LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಕಾಶ್ ನ 5 ವಿದ್ಯಾರ್ಥಿಗಳಿಗೆ ಜೆಇಇ ಅಡ್ವಾನ್ಸ್ಡ್ 2025 ರಲ್ಲಿ ಟಾಪರ್

ಬೆಂಗಳೂರು: ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL), ತನ್ನ ಸಂಸ್ಥೆಯಲ್ಲಿ ತರಬೇತಿ ಪಡೆದ ಬೆಂಗಳೂರಿನ 5 ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ JEE ಅಡ್ವಾನ್ಸ್ಡ್ 2025 ರಲ್ಲಿ ಅಧಿಕ ಅಂಕ ಗಳಿಸುವ ಮೂಲಕ ಟಾಪರ್ ಆಗಿದ್ದಾರೆ ಎಂದು ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್‌ನ ಉಪನಿರ್ದೇಶಕರಾದ ಸುರೇಶ್ ಬಾಬು ಅವರು ತಿಳಿಸಿದರು.

ಇಂದಿರಾನಗರ ಶಾಖೆಯ ಆಕಾಶ್ ಕೋಚಿಂಗ್ ಸೆಂಟರ್ ನಲ್ಲಿ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದವರು, ವಿದ್ಯಾರ್ಥಿಗಳ ಸಮರ್ಪಣೆ, ಶ್ರದ್ಧೆ, ನಿರಂತರ ಕಠಿಣ ಪರಿಶ್ರಮ ಮತ್ತು AESL ನ ಪರಿಣಿತ ಅಧ್ಯಾಪಕರು ಮತ್ತು ಸಮಗ್ರ ಪಠ್ಯಕ್ರಮವು ಒದಗಿಸಿದ ದೃಢವಾದ ಶೈಕ್ಷಣಿಕ ಬೆಂಬಲಕ್ಕೆ ಸಾಕ್ಷಿಯಾಗಿದೆ.

ಜೆಇಇ ಅಡ್ವಾನ್ಸ್ ನಲ್ಲಿ ಟಾಪರ್ ಆಗಿರುವ  ವಿದ್ಯಾರ್ಥಿಗಳಾದ ಆಕಾಶ್ ದೀಪ್ ಅವರು AIR 99, ಅನಿಕೇತ್ ಜೈನ್ ಅವರು AIR 486, ಅನೀಶ್ ಶಾಸ್ತ್ರಿ ಅವರು AIR 1478, ಚಿರಾಗ್ ಬಿ.ಹೆಚ್ ಅವರು AIR 1521 ಮತ್ತು ರಯಾನ್‌ಕ್ರಿಸ್ ಡಯಾಸ್ ಅವರು AIR 2839 ಅಂಕಗಳನ್ನು ಗಳಿಸಿ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.

ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಎದುರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ AESL ನ ತರಗತಿಗಳಿಗೆ ಹಾಜರಾಗಿದ್ದರು. ಜಾಗತಿಕವಾಗಿ ಅತ್ಯಂತ ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಜೆಇಇ ಅಡ್ವಾನ್ಸ್‌ಡ್ ನಲ್ಲಿ ಉತ್ತಮ ಅಂಕ ಪಡೆಯಬೇಕಾದರೆ ಆಳವಾದ ಪರಿಕಲ್ಪನಾತ್ಮಕ ತಿಳುವಳಿಕೆ ಮತ್ತು ಬಲವಾದ ಸಮಸ್ಯೆ-ಪರಿಹರಿಸುವ ಸಾಮರ್ಥ್ಯವಿರಬೇಕಾಗುತ್ತದೆ.
ತಮ್ಮ ಪರೀಕ್ಷಾ ತಯಾರಿ ಮತ್ತು ಸಾಧನೆ ಬಗ್ಗೆ ವಿವರಿಸಿದ ವಿದ್ಯಾರ್ಥಿಗಳು, "ಬಲಿಷ್ಟ ಶೈಕ್ಷಣಿಕ ಅಡಿಪಾಯ ಮತ್ತು ಸ್ಥಿರವಾದ ಮಾರ್ಗದರ್ಶನವನ್ನು ಒದಗಿಸಿದ್ದಕ್ಕಾಗಿ ನಾವು ಆಕಾಶ್‌ಗೆ ಕೃತಜ್ಞರಾಗಿರುತ್ತೇವೆ. AESL ನಲ್ಲಿನ ವಿಷಯ ಮತ್ತು ತರಗತಿ ಕೋಚಿಂಗ್ ಕಡಿಮೆ ಅವಧಿಯಲ್ಲಿ ಕಷ್ಟಕರ ವಿಷಯಗಳನ್ನು ಕಲಿಯಲು ನಮಗೆ ಸಹಾಯ ಮಾಡಿತು. ಅವರ ಹಾಗೂ ತಂದೆ ತಾಯಿಯರ ಬೆಂಬಲವಿಲ್ಲದೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ" ಎಂದು ಹೇಳಿದರು.

ಈ ಫಲಿತಾಂಶಗಳು AESL ತನ್ನ ವಿದ್ಯಾರ್ಥಿಗಳಲ್ಲಿ ತುಂಬುವ ಶೈಕ್ಷಣಿಕ ಕಠಿಣ ತರಬೇತಿ ಮತ್ತು ಶಿಸ್ತಿನ ಪ್ರತಿಬಿಂಬವಾಗಿದೆ. ನಮ್ಮ ಸಾಧಕರ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ ಮತ್ತು IIT ಗಳಲ್ಲಿ ಮತ್ತು ಅದಕ್ಕೂ ಮೀರಿದ ಅವರ ಭವಿಷ್ಯದ ಪ್ರಯತ್ನಗಳಲ್ಲಿ ಅವರಿಗೆ ಶುಭ ಹಾರೈಸುತ್ತೇವೆ" ಎಂದು ಹೇಳಿದರು.
ಐಐಟಿಗಳಲ್ಲಿ ಯಾವುದಾದರೂ ಒಂದು ಐಐಟಿ ವಾರ್ಷಿಕವಾಗಿ ಆಯೋಜಿಸಲ್ಪಡುವ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗಾಗಿ ಜೆಇಇ ಅಡ್ವಾನ್ಸ್‌ಡ್ ಅನ್ನು ವಾರ್ಷಿಕವಾಗಿ ನಡೆಸಲಾಗುತ್ತದೆ. ಭಾರತದ ಹಲವಾರು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (NIT) ಮತ್ತು ಇತರ ಕೇಂದ್ರ-ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ JEE ಮುಖ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ, ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಪ್ರವೇಶಕ್ಕೆ JEE ಅಡ್ವಾನ್ಸ್ಡ್ ಏಕೈಕ ಪರೀಕ್ಷೆಯಾಗಿದೆ. ಆದರೂ, ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಡ್‌ಗೆ ಕುಳಿತುಕೊಳ್ಳಲು ಜೆಇಇ ಮುಖ್ಯ ಪರೀಕ್ಷೆಗೆ ಹಾಜರಾಗಬೇಕು.
ಆಕಾಶ್ ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್ ಸ್ವರೂಪಗಳ ಮೂಲಕ ಸಮಗ್ರ ಐಐಟಿ-ಜೆಇಇ ತರಬೇತಿಯನ್ನು ನೀಡುತ್ತದೆ. ಇತ್ತೀಚೆಗೆ, ಆಕಾಶ್ ಕಂಪ್ಯೂಟರ್ ಆಧಾರಿತ ತರಬೇತಿಯನ್ನು ಅಭಿವೃದ್ಧಿಪಡಿಸಿದೆ. ಇದರ ಹೊಸ ʼಐಟ್ಯೂಟರ್ʼ ಪ್ಲಾಟ್‌ಫಾರ್ಮ್ ರೆಕಾರ್ಡ್ ಮಾಡಿದ ವೀಡಿಯೊ ಉಪನ್ಯಾಸಗಳನ್ನು ನೀಡುತ್ತದೆ, ವಿದ್ಯಾರ್ಥಿಗಳು ಸ್ವಯಂ- ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ತಪ್ಪಿಸಿದ ತರಗತಿಗಳ ಪಾಠವನ್ನು ಕಲಿಯಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಮಾದರಿ ಪರೀಕ್ಷೆಗಳು ನೈಜ ಪರೀಕ್ಷಾ ಸವಾಲುಗಳನ್ನು ಅನುಕರಿಸುತ್ತವೆ, ಇದು ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಅಗತ್ಯವಾದ ಆತ್ಮವಿಶ್ವಾಸವನ್ನು ನೀಡುತ್ತದೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ