಪಕ್ಷದ ಸಾಥಿ ಸುಂದರೇಶ್, ಮಹಾಂತೇಶ್ ಫಾರ್ವರ್ಡ್ ಬ್ಲಾಕ್ ನ ಶಿವಶಂಕರ್, ಅಲಿ, ಸಿಪಿಐಎಂಎಲ್ ಪಕ್ಷದ ಕ್ಲಿಫ್ಟನ್ ಡಿ ರೊಜಾರಿಯೋ, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗ ಅಧ್ಯಕ್ಷರಾದ ರಮೇಶ್ ಬಾಬು ಅವರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ5ಕ್ಕೆ ಎಸ್ಐಆರ್ ಪ್ರಕ್ರಿಯೆ ಜ್ಞಾನೇಶ್ ಕುಮಾರ್ ವಿರುದ್ಧ ಬೃಹತ್ ಪ್ರತಿಭಟನೆಮೋದಿ, ಜ್ಞಾನೇಶ್ ಕುಮಾರ್ ಅವರನ್ನು ಹೊರಹಾಕಲು ವಿರೋಧ ಪಕ್ಷದ ನಾಯಕರ ಕಹಳೆಮೋದಿ, ಜ್ಞಾನೇಶ್ ಕುಮಾರ್ ಅವರನ್ನು ಹೊರಹಾಕಲು ವಿರೋಧ ಪಕ್ಷದ ನಾಯಕರ ಕಹಳೆಕನ್ನಡ ರಾಜ್ಯೋತ್ಸವಕ್ಕೆ :'hmt ಕನ್ನಡಿಗ' ನೂತನ ಕೈ ಗಡಿಯಾರಗಳನ್ನು ರಾಜ್ಯಕ್ಕೆ HDK  ಸಮರ್ಪಣೆಹಾಸನ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ ಆರೋಪಿ ಜತೆ ಸಿಎಂ ಡಿಕೆಶಿ ನಂಟು! HDK ಹೊಸ ಬಾಂಬ್ತನಿಖೆ ದಾರಿ ತಪ್ಪಿಸಿದ ಪೊಲೀಸ್ ಆಯುಕ್ತರು; ಸುಪ್ರೀಂನ ಮಾರ್ಗಸೂಚಿ ಉಲ್ಲಂಘನೆ ಎಂದು ಆರೋಪಿಸಿದ ಕೇಂದ್ರ ಸಚಿವರುವಕೀಲರ ಮೇಲಿನ ಹಲ್ಲೆ ಕೊಲೆ ಕೊಲೆ ಯತ್ನಗಳಿಗೆ ಖಂಡನೆಹಾಸನ್‌ ಎಂದಿರುವ ಜಿಲ್ಲೆಯ ಹೆಸರನ್ನು ಹಾಸನ ಎಂದು ಮಾಡಲಾಗುವುದು: ಸಚಿವ ಕೆ. ಎಂ. ಶಿವಲಿಂಗೇಗೌಡಸಚಿವ ಕೆ. ಎಂ. ಶಿವಲಿಂಗೇಗೌಡ ಅವರಿಂದ ಹಸಿರು ಸಿರಿ ಸಾವಯವ ಗೊಬ್ಬರ ಉದ್ಘಾಟನೆಹೋಂಡಾ ಕಂಪನಿ ಇಲ್ಲೇ ಇದೆ, ಮುಂದೆಯೂ ಇರುತ್ತದೆ:  ಎಂ ಬಿ ಪಾಟೀಲ