ಬೆಂಗಳೂರು : ಪಾದಚಾರಿಗಳ ಸುಗಮ ಸಂಚಾರಕ್ಕೆ ಒತ್ತುವರಿ ತೆರವು ವಿಶೇಷ ಕಾರ್ಯಾಚರಣೆ ಅನಿವಾರ್ಯ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಜಗದೀಶ್ ಜಿ ಅವರು ತಿಳಿಸಿದರು.
*ಇಂದಿನ ಕಾರ್ಯಾಚರಣೆಯಲ್ಲಿ 35 ಪೆಟ್ಟಿ ಅಂಗಡಿಗಳು, 83 ತಳ್ಳುವ ಗಾಡಿಗಳು, 34 ಜಾಹೀರಾತು ಫಲಕಗಳು, 24 ಮೇಲ್ಚಾವಣಿಗಳು, 19 ಶೆಡ್ ಗಳ ತೆರವು ಹಾಗೂ 80 ಟನ್ ಕಟ್ಟಡ ತ್ಯಾಜ್ಯ ಇತರೆ ತ್ಯಾಜ್ಯ ತೆರವು*
*11 ಮುಖ್ಯ ರಸ್ತೆಗಳ 8.55 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವು*
*ಕಾರ್ಯಾಚರಣೆಗೆ 80 ಸಿಬ್ಬಂದಿ, 6 ಜೆಸಿಬಿಗಳು, 20 ಟ್ರ್ಯಾಕ್ಟರ್ಗಳು ಹಾಗೂ 05 ಟಿಪ್ಪರ್ಗಳ ಬಳಕೆ*
ಗ್ರೇಟರ್ ಬೆಂಗಳೂರು ಅಭಿವೃದ್ದಿ ಸಚಿವರಾದ ಸನ್ಮಾನ್ಯ ಶ್ರೀ ಕೃಷ್ಣ ಬೈರೆಗೌಡ ರವರ ಆದೇಶದಂತೆ ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್.ಜಿ ರವರ ನಿರ್ದೇಶನದಂತೆ ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಾಗೂ ಪಾದಚಾರಿ ಮಾರ್ಗ ರಸ್ತೆ ಒತ್ತುವರಿಯನ್ನು ತೆರವುಗೊಳಿಸುವ ಉದ್ದೇಶದಿಂದ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆಯಿಂದ 6 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳ ವಿವಿಧ ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಅಂಗಡಿಗಳು, ತಳ್ಳುವ ಗಾಡಿಗಳು, ಕಟ್ಟಡ ತ್ಯಾಜ್ಯ, ಅನಧೀಕೃತ ಕೇಬಲ್ಗಳು ಹಾಗೂ ಇತರೆ ಒತ್ತುವರಿಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಯ ಪೋಲಿಸ್ ವಿಭಾಗದ ಅಧಿಕಾರಿ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ಕೇಂದ್ರ ನಗರ ಪಾಲಿಕೆ ವತಿಯಿಂದ ಪಾದಚಾರಿ ಮಾರ್ಗ ರಸ್ತೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಚರಣೆ ಕೈಗೊಂಡಿದ್ದು ಇಂದು ನಡೆದ 2ನೇ ದಿನದ ಕಾರ್ಯಾಚರಣೆಯು ಸಹ ಯಶಸ್ವಿಯಾಗಿದೆ ಎಂದು *ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್.ಜಿ ರವರು ತಿಳಿಸಿದ್ದಾರೆ.*
*ಆರು ವಿಭಾಗಗಳಲ್ಲಿ ಸಮನ್ವಯದೊಂದಿಗೆ ಕಾರ್ಯಾಚರಣೆ*
ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಸಾರ್ವಜನಿಕರಿಂದ ಬಂದಿದ್ದ ದೂರುಗಳು ಹಾಗೂ ಪಾದಚಾರಿಗಳು ಮತ್ತು ವಾಹನಗಳ ಸಂಚಾರಕ್ಕೆ ಉಂಟಾಗುತ್ತಿದ್ದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಪಾಲಿಕೆಯ ಶಾಂತಿನಗರ, ಸಿ.ವಿ.ರಾಮನ್ ನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ ಹಾಗೂ ಶಿವಾಜಿನಗರ ವಿಭಾಗಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
*ಇಂದು 11 ಪ್ರಮುಖ ರಸ್ತೆಗಳ 8.55 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವು*
ಈ ಕಾರ್ಯಾಚರಣೆಯಲ್ಲಿ ಒಟ್ಟು 11 ಪ್ರಮುಖ ರಸ್ತೆಗಳ 8.55 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಕಾರ್ಯಾಚರಣೆಯ ವೇಳೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಪೆಟ್ಟಿ ಅಂಗಡಿಗಳು, ಶಾಶ್ವತವಾಗಿ ನಿಲ್ಲಿಸಿದ್ದ ತಳ್ಳುಗಾಡಿಗಳು, ಕಟ್ಟಡ ತ್ಯಾಜ್ಯ, ಕೇಬಲ್ಗಳು, ತಾತ್ಕಾಲಿಕ ಕಟ್ಟಡ ಪ್ರೊಜೆಕ್ಷನ್ಗಳು ಹಾಗೂ ಇತರೆ ಅಡಚಣೆಗಳನ್ನು ತೆರವುಗೊಳಿಸಲಾಯಿತು. ಕೆಲವು ಸ್ಥಳಗಳಲ್ಲಿ ಮಳೆನೀರು ಸರಾಗವಾಗಿ ಹರಿಯುವಂತೆ ಚರಂಡಿ ಸ್ಲ್ಯಾಬ್ಗಳನ್ನು ಸಹ ಅಳವಡಿಸಲಾಗಿದೆ.
*ಕಾರ್ಯಾಚರಣೆಗೆ 80 ಸಿಬ್ಬಂದಿ, 6 ಜೆಸಿಬಿಗಳು, 20 ಟ್ರ್ಯಾಕ್ಟರ್ಗಳು ಹಾಗೂ 05 ಟಿಪ್ಪರ್ಗಳ ಬಳಕೆ*
ಸದರಿ ಕಾರ್ಯಾಚರಣೆಯಲ್ಲಿ ಸುಮಾರು 80 ಸಿಬ್ಬಂದಿ, 6 ಜೆಸಿಬಿಗಳು, 20 ಟ್ರ್ಯಾಕ್ಟರ್ಗಳು ಹಾಗೂ 5 ಟಿಪ್ಪರ್ಗಳನ್ನು ಬಳಸಿಕೊಳ್ಳಲಾಗಿದ್ದು, ಪೊಲೀಸ್ ಇಲಾಖೆಯ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಅಧಿಕಾರಿ/ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
*ವಿಭಾಗವಾರು ಪ್ರಮುಖ ಕಾರ್ಯಾಚರಣೆ ವಿವರಗಳು*
*ಶಾಂತಿನಗರ ವಿಭಾಗ*
* ಟ್ರೀನಿಟಿ ವೃತ್ತದಿಂದ ಲೈಫ್ ಸ್ಟೈಲ್ ವತ್ತದವರೆಗೆ 1.1 ಕಿ.ಮೀ ಒತ್ತುವರಿ ತೆರವು. ಸದರಿ ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳಲ್ಲಿ ಸುಮಾರು 6 ಪೆಟ್ಟಿ ಅಂಗಡಿಗಳನ್ನು ಹಾಗೂ ಶಾಶ್ವತವಾಗಿ ನಿಲ್ಲಿಸಿದ್ದ 8 ತಳ್ಳುಗಾಡಿಗಳನ್ನು ಹಾಗೂ ಅನಧಿಕೃತ ಕೇಬಲ್ಗಳನ್ನು ತೆರೆವುಗೊಳಿಸಲಾಗಿರುತ್ತದೆ.
*ಸಿ.ವಿ.ರಾಮನ್ ನಗರ ವಿಭಾಗ*
*ಹಳೆ ಮದ್ರಾಸ್ ರಸ್ತೆ, ಎನ್.ಜಿ.ಇ.ಎಫ್ ಜಂಕ್ಷನ್ನಿಂದ ಬೆನ್ನಿಗಾನ ಹಳ್ಳಿವರೆಗೆ 0.9 ಕಿ.ಮೀ ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಲಾಗಿದೆ. ಈ ಪಾದಚಾರಿ ಮಾರ್ಗಗಳಲ್ಲಿ 10 ಪೆಟ್ಟಿ ಅಂಗಡಿಗಳನ್ನು ಹಾಗೂ ಶಾಶ್ವತವಾಗಿ ನಿಲ್ಲಿಸಿದ್ದ 22 ತಳ್ಳುಗಾಡಿಗಳನ್ನು ಹಾಗೂ ಕೇಬಲ್ಗಳನ್ನು ತೆರೆವುಗೊಳಿಸಲಾಗಿರುತ್ತದೆ.
*ಇಂದಿರಾನಗರದ 100 ಅಡಿ ರಸ್ತೆ-ಹಳೇ ಮದ್ರಾಸ್ ರಸ್ತೆಯಿಂದ ದೊಮ್ಮಲೂರು ಮೇಲ್ಸೇತುವೆ ವರೆಗೆ 1.80 ಕಿ.ಮೀ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದೆ. ಈ ಪಾದಚಾರಿ ಮಾರ್ಗಗಳಲ್ಲಿ 12 ಪೆಟ್ಟಿ ಅಂಗಡಿಗಳನ್ನು ಹಾಗೂ ಶಾಶ್ವತವಾಗಿ ನಿಲ್ಲಿಸಿದ್ದ 11 ತಳ್ಳುಗಾಡಿಗಳನ್ನು, 1 ರ‍್ಯಾಂಪ್ ಹಾಗೂ 14 ಅನಧಿಕೃತ ಜಾಹೀರಾತು ಫಲಕಗಳನ್ನು ತೆರೆವುಗೊಳಿಸಲಾಗಿರುತ್ತದೆ.
*ಚಿಕ್ಕಪೇಟೆ ವಿಭಾಗ*
*ಕನಕನಪಾಳ್ಯ, 8ನೇ ಮುಖ್ಯ ರಸ್ತೆ, 15ನೇ ಅಡ್ಡರಸ್ತೆವರೆಗೆ 1 ಕಿ.ಮೀ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದ್ದು, 20 ಶೀಟು ಮೇಲ್ಛಾವಣಿಗಳು, 4 ಮೆಟ್ಟಿಲುಗಳು ರ‍್ಯಾಂಪ್ಸ್ , 5 ಅನಧಿಕೃತ ಜಾಹೀರಾತು ನಾಮ ಫಲಕಗಳು ಸೇರಿದಂತೆ 22 ಟನ್ಗಳ ಕಟ್ಟಡದ ತ್ಯಾಜ್ಯಗಳನ್ನು ತೆರೆವುಗೊಳಿಸಲಾಗಿದೆ.
*ಕನಕನಪಾಳ್ಯ, ಅಶೋಕ ಪಿಲ್ಲರ್ ರಸ್ತೆ, ಅಶೋಕ ಪಿಲ್ಲರ್ ವೃತ್ತದಿಂದ ಆರ್.ವಿ ರಸ್ತರವರೆಗೆ 8 ಕಿ.ಮೀ ವಿಸ್ತೀರ್ಣದ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದ್ದು, 01 ಪೆಟ್ಟಿ ಅಂಗಡಿಯನ್ನು ಹಾಗೂ ಶಾಶ್ವತವಾಗಿ ನಿಲ್ಲಿಸಿದ್ದ 4 ತಳ್ಳುಗಾಡಿಗಳು, 1 ಶೀಟು ಮೇಲ್ಛಾವಣಿಗಳು, 4 ಮೆಟ್ಟಿಲುಗಳು ರ‍್ಯಾಂಪ್ಸ್, ೦1 ತಾತ್ಕಾಲಿಕ ಶೆಡ್ ಸೇರಿದಂತೆ ಇನ್ನಿತರೆ ಒತ್ತುವರಿ ತೆರೆವುಗೊಳಿಸಲಾಗಿದೆ.
*ಚಾಮರಾಜಪೇಟೆ ವಿಭಾಗ*
*ಚಾಮರಾಜಪೇಟೆಯ 4ನೇ ಮುಖ್ಯರಸ್ತೆ 1 ಕಿ.ಮೀ ಒತ್ತುವರಿ ತೆರವುಗೊಳಿಸಲಾಗಿದ್ದು, 3 ತಳ್ಳುಗಾಡಿಗಳು/ಪೆಟ್ಟಿಗಳು, 3 ಜಾಹೀರಾತು/ನಾಮ ಫಲಕಗಳು, 4 ತಾತ್ಕಾಲಿಕ ಶೆಡ್ಗಳು, 3 ಕೆನೋಪಿ, 4 ರ‍್ಯಾಂಪ್ ಸೇರಿದಂತೆ 5 ಟನ್ಗಳ ಕಟ್ಟಡದ ತ್ಯಾಜ್ಯಗಳನ್ನು ತೆರೆವುಗೊಳಿಸಲಾಗಿದೆ.
*ಗಾಂಧಿನಗರ ವಿಭಾಗ*
*ಗುಬ್ಬಿತೋಟದಪ್ಪ ರಸ್ತೆ ಗುಂಡೂರಾವ್ ಸರ್ಕಲ್ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ 6 ಕಿ.ಮೀ ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಢಲಾಗಿದ್ದು, 8 ತಳ್ಳುಗಾಡಿಗಳು/ಪೆಟ್ಟಿಗಳು, 4 ಜಾಹೀರಾತು/ ನಾಮ ಫಲಕಗಳು, 1 ತಾತ್ಕಾಲಿಕ ಶೆಡ್ಗಳು, 4 ಕೆನೋಪಿ ಸೇರಿದಂತೆ 8 ಟನ್ಗಳ ಕಟ್ಟಡದ ತ್ಯಾಜ್ಯಗಳನ್ನು ತೆರೆವುಗೊಳಿಸಲಾಗಿದೆ.
*ಎಂ.ಡಿ ಬ್ಲಾಕ್ ಮುಖ್ಯ ರಸ್ತೆ ಯಲ್ಲಿ 0.30 ಕಿ.ಮೀ ಪಾದಚಾರಿ ಮಾರ್ಗ ಒತ್ತು ತೆರವುಗೊಳಿಸಲಾಗಿದ್ದು, 2 ತಳ್ಳುಗಾಡಿಗಳು/ ಪೆಟ್ಟಿಗಳು, 1 ಜಾಹೀರಾತು/ ನಾಮ ಫಲಕಗಳು, 2 ತಾತ್ಕಾಲಿಕ ಶೆಡ್ಗಳು, 1 ಕೆನೋಪಿ ಸೇರಿದಂತೆ 15 ಟನ್ಗಳ ಕಟ್ಟಡದ ತ್ಯಾಜ್ಯಗಳನ್ನು ತೆರೆವುಗೊಳಿಸಲಾಗಿದೆ.
*ಮೈಸೂರು ಬ್ಯಾಂಕ್ ವೃತ್ತದಿಂದ ಅವಿನ್ಯೂ ಕಬ್ಬನ್ಪೇಟೆ ವೃತ್ತದವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದ್ದು, 0.20 ಕಿ.ಮೀ ಪಾದಚಾರಿ ಮಾರ್ಗದಲ್ಲಿ 15 ತಳ್ಳುಗಾಡಿಗಳು/ ಪೆಟ್ಟಿಗಳು, 4 ಜಾಹೀರಾತು/ ನಾಮ ಫಲಕಗಳು, 10 ತಾತ್ಕಾಲಿಕ ಶೆಡ್ಗಳು ಸೇರಿದಂತೆ ಕಟ್ಟಡದ ತ್ಯಾಜ್ಯಗಳನ್ನು ತೆರೆವುಗೊಳಿಸಲಾಗಿದೆ.
*ಶಿವಾಜಿನಗರ ವಿಭಾಗ*
*ಕಾಕ್ಬರ್ನ್ ರಸ್ತೆ (ನೇತಾಜಿ ರಸ್ತೆಯಿಂದ ಬ್ರಾಡ್ವೇ ರಸ್ತೆ) ವರೆಗೆ 0.55 ಕಿ.ಮೀ ಪಾದಚಾರಿ ಮಾರ್ಗ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದ್ದು, 5 ತಳ್ಳುಗಾಡಿಗಳು, 3 ಜಾಹೀರಾತು/ ನಾಮ ಫಲಕಗಳು, 1 ತಾತ್ಕಾಲಿಕ ಶೆಡ್ಗಳು ಸೇರಿದಂತೆ 30 ಟನ್ಗಳ ಕಟ್ಟಡದ ತ್ಯಾಜ್ಯಗಳನ್ನು ತೆರೆವುಗೊಳಿಸಲಾಗಿದೆ 0.5 ಟನ್ ಡೆಬ್ರೀಸ್ ಹಾಗೂ ತ್ಯಾಜ್ಯಗಳನ್ನು ತೆರೆವುಗೊಳಿಸಲಾಗಿರುತ್ತದೆ.
*ಮಿಷನ್ರಸ್ತೆ ಜಿ.ಬಿ.ಎ ಕೇಂದ್ರ ಕಛೇರಿಯ ಹಿಂಭಾಗದ ಗೇಟಿನಿಂದ ಡಬಲ್ ರಸ್ತೆ ಸಂಪರ್ಕ ಹೊಂದುವ ಸಿಗ್ನಲ್ವರೆಗೆ 1.00 ಕಿ.ಮೀ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದ್ದು, 6 ಪೆಟ್ಟಿ ಅಂಗಡಿಗಳನ್ನು ಹಾಗೂ ಶಾಶ್ವತವಾಗಿ ನಿಲ್ಲಿಸಿದ್ದ 1 ತಳ್ಳುಗಾಡಿ, 4 ಶೀಟು ಮೇಲ್ಛಾವಣಿಗಳು, 5 ಜಾಹೀರಾತು ನಾಮ ಫಲಕಗಳು ಸೇರಿದಂತೆ ಕಟ್ಟಡದ ತ್ಯಾಜ್ಯಗಳನ್ನು ತೆರೆವುಗೊಳಿಸಲಾಗಿದೆ.
*ಆಯುಕ್ತರ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ*
ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ವೆಂಕಟಾಚಲಪತಿ ರವರು ಇದು ವಿವಿಧ ಒತ್ತುವರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಲ್ಲಾ ಒತ್ತುವರಿ ತೆರವುಗೊಳಿಸಲು ಸೂಚಿಸಿದರು. ಮಾನ್ಯ ಆಯುಕ್ತರು ಸೂಚನೆ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಕಾಮಗಾರಿ ವಿಭಾಗದ ಎಲ್ಲಾ ಅಭಿಯಂತರರು ಹಾಗೂ ಸಿಬ್ಬಂದಿಯವರು ಯಶಸ್ವಿಯಾಗಿ ನಿರ್ವಹಿಸಿದರು.