LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೀರು ಉಳಿತಾಯದ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳಿ: ರಾಮ್ ಪ್ರಸಾತ್ ಮನೋಹರ್ ಸೂಚನೆ

ಬೆಂಗಳೂರು: ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀರು ಉಳಿತಾಯ ಮತ್ತು ಮರುಬಳಕೆಯ ಅಭಿಯಾನದಲ್ಲಿ ಕೈ ಜೋಡಿಸಿ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾದ ಡಾ. ರಾಮ್ ಪ್ರಸಾತ್ ಮನೋಹರ್ 40 ಲಕ್ಷದಿಂದ 2 ಕೋಟಿ ಲೀಟರ್ ನೀರು ಬಳಕೆದಾರರಿಗೆ ಸೂಚನೆ ನೀಡಿದರು.

ಇಂದು ಜಲಮಂಡಳಿ ಕೇಂದ್ರ ಕಛೇರಿಯಲ್ಲಿ 40 ಲಕ್ಷದಿಂದ 2 ಕೋಟಿ ಲೀಟರ್ ಗಳಷ್ಟು ನೀರು ಬಳಸುವ ಗ್ರಾಹಕರ ಜೊತೆ ಸಭೆ ನಡೆಸಿ *ಗ್ರೀನ್ ಸ್ಟಾರ್ ಚಾಲೆಂಜ್* ನ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದರು.

ನಗರದಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ. ಆದರೆ ಅಂತರ್ಜಲ ಕುಸಿತದಿಂದ ದಿನ ಬಳಕೆಯ ನೀರಿನ ಮೇಲೆ ಪರಿಣಾಮ ಬೀರಿದೆ. ಮುಂದಿನ ಎರಡು ತಿಂಗಳುಗಳ ಕಾಲ ನೀರಿನ ಮಿತವ್ಯಯ ಬಳಕೆಯಿಂದ ನಾವು ಈ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿದೆ. ಜಲಮಂಡಳಿ ಕೇವಲ ಇಂದಿನ ಪರಿಸ್ಥಿತಿ ಯನ್ನು ನಿಭಾಯಿಸಲು ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಬೆಂಗಳೂರು ನಗರವನ್ನು ವಾಟರ್ ಸರ್ ಪ್ಲಸ್ ಮಾಡುವ ಗುರಿಯನ್ನು ಹೊಂದಿದೆ.

ಗ್ರೀನ್ ಸ್ಟಾರ್ ಚಾಲೆಂಜ್ ಸ್ವೀಕರಿಸಿ:

ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು, ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳುವುದು, ಮಳೆ ನೀರು ಇಂಗು ಗುಂಡಿಗಳನ್ನ ಅಳವಡಿಸಿಕೊಳ್ಳುವುದು ಹಾಗೂ ಈ ಎಲ್ಲಾ ಹೊಸ ಅನುಷ್ಠಾನಗಳ ಬಗ್ಗೆ ಬಳಕೆದಾರರಿಗೆ ಮಾಹಿತಿಯನ್ನು ಕೊಡುವ ಮೂಲಕ ನೀರಿನ ಉಳಿತಾಯದ ಮಹತ್ವವನ್ನು ಸಾರುವುದು. ಈ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳಲು ಈಗಾಗಲೇ ಅಪಾರ್ಟ್ಮೆಂಟ್ ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಮುಂದೆ ಬಂದಿವೆ. ಈ ಚಾಲೆಂಜ್ ಅನ್ನು ನೀವು ಕೂಡಾ ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರು ವಾಟರ್ ಸರ್ ಪ್ಲಸ್ ಅಭಿಯಾನದಲ್ಲಿ ಕೈಜೋಡಿಸಿ ಎಂದು ಕರೆ ನೀಡಿದರು. ಬಲ್ಕ್ ಬಳಕೆದಾರರು ತಮ್ಮ ಸಮುದಾಯದಲ್ಲಿ ಹೆಚ್ಚು ನೀರು ಬಳಕೆ ಮಾಡುವವರಲ್ಲಿ ಜಾಗೃತಿ ಮೂಡಿಸಬೇಕು. ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಿಕೊಳ್ಳಲು ಆದ್ಯತೆ ನೀಡುವಂತೆ ತಿಳಿಸಿದರು.

ಏಪ್ರಿಲ್ 10 ಒಳಗಾಗಿ ಈ ಕ್ರಮಗಳನ್ನು ಅಳವಡಿಸಿಕೊಳ್ಳಿ

ಏಪ್ರಿಲ್ 10 ರ ಒಳಗಾಗಿ ಈ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. 10 ರ ನಂತರ ಸರಬರಾಜು ಆಗುತ್ತಿರುವ ನೀರಿನಲ್ಲಿ ಶೇಕಡಾ 10 ರಷ್ಟು ಕಡಿತಗೊಳಿಸಿ ಅಗತ್ಯವಿರುವ ಕಡೆಗಳಿಗೆ ಕಾವೇರಿ ನೀರನ್ನು ಸರಬರಾಜು ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

*ಸಸಿ ವಿತರಣೆ* : ಇದೇ ವೇಳೆ ಜಲಮಂಡಳಿ ವತಿಯಿಂದ ಸಭೆಗೆ ಆಗಮಿಸಿದ ಪ್ರತಿನಿಧಿಗಳಿಗೆ ಸಸಿ ವಿತರಿಸಲಾಯಿತು. ಅಲ್ಲದೆ, ಹೆಚ್ಚು ಸಸಿಗಳನ್ನು ನೆಡುವ ಮೂಲಕ ಬ್ರ್ಯಾಂಡ್ ಬೆಂಗಳೂರು ಮೌಲ್ಯವನ್ನು ಉಳಿಸೋಣ ಎಂದು ಕರೆನೀಡಿದರು. ಈಗಾಗಲೇ 133 ಬಿಲ್ಡರ್ ಗಳೊಂದಿಗೆ ಸಭೆ ನಡೆಸಲಾಗಿದೆ. ಅವರಿಗೆ ಸಂಸ್ಕರಿಸಿದ ನೀರು ಬಳಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಮಿತವಾಗಿ ನೀರು ಬಳಿಸುವ ಮೂಲಕ ನೀರು ಉಳಿಸಬೇಕು. ಮನೆಯಲ್ಲಿ ಹೆಚ್ಚು ನೀರುವ ಬಳಸುವ ಜಾಗದಲ್ಲಿ ಏರಿಯೆಟರ್ ಅಳವಡಿಸಬೇಕು, ವಾಷಿಂಗ್‌ಮಿಷನ್ ಒಳಗೆ ಬರುವ ನೀರನ್ನು ಮರುಬಳಿಸಿ, ಒಂದು ಫ್ಲಷ್‌ಗೆ 20 ಲೀಟರ್ ಹೊರಹೋಗುತ್ತಿದ್ದು, ಇದನ್ನ ತಡೆಗಟ್ಟಲು ಫ್ಲಷ್‌ ಬ್ಯಾಗ್ ಆಳವಡಿಸಬೇಕು. ಸಂಸ್ಕರಿಸಿದ ನೀರು ಬಳಕೆ ಮಾಡುವಂತೆ ರಾಮ್‌ಪ್ರಸಾತ್ ಸೂಚಿಸಿದರು.

ಸಂಸ್ಕರಿಸಿದ ನೀರನ್ನು ಸ್ವಚ್ಛತೆಗೆ ಕಟ್ಟಡ ಕಾಮಗಾರಿ ಗಳಿಗೆ ತೋಟಗಾರಿಕೆಗೆ ಸಸ್ಯಗಳ ಆರೈಕೆಗೆ ಬಳಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಕೃತ ನೀರಿನ ಬಳಕೆಯನ್ನು ಹೆಚ್ಚಿಸುವಂತೆ ಜಲಮಂಡಳಿ ಅಧ್ಯಕ್ಷರು ಕರೆ ನೀಡಿದರು. ಅಲ್ಲದೆ ನೀರು ಬಳಕೆ ಹಾಗೂ ಮರು ಬಳಕೆ ಬಗ್ಗೆ ಮನೆಯ ನೆರೆಮನೆಯವರಿಗೂ ಜಾಗೃತಿ ಮೂಡಿಸಬೇಕು ಎಂದು ರಾಮ್‌ಪ್ರಸಾತ್ ತಿಳಿಸಿದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ