LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಸ್ಕಾನ್ ದೇವಾಲಯದಲ್ಲಿ ಬಲರಾಮ ಪೌರ್ಣಮಿ ಮಹೋತ್ಸವದ ವಿಜೃಂಭಣೆಯ ಆಚರಣೆ

ಬೆಂಗಳೂರು: ಇಸ್ಕಾನ್ ದೇವಸ್ಥಾನದಲ್ಲಿ ಬಲರಾಮ ಪೌರ್ಣಮಿ ಮಹೋತ್ಸವವನ್ನು ಹರ್ಷೋಲ್ಲಾಸಗಳೊಂದಿಗೆ ಆಚರಿಸಕಾಯಿತು.

ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಸ್ಕಾನ್ ಮಂದಿರದಲ್ಲಿ ಶ್ರಾವಣ ಮಾಸದ ಪೌರ್ಣಿಮೆ ದಿನದಂದು ಭಗವಂತ ಶ್ರೀ ಕೃಷ್ಣನ ಅಣ್ಣನಾಗಿ ಅವತರಿಸಿದ ಶ್ರೀಬಲರಾಮರು, ಶ್ರೀಮಾನ್ ವಾಸುದೇವ ಹಾಗೂ ಶ್ರೀಮತಿ ರೋಹಿಣಿರವರ ಮಗನಾಗಿ "ಬಲದೇವ","ಬಲಭದ್ರ" ಹಾಗೂ "ಸಂಕರ್ಷಣ"ಎಂಬ ಹೆಸರುಗಳಿಂದಲೂ ಪ್ರಸಿದ್ಧಿಯಾಗಿದೆ.

ಶ್ರೀ ಬಲರಾಮನು ಭಕ್ತರ ಆಧ್ಯಾತ್ಮಿಕ ಸಾಧನೆಯಲ್ಲಿ, ಎದುರಾಗಬಹುದಾದ ಎಲ್ಲಾ ಅಡಚಣೆಗಳನ್ನು ಎದುರಿಸಲು ಬೇಕಾದ ಶಕ್ತಿ ಸಾಮರ್ಥ್ಯ ಮತ್ತು ಬಲವನ್ನು ಕರುಣಿಸುತ್ತಾನೆ. ಈ ಪವಿತ್ರ ದಿನದಂದು, ಭಕ್ತಾದಿಗಳು ಅರ್ಧದಿನ ಉಪವಾಸವನ್ನು ಆಚರಿಸಿ, ತಮ್ಮ ಆಧ್ಯಾತ್ಮಿಕ ಸ್ಥೈರ್ಯ ಹಾಗೂ ಆಧ್ಯಾತ್ಮಿಕ ಸಾಧನೆಯನ್ನು ಹೆಚ್ಚಿಸಿಕೊಳ್ಳಲು ಪ್ರಾರ್ಥಿಸಿದರು.

ಇಸ್ಕಾನ್ ಬೆಂಗಳೂರು ದೇವಸ್ಥಾನದಲ್ಲಿ , ಶ್ರೀಶ್ರೀ ಕೃಷ್ಣ ಬಲರಾಮರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಸಂಜೆ 6:00ಗೆ ಶ್ರೀ ಕೃಷ್ಣ ಬಲರಾಮಾರಾ ಉತ್ಸವಮೂರ್ತಿಗಳಿಗೆ ಮಹಾಭಿಷೇಕವು ಘನವಾಗಿ ಜರುಗಿತು. ಇದಾದ ನಂತರ ಅವರಿಗೆ ಮಹಾ ಭಕ್ತರ ಮಧುರ ಭಜನೆ–ಕೀರ್ತನೆಗಳೊಂದಿಗೆ ಮಹಾಮಂಗಳಾರತಿಯೂ ನೆರವೇರಿತು.

ಈ ಮಹೋತ್ಸವದ ಅಂಗವಾಗಿ ಶ್ರೀ ಶ್ರೀ ಕೃಷ್ಣ ಬಲರಾಮ ದೇವರಿಗೆ 56 ಬಗೆಯ ವಿಶೇಷ ಮಹಾಪ್ರಸಾದಗಳನ್ನು (ಚಪ್ಪನ್ ಭೋಗ)ವನ್ನು ಸಮರ್ಪಿಸಲಾಗಿತ್ತು.ಭಕ್ತಿ , ಸಂತೋಷ ಹಾಗೂ ಆಧ್ಯಾತ್ಮಿಕ ಹರ್ಷೋಲ್ಲಾಸಗಳಿಂದ ಉತ್ಸವವು ನೆರವೇರಿತು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ