ಬೆಂಗಳೂರು: ಭಾರತದಲ್ಲಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು (National Doctors' Day) ಆಚರಿಸಲಾಗುತ್ತದೆ. ಇದು ಸಮಾಜಕ್ಕೆ ವೈದ್ಯರು ನೀಡುವ ನಿಸ್ವಾರ್ಥ ಸೇವೆ ಮತ್ತು ತ್ಯಾಗವನ್ನು ಗೌರವಿಸಲು ಮೀಸಲಾದ ದಿನವಾಗಿದೆ.
ಹೀಗಾಗಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಒಂದಲ್ಲ ಒಂದು ದಿನಾಚರಣೆಗಳನ್ನು ಆಚರಣೆ ಮಾಡಿಕೊಂಡು ಅನಾಧಿಕಾರದಿಂದಲೇ ಬರಲಾಗುತ್ತಿದೆ, ಅದರಲ್ಲಿ ವೈದ್ಯರ ದಿನಾಚರಣೆಯ ಸಹ ವಿಶೇಷವಾಗಿದೆ.
ಮಣಿಪಾಲ ಆಸ್ಪತ್ರೆ ಅಂಕೋಲಜಿ ಶಸ್ತ್ರಚಿಕಿತ್ಸೆ ವಿಭಾಗದ ಸಲಹೆಗಾರರಾದ ಡಾ. ಮಾಧವಿ ನಾಯರ್ ಅವರು ವೈದ್ಯಕೀಯ ದಿನಾಚರಣೆ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡರು. ರಾಜ್ಯದಲ್ಲಿ ದಿನಾಚರಣೆಗಳು ನೂರಕ್ಕಿಂತ ಹೆಚ್ಚು ಇದ್ದಾವೆ ಹೀಗಾಗಿ ವೈದ್ಯಕೀಯ ದಿನಾಚರಣೆಯ ಸಹ ಬಹಳಷ್ಟು ವಿಶೇಷವಾಗಿದೆ.
ಎಲ್ಲರಿಗೂ ಸಹ ದಿನಾಚರಣೆ ಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ ಆದರೆ ವೈದ್ಯಕೀಯ ದಿನಾಚರಣೆಗೆ ಮಾತ್ರ ಯಾವುದೇ ರೀತಿಯ ರಜೆ ಇರುವುದಿಲ್ಲ ವರ್ಷದ 365 ದಿನವೂ ಸಹ ನಿರಂತರವಾಗಿ ವೈದ್ಯರು ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ, ವೈದ್ಯರಿಗೂ ಸಹ ಕೆಲವು ಮನೋರಂಜನೆಗಳು ಬೇಕಾಗುತ್ತದೆ ಅದರಲ್ಲಿ ಪ್ರಸ್ತುತ ಯುವ ವೈದ್ಯರು ಮನೋರಂಜನಾತ್ಮಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ವೈದ್ಯಕೀಯ ವೃತ್ತಿ ಜೀವನದಲ್ಲಿ ಸಾಕಷ್ಟು ಖುಷಿ ಸಂತೋಷ ದುಃಖ ಎಲ್ಲವೂ ಸಹ ಹಡಕವಾಗಿರುತ್ತದೆ, ಅದರಲ್ಲಿ ನಾವು ಯಾವುದನ್ನು ಪಡೆಯುತ್ತೇವೆ ಎಂಬುದು ಬಹಳ ಮುಖ್ಯವಾದ ಸಂಗತಿ. ರೋಗಿಗಳು ವೈದ್ಯರಿಂದ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಪುನಃ ಸಂತೋಷಕರ ಸುದ್ದಿಯನ್ನು ತಿಳಿಸುತ್ತಾರೋ ಆ ವೇಳೆಯಲ್ಲಿ ಸಿಗುವ ಸಂತಸ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. 
ವೈದ್ಯರ ದಿನಾಚರಣೆಗಳನ್ನು ಯಾರು ಸಹ ದೊಡ್ಡ ಮಟ್ಟದಲ್ಲಿ ಆಚರಿಸಿಕೊಳ್ಳಲು ಹೋಗುವುದಿಲ್ಲ ಕಾರಣ ಅವರದ್ದೇ ಆದಂತಹ ಒತ್ತಡದ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿರುವುದರಿಂದ. ಕೇವಲ ಚಿಕ್ಕ ಕಾರ್ಯಕ್ರಮವನ್ನಾಗಿ ರೂಪಿಸಿ ಆಚರಣೆ ಮಾಡುವುದು ರೂಢಿಯಲ್ಲಿದೆ, ಆದರೆ ಅದಕ್ಕೆ ಬದಲಾಗಿ ಸಾಮಾಜಿಕ ಕಳಕಳಿ ಹಾಗೂ ವೈದ್ಯಕೀಯ ವೃತ್ತಿ ಜೀವನದಲ್ಲಿ ಅಮೋಘ ಸಾಧನೆ ಮಾಡಿದವರಿಗೆ ಸಾಧಕ ಪ್ರಶಸ್ತಿಗಳನ್ನು ನೀಡುವ ಹಾಗೂ ಗೌರವಿಸುವ ಕೆಲಸ ಮಾಡುವುದರಿಂದ ವೈದ್ಯರು ಮತ್ತಷ್ಟು ಕೆಲಸ ಕಾರ್ಯಗಳಲ್ಲಿ ತೊಡೆಯಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ವೈದ್ಯರು ಹಾಗೂ ರೋಗಿಗಳಿಗೆ ಅವಿನಾಭಾವ ಸಂಬಂಧ ಇದೆ, ಅದನ್ನು ಯಾವತ್ತೂ ಯಾರು ಕಡೆದುಕೊಳ್ಳಬಾರದು ಒಬ್ಬರಿಗೊಬ್ಬರು ಸಲಹೆ ಸೂಚನೆಗಳ ಮೂಲಕ ಸಂಬಂಧ ಗಟ್ಟಿಗೊಳಿಸಬೇಕಾಗಿದೆ.