ಬೆಂಗಳೂರು: ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಸಂಸ್ಥೆಯ ಸಿಎಸ್ಆರ್ ನಿಧಿ ಅಡಿಯಲ್ಲಿ ಬಂಡಿಪುರ, ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರಣ್ಯ ಸಿಬ್ಬಂದಿಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಸುರಕ್ಷಾ ಕ್ಯಾಬಿನ್ ಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪ್ರಕೃತಿ ಕಾಡುಪ್ರಾಣಿ ಹಾಗೂ ಮಾನವ ಸಂಘರ್ಷ ತಡೆಯಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಕಂಡ್ರೆ ತಿಳಿಸಿದರು.
ಅರಣ್ಯ ಸಚಿವರಾದ ಈಶ್ವರ್ ಖಂಡ್ರೆರವರು, ಅಪರ ಮುಖ್ಯ ಅರಣ್ಯ ಸಂರಕ್ಷಣ ಅಧಿಕಾರಿ ಕುಮಾರ್ ಪುಷ್ಕರ್ ರವರು, ಎಂ.ಇ.ಐ.ಸಂಸ್ಥೆಯ ಅಧ್ಯಕ್ಷರಾದ ಎಸ್.ಮನೋಹರ್ ರವರು, ವ್ಯವಸ್ಥಾಪಕ ನಿರ್ದೇಶಕಿ ಸಿ.ಆನಿತಾ, ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಅರಣ್ಯ ಇಲಾಖೆಗೆ ಸುರಕ್ಷಾ ಕ್ಯಾಬಿನ್ ಹಸ್ತಾಂತರ ಮಾಡಲಾಯಿತು.
ಅರಣ್ಯ ಸಚಿವರಾದ ಈಶ್ವರ್ ಖಂಡ್ರೆರವರು ಮಾತನಾಡಿ ಪ್ರಕೃತಿ ಕುರಿತು ಮಾತನಾಡಿ, ಪ್ರತಿಯೊಬ್ಬರು ಉಳಿಸಲು ಬೆಳಸಲು ಶ್ರಮಿಸಬೇಕು. ಹವಮಾನ ಬದಲಾವಣೆ ಮತ್ತು ಬರ, ಬಿಸಿಲು ಮತ್ತು ಮಳೆ ಸಕಾಲಕ್ಕೆ ಆಗಬೇಕು ಅದರೆ ಹವಮಾನ ವೈಪರೀತ್ಯದಿಂದ ಸಮರ್ಪಕವಾಗಿ ಕಾಲಕಾಲಕ್ಕೆ ಮಳೆ ಬೆಳೆ ಆಗುವುದಿಲ್ಲ. ಇದರಿಂದ ಪ್ರವಾಹ, ತಾಪಮಾನ ಹೆಚ್ಚಳವಾಗಲಿದೆ.
ತಾಪಮಾನ 40ರಿಂದ 48ಡಿಗ್ರಿವರಗೆ ತಲುಪುತ್ತಿದೆ. ಕಾರವಾರ, ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರಕೃತಿ ಪರಿಸರ ಹೇರಳವಾಗಿದೆ ವೈವಿಧ್ಯಮಯ ಪ್ರಾಣಿ , ಪಕ್ಷಿಗಳು ಜೀವಿಸುತ್ತಿದೆ. ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ದುಬಾರೆ ಆನೆ ತರಭೇತಿ ಕೇಂದ್ರದಲ್ಲಿ ಆನೆ ದಾಳಿಯಿಂದ ಮಹಿಳೆ ಸಾವು ಸಂಭವಿಸಿರುವುದು ಶೋಚನೀಯ ಸಂಗತಿ. ಆನೆ ಸಂದರ್ಶನಗಳು ಕೆಲವೊಮ್ಮೆ ಸರ್ವೇಸಾಮಾನ್ಯವಾಗಿ ನಡೆಯುತ್ತಿರುತ್ತವೆ ಅದರಲ್ಲಿ ಇಂತಹ ಘಟನೆಗಳು ನೋವಿನ ಸಂಗತಿ ಆಗಿದೆ ಎಂದರು.
ಬಂಡಿಪುರದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಿದೆ ದೇಶದಲ್ಲಿ ಎರಡನೇಯ ಸ್ಥಾನದಲ್ಲಿ ಇದೆ ಮತ್ತು ಆನೆಗಳ ಸಂತತಿ ದೇಶದಲ್ಲಿ ಅತಿ ಹೆಚ್ಚು ನಮ್ಮ ರಾಜ್ಯದಲ್ಲಿ ಇದೆ.
ಮಾನವ ಮತ್ತು ಪ್ರಾಣಿಗಳ ಸಂಘರ್ಷದಲ್ಲಿ ಪ್ರತಿವರ್ಷ 30ರಿಂದ40 ಸಾವು ಸಂಭವಿಸುತ್ತಿದೆ. ಕ್ರಮ ಕೈಗೊಳ್ಳಲು ಅರಣ್ಯಧಿಕಾರಿಗಳು, ಸಿಬ್ಬಂದಿಗಳು ಆನೆ, ಹುಲಿ, ಚಿರತೆಗಳನ್ನು ಕಾಡಿ ಕಳುಹಿಸುವ ಕೆಲಸವನ್ನು ಹಗಲಿರುಳು ಮಾಡುತ್ತಾರೆ. ಅವರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 10ಸಾವಿರ ಕೋಟಿ ರಾಜ್ಯದಲ್ಲಿ 50ಸಾವಿರ ಕೋಟಿ ಬೆಲೆಯ ಒತ್ತುವರಿ ಅರಣ್ಯಭೂಮಿಯನ್ನು ವಶ ಪಡೆಯಲಾಗಿದೆ, ಇಲ್ಲಿಯವರೆಗೂ ಯಾವೊಬ್ಬರೂ ಸಚಿವರು ಮಾಡಿರದ ಕೆಲಸವನ್ನು ನಮ್ಮ ಸರ್ಕಾರದಲ್ಲಿ ಮಾಡಿದ್ದೇವೆ ಎಂದು ಹೇಳಿದರು.
ಎಂ ಈ ಐನ ಅಧ್ಯಕ್ಷರಾದ ಎಸ್.ಮನೋಹರ್ ರವರು ಮಾತನಾಡಿ ಸಾಮಾಜಿಕ ಜವಾಬ್ದಾರಿ ನಿಧಿ ಸಿ.ಎಸ್.ಆರ್. ಅಡಿಯಲ್ಲಿ ಈಗಾಗಲೇ ಶಾಲೆಗಳಿಗೆ ಸ್ಪಾರ್ಟ್ ಕ್ಲಾಸ್ ಅನುದಾನ ನೀಡಲಾಗಿದೆ. ವನ್ಯ ಜೀವಿ ಪರಿಪಾಲಕರು, ಸಿಬ್ಬಂದಿಗಳಿಗೆ ಅನುಕೂಲವಾಗಲಿ ಎಂದು ಸುರಕ್ಷಾ ಕ್ಯಾಬಿನ್ ನೀಡಲಾಗುತ್ತಿದೆ. ಪರಿಸರ ಉಳಿದರೆ ಮಾನವ ಕುಲ ಉಳಿಯುತ್ತದೆ. ಅರಣ್ಯ ಸಿಬ್ಬಂದಿಗಳು, ಆನೆ ದಾಳಿಗೆ ಒಳಗಾದ ವ್ಯಕ್ತಿಗಳಿಗೆ ಸಹಾಯಹಸ್ತ ಹಾಗೂ ಅರಣ್ಯ ಪ್ರದೇಶ ವ್ಯಾಪ್ತಿಯ ಶಾಲೆಗಳ ಅಭಿವೃದ್ದಿ, ಕುಡಿಯುವ ನೀರು, ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಹಾಗೂ ಶಾಲೆಗಳಿಗೆ ನಗರ ಪ್ರದೇಶಗಳಲ್ಲಿರುವಂತೆ ಅವರಿಗೂ ಸ್ಮಾರ್ಟ್ ಕ್ಲಾಸ್ ಗಳ್ಳ ಪರಿಕರಗಳನ್ನು ಒದಗಿಸಲಾಗಿದೆ, ಅಲ್ಲವೇ ತುರ್ತು ಸಂದರ್ಭಗಳಿಗೆ ಅನುಕೂಲವಾಗಲಿ ಇನ್ನು ನಿಟ್ಟಿನಲ್ಲಿ ಆಂಬುಲೆನ್ಸ್ ವಾಹನಗಳನ್ನು ಸಹ ನಮ್ಮ ಸಂಸ್ಥೆಯಿಂದ ನೀಡಲಾಗಿರುವುದು ನಮ್ಮ ಸಂಸ್ಥೆ ಸಿ.ಎಸ್.ಆರ್. ನಿಧಿಯಲ್ಲಿ. ಅರಣ್ಯ ಭೂಮಿ ಉಳಿಸಲು ಸಚಿವರಾದ ಈಶ್ವರ್ ಖಂಡ್ರೆರವರು ಅಪಾರ ಶ್ರಮ ಹಾಕಿದ್ದಾರೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಂಸ್ಥೆಯ ಪದಾಧಿಕಾರಿಗಳು ಇದೆ ವೇಳೆ ಉಪಸ್ಥಿತರಿದ್ದರು.