
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದ ಅವರು, ಕನ್ನಡ ಡಿಂಡಿಮ ಕನ್ನಡ ಭಾಷೆ ವಿಶಿಷ್ಟವಾಗಿ ಅಚರಿಸಬೇಕು ಮತ್ತು ಕನ್ನಡ ಭಾಷೆ ಉಳಿಸಲು ಬೆಳಸಲು ಸಂಘಟನೆ ಮಾಡುತ್ತಿದೆ.ಕನ್ನಡ ಸಂಸ್ಕೃತಿಯನ್ನು ಉಳಿಸಿದರು ಮಹಿಳೆಯರು ಅವರನ್ನ ವೇದಿಕೆಗೆ ಕರೆತರಬೇಕು ಎಂದು ಮೂರು ಸಾವಿರ ಗೃಹಿಣಿಯರಿಂದ ಗೀತೆ ಗಾಯನ ಏರ್ಪಡಿಸಲಾಗಿದೆ, ಅದು ವಿಶೇಷವಾದ ಕಾರ್ಯಕ್ರಮ ಎಂದು ತಿಳಿಸಿದರು.
ವಚನ ಸಾಹಿತ್ಯ, ದಾಸರಪದಗಳು, ಗೀಗೀ ಪದಗಳು, ಜಾನಪದ ಗೀತೆಗಳು, ಮಂಕುತಿಮ್ಮನ ಕಗ್ಗ ಮತ್ತು ಸರ್ವಜ್ಞ , ನಿಸಾರ್ ಅಹಮದ್ ನಿತ್ಯೋತ್ಸವ ಗೀತೆಗಳನ್ನು 5000ಹಣತೆಗಳನ್ನು ಹಚ್ಚಿ, ಸಾವಿರಾರು ಗೃಹಿಣಿಯರು ಎಲ್ಲರು ಸೇರಿ 15ಹಾಡುಗಳನ್ನು ಹಾಡುವ ಮೂಲಕ ಕನ್ನಡದ ಕಂಪನ್ನು ಪಸರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಎಮ್.ಶಿವರಾಜುರವರು ಮಾತನಾಡಿ, ಕನ್ನಡ ಭಾಷೆ ಉಳಿಸಿ, ಬೆಳಸಲು ಕನ್ನಡ ಕಂಪನ್ನು ವಿಶ್ವಕ್ಕೆ ಪಸರಿಸಲು ಕನ್ನಡ ಡಿಂಡಿಮ ಪ್ರತಿಷ್ಠಾನದ ಉದ್ದೇಶವಾಗಿದೆ.ಅಗ್ರಹಾರ ದಾಸರಹಳ್ಳಿ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಜನರು ಆಗಮಿಸಿ ಕಾರ್ಯಕ್ರಮಕ್ಕೆ ಯಶ್ವಸಿಗೊಳಿಸಬೇಕಾಗಿ ವಿನಂತಿಸಿದರು.
ಕಳೆದ ವರ್ಷ 2024ರಲ್ಲಿ ಕುವೆಂಪುರವರಿಗೆ ಕನ್ನಡ ಡಿಂಡಿಮ ಪ್ರಶಸ್ತಿ ಕೊಡಮಾಡಲಾಗಿತ್ತು, 2025ನೇ ಸಾಲಿನಲ್ಲಿ ಮೇರುನಟ ಡಾ.ರಾಜ್ ಕುಮಾರ್ ರವರಿಗೆ ಮರಣೋತ್ತರವಾಗಿ ಪ್ರಧಾನ ಮಾಡಲಾಗುತ್ತಿದೆ. ಖ್ಯಾತ ನಟ ಶಿವರಾಜ್ ಕುಮಾರ್, ಗೀತ ಶಿವರಾಜ್ ಕುಮಾರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಸಮಾರಂಭದಲ್ಲಿ ಅವಧೂತ ವಿನಯ್ ಗುರೂಜಿ, ಅದಿಚುಂಚನಗಿರಿ ಮಠದ ಪ್ರಕಾಶನಾಥ ಗುರೂಜಿ, ಶಾಸಕರಾದ ಎಂ.ಕೃಷ್ಣಪ್ಪ, ವೊಡೆ ಪಿ.ಕೃಷ್ಣ , ಆನೇಕ ಗಣ್ಯಮಹನೀರುಗಳು.ಗಾಯನ ಕಾರ್ಯಕ್ರಮದಲ್ಲಿ ಗಾಯಕರುಗಳಾದ ಪ್ರವೀಣಿ ಡಿ.ರಾವ್, ಮಂಜೇಶ್, ಗಣೇಶ್ ಪ್ರಸಾದ್, ಸವಿತಕ್ಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಗೋಷ್ಟಿಯಲ್ಲಿ ಶ್ರೀ ಶ್ರೀ ಶ್ರೀ ವಿದ್ಯಾ ವಾಚಸ್ಪತಿ ಡಾ.ವಿಶ್ವ ಸಂತೋಷ್ ಭಾರತಿ ಶ್ರೀಪಾದರು, ಸಂಘಟನೆಯ ಪ್ರಧಾನ ಕಾರ್ಯದರ್ಶಿ, ಆಡಳಿತ ಪಕ್ಷದ ಮಾಜಿ ನಾಯಕರಾದ ಎಮ್.ಶಿವರಾಜುರವರು, ಸಂಘದ ಪದಾಧಿಕಾರಿಗಳಾದ ನವೀನ್ ಹೆಗಡೆ, ಚಿಕ್ಕಣ್ಣ, ಸೋಮಶೇಖರ್, ನಾಗರಾಜಶೆಟ್ಟಿ ರವರು ಉಪಸ್ಥಿತರಿದ್ದರು