LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರೈಸ್ ನ ಬೇಡಿಕೆ ಒಂದು ಈಡೇರಿಕೆ,ಉಳಿದ ಬೇಡಿಕೆ ಈಡೇರಲು ಗಡುವು,

ಬೆಂಗಳೂರು: ವಸತಿ ಶಾಲೆಗಳ ನೌಕರರ ಸಂಘ ದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಾಗೂ ರಜದ ಎಲ್ಲಾ ಜಿಲ್ಲೆಗಳ ಶಾಲೆಗಳಲ್ಲಿ ಮೇ 29ರಂದು ನಿರ್ದಿಷ್ಟವಧಿ ಧರಣಿಯನ್ನು ಮಾಡಿದರು ಹೀಗಾಗಿ ಸರ್ಕಾರ ಎಚ್ಚೆತ್ತುಕೊಂಡು ಮರಣ ಒಪ್ಪೋ ದಾನವನ್ನು 5 ಲಕ್ಷದಿಂದ 15ಲಕ್ಷದವರೆಗೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ, ಹೀಗಾಗಿ ತಾತ್ಕಾಲಿಕವಾಗಿ ಧರಣಿಯನ್ನು ಸ್ಥಗಿತಗೊಳಿ ಗೊಳಿಸಲಾಗಿದೆ ಎಂದು ವಸತಿ ಶಾಲೆಗಳ ನೌಕರರ ಸಂಘದ ಅಧ್ಯಕ್ಷ ರವಿಚಂದ್ರನ್ ಅವರು ತಿಳಿಸಿದರು.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು, ಸಮಾಜ ಕಲ್ಯಾಣ ಇಲಾಖೆಯಡಿಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ.ವ.ಶಿ.ಪ.ಸಂಘ)/ಕ್ರೈಸ್/KREIS ಅಧೀನದ ಎಸ್.ಸಿ. ಎಸ್.68, ಬಿ.ಪಿ (SC, ST, BC) ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ ಡಾ.ಬಿ.ಆರ್.ಅಂಬೇಡ್ಕರ್ / ಇಂದಿರಾ ಗಾಂಧಿ ವಸತಿ ಶಾಲೆಗಳ ಖಾಯಂ ಶಿಕ್ಷಕರು/ನೌಕರರ ಸಮಸ್ಯೆಗಳಿಗೆ 13 ವರ್ಷಗಳಿಂದ ಯಾವುದೇ ಪರಿಹಾರ ಸಿಕ್ಕಿರುವುದಿಲ್ಲ. ಆದ್ದರಿಂದ ವಸತಿ ಶಾಲೆಗಳ ನೌಕರರ ಸಂಘಟನೆಯಿಂದ ಮೇ 26ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ದಿಷ್ಟ ಅವಧಿ  ಧರಣಿಯನ್ನು ಹಲವು ಸಂಘಟನೆಗಳು ಸೇರಿಕೊಂಡು ಮಾಡಿದವು.

ಸರ್ಕಾರದ ಕಮಲ ಸೆಳೆಯುವ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಕಿವಿ ಇಂಡಿಗೋ ಕೆಲಸವನ್ನು ವಸತಿ ಶಾಲೆಗಳ ಸಂಘಟನೆಗಳು ಮಾಡಿದವು, ಸಂವಿಧಾನಾತ್ಮಕ ಸತ್ಯಾಗ್ರಹ ಮಾಡುವ ಬಗ್ಗೆ  ಸರ್ಕಾರಕ್ಕೆ ಮನವಿ ಸಹ ಮಾಡಿದ್ದೆವು. ಹಲವು ಬೇಡಿಕೆಗಳು ಹಿನ್ನೆಲೆ ಮೇ 20ರಂದು ಸಚಿವರ ನೇತೃತ್ವದಲ್ಲಿ ಸಭೆಯನ್ನು ಸಹ ನಡೆಸಲಾಗಿತ್ತು ಅದರಲ್ಲಿ ನಮ್ಮ ಬೇಡಿಕೆಗಳ ಬಗ್ಗೆ ಈಡೇರಿಸುವ ಬಗ್ಗೆ ವಿಶ್ವಾಸವನ್ನು ಸಹ ನೀಡಿದರು ಆದರೆ ಸಭೆ ನಡೆದ ಎರಡು ಮೂರು ದಿನಗಳ ಕಳೆದರೂ ಸಹ ನಮ್ಮ ಮನವಿಗಳನ್ನು ಪರಿಗಣಿಸದೆ ಇದ್ದ ಪಕ್ಷದಲ್ಲಿ ಅನಿವಾರ್ಯವಾಗಿ ಸತ್ಯಾಗ್ರಹಕ್ಕೆ ಇಳಿಯಬೇಕಾಯಿತು ಎಂದು ಅಧ್ಯಕ್ಷರು ತಿಳಿಸಿದರು.

ಫ್ರೀಡಂ ಪಾರ್ಕಿನಲ್ಲಿ ನಡೆದ ಧರಣಿಯಲ್ಲಿ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಶಾಲೆಯಲ್ಲಿ/ಜಿಲ್ಲಾ ಮಟ್ಟದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಣೆ, ಮೌನಮೆರವಣಿಗೆ ಮತ್ತು ದರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಸಮಾಜ ಕಲ್ಯಾಣ ಸಚಿವರು ಹಾಗೂ ಕ.ವ.ಶಿ.ಸ.ಸಂಘದ ಅಧ್ಯಕ್ಷರಾದ ಡಾ.ಹೆಚ್.ಸಿ.ಮಹದೇವಪ್ಪರವರ ಸೂಚನೆಯ ಮೇರೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ, ರವರು ದಿ:02.06.2025 ರಂದು ನಮ್ಮ ಸಂಘಟನೆಯ ಪದಾಧಿಕಾರಿಗಳೊಂದಿಗೆ ಶಾಸಕರಾದ ಪುಟ್ಟಣ್ಣ ಮತ್ತು ಡಿ.ಟಿ.ಶ್ರೀನಿವಾಸ್ ರವರ 'ಉಪಸ್ಥಿತಿಯಲ್ಲಿ ಸಂಧಾನ ಸಭೆ ನಡೆಸಲಾಗಿದೆ.

ಸಭೆ ಧರಣಿ ಹಲವು ಒತ್ತಡಗಳ ಮಧ್ಯೆ ಸಚಿವರು ಹಲವು ಬೇಡಿಕೆಗಳಲ್ಲಿ ಕೇವಲ ಒಂದು ಬೇಡಿಕೆಯನ್ನು ಮಾತ್ರ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಅದು ಮರಣ ಉಪದಾನವನ್ನು 5 ಲಕ್ಷದಿಂದ 15ಲಕ್ಷಗಳಿಗೆ ಹೆಚ್ಚಿಸಿ ಸರ್ಕಾರದ ಆದೇಶ ಹೊರಡಿಸಲಾಗಿದೆ. ಸಂದಾನ ಸಭೆಯಲ್ಲಿ ನಮ್ಮ ಇತರೆ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸುವ ಬಗ್ಗೆ ಭರವಸೆ ನೀಡಿರುತ್ತಾರೆ. ಆದಕಾರಣ ಸರ್ಕಾರಕ್ಕೆ ಜೂನ್ ಅಂತ್ಯದವರೆಗೆ ಸಮಯಾವಕಾಶ ನೀಡಿ ಅನಿರ್ದಿಷ್ಟಾವಧಿ ಸಂವಿಧಾನಾತ್ಮಕ ಸತ್ಯಾಗ್ರಹವನ್ನು ಮುಂದೂಡಲಾಗಿದೆ.

ಒಂದು ವೇಳೆ ಸರ್ಕಾರ ನಾವು ನೀಡಿರುವ ಗಡುವಿನ ಒಳಗಾಗಿ ನಮ್ಮ ಬೇಡಿ ಇತರ ಬೇಡಿಕೆಗಳನ್ನು ಈಡೇರಿಸದೆ ಓದಲ್ಲಿ ಮುಂಬರುವ ಬೆಳಗಾವಿ ಅಧಿವೇಶನ ನಡೆಯುವ ವೇಳೆ ಧರಣಿ ಸತ್ಯಾಗ್ರಹ ಮಾಡಿ ಶಾಲೆಗಳಲ್ಲಿ ಯಾವುದೇ ಬೋಧನೆ ಮಾಡದೆ ಕರ್ತವ್ಯ ನಿರ್ವಹಿಸದೆ ಧರಣಿಯಲ್ಲಿ ಪಾಲ್ಗೊಳ್ಳಲಾಗುತ್ತದೆ ಎಂದು ಸರ್ಕಾರಕ್ಕೆ ಇದೇ ವೇಳೆ ಎಚ್ಚರಿಕೆಯನ್ನು ಸಹ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಗಿರೀಶ್ ಎಸ್, ಪ್ರಧಾನ ಕಾರ್ಯದರ್ಶಿಯಾದ ನಟರಾಜ ಪಿಕೆ, ಚಿಕ್ಕಬಳ್ಳಾಪುರ ಘಟಕದ ಅಧ್ಯಕ್ಷರಾದ ಜಗದೀಶ್ ,ರಾಮನಗರ ಘಟಕದ ಪ್ರಧಾನ ಕಾರ್ಯದರ್ಶಿಯಾದ ವೆಂಕಟೇಶ್ ಸೇರಿದಂತೆ ಹಲವರು ಉಪಸಿತರಿದ್ದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ