LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಮುಖವಾಡ ಬಯಲು

ಬೆಂಗಳೂರು: ರಾಜ್ಯ ಸರ್ಕಾರ ರಾಜ್ಯದಂತ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮುಖವಾಡದಲ್ಲಿ 40000ಕ್ಕೂ ಅಧಿಕ ಸರ್ಕಾರ ಶಾಲೆಗಳ ಮಾರಣ ಹೋಮ ನಡೆಸುತ್ತಿದೆ, ಇದರಿಂದ ಸರ್ಕಾರಿ ಶಾಲೆಗಳ ಅಸ್ತಿತ್ವ ಉಳಿಸಿ ಹಾಕುವ ಸ್ಥಿತಿ ಇದೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ವಿದ್ಯಾರ್ಥಿ ಸಂಘಟನೆ ಸರ್ಕಾರಕ್ಕೆ ಒತ್ತಾಯವನ್ನು ಮಾಡಿದೆ.

ಬೆಂಗಳೂರಿನ ಪ್ರೆಸ್ ಕಬ್ನಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಅಪೂರ್ವ ಅವರು ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಇಡೀ ಜಿಲ್ಲೆಯಲ್ಲಿ 11 ಮ್ಯಾಗ್ನೆಟ್ ಶಾಲೆಗಳನ್ನು ತೆರೆದು ನೂರಕ್ಕೂ ಅಧಿಕ ಹಳ್ಳಿಗಳ ಸರ್ಕಾರಿ ಶಾಲೆಗಳ ಸತ್ವವನ್ನು ಅಳಿಸಿ ಹಾಕುವ ಸ್ಥಿತಿ ತಲುಪಲಾಗಿದೆ. ಸಂಘಟನೆಯಿಂದ ಕಳೆದ ಆರು ತಿಂಗಳಿಂದ ಹಳ್ಳಿ ಹಳ್ಳಿಗಳಲ್ಲಿ ಜನ ಹೋರಾಟವನ್ನು ನಡೆಸಿಕೊಂಡು ಬದಲಾಗುತ್ತಿದ್ದು ಸರ್ಕಾರದ ಕ್ರಮವನ್ನು ಖಂಡಿಸಿದೆ.

ಬೆಂಗಳೂರು ದಕ್ಷಿಣ ಭಾಗದ ಪಾದರಹಳ್ಳಿ ಮ್ಯಾಗ್ನೆಟ್ ವ್ಯಾಪ್ತಿಯ ಮದರ್ ಸಾವರದೊಡ್ಡಿ ಚಿಕ್ಕೇಗೌಡನ ದೊಡ್ಡಿ ಹರಿಸಂದ್ರ ತಿಮ್ಮೆ ಗೌಡನ ದೊಡ್ಡಿ ಪಾಲಬೋವಿದೊಡ್ಡಿ ಹನುಮಂತೆ ಗೌಡನ ದೊಡ್ಡಿ ಕೆಂಪೇಗೌಡನ ದೊಡ್ಡಿ ಈರುಳ್ಳಿ ಮ್ಯಾಗ್ನೆಟ್ ವ್ಯಾಪ್ತಿಯ ಅಮ್ಮನವರ ದೊಡ್ಡಿ ದೇವರ ದೊಡ್ಡಿ ಕೋಟಹಳ್ಳಿ ನೆಲಮಲೆ ಕೇಜಿ ಹೊಸಳ್ಳಿ ತೆಂಗಿನಕಾಯಿ ಶಾಲೆಯನ್ನು ಉಳಿಸಬೇಕು ಎಂಬ ಹೋರಾಟ ನಡೆಸಲಾಗುತ್ತದೆ.

ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಸಾರ್ವಜನಿಕರೇ ಕೈ ಜೋಡಿಸಿದ್ದಾರೆ ಆದರೆ ಸರ್ಕಾರ ಅದಕ್ಕೆ ಪೂರಕವಾದಂತಹ ಪರಿಕರಗಳು ಹಾಗೂ ಶಿಕ್ಷಕರ ನಿಯೋಜನೆ ಮಾಡಬೇಕಾಗಿದೆ ಅದನ್ನು ಬಿಟ್ಟು ಖಾಸಗಿಯವರಿಗೆ ಮುತುವರ್ಜಿ ವಹಿಸಲು ನೀಡುತ್ತಿರುವುದು ಸರಿಯಾದ ಕ್ರಮವಲ್ಲ.

ಹಂಪಿ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳಾದ ಎ ಮುರಿಗೆಪ್ಪ ಮಾತನಾಡಿ, ಸರ್ಕಾರಿ ಸಂಬಂಧ ಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಪಾದರಹಳ್ಳಿ, ಮ್ಯಾಗ್ನೆಟ್ ವ್ಯಾಪ್ತಿಗೆ ಬರುವ ಚಿಕೆಗೌಡನ ದೊಡ್ಡಿಯಲ್ಲಿ ಪೋಷಕರ್ ಮತ್ತು ಗ್ರಾಮಸ್ಥರಿಗೆ ಮ್ಯಾಗ್ನೆಟ್ ಕುರಿತು ಸಂಪೂರ್ಣ ಮಾಹಿತಿ ನೀಡದೆ ಸಹಿ ಸಂಗ್ರಹ ಮಾಡಿ ಸರ್ಕಾರಕ್ಕೆ ಒಪ್ಪಿಸಿರುವುದು ದುರಂತದ ಸಂಗತಿ ಅಕ್ಷರ ಜ್ಞಾನ ಇಲ್ಲದ ಪೋಷಕರಿಗೆ ಇಲ್ಲ ಸುಳ್ಳು ಮಾಹಿತಿ ನೀಡಿ ಮಕ್ಕಳಿಗೆ ದ್ರೋಹ ಬಗೆಯುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. 

ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲ ಶಿಕ್ಷಕರು ಹಾಗೂ ಯುವ ಸಮೂಹ ಮುಂದಾಗಿದ್ದಕ್ಕೆ ಶಿಕ್ಷಕರ ವರ್ಗಾವಣೆ ಶಿಕ್ಷೆ ಹಾಗೂ ಧಮ್ಕಿ ಹಾಕುವ ವಿಚಾರ ಸಹ ಬಳಕೆ ಬಂದಿದ್ದು ಇವೆಲ್ಲವನ್ನು ವಿದ್ಯಾರ್ಥಿಗಳ ಸಂಘಟನೆಗಳು ಶಾಲೆಯನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ, ಆದರೆ ಸರ್ಕಾರ ಎಲ್ಲ ಮಕ್ಕಳನ್ನು ಮ್ಯಾಗ್ನೆಟ್ ಸಾಲಿಗೆ ಕಳಿಸಬೇಕೆಂದು ಗ್ರಾಮಸ್ಥರ ಮೇಲೆ ಒತ್ತಡ ಏರುತ್ತಿರುವುದು ಸರಿಯಾಗದ ಕ್ರಮವಲ್ಲ.

ಹೀಗೆ ಹಳ್ಳಿಗಳಲ್ಲಿ ಹತ್ತು ಹಲವು ಸಮಸ್ಯೆಗಳು ಇದ್ದರೂ ಸಹ ಮಕ್ಕಳು ಓದಲು ಮುಂದಾಗಿದ್ದರೂ ಸಹ ಸರ್ಕಾರ ಅದಕ್ಕೆ ಕಣ್ಣೀರು ಎರಚುವ ಕೆಲಸವನ್ನು ಮಾಡುತ್ತಿರುವುದು ದುರಂತದ ಸಂಗತಿ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಅಧ್ಯಕ್ಷ ಅಶ್ವಿನಿ ರೈತ ಮುಖಂಡರಾದ ಶಿವಪ್ರಕಾಶ್ ಜಿಲ್ಲಾ ಸಂಚಲಕರದ ರೋಹಿತ್ ಸೇರಿದಂತೆ ಅನೇಕ ಸಂಘಟನೆಗಳು ಹಾಗೂ ವಿದ್ಯಾರ್ಥಿ ಒಕ್ಕೂಟ ಮುಖಂಡರು ಭಾಗವಹಿಸಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಿಎಂ ಪರಿಹಾರವಿದೆ ಚೆಕ್ ಹಸ್ತಾಂತರಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠದ ಅಗತ್ಯತೆ ಕುರಿತು ಸಿಎಂ ಜೊತೆ ಚರ್ಚೆಚುಂಚ ಶ್ರೀಗಳನ್ನು ರಾಜಕೀಯಕ್ಕೆ ತರುವ ಪ್ರಯತ್ನ ವಿಫಲಬೀದಿ ನಾಯಿಗಳ ಆಶ್ರಯ ತಾಣ ಕಾಮಗಾರಿಗೆ ವೇಗ ನೀಡಿ: ಡಾ. ರಾಜೇಂದ್ರ ಕೆ. ವಿ.ಪುಟ್ಟೇನಹಳ್ಳಿ ಕೆರೆ ಸಮೀಪದ ವಾಟರ್ ಲಾಗಿಂಗ್ ಪ್ರದೇಶ ಪರಿಶೀಲನೆಕೆಪಿಎಸ್ ಮ್ಯಾಗ್ನೆಟ್ ಯೋಜನೆ ಮುಖವಾಡ ಬಯಲುರೈತರ ಆತ್ಮಹತ್ಯೆ ಪ್ರಕರಣಗಳನ್ನು ಜಾಣ್ಮೆಯಿಂದ ಮುಚ್ಚಿಟ್ಟ ರಾಜ್ಯ ಕಾಂಗ್ರೆಸ್ ಸರಕಾರ!ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಜಿಲ್ಲಾಧ್ಯಕ್ಷರುಗಳು ಬೇಕಾಗಿಲ್ಲ: ಹೆಚ್.ಡಿ. ಕುಮಾರಸ್ವಾಮಿಪೌರಕಾರ್ಮಿಕರಿಗೆ ಆರೋಗ್ಯ ಕಾಳಜಿ ತಿಳುವಳಿಕೆ, ಕೂಲಿಂಗ್ ಕಿಟ್ ವಿತರಣೆಮಳೆಗಾಲಕ್ಕೂ ಮುಂಜಾಗ್ರತವಾಗಿ ಅಧಿಕಾರಿಗಳಿಗೆ ಕಾಮಗಾರಿ ಮುಗಿಸಲು ಸೂಚನೆ