ಬೆಂಗಳೂರು: ಬೆಂಗಳೂರಿನ ಬಿಟಿಎಂ ವಿಧಾನಸಭಾ ಕ್ಷೇತ್ರದ ಸದ್ದುಗುಂಟೆಪಾಳ್ಯದ ಭವಾನಿ ನಗರದಲ್ಲಿ ಸಂಕ್ರಾಂತಿ ಹಬ್ಬವನ್ನು ಪಾಕತೊಪು ಮುನೇಶ್ವರ ದೇವಾಲಯದ ಧರ್ಮದರ್ಶಿಗಳು ಹಾಗೂ ಸಮಾಜಸೇವಕರು, ಕಾಂಗ್ರೆಸ್ ಮುಖಂಡರಾದ ಕವಿತಾ ಶ್ರೀನಾಥ್ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಪೌರ ಕಾರ್ಮಿಕರಿಗೆ ಸಂಕ್ರಾಂತಿ ಹಬ್ಬದ ಕಿಟ್ ನೀಡಿ ವಿಶೇಷವಾಗಿ ಸುಗ್ಗಿ ಹಬ್ಬವನ್ನು ಆಚರಣೆ ಮಾಡಿದರು.
ಎಸ್ ಜಿ ಪಾಳ್ಯದಲ್ಲಿನ ಪಾರ್ಕ್ ಎದುರು ನೂರಾರು ಪೌರಕಾರ್ಮಿಕರಿಗೆ, ಮಹಿಳೆಯರಿಗೆ ಎಳ್ಳು ಬೆಲ್ಲ ಕಬ್ಬು ಹಾಗೂ ಸೀರೆಯನ್ನು ವಿತರಣೆ ಮಾಡಲಾಯಿತು.
ಈ ವೇಳೆ ಸಾರಿಗೆ ಸಚಿವ ರಾಮಲಿಂಗ ರೆಡಗಡಿ ಮಾತನಾಡಿ, ಇದೊಂದು ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿದೆ, ಎಲ್ಲಾ ಮಹಿಳೆಯರು ಪರಸ್ಪರ ಎಳ್ಳು ಬೆಲ್ಲ ಕಬ್ಬನ್ನು ಕೊಟ್ಟು ಪರಸ್ಪರ ಸಿಹಿಯನ್ನು ವಿನಿಮಯ ಮಾಡಿಕೊಳ್ಳುವ ಒಂದು ವಿಶೇಷವಾದಂತಹ ಹಬ್ಬವಾಗಿದ್ದು, ವರ್ಷದ ಮೊದಲನೇ ಹಬ್ಬವಾಗಿದ್ದು ಸಟಗರ ಸಂಭ್ರಮದಿಂದ ಎಲ್ಲಾ ಮನೆಯವರು ವಿಶೇಷ ರೀತಿಯಲ್ಲಿ ಆಚರಣೆ ಮಾಡುತ್ತಾರೆ, ಇದು ಸಂಕ್ರಾಂತಿ ಹಬ್ಬ ವರ್ಷದ ಮೊದಲನೇ ಹಬ್ಬವಾಗಿದ್ದು ತದನಂತರ ಶಿವರಾತ್ರಿ ಯುಗಾದಿ ಹಬ್ಬ ಬರುತ್ತದೆ ಎಂದರು.
ಇನ್ನು ರಾಸುಗಳಿಗೆ ಕಿಚ್ಚನ್ನು ಆಯಿಸುವ ವಿಶೇಷ ಸಂಭ್ರಮವನ್ನು ಸಹ ಪುರಾತನ ಕಾಲದಿಂದ ನಡೆಸಿಕೊಂಡು ಬರುತ್ತಿದ್ದಾರೆ, ಅದನ್ನು ಎಲ್ಲರೂ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದರು. ಎಲ್ಲಾ ಮನೆ ಮಂದಿ ಸೇರಿಕೊಂಡು ಒಟ್ಟಿಗೆ ನೆರೆಹೊರೆಲ್ಲ ಪರಸ್ಪರ ಸಿಹಿಯನ್ನು ಮಾತನಾಡುತ್ತ ಭಾಗಣವನ್ನು ನೀಡುತ್ತಾ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಣೆ ಮಾಡುತ್ತಿರುವುದು ಇದೊಂದು ಸಾಂಕೇತಿಕವಾದಂತಹ ಹಬ್ಬವಾಗಿದೆ ಎಂದರು.
ಇದೆ ವೇಳೆ ಕವಿತಾ ಶ್ರೀನಾಥ್ ಮಾತನಾಡಿ, ಸದ್ದುಗುಂಟೆಪಾಳ್ಯ ವಾರ್ಡ್ನಲ್ಲಿ ಹಲವು ಕಾರ್ಯಕ್ರಮಗಳಿಗೆ ಅದರಲ್ಲೂ ದೇವಾಲಯದ ಕಾರ್ಯಕ್ರಮಗಳು ಸಾರ್ವಜನಿಕರ ಕಾರ್ಯಕ್ರಮಗಳು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸುವ ಕಾರ್ಯಕ್ರಮಗಳಿಗೆ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರು ಬೆನ್ನೆಲುಬಾಗಿ ನಿದಿದ್ದಾರೆ ಅವರ ಪ್ರೋತ್ಸಾಹ, ಆಶೀರ್ವಾದದಿಂದ ಇಂತಹ 10 ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಅವರ ಸಹಕಾರ ಬೆಂಬಲ ಸಂಪೂರ್ಣವಾಗಿ ಇರುತ್ತದೆ ಎಂದರು.
ವರ್ಷದ ಕೊನೆಯ ಹಬ್ಬ ದೀಪಾವಳಿ ಹಾಗೂ ನೂತನ ವರ್ಷದ ಮೊದಲನೇ ಹಬ್ಬ ಸಂಕ್ರಾಂತಿ ಹಬ್ಬವನ್ನು ಪೌರಕಾರ್ಮಿಕರ ಜೊತೆಯಲ್ಲಿ ಆಚರಿಸಿಕೊಂಡು ಬರುತ್ತಿದ್ದೇನೆ. ಕಾರಣ ಇಷ್ಟೇ ಪೌರ ಕಾರ್ಮಿಕರು ಮೌನವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಅವರ ಜೊತೆಯಲ್ಲೇ ಆಚರಣೆ ಮಾಡುವುದು ನನಗೆ ಸಾಕಷ್ಟು ಖುಷಿ ತಂದಿದೆ ಎಂದರು.
ಇನ್ನು ಕವಿತಾ ಶ್ರೀನಾಥ್ ಅವರ ಸಂಕ್ರಾಂತಿ ಹಬ್ಬಕ್ಕೆ ಬಿಬಿಎಂಪಿ ಮಾಜಿ ಸದಸ್ಯ ಬಿ ಮೋಹನ್, ಲೋಕೇಶ್ ಗೌಡ, ಕಾಂಗ್ರೆಸ್ ಮುಖಂಡರಾದ ಮುನಿಸ್ವಾಮಿ ಗೌಡ, ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.