ಬೆಂಗಳೂರು: PHCO ಮತ್ತು HIO ಹುದ್ದೆಗಳಿಗೆ ಬಿಎಸ್ಸಿ ನರ್ಸಿಂಗ್ ಅರ್ಹತೆ ಹಿಂಪಡೆಯುವುದು ಖಾಯಮಾತಿ ಹಾಗೂ ಸಿಎಚ್ಒ ರೀ ಲೊಕೇಶನ್ ಪ್ರಕ್ರಿಯೆ ಮುಂದೂಡುವಂತೆ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್ ಹೆಚ್ ಎನ್ ಗುತ್ತಿಗೆ ನೌಕರ ಸಂಘದ ವತಿಯಿಂದ ಕಳೆದ ಎರಡು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ.
ಕನಕ ರಾಜ್ಯಾದ್ಯಂತ ಸಿ ಪಿ ಎಚ್ ಸಿ ಯು ಎಚ್ ಸಿ ಕಾರ್ಯಕ್ರಮದ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಡೆಯಲು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್ ಎಚ್ ಎಂ ಗುತ್ತಿಗೆ ನೌಕರರ ಸಂಘ ಟಿ ಯು ಸಿ ಐ ವತಿಯಿಂದ ಬೃಹತ್ ಕಾಲ್ಲಡಿಗೆ ಜಾತವನ್ನು ತುಮಕೂರಿನಿಂದ ಹಮ್ಮಿಕೊಂಡು ಬೆಂಗಳೂರಿನಲ್ಲಿ ಎರಡು ದಿನದಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಸೆಪ್ಟಂಬರ್ 28ರಂದು ತುಮಕೂರಿನ ಸಿದ್ದಗಂಗಾ ಮಠದಿಂದ ನೆಲಮಂಗಲದ ವರೆಗೆ ಬೃಹತ್ ಕಾಲೋನಿ ಜಾತ ನಡೆಸಲಾಗಿತ್ತು ನಂತರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ ಹೆಚ್ಚು ಸಿಎಚ್ಒಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ನೌಕರರ ಸಂಘದ ಅಧ್ಯಕ್ಷ ಮಮಿತಾ ಗಾಯಕ್ವಾಡ್ ಅವರು ಮಾತನಾಡಿ ಸಂಘದ ಪ್ರಮುಖ ಬೇಡಿಕೆಯಲ್ಲಿ ಪಿ ಎಚ್ ಸಿ ಓ ಹಾಗೂ ಎಚ್ಐವಿ ಹುದ್ದೆಗಳಿಗೆ ಬಿಎಸ್ಸಿ ನರ್ಸಿಂಗ್ ಅಭ್ಯರ್ಥಿಗಳಿಗೆ ನೀಡಲಾಗಿರುವ ವಿದ್ಯಾರ್ಥಿಯನ್ನು ಹಿಂಪಡೆಯುವುದು ಪ್ರಮುಖವಾಗಿದೆ ಈಗಾಗಲೇ ಸೇವೆ ಸಲ್ಲಿಸುತ್ತಿರುವ CHoಗಳ cadre protection career progression ಹಾಗೂ ಭವಿಷ್ಯದ ಉದ್ಯೋಗ ಭದ್ರತೆಯ ಮೇಲೆ ಈ ಬದಲಾವಣೆ ಪರಿಣಾಮ ಬೀರುವ ಪದ್ಧತಿ ಇರುವ ಹಿನ್ನೆಲೆ ಸಂಗವು ಸರ್ಕಾರದ ಹಣಕ್ಕೆ ಹಲವು ಬಾರಿ ಮನವಿ ಹಾಗೂ ಅಕ್ಷಯಕೂಟ ಸಲ್ಲಿಸಿದರು ಸಹ ಪ್ರಯೋಜನವಾಗದೆ ಅಂತಿಮವಾಗಿ ನೌಕರರು ಪ್ರತಿಭಟನೆ ಹಂತಕ್ಕೆ ತಲುಪಿದ್ದಾರೆ.
ಸೆಪ್ಟೆಂಬರ್ 9ರಂದು ಅಭಿಯಾನ ನಿರ್ದೇಶಕರು ರಾಷ್ಟ್ರೀಯ ಆರೋಗ್ಯ ಅಭಿಯಾನ ಅವರ ಅಧ್ಯಕ್ಷತೆಯಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು ಸಭೆಯಲ್ಲಿಯೂ ಸಹ ಬಿಎಸ್ಸಿ ನರ್ಸಿಂಗ್ ವಿದ್ಯಾ ಅರ್ಹತೆಯನ್ನು ಹಿಂಪಡೆಯುವಂತೆ ಪ್ರಮುಖವಾದಂತಹ ಮನವಿಯನ್ನು ಸಭೆಯಲ್ಲಿ ಮಾಡಲಾಯಿತು. ಈ ವಿಷಯ ಸರ್ಕಾರದ ಮಟ್ಟದಲ್ಲಿದೆ ಇಂದು ಅಧಿಕಾರಿಗಳು ತಿಳಿಸುವ ಮೂಲಕ ಉಳಿಸಿಕೊಳ್ಳುತ್ತಿದ್ದಾರೆ ಎಂದು ಸರ್ಕಾರ ವಿರುದ್ಧ ಗರಂ ಆದರು.
ಸೆಪ್ಟೆಂಬರ್ 15ರಂದು ಅಂತಿಮ ಗೆಲುಟೆಡ್ ನೋಟಿಫಿಕೇಶನ್ ಪ್ರಕಟಗೊಂಡಿದ್ದರು ಸಂಘದ ವತಿಯಿಂದ ನಿಗದಿತ ಅವಧಿಯಲ್ಲಿ ಸಲ್ಲಿಸಲಾಗಿದ್ದ ಆಕ್ಷೇಪಣೆಗಳನ್ನು ಹೇಗೆ ಪರಿಗಣಿಸಲಾಗಿದೆ ಎಂಬುದರ ಕುರಿತು ಸಂಘಕ್ಕೆ ಯಾವುದೇ ಸ್ಪಷ್ಟವಾದಂತಹ ಅಧಿಕೃತ ಮಾಹಿತಿ ಅಥವಾ ಕಾರಣ ಸಹಿತ ನಿರ್ಧಾರವನ್ನು ನೀಡಲಾಗಿಲ್ಲ ಎಂದರು.
ಪ್ರಸ್ತುತ ಸಿಎಚ್ಒಗಳ ರಿ ಲೋಕೇಶನ್ ಸ್ಥಳಾಂತರ ಪ್ರಕ್ರಿಯೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಗವೂ ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೊಡಬೇಕು ಎಂದು ಇದೇ ವೇಳೆ ಒತ್ತಾಯವನ್ನು ಸಹ ಮಾಡಿದರು ಸಂಘದ ಬೇಡಿಕೆಗಳು ಕುರಿತು ಸರ್ಕಾರ ಹಾಗೂ ಇಲಾಖೆಯೊಂದಿಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರತಿಭಟನೆ ಕಾರ್ಯಕ್ರಮ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಯಾವೊಬ್ಬ ಪಿಎಚ್ಒ ಗಳು ಎಚ್ಐಓಗಳು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಮುಂದುವರೆಯಲಾಗುತ್ತದೆ ಎಂದು ಇದೇ ವೇಳೆ ಅವರು ನೌಕರರಿಗೆ ಸೂಚನೆಯನ್ನು ಸಹ ನೀಡಿದರು.
ಸಂಘದ ಪ್ರಮುಖ ಬೇಡಿಕೆಗಳು:
- CHOಗಳ ಸೇವಾ ಕಾಯ ಮಾತಿ ಹಾಗೂ ಉದ್ಯೋಗ ಭದ್ರತೆ ಕಲ್ಪಿಸಬೇಕು.
- PHCO ಹಾಗೂ HIO ಹುದ್ದೆಗಳಿಗೆ ನೀಡಿರುವ ಬಿಎಸ್ಸಿ ನರ್ಸಿಂಗ್ ಅರ್ಹತೆಯನ್ನು ಹಿಂಪಡೆಯಬೇಕು.
- ಸಂಘ ಸಲ್ಲಿಸಿರುವ ಎಲ್ಲಾ ಆಕ್ಷೇಪಣೆಗಳನ್ನು ಸಮಗ್ರವಾಗಿ ಪರಿಗಣಿಸಿ ಸ್ಪಷ್ಟವಾದ ಅಧಿಕೃತವಾದ ಕಾರಣ ಸಹಿತ ನಿರ್ಧಾರ ಕೈಗೊಳ್ಳಬೇಕು.
- ಈಗಾಗಲೇ ಸೆಕೆಂಡ್ ಸಲ್ಲಿಸುತ್ತಿರುವ CHOಗಳ Cadre protection ಖಚಿತಪಡಿಸಬೇಕು.
- CHOಗಳಿಗೆ career progression ಹಾಗೂ promossion ವ್ಯವಸ್ಥೆ ಕಲ್ಪಿಸಬೇಕು.
- CHOಗಳ TRO ಅನ್ನು ಎಂ ಸರ್ಕಾರದ ಮಾರ್ಗದರ್ಶಕಗಳಿಗೆ ಅನುಗುಣವಾಗಿ ಪರಿಷ್ಕರಿಸಬೇಕು.
- ಪಾರದರ್ಶಕ ಹಾಗೂ ನ್ಯಾಯ ಸಮ್ಮತ inter district Transform Policy ಜಾರಿಗೆ ತರಬೇಕು.
- CHOಗಳ ಸೇವೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಪರಿಗಣಿಸಿ ಸೂಕ್ತ ವೇತನ ಪರಿಷ್ಕರಣೆ ಮಾಡಬೇಕು.
- cHOಗಳ ಅನುಭವ ಮತ್ತು ಪರಿಣತಿಯನ್ನು ಬಳಸಿಕೊಂಡು ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಬಲಪಡಿಸಬೇಕು.
- CHO ಪವಾಂತರ ಪ್ರಕ್ರಿಯೆಯನ್ನು ಮುಷ್ಕರ ಪ್ರತಿಭಟನ ಕಾರ್ಯಕ್ರಮಗಳು ಅವರಿಗೆ ಮುಂದೊಡಬೇಕು ಸ್ಥಳಾಂತರದೇಶ ಅಥವಾ ಪ್ರಕ್ರಿಯೆ ಕೈಗೊಳ್ಳಬಾರದು.
ಸಂಘವು ತನ್ನ ಬೇಡಿಕೆಗಳನ್ನು ಶಾಂತಿಯುತ ಹಾಗೂ ಪ್ರಜಾಪ್ರಭುತ್ವದ ನೀತಿಯಲ್ಲಿ ಸರ್ಕಾರದ ಗಮನಕ್ಕೆ ತರಲಿದೆ. CHOಗಳ ಸೇವಾ ಭದ್ರತೆ ವೃತ್ತಿ ಪ್ರಗತಿ ಉದ್ಯೋಗ ಬುದ್ಧತೆ ಹಾಗೂ ಸ್ಥಳಾಂತರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಸರ್ಕಾರಕ್ಕ ಎಚ್ಚರಿಕೆನು ಸಹ ನೀಡಿದರು.
ಇನ್ನು ಪ್ರತಿಭಟನಾ ಸ್ಥಳಕ್ಕೆ ಸಮುದಾಯ ಆರೋಗ್ಯ ಎನ್ ಹೆಚ್ ಎಂ ನ ನಿರ್ದೇಶಕರಾದ ಅಕ್ರಂ ಪಾಷಾ ಅವರು ಸಹ ಪ್ರತಿಭಟ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕಾರ ಮಾಡಿ ಮಾತನಾಡಿದರು. ನಿಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಸಂಘಟನೆಯ ಪದಾಧಿಕಾರಿಗಳನ್ನು ಸಹ ಸಭೆಯಲ್ಲಿ ಕೂರಿಸಿಕೊಂಡು ಸಚಿವರ ಹಾಗೂ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರಲಾಗುತ್ತದೆ ಆ ಬಗ್ಗೆ ಸಂಪೂರ್ಣವಾಗಿ ನಿಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ ಎಂದು ಪ್ರತಿಭಟನೆ ನಿರತರ ಬೇಡಿಕೆಗಳ ಬಗ್ಗೆ ಸೂಕ್ತವಾಗಿ ಚರ್ಚೆ ಮಾಡಿ ಅವರ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷರಾದ ಮಾನಸಯ್ಯ ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ನಾಯಕ ಬಣಕಾರ ಖಜಾಂಚಿ ಗಿಡ್ಡೇಗೌಡ ಸೇರಿದಂತೆ ಸಿ ಎಚ್ ಓ ಗಳು ಹೊರಗುತ್ತಿಗೆ ನೌಕರರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.