LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾಸ್ಟರ್ ಹಿರಣ್ಣಯ್ಯ ಸ್ಮರಣಾರ್ಥ ಸುಚಿತ್ರ ಹಿರಣ್ಯ ನಾಟಕೋತ್ಸವ

ಬೆಂಗಳೂರು: ಸುಚಿತ್ರ ಹಿರಣ್ಣಯ್ಯ ನಾಟಕೋತ್ಸವದ ಅಂಗವಾಗಿ ಏಪ್ರಿಲ್ 16ರಿಂದ 19ರ ವರೆಗೆ ನಾಲ್ಕು ದಿನಗಳ ಕಾಲ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುಚಿತ್ರ ಫಿಲಂ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷರಾದ ಎಚ್ಎನ್ ನರಹರಿ ರಾವ್ ಅವರು ತಿಳಿಸಿದರು.


ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ಹಿರಿಯ ರಂಗಕರ್ಮಿ ಈರಣ್ಣಯ್ಯ ಅವರ ರಂಗಭೂಮಿ ಕಲೆಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಅವರನ್ನು ಜೀವಂತವಾಗಿ ಇಡುವ ನಿಟ್ಟಿನಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ಸ್ಮರಣಾರ್ಥವಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಾದ ಜಾನಪದ ಕಲೆಗಳು ನಾಟಕಗಳು ವರ್ಕ್ ಶಾಪ್‌ಗಳನ್ನು ಹಮ್ಮಿಕೊಳ್ಳಲಾಗಿದೆ.


ಏಪ್ರಿಲ್ 16 17 18 19ರಂದು ನಾಲ್ಕು ದಿನಗಳ ಕಾಲ ಹಲವು ವಿಶೇಷತೆ ಗಳೊಂದಿಗೆ ಸೊಸೈಟಿಯಲ್ಲಿ ಕಾರ್ಯಕ್ರಮಗಳು ಸಾಂಗವಾಗಿ ನಡೆಯಲಿವೆ.


ಇನ್ನು ಏಪ್ರಿಲ್ 16ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸಹ ಸಂಸ್ಥಾಪಕರಾದ ರಾಘವೇಂದ್ರ ರಾವ್ ನಟ ನಿರ್ದೇಶಕರಾದ ಪ್ರಕಾಶ್ ಬೆಳವಾಡಿ ಹಾಗೂ ಬಾಬು ಹಿರಣಯ್ಯ, ವೃಷಾಂಕ್ ಭಟ್ ಭಾಗವಹಿಸಲಿದ್ದಾರೆ.


ಇನ್ನೂ ನಾಲ್ಕು ದಿನ ನಡೆಯುವ ಸಮಾರಂಭದಲ್ಲಿ ಹಲವು ಕಲೆಗಳಿಗೆ ಸಂಬಂಧಿಸಿದಂತೆ ವರ್ಕ್ ಶಾಪ್ಗಳು ನಡೆಯಲಿದ್ದು ಮಾಸ್ಟರ್ ಕ್ಲಾಸಲ್ಲಿ ಸಿಂದು ಶ್ರೀನಿವಾಸ್ ಮೂರ್ತಿ, ಬಾಬು ಹಿರಣ್ಣಯ್ಯ ಪವನ್ ಕುಮಾರ್ ಬಾಲಾಜಿ ಮನೋಹರ ರವರು ಭಾಗವಹಿಸಲಿದ್ದಾರೆ. ಅಲ್ಲದೆ ಜಾನಪದ ನೃತ್ಯ ಹಾಗೂ ಬೀದಿ ನಾಟಕಗಳಲ್ಲಿ ಹಲವು ಶಾಲಾ ಕಾಲೇಜಿನ ಮಕ್ಕಳು ವಿದ್ಯಾರ್ಥಿಗಳು ಸಹ ಭಾಗವಹಿಸಲಿದ್ದಾರೆ. ಅದರಲ್ಲಿ ಡೊಳ್ಳು ಕುಣಿತ ನಮ್ಮ ರಂಗಭೂಮಿ ನಮ್ಮ ಶಕ್ತಿ ಯು ಆರ್ ಆಲ್ಸೋ ಏನ್ ಅನಿಮಲ್ ಲೈಕ್ ಆಸ್, ಆಪರೇಷನ್ ಸಿಂಧೂರ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಮಕ್ಕಳಿಂದ ವಿದ್ಯಾರ್ಥಿಗಳಿಂದ ಮೂಡಿ ಬರಲಿದೆ.


ಇನ್ನು ನಾಟಕಗಳಿಗೆ ನೋಡುವುದಾದರೆ ಜ್ಞಾತ ಪರ್ವ ಸೇವಂತಿ ಪ್ರಸಂಗ ಅಭಿಯಾನ ಮಹೋರ್ಣ ಎಂಬ ನಾಟಕಗಳು ಪ್ರದರ್ಶನವಾಗಲಿದೆ.


ಏಪ್ರಿಲ್ 19ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿರ್ದೇಶಕರು ಹಾಗೂ ಬರಹಗಾರರಾದ ರವರು ಆಗಮಿಸುತ್ತಿದ್ದಾರೆ. ಪಿಯರಿಯನ್ ಇಂಕಾರ್ಪರೇಷನ್ CEO, ಸ್ಥಾಪಕ ಅಧ್ಯಕ್ಷರಾದ ಗುರುನಾಥ ಕನತೂರು ಉದ್ಯಮಿಯಾದ ಡಾಕ್ಟರ್ ಚಿನ್ಮಯ್ ಚಿಗಟೇರಿ ಸಚಿತ್ರ ವರ್ಕಿಂಗ್ ಪ್ರೆಸಿಡೆಂಟ್ ಆದ ಆನಂದ ಸಭಾಪತಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.


ನಾಲ್ಕು ದಿನ ನಡೆಯುವ ವಿವಿಧ ಕಾರ್ಯಕ್ರಮಗಳಿಂದ ಸಂದಾಯವಾಗುವ ಡೇಣಿಗೆಯಿಂದ ಅಲ್ಲಿನ ಕಲಾವಿದರಿಗೆ ಸಂಪೂರ್ಣವಾಗಿ ಆ ಹಣವನ್ನು ನೀಡಲಾಗುತ್ತದೆ ಎಂದು ಸೊಸೈಟಿಯ ಅಧ್ಯಕ್ಷರು ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದರು.


[video width="1920" height="1080" mp4="https://beestimes.com/wp-content/uploads/2026/04/VID_20260413_120020.mp4"][/video]



 ಉತ್ಸವದ ಕುರಿತು ಹೇಳುವುದಾದರೆ ಸುಚಿತ್ರ ಹಿರಣ್ಯ ನಾಟಕೋತ್ಸವ ಕನ್ನಡ ರಂಗಭೂಮಿಯ ದಂತಕಥೆ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಸಲ್ಲುವ ಹೃತ್ಪೂರ್ವಕ ನಮನವಾಗಿದೆ. ಕನ್ನಡ ರಂಗಭೂಮಿಗೆ ಅವರು ನೀಡಿದ ಅಪಾರ ಕೊಡುಗೆಯು ಇಂದಿಗೂ ಆಸು ಒಕ್ಕಲಾಗಿದೆ ಹಾಗೂ ಸ್ಪೂರ್ತಿದಾಯಕವಾಗಿದೆ. ಹಿರಣ್ಣಯ್ಯ ಕುಟುಂಬದ ಆಶೀರ್ವಾದ ಮತ್ತು ಬೆಂಬಲದೊಂದಿಗೆ ಆಯೋಜಿಸಲಾದ ಉತ್ಸವವು ರಂಗಭೂಮಿ ಸಂಪ್ರದಾಯ ಮತ್ತು ಸಮಕಾಲಿನ ಕಲಾತ್ಮಕ ಅಭಿವ್ಯಕ್ತಿಗಳ ಒಂದು ಅದ್ಭುತ ಸಂಗಮವಾಗಿದೆ. ಇದು ಯುವ ಪ್ರತಿಭೆಗಳು ಅನುಭವಿ ಕಲಾವಿದರ ಮತ್ತು ರಂಗಾಸಕ್ತರನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಉದ್ದೇಶವನ್ನು ಹೊಂದಲಾಗಿದೆ.


ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷರು ಉಪಾಧ್ಯಕ್ಷರು ಖಜಾಂಚಿ ಸೇರಿದಂತೆ ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ