LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

FCC,ಗೌಶುಭಮ್, ರಾಜ್ಯ ರೈತ ಸಂಘ  ದೊಂದಿಗೆ ರೈತರನ್ನ ಉತ್ತೇಜಿಸಲು ನಡಿಗೆ ಜಾಥ

ಬೆಂಗಳೂರು:   ಯುವ ರೈತರನ್ನ ಉತ್ತೇಜಿಸಲು , ನಾಡು ಸೇರಿದಂತೆ ದೇಶದಾದ್ಯಂತ ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ರೈತರ ನಡಿಗೆ ಜಾತದ ಎರಡನೇ ಆವೃತ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಿನಾರಾಯಣ ಗೌಡ ತಿಳಿಸಿದರು.news_1781353138_2_545.webp

ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಫುಡ್ ಚೈನ್ ಕ್ಯಾಂಪೇನ್, ಗೌ ಶುಭಮ್ ಸಂಸ್ಥೆ ಹಾಗೂ ರಾಜ್ಯ ರೈತ ಸಂಘದ ಸಹಯೋಗದೊಂದಿಗೆ ಪ್ರಕೃತಿ ಯುವ ಸಮೂಹ ಹಾಗೂ ಆರ್ಥಿಕತೆಯ ವಿಚಾರ ಇಟ್ಟುಕೊಂಡು ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜಾಗೃತಿ ಜಾತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಕೃಷಿ ಭೂಮಿ ಶೇಕಡ 83ರಷ್ಟು ಇತ್ತು ಇಂದು 30ರಷ್ಟು ಇದೆ. ಕೃಷಿ ಉಳಿಯಬೇಕು ಎಂಬ ಉದ್ದೇಶದಿಂದ ಫೀಡಂ ಪಾರ್ಕ್ ವಿಂದ ಮೈಸೂರು ಬ್ಯಾಂಕ್ ನವರಗೆ  ನಡಿಗೆ ಜಾಥ ಆಯೋಜಿಸಲಾಗಿದೆ.

ತಂತ್ರಜ್ಞಾನ ಮುಂದುವರೆದಂತೆ ಇಂದಿನ ಯುವಕರು ಕೃಷಿ ಕಡೆ ಗಮನರಿಸುತ್ತಿಲ್ಲ. ಯುವಕರನ್ನ ಕೃಷಿ ಕಡೆ ಗಮನಹರಿಸಲು ಜನಜಾಗೃತಿ ಮೂಡಿಸಲಾಗುತ್ತಿದೆ.
ಲಾಭದಾಯಕ ಕೃಷಿ ಉದ್ಯಮದಲ್ಲಿ ಯುವಕರು ಬಂದರೆ ದೇಶ ಅಭಿವೃದ್ಧಿ ಸಾಧ್ಯ ಎಂದು ಒತ್ತಿ ಹೇಳಿದರು.

ಎ.ಬಿ.ಪಾಟೀಲ್* ರವರು ಮಾತನಾಡಿ, ತಂತ್ರಜ್ಞಾನ, ವೈಜ್ಞಾನಿಕ ವಿಚಾರಧಾರೆಗಳು ಯುವಕರಲ್ಲಿ ಇರುತ್ತದೆ ಅದನ್ನ ಕೃಷಿಯಲ್ಲಿ ಬಳಸಿದರೆ ಉತ್ತಮ. ನಾವು ಯಾವ ಬೆಳೆ ಬೆಳಯಬೇಕು ಮತ್ತು ಮಾರಾಟ ಮಾಡಲು ಮಾರುಕಟ್ಟೆ ಅದರ ಪ್ರಚಾರ ಯಾವ ರೀತಿಯಲ್ಲಿ ಮಾಡಬೇಕು ಎಂಬುದರ ಬಗ್ಗೆ ವೈಜ್ಞಾನಿಕ ವಾದಂತಹ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಅರಿಯಬೇಕು.ಕೃಷಿಯಲ್ಲಿ ಉತ್ತಮ ಭವಿಷ್ಯವಿದೆ ತಂತ್ರಜ್ಞಾನ ಬಳಸಿ ಉತ್ತಮ ಬೇಳೆ ಬೆಳಯಬಹುದು. ಯುವಕರು ಕೃಷಿಯಲ್ಲಿ ತೊಡಗಬೇಕು ಎಂದು ಹೇಳಿದರು.news_1781353138_1_551.webp

ನರೇಂದ್ರರವರು ಮಾತನಾಡಿ, ಕೃಷಿ ಪ್ರಧಾನ ರಾಷ್ಟ್ರ ನಮ್ಮದು ಇಂದು ಯುವಕರು ಕೃಷಿಯ ಬಗ್ಗೆ ಆಸಕ್ತಿವಹಿಸಬೇಕು. ರೈತ ಎಂದರೆ ಹೆಮ್ಮೆ ಪಡುವ ಸಂಗತಿ. ಯುವಕರು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಕೃಷಿಯಿಂದ ಆರ್ಥಿಕ ಅಭಿವೃದ್ಧಿಯಾಗುತ್ತದೆ ರಾಷ್ಟ್ರಮಟ್ಟದಲ್ಲಿ ಕೃಷಿಗೆ ತನ್ನದೇ ಆದಂತಹ ಮನ್ನಣೆ ಇದೆ ಒಂದು ದೇಶ ಸರ್ವತೋಮುಖವಾಗಿ ಅಭಿವೃದ್ಧಿ ಆಗಬೇಕಾದರೆ ಕೃಷಿ ಮೂಲಭೂತವಾಗಿ ಬಲಪಡಿಸಬೇಕಾಗುತ್ತದೆ ಎಂದು ಹೇಳಿದರು.

ಯತೀಶ್ ತುಕುರಾಂ ರವರು ಮಾತನಾಡಿ, ಯುವಕ-ಯುವತಿಯರು ರೈತರಾಗಬೇಕು, ಫಲವತ್ತಾದ ಭೂಮಿ ನಮ್ಮ ದೇಶದಲ್ಲಿದೆ. ಕೃಷಿ ಕುರಿತು ಅರಿವು ಮೂಡಿಸಲು ಎಲ್ಲ ಕಾಲೇಜುಗಳಲ್ಲಿ ಕಾರ್ಯಗಾರ ಮಾಡಲಾಗುತ್ತಿದೆ. ಯುವಕರು ಮುಂದೆ ಬರಬೇಕು ಎಂದು ನಡಿಗೆ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಕೃಷಿಯಲ್ಲಿ ತಂತ್ರಜ್ಞಾನ ಸೇರಿದಂತೆ (AI)ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಕೃಷಿ ಮಾಡುವುದರಿಂದ ಮಾರುಕಟ್ಟೆಯಾಗಲಿ ಯೋಜನೆ ಯಾಗಲಿ ದೊರಕುವ ಕೆಲಸವಾಗಬೇಕು, ಸುಲಭವಾಗಿ ಕೃಷಿ ಮಾಡುವ ಹಾಗೂ ಹೆಚ್ಚು ಆದಾಯ ತರುವ ವ್ಯವಸಾಯ ಮಾಡುವುದರಿಂದ ಆದಾಯ ಹೆಚ್ಚು ಗಳಿಸಬಹುದಾಗಿದೆ  ಎಂದರು.

ಇನ್ನು ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಲಕ್ಷ್ಮಿನಾರಾಯಣ್ ಗೌಡ, ಕೃಷಿ ತಂತ್ರಜ್ಞಾನ ಸಂಸ್ಥೆಯ ಎ.ಬಿ.ಪಾಟೀಲ್, ಗೌಶುಭಮ್ ಫೌಂಡೇಷನ್ ಸಂಸ್ಥಾಪಕ ನರೇಂದ್ರ, ರಾಜ್ಯ ರೈತ ಸಂಘದ ಯುವ ಘಟಕದ ಅಧ್ಯಕ್ಷರಾದ ಯತೀಶ್ ತುಕಾರಾಮ್ ರವರು, ರೈತ ಮುಖಂಡರುಗಳು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಕಚೇರಿ, ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಕಾರ್ಯಾರಂಭಸಮ್ಯಕ್ ಪ್ರತಿಷ್ಠಾನಮ್ ನಿಂದ ಗುರುವಂದನಾ, ಸಾಧಕರಿಗೆ ಸಂಸ್ಕೃತ ಶ್ರೀ: ಪ್ರಶಸ್ತಿ ಪ್ರದಾನತಮಿಳುನಾಡಿಗೆ ಬಿಡುವಷ್ಟು  ಕಾವೇರಿ‌ ನೀರಿಲ್ಲ: ಎಂ ಬಿ ಪಾಟೀಲಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭ: ಎಂ ಬಿ ಪಾಟೀಲಬೆಳ್ಳಂದೂರು ಎಸ್‌ಟಿಪಿಯ ಸಮಗ್ರ ತನಿಖೆ ಮುಂದುವರಿಕೆ; ಕಾರ್ಮಿಕರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳಾಮೇಕೆದಾಟು ಯೋಜನೆಯನ್ನು ತಕ್ಷಣ ಆರಂಭಿಸಿ  2 ವರ್ಷಗಳೊಳಗೆ ಪೂರ್ಣಗೊಳಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ ಸರ್ಕಾರಿ ಶಿಕ್ಷಣ ಸಂಸ್ಥೆಯ ಜಾಗ ಕಬಳಿಸಲು ಕೇಂದ್ರ ಸಚಿವರ ಉನ್ನಾರಕಾಮನ್ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಕಂಚಿನ ಮುಕುಟಮಾಲೂರು ನ್ಯಾಯಾಧೀಶೆಯ ಬೀದಿಜಗಳ? ನೊಂದವರ ಕಣ್ಣೀರು! ವಕೀಲರ ಸಂಘದಿಂದ ಹೈ ಮೆಟ್ಟಿಲುಆ.5ಕ್ಕೆ ಮುಜರಾಯಿ ದೇವಾಲಯಗಳ ಅರ್ಚಕರ,ಆಗಮಿಕರ ನೌಕರರ ಸಂಘದಿಂದ ಸಮಾವೇಶ ಅಭಿನಂದನ ಸಮಾರಂಭ