LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಮೂಹಿಕ ಶಕ್ತಿ,ಸ್ಪರ್ಶ ಟ್ರಸ್ಟ್ ನಿಂದ ಶಿಕ್ಷಣ ವಂಚಿತ ಮಕ್ಕಳ ದಾಖಲಾತಿಗೆ ಅಭಿಯಾನ

ಬೆಂಗಳೂರು: ನಗರದ ೪೦ ತ್ಯಾಜ್ಯ ಸಂಗ್ರಹಿಸುವ ಸಮುದಾಯಗಳಲ್ಲಿ ಮಕ್ಕಳ ಶಾಲಾ ದಾಖಲಾತಿಯನ್ನು ಹೆಚ್ಚಿಸುವುದು ಮತ್ತು ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿರುವ ಕಲಾಜಾಥಾ ‘ನನ್ನ ನಡೆ ಶಿಕ್ಷಣದೆಡೆಗೆ 2026 - 27’ ಆಂದೋಲನದ ಉದ್ಘಾಟನಾ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಲು ಸಂತೋಷಪಡುತ್ತೇವೆ . 


ರವಿಕುಮಾರ್ ಸರ್ ಏನು ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತರು. 


ಸಂವಿಧಾನದ ಪ್ರಕಾರ ಎಲ್ಲಾ ಮಕ್ಕಳಿಗೂ ಮೂಲಭೂತ ಹಕ್ಕಾಗಿ ಶಿಕ್ಷಣ ಸಿಗಬೇಕು ಅದನ್ನು ನೀಡುವುದು ಇಲಾಖೆಯ ಮತ್ತು ಸಮಾಜದ ಇಬ್ಬರಿಗೂ ಜವಾಬ್ದಾರಿಯ ಆಗಿರುತ್ತದೆ. ಇಲ್ಲಿ ಕೇವಲ ಕಾರ್ಮಿಕ ಇಲಾಖೆಯಿಂದ ಮಾತ್ರ ಸಾಧ್ಯವಾಗುವುದಿಲ್ಲ ಇದಕ್ಕೆ ವಿವಿಧ ರೀತಿಯಾಗಿ ಎಲ್ಲ ಇಲಾಖೆಗಳು ಸಹಕರಿಸಬೇಕು ಉದಾಹರಣೆಗೆ ಶಿಕ್ಷಣ ಇಲಾಖೆಯು ಪ್ರತಿಯೊಂದು ಮಗುವಿಗೆ ಶಿಕ್ಷಣವನ್ನು ನೀಡುವ ಮುಖಾಂತರ ಸಹಕರಿಸಬೇಕು ಮತ್ತು ಮಕ್ಕಳಿಗೆ ಬೇಕಾಗುವಂತಹ ಪೌಷ್ಟಿಕಾಂಶಗಳನ್ನು ನೀಡುವುದರ ಮುಖಾಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸಹಕರಿಸಬೇಕು ಇತರ ಜೊತೆ ಅವರಿಗೆ ಆರ್ಥಿಕವಾಗಿ ಸದೃಢರಾಗಲು ಆರ್ಥಿಕ ಇಲಾಖೆ ಅಥವಾ ಕಂದಾಯ ಇಲಾಖೆ ಸಹಕರಿಸಬೇಕು. ಹಾಗೂ ಎಲ್ಲಾ ಮಕ್ಕಳಿಗೆ ರಕ್ಷಣೆಯನ್ನು ನೀಡುವುದರ ಮುಖಾಂತರ ಪೊಲೀಸ್ ಇಲಾಖೆಯು ಸಹಕರಿಸಬೇಕು ಈ ರೀತಿಯಾಗಿ ಎಲ್ಲಾ ಇಲಾಖೆಗಳು ಒಗ್ಗಟ್ಟಾಗಿ ಸಮುದಾಯಗಳಲ್ಲಿ ಕಾರ್ಯವನ್ನು ನಿರ್ವಹಿಸಿದರೆ ಮಕ್ಕಳಿಗೆ ಪೂರ್ಣವಾದ ಶಿಕ್ಷಣವನ್ನು ನೀಡಬಹುದು ಮತ್ತು ಬಾಲಕಾರ್ಮಿಕತೆಯನ್ನು ತೊಡೆಯಬಹುದು. ಇದರ ಜೊತೆಗೆ ಮುಖ್ಯವಾಗಿ ಏನ್ಜಿಒಗಳು ಕಾರ್ಯಗಳನ್ನು ಮಾಡಬೇಕು ಅವು ಮಕ್ಕಳನ್ನು ಗುರುತಿಸುವುದು ಅವರನ್ನು ಸಮಾಲೋಚಿಸುವುದು ಮತ್ತು ಅದಕ್ಕೆ ಬೇಕಾಗಿರುವಂತಹ ಎಲ್ಲಾ ಭಯಂಕರಗಳನ್ನು ಮಾಡುವುದರಲ್ಲಿ ಮುಂದೆ ಇರುತ್ತವೆ. ಈ ಎಲ್ಲಾ ಇಲಾಖೆಗಳು ಮತ್ತು ಸಂಸ್ಥೆಗಳ ಸಹಯೋಗದಲ್ಲಿ ಪ್ರತಿ ಸಮುದಾಯದಲ್ಲೂ ಕಾರ್ಯಗಳನ್ನು ಕೈಗೊಂಡರೆ ಉತ್ತಮವಾದಂತಹ ಫಲಿತಾಂಶವನ್ನು ನಾವು ನೋಡಬಹುದು ಎಂದು ಹೇಳಿದರು.


ಶ್ರೀಮತಿ ಮಂಜು ಮೇಡಂ. 
ವಕೀಲರು ಮತ್ತು ಮಾಜಿ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರು.
ಯಾವುದೇ ಒಂದು ಮಗು ಬೀದಿಯಲ್ಲಿ ಶಾಲೆಗೆ ಹೋಗದೆ ಕಂಡು ಬಂದರೆ 1098 ಕರೆ ಮಾಡಬೇಕು ಹೀಗೆ ಮಾಡಿದರೆ ಪೊಲೀಸ್ ಇಲಾಖೆಯಲ್ಲಿ ಜೆಜೆ ಈ ಎಂಬ ಘಟಕ ಇರುತ್ತದೆ ಅವರು ಬಂದು ಮಕ್ಕಳನ್ನು ವಶಕ್ಕೆ ಪಡೆದು ಅವರನ್ನು ಮತ್ತೆ ಶಾಲೆಗೆ ಸೇರಿಸುವ ಕಾರ್ಯವನ್ನು ಮಾಡುತ್ತಾರೆ. ಈ ರೀತಿಯಾಗಿ ಒಂದು ಮಗುವನ್ನು ಶಾಲೆಗೆ ಸೇರಿಸಿದರೆ ಅದು ಪ್ರೇರಣೆಯಾಗಿ 10 ಮಕ್ಕಳು ಶಾಲೆಗೆ ಸೇರುವ ರೀತಿ ಪರಿವರ್ತನೆ ಆಗುತ್ತದೆ.


ಸಮುದಾಯದ ಮುಖಂಡರಾದಂತಹ ಭಾರತೀ ರವರು ಮತ್ತು ಎಸ್‌ಡಿಎಂಸಿ ಸದಸ್ಯರಾದಂತಹ ವರಲಕ್ಷ್ಮಿ ಹಾಗೂ ಮಕ್ಕಳ ಹಕ್ಕುಗಳ ಸಮಿತಿಯ ಸದಸ್ಯರಾದಂತಹ ಸಂಧ್ಯಾ ಎಂಬ ಮಗುವು ಸ್ಪರ್ಶ ಸಂಸ್ಥೆಯ ವತಿಯಿಂದ ನಮಗೆ ಸಿಕ್ಕಂತ ನೆರವು ಮತ್ತು ಜ್ಞಾನವು ನಾವು ಸಮುದಾಯದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಸಲುವಾಗಿ ತುಂಬಾ ಅನುಕೂಲಕರವಾಗಿದೆ. ಸ್ಪರ್ಶ ಟ್ರಸ್ಟ್ ಸಾಮೂಹಿಕ ಶಕ್ತಿ ಸಮುದಾಯಗಳಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು ಮತ್ತು ಆ ಮಕ್ಕಳಿಗೆ ಅನುಕೂಲಕರವಾಗುವಂತಹ ಕೌಶಲ್ಯಗಳನ್ನು ಕಲಿಸುವುದು ಮತ್ತು ಸಮಾಲೋಚನೆ ಮಾಡುವುದರಲ್ಲಿ ತುಂಬಾ ಮುಂಚೂಣಿಯಲ್ಲಿದೆ ಕೇವಲ ಅವರು ಮಾಡುವುದಲ್ಲದೆ ಸಮುದಾಯದಲ್ಲಿಯೇ ಇರುವಂತಹ ಪೋಷಕರು ಮತ್ತು ಇತರ ಸಿಬ್ಬಂದಿಗಳು ಅದನ್ನು ಮುಂದುವರಿಸಿಕೊಂಡು ಹೋಗುವಂತೆ ಜ್ಞಾನವನ್ನು ಹಂಚುತ್ತಾರೆ ಮತ್ತು ತರಬೇತಿಯನ್ನು ನೀಡುತ್ತಾರೆ. ಇದರಿಂದ ನಿಲ್ಲದೆ ಮುಂದುವರಿಯುತ್ತವೆ ಇದಕ್ಕಾಗಿ ವರ್ಷ ಟ್ರಸ್ಟ್ ಗೆ ಧನ್ಯವಾದಗಳು ತಿಳಿಸುತ್ತೇವೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಮೂಹಿಕ ಶಕ್ತಿ,ಸ್ಪರ್ಶ ಟ್ರಸ್ಟ್ ನಿಂದ ಶಿಕ್ಷಣ ವಂಚಿತ ಮಕ್ಕಳ ದಾಖಲಾತಿಗೆ ಅಭಿಯಾನಆಸಕ್ತ ಮಹಿಳಾ ಪುರುಷರಿಗೆ ಮಹಿಳಾ ಕಲ್ಯಾಣ ಇಲಾಖೆಯಿಂದ ವಾಹನ ಚಾಲನೆ ತರಬೇತಿಗೆ ಅರ್ಜಿ ಆಹ್ವಾನಸ್ಥಳೀಯ ರೈತರಿಗೆ 2 ಬೆಳೆಗೆ ನೀರು ಗ್ಯಾರಂಟಿ: ಎಂ ಬಿ ಪಾಟೀಲ₹6,000 ಕೋಟಿ ಹೂಡಿಕೆಗೆ ಆ್ಯಕ್ಸಿಸ್‌ಕೇಡ್ಸ್‌ ಏರೊಸ್ಪೇಸ್‌ ಒಲವು: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ2028ಕ್ಕೆ ಇದೇ ಡಿ.ಕೆ. ಶಿವಕುಮಾರ್ ಮಾಜಿ ಆಗ್ತಾರೆ, ಹಾಲಿ ಆಗಿರಲ್ಲ ಎಂದು ನಿಖಿಲ್ ತಿರುಗೇಟು ದೇಶಾದ್ಯಂತ ಇ-ಬಸ್‌, ಇ-ಟ್ರಕ್‌ ಬಳಕೆಗೆ ವೇಗ; ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ136 ಶಾಸಕರಿದ್ರೂ ನೀವು ಹರಿದಿದ್ದೇನು? ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ನಿಖಿಲ್  ಟಾಂಗ್ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಿಎಂ ಪರಿಹಾರವಿದೆ ಚೆಕ್ ಹಸ್ತಾಂತರಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠದ ಅಗತ್ಯತೆ ಕುರಿತು ಸಿಎಂ ಜೊತೆ ಚರ್ಚೆಚುಂಚ ಶ್ರೀಗಳನ್ನು ರಾಜಕೀಯಕ್ಕೆ ತರುವ ಪ್ರಯತ್ನ ವಿಫಲ