LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಯೋದ್ಯೆ ಶ್ರೀರಾಮನಲ್ಲಿನ ಹಣನೂ ಬಿಡದ ಕಳ್ಳರಿಗೆ ಸುಪ್ರೀಮ್ ಕೋರ್ಟ್ ನ್ಯಾ.ತನಿಖೆಯಾಗಲಿ

ಬೆಂಗಳೂರು: ಶ್ರೀ ರಾಮನ ಪುಣ್ಯಭೂಮಿ ಅಯೋಧ್ಯ ದೇವಾಲಯದಲ್ಲಿ ಭ್ರಷ್ಟ ಅರ್ಚಕರು ಶ್ರೀ ರಾಮನ ಹೆಸರಿನಲ್ಲಿ ಬಂದ ಕಾಣಿಕೆಯ ಹಣವನ್ನ ಚಿನ್ನಾಭರಣಗಳನ್ನ ಕಳುವು ಮಾಡಿದ್ದಾರೆ ಇಂತಹ ಕಳುವು ಮಾಡಿದ ಆರೋಪಿಗಳನ್ನ ಕೇಂದ್ರ ಬಿಜೆಪಿ ಸರ್ಕಾರ ರಕ್ಷಿಸುತ್ತಿದೆ ಕೂಡಲೇ ಈ ಪ್ರಕರಣವನ್ನ ಸರ್ವೋಚ್ಚ  ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿ
 ಶ್ರೀ ರಾಮನ ವೇಷದಾರಿ ಮೂಲಕ KPCC ಪ್ರಧಾನ ಕಾರ್ಯದರ್ಶಿ ಮನೋಹರ್ ಅವರ ನೇತೃತ್ವದಲ್ಲಿ ಆಗ್ರಹಪಡಿಸಿ ಜಾಗೃತಿ ಮೂಡಿಸಲಾಯಿತು.news_1783692361_1_593.webp

 ಭಾರತೀಯ ಜನತಾ ಪಕ್ಷ, ರಾಷ್ಟ್ರೀಯ ಸ್ವಯಂ ಸೇವಾ ಸಂಘ,ಹಿಂದೂ ಸಂಘಟನೆಗಳು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ದೇಶದ ನಾಗರಿಕರಿಂದ ಹಾಗೂ
 ಶ್ರೀ ರಾಮನ ಭಕ್ತರಿಂದ ಹಣವನ್ನು ಪಡೆದು ಈಗ ಶ್ರೀ ರಾಮನ ಸನ್ನಿಧಾನದಲ್ಲಿ ಹಣ, ಚಿನ್ನಾಭರಣವನ್ನು ದೋಚಿದ್ದಾರೆ,

 ಧಾರ್ಮಿಕ ಹಾಗೂ ದೇವರ ಹೆಸರಿನಲ್ಲಿ ರಾಜಕೀಯ ಲಾಭ ಪಡೆದಂತಹ ಭ್ರಷ್ಟ ಬಿಜೆಪಿ ನಾಯಕರು ಇಂದು ಶ್ರೀರಾಮನ ಮೂರ್ತಿಯ ಮುಂಭಾಗದ ಹಣದ ಹುಂಡಿಯನ್ನೇ ಕದ್ದಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭ ಪಡೆದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಇಂದು ದೇಶದ ಧಾರ್ಮಿಕ ಕ್ಷೇತ್ರವನ್ನೇ ಅಪವಿತ್ರ ಗೊಳಿಸಿದ್ದಾರೆ.

 ಹಿಂದುತ್ವಕ್ಕೆ ನಾವೇ ವಾರಸುದಾರರೆಂದು ಹೇಳುತ್ತಿದ್ದ ಬಿಜೆಪಿ ಹಾಗೂ ಆರ್ ಎಸ್ ಎಸ್, ಸಂಘ ಪರಿವಾರದವರು ಇಂದು ಅಯೋಧ್ಯೆಯಲ್ಲಿ ಆಗಿರುವ ಲೂಟಿಯ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ, ದೇಶದ ಪ್ರಧಾನ ಮಂತ್ರಿಗಳು ಅಯೋಧ್ಯೆಯ ಪೂಜೆಗೆ ಆಗಮಿಸಿ ಇಂದು ಶ್ರೀ ರಾಮನಿಗೆ ವಂಚಿಸಿರುವ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ.

 ಇನ್ನು ಉತ್ತರ ಪ್ರದೇಶದ ಬುಲ್ಡೆಜರ್ ಮುಖ್ಯಮಂತ್ರಿ ಯೋಗಿಆದಿತ್ಯನಾಥ ತಾನು ಕವಿ ಧರಿಸಿ ಧಾರ್ಮಿಕ ಧರ್ಮವನ್ನು  ಕಾಪಾಡುತ್ತೇನೆ ಎಂದು ದಿನನಿತ್ಯ ಘೋಷಣೆ ಮಾಡುತ್ತಾರೆ, ಆದರೆ ಇಂದು ಸ್ಥಳೀಯ ಅರ್ಚಕರು ಹಣ ಹಾಗೂ ಚಿನ್ನಾಭರಣವನ್ನು ಅಯೋಧ್ಯೆಯ ಶ್ರೀ ರಾಮನ ಮಂದಿರದ ಸನ್ನಿಧಿಯಿಂದ ಕೋಟಿಗಟ್ಟಲೆ ಹಣ  ದೂಚಿದ್ದರು ಅದರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ,
ಇಂತಹ ಬಿಜೆಪಿ ಭ್ರಷ್ಟರು ದೇಶದ ಪವಿತ್ರ ಸ್ಥಳವನ್ನು ಅಪವಿತ್ರ ಗೊಳಿಸಿದ್ದಾರೆ
 ಈ ಹಿನ್ನಲೆಯಲ್ಲಿ ಕೂಡಲೇ ಈ ಪ್ರಕರಣವನ್ನು ಘನ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಾಗೂ ಚಿನ್ನಾಭರಣವನ್ನು ಲೂಟಿ ಮಾಡಿರುವ ಭ್ರಷ್ಟರನ್ನ ಜೈಲಿಗೆ ಹಾಕಬೇಕೆಂದು  ಈ ಮೂಲಕ ಆಗ್ರಹ ಪಡಿಸಲಾಯಿತು.

 ಶ್ರೀ ರಾಮನನ್ನ ವಂಚಿಸಿರುವ ನಕಲಿ ಹಿಂದೂ  ಭಕ್ತರ ವಿರುದ್ಧ ಇಂದು ಶ್ರೀ ರಾಮನ ವೇಷಧಾರಿ ರವರ ಮೂಲಕ ಜನರ ಜಾಗೃತಿ ಅಭಿಯಾನವನ್ನು ನಡೆಸಿ ಸಾರ್ವಜನಿಕರಿಗೆ ಭಿತ್ತಿ  ಪತ್ರ ನೀಡಿ ಶ್ರೀ ರಾಮನ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಪಡಿಸಲಾಯಿತು.

ಹೋರಾಟದಲ್ಲಿ ಎಸ್ ಮನೋಹರ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ A ಆನಂದ, ಪ್ರಕಾಶ್ ಜಿ, ಆದಿತ್ಯ , ಹೇಮರಾಜ್, ಆನಂದ್ ಕುಮಾರ್, ಕುಶಲ್ ಹರುವೇಗೌಡ, ಉಮೇಶ್ , ಸುಂಕದಕಟ್ಟೆ ನವೀನ್ , ರಂಜಿತ್ , ಪ್ರವೀಣ್ ರಾವ್ , ನವೀನ್ ಸಾಯಿ , ಅಪ್ಪು , ಮಂಜುನಾಥ್,ಪವನ್ , ಪುಟ್ಟರಾಜು ಹಲವಾರು ಕಾರ್ಯಕರ್ತರು ಉಪಸ್ಥಿರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ಖೋಪೋಲಿಯಲ್ಲಿ ಅಕ್ಟೋಬರ್ 30 ರಿಂದ ಭಾರತೀಯ ಶಾಲೆಗಳ ಶಿಕ್ಷಣ ಶೃಂಗಸಭೆಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಎಂಬಸಿ ಟೆಕ್‌ವಿಲ್ಲಾದಿಂದ ದೇಸಿ ಕ್ವೋಶೆಂಟ್‌ಗೆ ಚಾಲನೆಏಸರ್‌ನಿಂದ CSR ನ ಅಡಿಯಲ್ಲಿ  ನೇತ್ರದೀಪ್ ಕಣ್ಣಿನ ಆರೈಕೆ ಕೇಂದ್ರ ಆರಂಭಕಲೀಲಾ ಚಿತ್ರದ ಮುಹೂರ್ತ ಪಂಚಮುಖಿ ಗಣೇಶ ದೇವಾಲಯದಲ್ಲಿ ಚಾಲನೆವಿದ್ಯಾರ್ಥಿಗಳು ವೃತ್ತಿ ಜೊತೆಗೆ ಪ್ರವೃತ್ತಿಯಲ್ಲೂ ಹೆಚ್ಚು ಗಮನ ಹರಿಸಬೇಕು: ಡಾ. ಚಂದ್ರ ಮೌಳಿ ಗಡ್ಡ ಮನಗೂನಗರದ ರಸ್ತೆ ಸಮಸ್ಯೆಗಳ ಪತ್ತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಕೆ : ಆಯುಕ್ತ ಕೆ. ಎನ್. ರಮೇಶ್ಪ್ರತಿ 10 ಭಾರತೀಯ ಮಕ್ಕಳಲ್ಲಿ ಕೇವಲ ಮೂವರಿಗೆ ಮಾತ್ರ ಹೊಂದಾಣಿಕೆಯಾಗುವ ಮೂಳೆ ಮಜ್ಜೆ ದಾನಿ ಲಭ್ಯಕುಮಾರಣ್ಣ ಬಾಂಬು ಹಾಕುವ ಟೈಮು ಬಂದೇಬಿಡ್ತಾ?ಶಿಕ್ಷಕರಿಂದಾಗಿಯೇ ರಾಜ್ಯದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಸಚಿವ ಮಧು ಬಂಗಾರಪ್ಪ ಬಣ್ಣನೆಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ ಕೈಕೊಂಡು,ಅಕಳಂಕಿತರಿಗೆ ನ್ಯಾಯ ನೀಡಿ: ಡಾ.ಹನುಮಂತಪ್ಪ