ಬೆಂಗಳೂರು: ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ಮಹಿಳಾ ವಿಭಾಗದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಲಾಯಿತು.
ನಗರದ ನಯನ ಸಭಾಂಗಣದಲ್ಲಿ ಸಮಾಜದ ಸಾಧಕ ಮಹಿಳೆಯರನ್ನು ಪ್ರೋತ್ಸಾಹಿಸುವ,ಗುರುತಿಸುವ ಸಲುವಾಗಿ ಮೊದಲ ಭಾರಿಗೆ ಬೆಂಗಳೂರಿನಲ್ಲಿ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು DYSP ಮೀನಾಕ್ಷಿ ಅವರು ಉದ್ಘಾಟನೆ ಮಾಡಿ ನಂತರ ಮಾತನಾಡಿ, ಆಧುನಿಕ ಕಾಲಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ, ಮಾಡಿದ್ದಾರೆ. ಅವರನ್ನು ಗುರುತಿಸುವ ಕೆಲಸ ಮಾಡಬೇಕು, ವಿಶ್ವ ಕರ್ಮ ಸಮಾಜದಲ್ಲಿ ಸಾಕಷ್ಟು ಮಂದಿ ಸಾಧನೆ ಮಾಡಿರುವವರು ಇದ್ದಾರೆ ,ಮಾಡಿದ್ದಾರೆ. ಅದರ ಜಿತೆಗೆ ವಿದ್ಯಾವಂತರಾಗುವುದು ಬಹಳ ಮುಖ್ಯವಾಗಿದೆ. ಶಿಕ್ಷಣ ಪಡೆದರೆ ಏನುಬೇಕಾದರೂ ಕೆಲಸ ಮಾಡಬಹುದು. ಅದು ಅಸ್ರವಾಗಿ ಬಳಸಿಕೊಳ್ಳಬೇಕು ಎಂದು ಮಹಿಳೆಯರಿಗೆ ಕರೆ ನೀಡಿದರು.
ವಿಶ್ವ ಕರ್ಮ ಸಮಾಜದ ರಾಜ್ಯಾಕ್ಷರಾದ ಈಶ್ವರಾಚಾರ್ ,ಸಮಾಜದ ನಿಗಮ ಮಂಡಳಿ ಅಧ್ಯಕ್ಷರಾದ ಸುಜ್ಞಾನ ಮೂರ್ತಿ, ವಿಶ್ವ ಕರ್ಮ ಸಮಾಜದ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ. ಶೋಭಾ ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರಾದ ಕುಸುಮಾ ನಾರಾಯಣಚಾರ್,ಕಾತ್ಯಾಯನಿ ರವೀಂದ್ರ,ನಾಗರತ್ನ,ಅಂಬಾಮಣಿ,ಸಿದ್ದರಾಜಮ್ಮಣ್ಣಿ ಅವರನ್ನು ಗುರುತಿಸಿ ಸನ್ಮಾನ ಮಾಡಿ ಪ್ರೋತ್ಸಾಹಿಸಲಾಯಿತು. 
ನಂತರ ಸಮಾಜದ ಅಧ್ಯಕ್ಷರಾದ ಶೋಭಾ ಅವರು ಮಾತನಾಡಿ, ವಿಶ್ವಕರ್ಮದಲ್ಲಿ ಎಲೆಮರೆ ಕಾಯಿಯಂತೆ ದುಡಿಯುತ್ತಿದ್ದಾರೆ. ಹೀಗಾಗಿ ಸಾಕಷ್ಟು ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುರನ್ನು ಗುರುತಿಸಿ ಸನ್ಮಾನ ನಾಡಲಾಯಿತು. ಇದು ನಮ್ಮ ಮೊದಲ ಕಾರ್ಯಕ್ರಮವಾಗಿದೆ, ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಕ್ಕೂ ಸಾಧಕ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಡಾ.ಕೆ.ಎನ್ ಗೀತಾ,ಕಾರ್ಯಾಧ್ಯಕ್ಷರಾದ ಕೃಷ್ಣವೇಣಿ,ಪ್ರಧಾನ ಕಾರ್ಯದರ್ಶಿ ಶೋಭಾ ನಟರಾಜ್, ಖಜಾಂಚಿ ಸುಧಾ ಬಸವರಾಜ್,ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸಂಘದ ಪದಾಧಿಕಾರಿಗಳು, ವಿಶ್ವಕರ್ಮ ಕುಲಭಾಂದವರು ಉಪಸ್ಥಿತರಿದ್ದರು.