
ಸಾವಯವ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದಿರುವ ಗ್ರೀನ್ ಪಾಥ್ ನ ಮುಖ್ಯಸ್ಥ ಜಯರಾಂ ಅವರು ಆರ್ಗ್ಯಾನಿಕ್ ವಿಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದು ಗ್ರೀನ್ ಪಾತ್ ಹೋಟೆಲ್ ಉದ್ಯಮವನ್ನು ಸಹ ಜಯರಾಮ್ ಅವರೇ ಸ್ವತಃ ನಡೆಸುತ್ತಿದ್ದಾರೆ. ಪ್ರತಿ ವರ್ಷವೂ ಸಹ ದೊಡ್ಡ ಮಟ್ಟದಲ್ಲಿ ಆರ್ಗ್ಯಾನಿಕ್ ಮೇಳವನ್ನು ಸಹ ಆಯೋಜನೆ ಮಾಡಲಾಗುತ್ತಿದ್ದಾರೆ. ಅದೇ ರೀತಿ ಪ್ರತಿ ವಾರವು ಸಹ ಆರ್ಗ್ಯಾನಿಕ್ ಹಬ್ಬವನ್ನು ಸಹ ಮಾಡುತ್ತಿದ್ದಾರೆ. ಅಲ್ಲದೆ ಸಂಗೀತ ನೃತ್ಯ ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ಸಹ ಪ್ರತಿ ವಾರವೂ ನಡೆಸಿಕೊಂಡು ಬರುತ್ತಿರುವುದು ಗ್ರಾಹಕರ ಮನೋ ಉಲ್ಲಾಸಕ್ಕೆ ಸಾಕ್ಷಿಕರಿಸುತ್ತಿದ್ದಾರೆ.
ಜಯರಾಮ್ ಅವರ ಗ್ರೀನ್ ಪಾತ್ ಹೋಟೆಲ್ ನಲ್ಲಿ ಕೇವಲ ಆರ್ಗಾನಿಕ್ ತಿಂಡಿ ತಿನಿಸು ಆಹಾರವಲ್ಲದೆ ಆರ್ಗಾನಿಕ್ ಗೆ ಸಂಬಂಧಿಸಿದಂತೆ ಧಾನ್ಯಗಳು ಕಾಯಿಪಲ್ಲೆಗಳು ಎಲ್ಲವೂ ಸಹ ಒಂದೇ ಸೂರಿನಡಿ ಸಿಗುವ ರೀತಿ ಮಾಡಿದರೆ, ಇದರ ಸತಿಗೆ ಸಂಗೀತ ಕಚೇರಿಗಳನ್ನು ಸಹ ನಡೆಸಿಕೊಂಡು ಬರುತ್ತಿದ್ದಾರೆ, ಸಿರಿ ಧಾನ್ಯಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಸಹ ಆಯೋಜನೆ ಮಾಡುತ್ತ ಬರುತ್ತಿದ್ದಾರೆ ಪ್ರತಿ ವರ್ಷವೂ ಸಹ. ಅಲ್ಲದೆ ಬೆಂಗಳೂರಿನಲ್ಲಿ ಪ್ರತಿವರ್ಷವು ಸಹ ಸರ್ಕಾರದ ಸಹಯೋಗದಲ್ಲಿ ದೊಡ್ಡ ಮಟ್ಟದಲ್ಲಿ ಮಿಲ್ಲೆಟ್ಸ್ ಮೇಳವನ್ನು ಸಹ ಮಾಡಿಕೊಂಡು ಬರುತ್ತಿದ್ದಾರೆ.
ಚಿತ್ರ ನಟಿಯಾದ ಶ್ರುತಿ, ದ್ರುವ ಸರ್ಜಾ, ಸುಂದರ್ ರಾಜ್, ಮೇದಿನಿ ಗರುಡಾಚಾರ್, ಚಲನಚಿತ್ರ ನಿರ್ದೇಶಕ ಓಂ ಪ್ರಕಾಶ್,ಜೆಡಿಎಸ್ ಎಂಎಲ್ಸಿ ಶರವಣ, ಸ್ವಾತಿ ಗ್ರೂಪ್ ನ ಮಾಲಿಕ ಜಿ.ಕೆ.ಶೆಟ್ಟಿ, ನೃತ್ಯ ಕಲಾವಿದ ಡಾ.ಸಂಜಯ್ ಶಾಂತರಾಮ್ ಸೇರಿ ನೂರಾರು ಜನ ಸಾಧಕ ಮಹನೀಯರಿಗೆ ವಿಶ್ವಕರ್ಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನು ಇದೆ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ,ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಚಿತ್ರ ನಟಿ ಶ್ರುತಿ ಅನೇಕ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ಸಾಧಕ ಪ್ರಶಸ್ತಿಗಳನ್ನು ಸ್ವೀಕರಿಸಿ ಸಾಕಷ್ಟು ಮಂದಿ ಸಾಧಕರು ಹಾಗೂ ಗಣ್ಯರು ತಮ್ಮದೇ ಆದಂತಹ ಮಾಹಿತಿಗಳನ್ನು ಹಂಚಿಕೊಂಡರು, ಸಂಘ ಸಂಸ್ಥೆಗಳು ನೀಡುವಂತಹ ಸಾಧಕ ಪ್ರಶಸ್ತಿಗಳು ಸಾಧಕರಿಗೆ ಮುಳ್ಳಿನ ಕಿರೀಟಗಳಂತೆ ಆಗುತ್ತಿವೆ, ಏಕೆಂದರೆ ಅವರಿಗೆ ಜವಾಬ್ದಾರಿಗಳು ಸಹ ಹೆಚ್ಚಾಗುತ್ತದೆ, ಹೀಗಾಗಿ ಸಾಧಕರು ಮತ್ತಷ್ಟು ಸಾಧನೆಗಳನ್ನು ಮಾಡಲು ಅವರಿಗೆ ಜವಾಬ್ದಾರಿ ಇರುತ್ತದೆ ಹಾಗೂ ಉಮ್ಮಸ್ಸು ಬರುತ್ತದೆ ಎಂಬುದನ್ನು ತಿಳಿಸಿದರು. ಅಲ್ಲದೆ ವಿಶ್ವಕರ್ಮ ಸಮಾಜದಲ್ಲಿಯೇ ಶ್ರೇಷ್ಠವಾದಂತಹ ಸಮುದಾಯವಾಗಿದೆ ಬಾಲರಾಮನ ಮೂರ್ತಿಯನ್ನು ಇದೆ ವಿಶ್ವ ಕರ್ಮ ಸಮಾಜದ ಪ್ರತಿಭಾನ್ವಿತ ಶಿಲ್ಪಿ ಒಬ್ಬ ಕೆತ್ತನೆ ಮಾಡಿರುವುದು ಇಡೀ ದೇಶಕ್ಕೆ ಪರಿಚಯವಾಗಿದೆ. ಇದೊಂದ್ ರೀತಿಯಲ್ಲಿ ಸಮಾಜಕ್ಕೆ ಹೆಮ್ಮೆಯ ಸಂಗತಿ ಎಂದರು.

ಸಮಾಜದಲ್ಲಿಯೇ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಉತ್ತಮವಾದಂತಹ ಬೆಳವಣಿಗೆಯಾಗಿದ್ದು ಸಮಾಜವು ಅವರನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ಅವರ ಸಾಧನೆ ಮೆಟ್ಟಿಲುಗಳಾಗುತ್ತಿವೆ. ಮುಂದೆಯೂ ಸಹ ವಿಶ್ವಕರ್ಮ ಪ್ರತಿಷ್ಠಾನದಿಂದ ಇದೇ ರೀತಿಯಾದಂತಹ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರಲಿ ಸಮಾಜದಲ್ಲಿರುವ ಎಲೆಮರೆಕಾಯಿಯಂತೆ ದುಡಿಯುತ್ತಿರುವ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಹೆಗ್ಗಳಿಕೆಯ ವಿಚಾರವಾಗಿದೆ ಎಂದರು.
ಇನ್ನು ವಿಶ್ವಕರ್ಮ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಉಮೇಶ್ ಅವರ ನೇತೃತ್ವದಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು, ಇನ್ನು ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷರು ಉಪಾಧ್ಯಕ್ಷರು ಜಿಲ್ಲಾಧ್ಯಕ್ಷರು ಪದಾಧಿಕಾರಿಗಳು ಹಾಗೂ ಸಮಾಜದ ಬಂದು ಬಾಂಧವರು ಹೀಗೆ ನೂರಾರು ಸಂಖ್ಯೆಯಲ್ಲಿ ಜನ ಕಾರ್ಯಕ್ರಮದಲ್ಲಿ ಜಮಾವಳಿ ಗೊಂಡಿರುವುದು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು.