LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭೂ ಕಬಳಿಕೆದಾರರಿಂದ ಕಬ್ಬನ್ ಪಾರ್ಕ್ ರಕ್ಷಿಸಿ: ಶೋಭಾ ಕರಂದ್ಲಾಜೆ

ಬೆಂಗಳೂರು: ಮನುಷ್ಯನ ದುರಾಸೆಯಿಂದ ಪರಿಸರ ಅವನತಿಯತ್ತ ಸಾಗಿದೆ. ಅದರ ಜೊತೆಗೆ ಜಾಗತಿಕ ತಾಪಮಾನ, ಹವಮಾನ ವೈಪರಿತ್ಯದಂತಹ ಸವಾಲುಗಳು ಹೆಚ್ಚಾಗಿದ್ದು ಹೀಗಾಗಿ ಪರಿಸರ ರಕ್ಷಣೆ ನಮೆಲ್ಲರ ಹೊಣೆಯಾಗಿದ್ದು ಪತಿಸರ ರಕ್ಷೆಗಾಗಿ ನಾವೆಲ್ಲರೂ ಗುಡಗಳನ್ನು ಬೆಳೆಸೋಣ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.


ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ವತಿಯಿಂದ 5ನೇ ವರ್ಷದ ಸಾಧಕ ಅಂತರಾಷ್ಟ್ರೀಯ ಮಹಿಳಾ ಪ್ರಶಸ್ತಿ ನೀಡಿ ಮಾತನಾಡಿ, ಮಹಾನಗರಗಳಲ್ಲಿ ಕಂಡು ಬರುವ ಖಾಲಿ ಜಾಗದ ಮೇಲೆ ಆಡಳಿತ ನಡೆಸುವವರು, ರಿಯಲ್ ಎಸ್ಟೇಟ್ ಉದ್ಯಮಿಗಳ ಕಣ್ಣು ಬೀಳುವುದು ಸರ್ವೆ ಸಾಮಾನ್ಯವಾಗಿದೆ.


ನಗರದಲ್ಲಿ ಕೆರೆಕಟ್ಟೆಗಳನ್ನು ನುಂಗಿರುವ ಕಾರಣ ಜಾಗ ಇಲ್ಲದಂತಾಗಿದೆ, ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿವೆ.   ಸರ್ಕಾರಿ ಜಾಗಗಳನ್ನು ಕಬಳಿಸಲು ಹುನ್ನಾರಗಳು ಸದ್ದಿಲ್ಲದೆ ನಡೆಯುತ್ತಿವೆ. ಗುಡ ಮರಗಳು ಇಲ್ಲದೆ ಕಂಕ್ರೀಟ್ ಮಯವಾಗುತ್ತಿವೆ. ಬೆಂಗಳೂರಿನಲ್ಲಿ ಮಳೆ ಬಂದರೆ ಒ್ರವಾಹ ವಾಗುವುದು ಇದೇ ಕಾರಣಕ್ಕೆ ಎಂದರು.


ತೊಟಗಾರಿಕೆ ಇಲಾಖೆಯ ಉಪ ನಿರ್ದೆಶಕಿ ಕುಸುಮಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಮಾಡುವ ಅಭಿವೃದ್ದಿ ಕೆಲಸಗಳಿಗೆ ಇಲಾಖೆ ಸದಾ ಮುಂದಿದೆ. ನಾವು ಯಾವುದನ್ನು ಮಾಡಲ್ಲವೋ ಅದನ್ನು ಸಂಘದವರು ಮಾಡಿ ತೋರಿಸುತ್ತಿದ್ದಾರೆ‌. ಇಂತಹ ಸಂಘವು ಇಲ್ಲದೆ ಇದ್ದಿದ್ದರೆ ಪ್ರಸ್ತುತ ಕಬ್ಬನ್ ಪಾರ್ಕ್ ನೋಡಲು, ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯವಾಗುತ್ತಿರಲಿಲ್ಲ.


ಸರ್ಕಾರಗಳು ಸೇರಿ ಪಟ್ಟಭದ್ರ ಹುತಾಸಕ್ತಿಗಳು ಎಷ್ಟೆ ಪ್ರಯತ್ನ ಪಟ್ಟರು ನಡೆಯುತ್ತಿಲ್ಲ. ಅದಕ್ಕೆ ಸಂಘಟನೆ ಅಧ್ಯಕ್ಷ ಡಾ.ಉಮೇಶ್ ಅವರ ಅವಿರತ ಹೋರಾಟದ ಫಲವಾಗಿ ಕಬ್ಬನ್ ಪಾರ್ಕ್ ಉಳಿದಿದೆ ಎಂದರು.


ಇಲಾಖೆಯಿಂದ ಸಾಕಷ್ಟು ಆರೊಗ್ಯಕ್ಕೆ ಒಳ್ಳೆದಾಗುವ ಗುಡಗಳನ್ನು ನಡೆಲಾಗುತ್ತಿದೆ. ಇಗಾಗಲೇ ಸಾಕಷ್ಟು ಗಿಡಗಳನ್ನು ಪಾರ್ಕ್ ನಲ್ಲಿ ನಡೆಸಲಾಗುತ್ತಿದೆ. ಜನರಿಗೆ ಶುದ್ದ ಗಾಳಿ, ವಾತವರ್ಣ, ನಡಿಗೆದಾರರಿಗೆ ಅನುಕೂಲವಾಗಲೆಂದು ಹಗಲಿರಿಳು ಶ್ರಮಿಸಲಾಗುತ್ತಿದೆ ಎಂದರು.


ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಡಾ.ಉಮೇಶ್ ಮಾತನಾಡಿ, ಸಂಘದಿಂದ ಪ್ರತಿ ವರ್ಷವೂ ಮಹಿಳಾ ಸಾಧಕೋಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅದಕ್ಕೆ ಜ್ಯೂರಿಗಳನ್ನು ನೇಮಕಮಾಡಿ ಸೂಕ್ತ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಪಾರ್ಕ್ ಗಳ್ಳಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚಾಗಬೇಕಾದರೆ  ಹಣ್ಣಿನ ಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೆಡಬೇಕಾಗುತ್ತದೆ. ಪರಿಸರಕ್ಕೆ ಬೇಕಾಗುವ, ಆರೋಗ್ಯ ಕಾಪಾಡುವ ಗಿಡಗಳು ಬೇಕಾಗಿದೆ ಎಂದರು.


ಕೇವಲ ಮಹಿಳಾ ಸಾಧಕೀಯರನ್ನು ಗುರುತಿಸಿ ಅಂತರಾಷ್ಟೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮಹಿಳೆಯರನ್ನು ಗುರುತಿಸುವ ಕೆಲಸ ಈ ಮೂಲಕ ಮಾಡಲಾಗುತ್ತದೆ. ಸಂಘದಿಂದ ಪ್ರಶಸ್ತಿ ಪಡೆದವರು ಪ್ರತಿ ವರ್ಷ ಸಂಘದಲ್ಲಿ ಸೇರಿ ಉದ್ಯಾನವನ ಉಳಿಸುವ ನಿಟ್ಟಿನಲ್ಲಿ ಕೈಜೋಡಿಸುತ್ತಾರೆ ಎಂದರು. ಮುಂದಿನ ವರ್ಷವೂ ಇಂತಹ ಸಾಧಕರೇ ಆದವರನ್ನು ಗುರುತಿಸಿ ಸನ್ಮಾನಿಸುವ ಜೆಲಸ ಮಾಡಲಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಹಿರಿಯ ನಟಿ ಉಮಾಶ್ರೀ, ದೇಪಾಶ್ರೀ,ಸಂಜನಾ ಬಾಯಿ,ಚೈತನ್ಯ ಶ್ರೀಧರ್, ಡಾ.ಅನುರಾಧ,ಪತ್ರಕರ್ತರಾದ ಸುಶೀಲಾ,ರಜನಿ,ಅನುಷ್ಕಾರೈ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಸಂಘದ ಸಂಜನಾ ನಾಯ್ಡು, ಸೋನಿಕಾ ಗೌಡ ಉಪಸ್ಥಿತರಿದ್ದರೂ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ