LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯಾರಿವಳು? ನೋವಿನಲ್ಲಿ ಅರಳಿದವಳು ಸಾಕ್ಷಾ ಚಿತ್ರ, ಪೋಸ್ಟರ್ ರಿಲೀಸ್

 ದಿ ರಿವೇಂಜ್ ಸಿನಿಮಾಸ್ ನಿರ್ಮಾಣದಲ್ಲಿ  ತಯಾರಾಗಿರುವ ಯಾರಿವಳು? ನೋವಿನಲ್ಲಿ ಅರಳಿದವಳು ಸಾಕ್ಷಾ ಚಿತ್ರವೂ  ಯುವ ನಿರ್ದೇಶಕ ರಾಘವ ರಾಜೇಶ್ ಎಸ್  ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ, ಇಂದು ಬೆಂಗಳೂರಿನಲ್ಲಿ ಪೋಸ್ಟರ್ ಹಾಗೂ ಸಾಕ್ಷಾಚಿತ್ರ ಬಿಡುಗಡೆಗೊಂಡಿದೆ.news_1782959318_1_100.webp

ಸಮಾಜದಲ್ಲಿ ಹೆಣ್ಣುಮಕ್ಳು ಹೇಗೆ ಬದುಕಬೇಕು ಎಂಬುದರ ಬಗ್ಗೆ ಸಾಕ್ಷಾ ಚಿತ್ರದಲ್ಲಿ ಮನೋಜ್ಞವಾಗಿ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಸಮಾಜದಲ್ಲಿ ಕೀಚಕರು, ದುರುಳರು ಕಾಮುಕರ ಕಾಟ, ಎಡರು ತೊಡರು ಕಲ್ಲು ಮುಳ್ಳುಗಳು ಎಲ್ಲವೂ ಸಹ ಇರುವುದರಿಂದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ಹೇಗೆ ಜೀವನ ಸವಿಸುತ್ತಾರೆ? ಇವೆಲ್ಲವುದರ ರೋಚಕ ಸಂಗತಿಗಳನ್ನು ಕೇವಲ 10 ನಿಮಿಷದಲ್ಲಿ ಚಿತ್ರೀಕರಣವಾಗಿರುವ ಸಾಕ್ಷಾ ಚಿತ್ರದ ಮೂಲಕ ಕಟ್ಟಿ ಕೊಡುವ ಕೆಲಸವನ್ನು ಯುವ ನಿರ್ದೇಶಕ ರಾಘವ್ ಅವರು ಮಾಡಿರುವುದು ಶ್ಲಾಘನೀಯ.

ಸಮಾಜದಲ್ಲಿ ದಿನನಿತ್ಯ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಶೋಷಣೆಗಳನ್ನು ಗಮನದಲ್ಲಿಟ್ಟುಕೊಂಡು ಕಲ್ಪತರು ನಾಡು ತುಮಕೂರಿನಲ್ಲಿ  ಚಿತ್ರೀಕರಣ ಮಾಡಿದ್ದಾರೆ. ಕಟ್ಟುಪಾಡುಗಳು ಗೊಂದಲಗಳು ಕಿರುಕುಳಗಳು ಇರುವ ಸಮಾಜದ ಮಧ್ಯದಲ್ಲಿ ಹೆಣ್ಣು ಮಕ್ಕಳು ಹೇಗೆ ಬದುಕನ್ನು ನಡೆಸಬೇಕು ಹಾಗೂ ಕಟ್ಟಿಕೊಳ್ಳಬೇಕು ಎಂಬುದನ್ನು ಸಾಕ್ಷಾಚಿತ್ರದ ಮೂಲಕ ಎಲ್ಲರ ಘಮನ ಸೆಳೆದು, ಸಿನೆಮಾದಲ್ಲಿ  ತೋರಿಸುವ ವಿಶೇಷವಾದಂತಹ ಕೆಲಸಕ್ಕೆ ನಿರ್ದೇಶಕರು ಕೈ ಹಾಕಿದ್ದಾರೆ.news_1782959318_0_157.webp

ಯಾರಿವಳು? ಸಾಕ್ಷಾ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಸೂರಿದೇವ (ಸುರೇಶ್ ) ಕೆಲಸ ಮಾಡಿದ್ದಾರೆ. ಇವರಿಂದ ಸಾಮಾಜಿಕ ಕಿರುಚಿತ್ರಕ್ಕೆ ರಾಜ್ಯಪ್ರಶಸ್ತಿ ಸಿಕ್ಕಿದ್ದು ಇದೀಗ ಈ ಚಿತ್ರ ಬಹಳ ಸಂಚಲನ ಮೂಡಿಸಿದೆ. ಯಾರಿವಳು? ಸಾಕ್ಷಾಚಿತ್ರಕ್ಕೆ ಶ್ರೀನಿವಾಸ್ ಎಚ್ ಎಸ್. ಲಕ್ಷ್ಮಿ ಪ್ರಿಯದರ್ಶಿನಿ ಎಂ ಕೆ ಬಂಡವಾಳವನ್ನು ಹೂಡಿದ್ದು, 10 ನಿಮಿಷದ ಇಡೀ ಸಾಕ್ಷ ಚಿತ್ರ ನಿರ್ಮಾಣ ಮಾಡಲು ಕೇವಲ 1 ಲಕ್ಷದಲ್ಲಿಯೇ ಮುಗಿಸಿರುವುದು ಮತ್ತೊಂದು ಹೆಗ್ಗಳಿಕೆಯ ವಿಚಾರವಾಗಿದೆ. ವಿಶೇಷತೆಗಳಲ್ಲಿ ವಿಶೇಷತೆ ಹೊಂದಿರುವಂತಹ ಸಾಕ್ಷಾ ಚಿತ್ರ ನಿರ್ಮಾಣಕ್ಕೆ ಕೈ ಹಾಕಿ ಇದೀಗ ರಿಲೀಸ್ ಆಗಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ದಿ ರಿವೇಂಜ್ ಸಿನಿಮಾಸ್ ಹಾಗೂ  ಸೂರಿದೇವ ಡ್ಯಾನ್ಸ್ ಸ್ಕೂಲ್ ತುಮಕೂರು ಯೂಟ್ಯೂಬ್ ಚಾನಲ್ ಎರಡರಲ್ಲೂ  ಯಾರಿವಳು? ಸಾಕ್ಷಾ ಚಿತ್ರ ಹಾಗೂ ಪೋಸ್ಟರ್ ಬಿಡುಗಡೆಗೊಂಡಿದೆ, ಸಾರ್ವಜನಿಕರು ಹಾಗೂ ಹೆಣ್ಣು ಮಕ್ಕಳು ಈ ಚಿತ್ರವನ್ನು ನೋಡಿ ಚಿತ್ರ ತಂಡವನ್ನು ಆಶೀರ್ವದಿಸಬೇಕಾಗಿ ನಿರ್ದೇಶಕರು ವಿನಂತಿ ಮಾಡಿಕೊಂಡಿದ್ದಾರೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ಖೋಪೋಲಿಯಲ್ಲಿ ಅಕ್ಟೋಬರ್ 30 ರಿಂದ ಭಾರತೀಯ ಶಾಲೆಗಳ ಶಿಕ್ಷಣ ಶೃಂಗಸಭೆಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಎಂಬಸಿ ಟೆಕ್‌ವಿಲ್ಲಾದಿಂದ ದೇಸಿ ಕ್ವೋಶೆಂಟ್‌ಗೆ ಚಾಲನೆಏಸರ್‌ನಿಂದ CSR ನ ಅಡಿಯಲ್ಲಿ  ನೇತ್ರದೀಪ್ ಕಣ್ಣಿನ ಆರೈಕೆ ಕೇಂದ್ರ ಆರಂಭಕಲೀಲಾ ಚಿತ್ರದ ಮುಹೂರ್ತ ಪಂಚಮುಖಿ ಗಣೇಶ ದೇವಾಲಯದಲ್ಲಿ ಚಾಲನೆವಿದ್ಯಾರ್ಥಿಗಳು ವೃತ್ತಿ ಜೊತೆಗೆ ಪ್ರವೃತ್ತಿಯಲ್ಲೂ ಹೆಚ್ಚು ಗಮನ ಹರಿಸಬೇಕು: ಡಾ. ಚಂದ್ರ ಮೌಳಿ ಗಡ್ಡ ಮನಗೂನಗರದ ರಸ್ತೆ ಸಮಸ್ಯೆಗಳ ಪತ್ತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಕೆ : ಆಯುಕ್ತ ಕೆ. ಎನ್. ರಮೇಶ್ಪ್ರತಿ 10 ಭಾರತೀಯ ಮಕ್ಕಳಲ್ಲಿ ಕೇವಲ ಮೂವರಿಗೆ ಮಾತ್ರ ಹೊಂದಾಣಿಕೆಯಾಗುವ ಮೂಳೆ ಮಜ್ಜೆ ದಾನಿ ಲಭ್ಯಕುಮಾರಣ್ಣ ಬಾಂಬು ಹಾಕುವ ಟೈಮು ಬಂದೇಬಿಡ್ತಾ?ಶಿಕ್ಷಕರಿಂದಾಗಿಯೇ ರಾಜ್ಯದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಸಚಿವ ಮಧು ಬಂಗಾರಪ್ಪ ಬಣ್ಣನೆಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ ಕೈಕೊಂಡು,ಅಕಳಂಕಿತರಿಗೆ ನ್ಯಾಯ ನೀಡಿ: ಡಾ.ಹನುಮಂತಪ್ಪ