LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾಯಿಕಡಿತ ಪ್ರಕರಣಗಳನ್ನು ಶೂನ್ಯವಾಗಿಸಿ ಮಾದರಿ ವಾರ್ಡ್ ನಿರ್ಮಾಣ ಮಾಡಿ: ಡಾ. ರಾಜೇಂದ್ರ

ಬೆಂಗಳೂರು :  ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ರವರು ಜೂ.9ರಂದು ಪಾಲಿಕೆ ವ್ಯಾಪ್ತಿಯ ಪಶುಪಾಲನಾ ಇಲಾಖೆಯ ಪ್ರಾಣಿ ಸಂತಾನಹರಣ ಶಸ್ತ್ರಚಿಕಿತ್ಸೆ ಕೇಂದ್ರ (ABC) ಹಾಗೂ ಆ್ಯಂಟಿ ರೇಬೀಸ್ ಲಸಿಕೆ (ARV) ಮೇಲ್ವಿಚಾರಣೆ ಸಮಿತಿ (Monitoring Committee) ಸಭೆ ನಡೆಸಿದರು.news_1781107883_2_972.webp

ಎಬಿಸಿ ಮತ್ತು ಎಆರ್‌ವಿ ಕಾರ್ಯಕ್ರಮದ ಪ್ರಗತಿಯನ್ನು ಪರಿಶೀಲಿಸಿದ ಆಯುಕ್ತರು, ಇಲಾಖೆಯಿಂದ ಪ್ರಾರಂಭಿಸಿರುವ ಬೀದಿ ನಾಯಿ ದತ್ತು ವಿಶೇಷ ಕಾರ್ಯಕ್ರಮ ಉತ್ತಮವಾಗಿದ್ದು, ಮುಂದುವರಿಸುವಂತೆ ತಿಳಿಸಿದರು. ನಾಯಿಕಡಿತ ಪ್ರಕರಣಗಳನ್ನು ಶೂನ್ಯವಾಗಿಸಿ, ಪಶುಪಾಲನಾ ಇಲಾಖೆಯ ಮಾದರಿ ವಾರ್ಡ್ ನಿರ್ಮಾಣ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸೂಚಿಸಿದರು.

2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ಪಶುಪಾಲನಾ ಇಲಾಖೆಯ ವಿಶೇಷ ಉಪಕ್ರಮಗಳಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿದರು.
 
1.  *ಮಾದರಿ ವಾರ್ಡ್ ನಿರ್ಮಾಣ:- ವಿಶೇಷತೆಗಳು:*
* ಶೂನ್ಯ ಬೀದಿ ನಾಯಿ ಕಡಿತ ಪ್ರಕರಣಗಳು
* ಶೂನ್ಯ ನಾಯಿ ಮರಿಗಳು
* ಪ್ರತಿಶತ ‌100ರಷ್ಟು ಬೀದಿ ನಾಯಿಗಳಲ್ಲಿ ಎಬಿಸಿ ಕಾರ್ಯ. 
* ಪ್ರತಿಶತ 100ರಷ್ಟು ಬೀದಿ ನಾಯಿಗಳಲ್ಲಿ ರೇಬೀಸ್ ಲಸಿಕೆ.
* ಪ್ರತಿಶತ 100ರಷ್ಟು ಶಾಲಾ ಮತ್ತು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘಗಳಲ್ಲಿ ಅರಿವು ಕಾರ್ಯಕ್ರಮ.
* ಪ್ರತಿ ಶತ 100ರಷ್ಟು ಪರವಾನಗಿ ಹೊಂದಿದ ಮಾಂಸದ ಮಳಿಗೆ.
* ಮೊದಲ ಹಂತದಲ್ಲಿ 4 ವಾರ್ಡ್ಗಳನ್ನು ಇತರೆ ಇಲಾಖೆ ಹಾಗೂ ಎನ್.ಜಿ.ಓ.ಗಳ ಸಹಯೋಗದೊಂದಿಗೆ  ಪ್ರಾರಂಭಿಸಿ 3 ತಿಂಗಳೊಳಗೆ ಮಾದರಿ ವಾರ್ಡ್ಗಳನ್ನಾಗಿಸಲು ಸೂಚಿಸಿದರು.

2. *ಮುದ್ದು ಪ್ರಾಣಿ ಸ್ನೇಹಿ ಪಾರ್ಕ್ಗಳ (Pet Friendly Park) ನಿರ್ಮಾಣ:-*
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಮೊದಲ ಹಂತದಲ್ಲಿ ಕನಿಷ್ಠ 4 ಕ್ಷೇತ್ರದಲ್ಲಿ ಮುದ್ದು ಪ್ರಾಣಿ ಸ್ನೇಹಿ ಪಾರ್ಕ್ಗಳನ್ನಾಗಿಸಲು ಸೂಚಿಸಿದರು.news_1781107883_1_720.webp

news_1781108091_0_777.webp

3. ಮೂರು ಸಂಚಾರಿ ಪಶುಚಿಕಿತ್ಸಾಲಯ/ರೆಸ್ಕ್ಯೂ ವಾಹನ ಪ್ರಾರಂಭಿಸಲು ಆವಶ್ಯಕ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.

4. 100 ಕೆನಲ್ ಸಾಮರ್ಥ್ಯದ ಸುಮನಹಳ್ಳಿ ಎಬಿಸಿ ಕೇಂದ್ರ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಸೂಚನೆ. ಪ್ರಸ್ತುತ 100 ಕೆನಲ್ ಸಾಮರ್ಥ್ಯದ ಸುಮನಹಳ್ಳಿ ಎಬಿಸಿ ಕೇಂದ್ರದ ಸಾಮರ್ಥ್ಯವನ್ನು ಕನಿಷ್ಟ 200ಕ್ಕೂ ಮಿಕ್ಕಂತೆ ಮೇಲ್ದರ್ಜೆಗೇರಿಸಲು ಪ್ರಸ್ತುತ ಎಬಿಸಿ ಕೇಂದ್ರದ ಸಮುಚ್ಚಯದಲ್ಲಿರುವ SWಒ ಘನತ್ಯಾಜ್ಯ ವಿಂಗಡಣೆ ವಿಭಾಗದ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಿ, ಕೂಡಲೇ ಯೋಜನೆ ರೂಪಿಸಲು ಸೂಚಿಸಿದರು.

5. *ಬೀದಿ ನಾಯಿಗಳ ಆಶ್ರಯ ತಾಣ:-* 
ಪ್ರಸ್ತುತ ನಿಗದಿಪಡಿಸಿರುವ ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂ.3ರಲ್ಲಿ 500 ಬೀದಿ ನಾಯಿಗಳಿಗೆ ನಿರ್ಮಿಸಲಾಗುತ್ತಿರುವ ಬೀದಿ ನಾಯಿಗಳ ಆಶ್ರಯ ತಾಣ ನಿರ್ಮಾಣ ಕಾರ್ಯಕ್ಕೆ ವೇಗ ಹೆಚ್ಚಿಸಿ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲು ವಿಶೇಷ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ತಿಳಿಸಿದರು.

6. ABC- ARV ಕಾರ್ಯಕ್ರಮದ ಗುರಿಗೆ ತಕ್ಕಂತೆ ಪ್ರತಿ ದಿನ ಎರಡೂ ವಲಯಗಳಿಂದ 35 ನಾಯಿಗಳ ಶಸ್ತ್ರಚಿಕಿತ್ಸೆ ಗುರಿಯನ್ನು ಸಾಧಿಸಲು ಸೂಚಿಸಿದರು.

7. MDV ಕಾರ್ಯಕ್ರಮದ ಗುರಿಗೆ ತಕ್ಕಂತೆ ಪ್ರತಿ ದಿನ 150 ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಗುರಿಯನ್ನು ಸಾಧಿಸಲು ಸೂಚಿಸಿದರು.

8. ಅನಧಿಕೃತ ಮಾಂಸದ ಮಳಿಗೆಗಳನ್ನು ಮುಚ್ಚಿಸಲು ಹಾಗೂ ಅಧಿಕೃತ ಮಾಂಸದ ಮಳಿಗೆಗಳ ಸ್ಚಚ್ಚತೆಯನ್ನು ಕಾಪಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಕಂದಾಯ ಅಪರ ಆಯುಕ್ತರಾದ ಕವಿತಾ ರಾಜಾರಾಂ, ಸಮಿತಿ ಸದಸ್ಯರು, ಎನ್.ಜಿ.ಓ. ಪ್ರತಿನಿಧಿಗಳು, ಪಶುಪಾಲನಾ ವಿಭಾಗದ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ. ವೆಂಕಟೇಶ್ ಕೆ.ವಿ. ಮತ್ತು ಶ್ರೀರಂಗರಾಜು ಹಾಗೂ ತೋಟಗಾರಿಕೆ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
    ‘TCS’ ಮತ್ತು ‘SBI’ ನಂತರ ‘ವಿಪ್ರೋ’ದಲ್ಲೂ ‘ಕಾರ್ಪೊರೇಟ್ ಜಿಹಾದ್ ಪ್ರೊ. ಕೆ. ಎಸ್. ಭಗವಾನ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ : HJSಆಳಂದ ಶಿವಲಿಂಗ ಅಪವಿತ್ರಗೊಳಿಸಿದ ಗಲಭೆಕೋರರು: ಕೇಸ್ ವಾಪಸ್ ಆದೇಶ ತಕ್ಷಣ ರದ್ದುಗೊಳಿಸಲು ಆಗ್ರಹನಾಯಿಕಡಿತ ಪ್ರಕರಣಗಳನ್ನು ಶೂನ್ಯವಾಗಿಸಿ ಮಾದರಿ ವಾರ್ಡ್ ನಿರ್ಮಾಣ ಮಾಡಿ: ಡಾ. ರಾಜೇಂದ್ರ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಿ:  ಕವಿತಾ ರಾಜಾರಾಂಕೆ.ಆರ್. ಮಾರುಕಟ್ಟೆ  ಹಾಗೂ ಸುತ್ತಲಿನ ಪ್ರದೇಶ ಸ್ವಚ್ಛತೆ ಕೈಗೊಳ್ಳಿ: ವೆಂಕಟಾಚಲಪತಿರಾಜ್ಯಸಭೆ ಸ್ಥಾನದ ಬಗ್ಗೆ ನನಗೆ ವ್ಯಾಮೋಹವಿಲ್ಲ, ಅದರ ಬಗ್ಗೆ ನಾನು ಬೇಡಿಕೆ ಇಟ್ಟಿರಲಿಲ್ಲಪ್ರಧಾನಿಗಳ ಮಹತ್ವಾಕಾಂಕ್ಷೆಯ ವಿಕಸಿತ ಭಾರತ ಕನಸು ಸಾಕಾರಕ್ಕೆ ಬದ್ಧತೆಯಿಂದ ದುಡಿಯುತ್ತೇವೆ: HDKನೂರು ದಿನಗಳಲ್ಲಿ ಕೆಐಎಡಿಬಿ ಸಂಪೂರ್ಣ ಡಿಜಿಟಲೀಕರಣ: ಎಂ ಬಿ ಪಾಟೀಲ ಕಟ್ಟುನಿಟ್ಟಿನ ಗಡುವುಪ್ರಜಾಪ್ರಭುತ್ವ ಹಾಳು ಗೆಡುವ ಮೂಲಕ ಪ್ರಧಾನಿಯಾಗಿ ಮೋದಿ ಮುಂದೆ ಮುರಿಯುತ್ತಿದ್ದಾರೆ