ಬೆಂಗಳೂರು: ಅಖಿಲ ಕರ್ನಾಟಕ ಕೊರಸ ಮಹಾಸಭಾ ಬೆಂಗಳೂರು ಇದರ ವತಿಯಿಂದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಾಂಧಿ ಭವನದಲ್ಲಿ ಅದ್ದೂರಿಯಾಗಿ ನಡೆಯಿತು.

ಅಖಿಲ ಕರ್ನಾಟಕ ಕೊರತೆ ಮಹಾಸಭಾಧ್ಯ ರಾಜ್ಯಾಕ್ಷರಾದ ಆದರ್ಶ ಯಲ್ಲಪ್ಪ ಅವರು ಕಾರ್ಯಕ್ರಮದಲ್ಲಿ ಮಾತನಾಡಿ,
ಕರ್ನಾಟಕದ ಪ್ರಮುಖ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಕೊರಚ ಸಮುದಾಯವೂ ಒಂದು. ಇವರು ಹೆಚ್ಚಾಗಿ ಚಿತ್ರದುರ್ಗ, ಕೋಲಾರ, ಹಾಸನ, ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಕಂಡುಬರುತ್ತಾರೆ ಇವರಿಗೆ ಸರ್ಕಾರದಿಂದ ಯಾವುದೇ ರೀತಿಯಾದಂತಹ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ ಸಮುದಾಯಕ್ಕೆ ಸಾಕಷ್ಟು ಸಮಸ್ಯೆಗಳು ಇದ್ದಾವೆ ಅವುಗಳನ್ನು ಸರ್ಕಾರದ ಮಟ್ಟದಲ್ಲಿ ಈಡೇರಿಸುವ ನಿಟ್ಟಿನಲ್ಲಿ ಸಮಾಜದವರು ಕೈ ಜೋಡಿಸಬೇಕಾಗಿದೆ ಎಂದರು.
ಕೊರಚ ಸಮುದಾಯಕ್ಕೆ ಯಾವುದೇ ರೀತಿಯಿಂದಲೂ ಸಹ ರಾಜಕೀಯವಾಗಲಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಬಹಳ ಹಿಂದುಳಿದಿದೆ, ಸರ್ಕಾರದಿಂದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ ಹೀಗಾಗಿ ನಾವೆಲ್ಲರೂ ಸಹ ಒಗ್ಗಟ್ಟಾಗಿ ಹೋರಾಡಬೇಕಾಗಿದೆ, ಒಗ್ಗಟ್ಟಿನ ಮಂತ್ರವನ್ನು ನಾವೆಲ್ಲರೂ ಜಪಿಸಬೇಕಾಗಿದೆ, ಹೀಗಾಗಿ ರಾಜ್ಯಮಟ್ಟದಲ್ಲಿ ತಾಲೂಕು ಜಿಲ್ಲಾ ಮಟ್ಟದಲ್ಲಿ ಸಮುದಾಯದವರು ಒಗ್ಗೂಡಬೇಕಾಗಿದೆ, ಇವೆಲ್ಲದಕ್ಕಿಂತ ಮೊದಲು ಕೊರಚ ಸಮುದಾಯದ ಮಕ್ಕಳು ಶಿಕ್ಷಣ ಪಡೆದು ಕೊಂಡಾಗ ಮಾತ್ರ ಎಲ್ಲವನ್ನೂ ಸಹ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕೊರಚ ಸಮುದಾಯಕ್ಕೆ ಪ್ರತ್ಯೇಕವಾದಂಥ ಮೀಸಲಾತಿಯನ್ನು ನೀಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಮುದಾಯದ ವತಿಯಿಂದ ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬರಲಾಗಿದೆ, ಇಂದಿಗೂ ಸಹ ಮೀಸಲಾತಿ ವಿಚಾರದಲ್ಲಿ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗಿದೆ.
ಸಮುದಾಯದ ವಿಶೇಷತೆಗಳು:
ಕಸುಬು: ಸಾಂಪ್ರದಾಯಿಕವಾಗಿ ಬಿದಿರು ಮತ್ತು ಈಚಲು ಗರಿಗಳನ್ನು ನಂಬಿ ಜೀವನ ನಡೆಸುವ ಬಡ ಸಮುದಾಯ. ಬುಟ್ಟಿ ಹೆಣೆಯುವುದು, ಹಗ್ಗ ತಯಾರಿಸುವುದು ಇವರ ಮುಖ್ಯ ಕಸುಬು.
ಭಾಷೆ: ಇವರು 'ಕೊರಚ' ಅಥವಾ 'ಕುಡ್ರ್' ಎಂಬ ವಿಶಿಷ್ಟ ಭಾಷೆಯನ್ನು ಮಾತನಾಡುತ್ತಾರೆ.
ಸಂಸ್ಕೃತಿ: ತಮ್ಮದೇ ಆದ ವಿಶಿಷ್ಟ ಆಚರಣೆ, ಆಹಾರ ಪದ್ಧತಿ ಹಾಗೂ ಸಾಂಪ್ರದಾಯಿಕ ನಂಬಿಕೆಗಳನ್ನು ಹೊಂದಿದ್ದಾರೆ. ಹೆಚ್ಚಾಗಿ ಸೋದರ ಸಂಬಂಧಿಗಳ ನಡುವೆ ವಿವಾಹ ನಡೆಯುತ್ತದೆ ಮತ್ತು ಮೃತದೇಹಗಳನ್ನು ಹೂಳುವ ಸಂಪ್ರದಾಯವಿದೆ.
ಸಾಹಿತ್ಯ: ಇವರ ಸಂಪ್ರದಾಯ ಮತ್ತು ಭಾಷೆಯ ವಿವರಗಳನ್ನು ಒಳಗೊಂಡ 'ಕೊರಚ ಮಾತುಕತೆ' ಹಾಗೂ 'ಕೊರಚರು' ನಂತಹ ಕೃತಿಗಳು ಇವರ ಬದುಕಿನ ಚಿತ್ರಣವನ್ನು ನೀಡಿವೆ.
ಕೊರಚ ಮಹಾಸಭಾ ರಾಜ್ಯಾಧ್ಯಕ್ಷರಾದ ಆದರ್ಶ ಎಲ್ಲಪ್ಪ ಅವರ ನೇತೃತ್ವದಲ್ಲಿ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು,
ಕೊರಚ ಜನಾಂಗದ ಪ್ರತಿಭಾವಂತ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸಾಧನ ಸಿರಿ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಹಾಗೂ ಸರ್ಕಾರದ ನಿವೃತ್ತ ಹಾಗೂ ಸೇವೆಯಲ್ಲಿರುವ ವರ್ಗ ಎ ಮತ್ತು ಬಿ ಅಧಿಕಾರಿ ವರ್ಗದವರಿಗೆ ನುಡಿಯ ಚಂದಯ್ಯ ಸಾಧಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮಕ್ಕೆ ಗಣ ಉಪಸ್ಥಿತಿಯಲ್ಲಿ ಹೈಕೋರ್ಟ್ ನ ವಕೀಲರಾದ ಅನಂತನಾಯಕ್ ನಿವೃತ್ತ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಗೌರವಾಧ್ಯಕ್ಷರಾದ ಬೋಜರಾಜ್ ಹೆಚ್ಚು ಮುಟಗಾರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ, ಕೃಷ್ಣಪ್ಪ ಕಾರ್ಯಕ್ರಮಕ್ಕೆ ಉಪಸಧಾರಿದ್ದರು.
ಇನ್ನೂ ಕಾರ್ಯಕ್ರಮದಲ್ಲಿ ಸನ್ಮಾನಿಕರಾದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಕೆ ವೆಂಕಟೇಶ್ ಪುರುಷ ಸಂಸ್ಕೃತಿ ಚಿಂತಕರ ಹಾಗೂ ಸಂಶೋಧಕರಾದ ಡಾಕ್ಟರ್ ಗಿರಿಧರ್ ರಾವ್ ಹವಾಲ್ದಾರ್ ಸಂಯುಕ್ತ ನಿರ್ವಾಹಕ ಅಭಿಯಂತರದ ಧನಂಜಯ , ತುಮಕೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊಫೆಸರ್ ಜಿ ಬಸವರಾಜ್ , ಕೊರತೆ ಸಮಾಜದ ಮುಖಂಡರಾದ ಶಿವಶಂಕರ್ ಆರೋಗ್ಯ ಇಲಾಖೆಯ ರಾಜ್ಯ ಉಪಾಧ್ಯಕ್ಷರಾದ ಸೀತಾರಾಮಯ್ಯ, ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸಂಘದ ಪದಾಧಿಕಾರಿಗಳು, ರಾಜ್ಯ ಮಹಿಳಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.