ಬೆಂಗಳೂರು : ಕೇಂದ್ರ ಸರ್ಕಾರ ವಾಮ ಮಾರ್ಗದಲ್ಲಿ ರಾಜ್ಯಗಳಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಎಸ್ಐಆರ್ ಮೂಲಕ ಮತದಾರರ ಪಟ್ಟಿಯಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡುವ ತಂತ್ರವನ್ನು ಮಾಡುತ್ತಿದೆ ಹಾಗೂ ಚುನಾವಣೆ ಆಯೋಗವನ್ನು ದುರುಪಯೋಗಪಡಿಸಿಕೊಂಡು ಲಾಭಗಳಿಸುವ ಕುತಂತ್ರವನ್ನು ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರರಾದ ಶ್ರೀ ಎಂ. ಲಕ್ಷ್ಮಣ್ ತಿಳಿಸಿದರು.

ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಅವರು ಇಂದು ಜಂಟಿ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಎಸ್ಐಆರ್ ಹಾಗೂ ಬಿಡದಿ ಟೌನ್ ಶಿಪ್ ಬಗ್ಗೆ ಕೇಂದ್ರ ಸರ್ಕಾರದ ಹಾಗೂ ಚುನಾವಣಾ ಆಯೋಗದ ಕುತಂತ್ರದ ಬಗ್ಗೆ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಕುಟುಂಬದವರು ಮಾಡುತ್ತಿರುವ ಆಧಾರ ರಹಿತ ಆರೋಪದ ಬಗ್ಗೆ ಸ್ಪಷ್ಟ ಉತ್ತರ ಹಾಗೂ ಪ್ರಶ್ನೆಯನ್ನು ಕೇಳುವ ಮೂಲಕ ರಾಜ್ಯದ ಜನತೆಗೆ ಸತ್ಯಾಂಶ ತಿಳಿಸುವ ಹೇಳಿಕೆಯನ್ನು ನೀಡಿದರು.
ಕೇಂದ್ರ ಸರ್ಕಾರ ವಾಮ ಮಾರ್ಗದಲ್ಲಿ ರಾಜ್ಯಗಳಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಎಸ್ಐಆರ್ ಮೂಲಕ ಮತದಾರರ ಪಟ್ಟಿಯಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡುವ ತಂತ್ರವನ್ನು ಮಾಡುತ್ತಿದೆ ಹಾಗೂ ಚುನಾವಣೆ ಆಯೋಗವನ್ನು ದುರುಪಯೋಗಪಡಿಸಿಕೊಂಡು ಲಾಭಗಳಿಸುವ ಕುತಂತ್ರವನ್ನು ಮಾಡುತ್ತಿದೆ ಇದರಿಂದ ಈಗಾಗಲೇ ಅನೇಕ ರಾಜ್ಯಗಳಲ್ಲಿ ಬಿಜೆಪಿ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದಿದೆ.
ಕರ್ನಾಟಕದಲ್ಲಿ ಈ ರೀತಿಯ ಕುತಂತ್ರ ನಡೆಸಲು ಬಿಡದೆ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಈ ಕುತಂತ್ರದ ವಿರುದ್ಧ ಸ್ಪಷ್ಟವಾದಂತ ನಿರ್ಣಯ ಕೈಗೊಳ್ಳಲು ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಸಭೆಯನ್ನು ಆಯೋಜಿಸಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ನೈಜ್ಯಮತಾದಾರರನ್ನ ರಕ್ಷಿಸಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಣೆಮಾಡಿ ಮತದಾರರ ಪರ ನಿಂತು ಮತದಾರರನ್ನು ಗುರುತಿಸಿ ಮತದಾನ ಮಾಡುವ ಹಕ್ಕನ್ನು ನೀಡಲು ನಾವು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುತ್ತಿದ್ದೇವೆ.
ಬಿಡದಿ ವಿಚಾರದಲ್ಲಿ ದೇವೇಗೌಡರ ಕುಟುಂಬ ರೈತರನ್ನು ದಾರಿತಪ್ಪಿಸುತ್ತಿದೆ:
ಇನ್ನು ಬಿಡದಿ ವಿಷಯದಲ್ಲಿ ಎಚ್.ಡಿ. ದೇವೇಗೌಡರ ಕುಟುಂಬ ಮಾಡುತ್ತಿರುವ ರಾಜಕೀಯ ಕುತಂತ್ರ ಹಾಗೂ ರೈತರನ್ನ ದಾರಿ ತಪ್ಪಿಸುವುದು ಹಾಗೂ ರೈತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿ ಕಾನೂನು ವ್ಯವಸ್ಥೆಗೆ ಧಕ್ಕೆ ತಂದು ರೈತರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯವನ್ನು ಎಂದಿನಂತೆ ಶ್ರೀ.ದೇವೇಗೌಡರು,ಎಚ್.ಡಿ. ಕುಮಾರಸ್ವಾಮಿ ಪ್ರಾರಂಬಿಸಿದ್ದಾರೆ,
ರಾಜಕೀಯ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿರುವ ನಿಖಿಲ್ ಕುಮಾರಸ್ವಾಮಿ ದಿನನಿತ್ಯ ರೈತರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ ಈಗಾಗಲೇ ನೈಜ ರೈತರು ಸರ್ಕಾರದ ಪರ ನಿಂತು ಸಮಸ್ಯೆಗಳನ್ನು ಆಲಿಸಿ ಟೌನ್ ಶಿಪ್ ಗೆ ಭೂಮಿಗಳನ್ನ ಹಸ್ತಾಂತರಿಸಿದ್ದಾರೆ.
ರೈತರ ಹೆಸರಿನಲ್ಲಿ ಕುಮಾರಸ್ವಾಮಿ ರಾಜಕೀಯ ಲಾಭ?
ರೈತರ ಹೆಸರಿನಲ್ಲಿ ರಾಜಕೀಯ ಮಾಡಿ ಲಾಭ ಪಡೆಯುವ ಕುಮಾರಸ್ವಾಮಿ ಈಗ ರೈತರ ಪರ ಧ್ವನಿ ಎತ್ತುತ್ತಿದ್ದಾರೆ ಆಗ ರೈತರ ವಿರೋಧಿಯಾಗಿ ಕಾರ್ಯನಿರ್ವಹಿಸಿ ಈಗ ರೈತರ ಪರ ಎಂಬುದನ್ನು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ,
ಸಣ್ಣ ವಯಸ್ಸಿನಲ್ಲಿ ಲೋಕಸಭಾ ಹಾಗೂ ಎರಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿರುವ ನಿಖಿಲ್ ಕುಮಾರಸ್ವಾಮಿ ಹಾಸನ, ಮಂಡ್ಯ, ಹಾಗೂ ರಾಮನಗರ ಜಿಲ್ಲೆಯಲ್ಲಿ ರೈತರೊಂದಿಗೆ ಶ್ರಮ ಪಟ್ಟಿದ್ದಾರೆಯೇ ? ಅಥವಾ ರೈತರ ಸಮಸ್ಯೆಗೆ ಎಂದಾದರು ಹೋರಾಡಿದ್ದಾರೆಯೇ ಎಂಬುದನ್ನು ಮೊದಲು ತಿಳಿಸಲಿ ನಂತರ ರೈತರಿಗೆ ಉತ್ತರಿಸಲಿ,
ಈ ವಯಸ್ಸಿನಲ್ಲಿ 113 ಕೋಟಿ ಹಣ ವ್ಯವಹಾರ ವ್ಯಾಪಾರ ಮಾಡಿರುವ ವ್ಯಕ್ತಿ ರೈತರಂತೆ ಶ್ರಮಪಟ್ಟು ದುಡಿದಿದ್ದಾರೆಯೇ ಎಂಬುದು ರಾಜ್ಯದ ಜನತೆಗೆ ಈಗಾಗಲೇ ತಿಳಿದಿದೆ,
ಕೇವಲ ರಾಜಕೀಯ ಲಾಭಕ್ಕಾಗಿ ಯೋಜನೆಯನ್ನು ವಿರೋಧಿಸುವ ಕುಟುಂಬವೆಂದರೆ ಅದು ಕುಮಾರಸ್ವಾಮಿ ಕುಟುಂಬ ಎಂದು ಈಗಾಗಲೇ ರಾಮನಗರ ಜಿಲ್ಲೆಯ ಪ್ರತಿಯೊಬ್ಬ ರೈತರಿಗೂ ತಿಳಿದಿದೆ,
ಅಧಿಕಾರಕ್ಕಾಗಿ ಲಾಭ ಪಡೆಯುವ ಕುಟುಂಬ ಹಾಗೂ ಮಹಿಳೆಯರನ್ನ ಅಪಮಾನಿಸುವ ಕುಟುಂಬ ಯಾವುದು ಎಂಬುದು ಹಾಸನ ಜಿಲ್ಲೆಯ ಜನರಿಗೆ ಹಾಗೂ ರಾಜ್ಯದ ಜನರಿಗೆ ತಿಳಿದಿದೆ,
ಹಿರಿಯರಾದ ಶ್ರೀ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾದಿಯಾಗಿ ಎಲ್ಲರೂ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯನ್ನು ಟೀಕಿಸಿದರು ಈಗ ಅಧಿಕಾರಕ್ಕಾಗಿ ಮತ್ತೆ ಮೋದಿಯ ಕೈ ಹಿಡಿದು ರಾಜಕೀಯ ಮಾಡುತ್ತಿದ್ದಾರೆ,
ಅಧಿಕಾರಕ್ಕಾಗಿ ಯಾವ ಅಂತಕ್ಕೂ ಇಳಿಯುವ ಪಕ್ಷವೆಂದರೆ ಅದು ಜೆಡಿಎಸ್ ಪಕ್ಷವೆಂದು ಈಗಾಗಲೇ ಸಾಬೀತಾಗಿದೆ,
ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ನೈಜ್ಯ ರಾಜಕೀಯ ಮಾಡುವ ದಾರಿಯನ್ನ ನಿಖಿಲ್ ಕುಮಾರಸ್ವಾಮಿ ಕಂಡುಕೊಳ್ಳಬೇಕೆಂದು ಪತ್ರಿಗೋಷ್ಠಿಯ ಮೂಲಕ ನಿಖಿಲ್ ಕುಮಾರಸ್ವಾಮಿಗೆ ತಿಳಿಸಲಾಯಿತು.
ಪತ್ರಿಕಾಗೋಷ್ಠಿ ಸಂದರ್ಭದಲ್ಲಿ
ಕಾಂಗ್ರೆಸ್ ಪಕ್ಷದ ಮುಖಂಡರಾದ ಎ.ಆನಂದ್, ಜಿ.ಪ್ರಕಾಶ್, ಚಂದ್ರಶೇಖರ್, ಪುಟ್ಟರಾಜು ರಂಜಿತ್ ಕುಮಾರ್ , ಪ್ರವೀಣ್ ರಾವ್, ಕುಶಾಲ್ ಅರುವೇ ಗೌಡ, ಸಾಯಿ ನವೀನ್, ಉಪಸ್ಥಿತರಿದ್ದರು.