LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಶ್ಚಿಮಬಂಗಾಳ ಮೂಲದ ರೋಗಿಗೆ ಯಶಸ್ವಿ ರೆಟ್ರೊಪೆರಿಟೋನಿಯಲ್ ಚಿಕಿತ್ಸೆ

ರೆಟ್ರೊಪೆರಿಟೋನಿಯಲ್ ಸಾರ್ಕೋಮಾ (RPS) ಹೊಟ್ಟೆಯ ಹಿಂಭಾಗದಲ್ಲಿ ಉದ್ಭವಿಸುವ ಮೆಸೆಂಕಿಮಲ್ ಮೂಲದ ಅಪರೂಪದ ಕ್ಯಾನ್ಸರ್ ಆಗಿದೆ. ಇದು ವಾರ್ಷಿಕವಾಗಿ 100,000 ಜನರಿಗೆ ಸುಮಾರು 0.3 ರಿಂದ 1 ಪ್ರಕರಣದವರೆಗೆ ಕಂಡುಬರುತ್ತದೆ. ಶಸ್ತ್ರಚಿಕಿತ್ಸೆ ಮೂಲಕ ರೆಟ್ರೊಪೆರಿಟೋನಿಯಲ್ ಸಾರ್ಕೋಮಾ (RPS) ಗಡ್ಡೆ ತೆಗೆಯಲು ಸುಮಾರು ನಾಲ್ಕರಿಂದ ಐದು ಲಕ್ಷ ಹಣ ಖರ್ಚಾಗಬಹುದು : ಡಾ.ಮಾಧವಿ ನಾಯರ್

ಬೆಂಗಳೂರು: ಕಾಲು ನೋವಿನಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳ ಮೂಲದ ರೋಗಿಗೆ ಮಣಿಪಾಲ್ ಆಸ್ಪತ್ರೆಯ ಆಂಕೊಲಾಜಿಸ್ಟ್ ಶಸ್ತ್ರಚಿಕಿತ್ಸಾ ಸಲಹೆಗಾರರಾದ ವೈದ್ಯರಾದ ಡಾ.ಮಾಧವಿ ನಾಯರ್ ಯಶಸ್ವಿಯಾಗಿ ಸೂಕ್ಷ್ಮ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ  ತೆಗೆದು ಗುಣಮುಖರನ್ನಾಗಿ ರೋಗಿಯನ್ನು ಮಾಡಿದ್ದಾರೆ.news_1779631035_0_134.webp

ಪಶ್ಚಿಮ ಬಂಗಾಳ ಮೂಲದ ವಿವಾಹಿತ ಮಹಿಳಾ ರೋಗಿಯೊಬ್ಬರು ಕಾಲು ನೋವಿನಿಂದ ಬಳಲುತ್ತಿದ್ದರು, ಪರೀಕ್ಷೆಗೆ ಒಳಪಡಿಸಿದಾಗ ಮೂತ್ರಪಿಂಡದ ಹಿಂದೆ ಒಂದು ಗಡ್ಡೆ (ರೆಟ್ರೊಪೆರಿಟೋನಿಯಲ್ ಸಾರ್ಕೋಮಾ (RPS) ಇರುವುದು ಕಂಡುಬಂದಿದೆ. ಅವರು ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಹಲವಾರು ಪರೀಕ್ಷೆಗಳಿಗೆ ಒಳಗಾಗಿ  ಅನೇಕ ವೈದ್ಯರನ್ನು ಭೇಟಿ ಮಾಡಿದ್ದರು. ಅಂತಿಮವಾಗಿ ರೋಗಿಯನ್ನು ಅಲ್ಲಿನ ವೈದ್ಯರು ಬೆಂಗಳೂರಿಗೆ ರವಾನಿಸಿದ್ದಾರೆ. 

ಮಹಾಪಧಮನಿಯ ಸುತ್ತಲೂ ಪಂಜದ ಚಿಹ್ನೆಯನ್ನು ತೋರಿಸಿದೆ. ಇತರ ಕೇಂದ್ರಗಳಲ್ಲಿ ರೋಗಿಗೆ ಈ ಗಡ್ಡೆಯು ಮಹಾಪಧಮನಿಯೊಂದಿಗೆ 180 ಡಿಗ್ರಿ ಸಂಪರ್ಕ ಇರುವುದನ್ನು ತೋರಿಸುತ್ತಿದೆ ಮತ್ತು ಇದು ತುಂಬಾ ಅಪಾಯಕಾರಿ ಶಸ್ತ್ರಚಿಕಿತ್ಸೆ ಎಂದು ಹೇಳಲಾಗಿತ್ತು. ಹೀಗಾಗಿ ರೋಗಿಯು ತುಂಬಾ ಚಿಂತಿತರಾಗಿದ್ದರು. ಮೂತ್ರಪಿಂಡದ ಮೇಲೆ ಚಿಕ್ಕ ಗಡ್ಡೆ ಇರುವುದರಿಂದ ಶಸ್ತ್ರಚಿಕಿತ್ಸೆ ಮಾಡಲು ಅಪಾಯಕಾರಿಯಾಗಿರುತ್ತದೆ. 

ಇತರದ ರೋಗಗಳಿಗೆ  ಶಸ್ತ್ರಚಿಕಿತ್ಸೆ ಮಾಡಲು ಅಪಾರ ಪ್ರಮಾಣದ ರಕ್ತ ನಷ್ಟವಾಗುತ್ತದೆ ಇದರಿಂದ ರೋಗಿಯ ಜೀವಕ್ಕೆ ಕುತ್ತುಬರುವ ಸಾಧ್ಯತೆ ಹೆಚ್ಚುರುತ್ತದೆ. ಹೀಗಾಗಿ ಅರಿವಳಿಕೆ ತಜ್ಞರು ಮತ್ತು ಶಸ್ತ್ರಚಿಕಿತ್ಸಕರ ನಮ್ಮ ತಂಡ (ಡಾ. ನಟರಾಜ್ ನಾಯ್ಡು ) ಕನಿಷ್ಠ ರಕ್ತದ ನಷ್ಟದೊಂದಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದರು. ರೋಗಿಯು ಮರುದಿನ ನಡೆಯುತ್ತಿದ್ದರು ಮತ್ತು 4 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಿ ತಮ್ಮೂರಿಗೆ ತೆರಳಿ ಕುಟುಂಬದೊಂದಿಗೆ ಸಹಜ ಜೀವನವನ್ನು ನಡೆಸುತ್ತಿದ್ದಾರೆ. 

ಇಂತಹ ಗಡ್ಡೆಯುಳ್ಳ ಕ್ಯಾನ್ಸರ್ ಚಿಹ್ನೆಯನ್ನು ಸಂಪೂರ್ಣವಾಗಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದರೆ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಲಕ್ಷಣಗಳು ಕಂಡುಬರುವುದಿಲ್ಲ, ದೇಹದ ಬೇರೆ ಬೇರೆ ಕ್ಯಾನ್ಸರ್ ಗುಣಗಳಿಗೆ ಹೋಲಿಸಿದರೆ ರೆಟ್ರೊಪೆರಿಟೋನಿಯಲ್ ಗಡ್ಡೆ ಕ್ಯಾನ್ಸರ್ ತುಂಬಾ ವಿಶೇಷವಾಗಿದೆ, ರೆಟ್ರೊಪೆರಿಟೋನಿಯಲ್ ಸಾರ್ಕೋಮಾ (RPS) ಹೊಟ್ಟೆಯ ಹಿಂಭಾಗದಲ್ಲಿ ಉದ್ಭವಿಸುವ ಮೆಸೆಂಕಿಮಲ್ ಮೂಲದ ಅಪರೂಪದ ಕ್ಯಾನ್ಸರ್ ಆಗಿದೆ. ಇದು ವಾರ್ಷಿಕವಾಗಿ 100,000 ಜನರಿಗೆ ಸುಮಾರು 0.3 ರಿಂದ 1 ಪ್ರಕರಣದವರೆಗೆ ಕಂಡುಬರುತ್ತದೆ.

ಶಸ್ತ್ರಚಿಕಿತ್ಸೆ ಮೂಲಕ ರೆಟ್ರೊಪೆರಿಟೋನಿಯಲ್ ಸಾರ್ಕೋಮಾ (RPS) ಗಡ್ಡೆ ತೆಗೆಯಲು ಸುಮಾರು ನಾಲ್ಕರಿಂದ ಐದು ಲಕ್ಷ ಹಣ ಖರ್ಚಾಗಬಹುದು ಎಂದು ಹೇಳಿದರು..

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಕಚೇರಿ, ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಕಾರ್ಯಾರಂಭಸಮ್ಯಕ್ ಪ್ರತಿಷ್ಠಾನಮ್ ನಿಂದ ಗುರುವಂದನಾ, ಸಾಧಕರಿಗೆ ಸಂಸ್ಕೃತ ಶ್ರೀ: ಪ್ರಶಸ್ತಿ ಪ್ರದಾನತಮಿಳುನಾಡಿಗೆ ಬಿಡುವಷ್ಟು  ಕಾವೇರಿ‌ ನೀರಿಲ್ಲ: ಎಂ ಬಿ ಪಾಟೀಲಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭ: ಎಂ ಬಿ ಪಾಟೀಲಬೆಳ್ಳಂದೂರು ಎಸ್‌ಟಿಪಿಯ ಸಮಗ್ರ ತನಿಖೆ ಮುಂದುವರಿಕೆ; ಕಾರ್ಮಿಕರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳಾಮೇಕೆದಾಟು ಯೋಜನೆಯನ್ನು ತಕ್ಷಣ ಆರಂಭಿಸಿ  2 ವರ್ಷಗಳೊಳಗೆ ಪೂರ್ಣಗೊಳಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ ಸರ್ಕಾರಿ ಶಿಕ್ಷಣ ಸಂಸ್ಥೆಯ ಜಾಗ ಕಬಳಿಸಲು ಕೇಂದ್ರ ಸಚಿವರ ಉನ್ನಾರಕಾಮನ್ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಕಂಚಿನ ಮುಕುಟಮಾಲೂರು ನ್ಯಾಯಾಧೀಶೆಯ ಬೀದಿಜಗಳ? ನೊಂದವರ ಕಣ್ಣೀರು! ವಕೀಲರ ಸಂಘದಿಂದ ಹೈ ಮೆಟ್ಟಿಲುಆ.5ಕ್ಕೆ ಮುಜರಾಯಿ ದೇವಾಲಯಗಳ ಅರ್ಚಕರ,ಆಗಮಿಕರ ನೌಕರರ ಸಂಘದಿಂದ ಸಮಾವೇಶ ಅಭಿನಂದನ ಸಮಾರಂಭ