ಬೆಂಗಳೂರು : ಬಿಟಿಎಂ ವಿಧಾನಸಭಾ ಕ್ಷೇತ್ರದ ಆಡುಗೋಡಿಯ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಸರ್ಕಾರಿ ಮಾದರಿ ಶಾಲೆ ಎಂಎ ಆರ್ ಪಿ ಗಣೇಶ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ನೋಟ್ ಪುಸ್ತಕ ಸಮವಸ್ತ್ರ ಹಾಗೂ ಬ್ಯಾಗ್ ಅನ್ನು ವಿತರಣೆ ಮಾಡಲಾಯಿತು.
ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರ ಸಹಕಾರದೊಂದಿಗೆ ಕ್ಷೇತ್ರದ ಸರ್ಕಾರಿ ಮಾದರಿ ಶಾಲೆಯಲ್ಲಿ ಸುಮಾರು ಕ್ಷೇತ್ರದ 15 ಶಾಲೆಗಳನ್ನು ಗುರುತಿಸಿದ್ದು ಅದರಲ್ಲಿ 3000 ನೋಟ್ ಪುಸ್ತಕಗಳು ಸಮವಸ್ತ್ರ ಹಾಗೂ ಶಾಲಾ ಬ್ಯಾಗ್ ಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಪಾಲಿಕೆಯ ಮಾಜಿ ಸದಸ್ಯ ಆಡುಗೋಡಿ ಬಿ ಮೋಹನ್ ಅವರು ತಿಳಿಸಿದರು.
ಮೊದಲನೆಯ ಹಂತವಾಗಿ ಕೋರಮಂಗಲ ವಿಭಾಗದ ಶಾಲೆಗಳಿಗೆ ಒಂದರಿಂದ 9ನೇ ತರಗತಿಯ ಮಕ್ಕಳಿಗೆ ಸಂಪೂರ್ಣವಾಗಿ ಪುಸ್ತಕ ಸಮವಸ್ತ್ರ ಬ್ಯಾಗು ವಿತರಿಸಲಾಗುತ್ತದೆ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳಿದ ಎಲ್ಲಾ ಶಾಲೆಗಳಿಗೂ ಶಾಲಾ ಮಕ್ಕಳ ಕಿಟ್ಟು ಗಳನ್ನು ವಿತರಿಸಲಾಗುತ್ತದೆ ಎಂದು ಸಮಿತಿಯ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಕರೆನ್ಸಿಗಳು ಸೇರಿದಂತೆ ಪದಾಧಿಕಾರಿಗಳು ತಿಳಿಸಿದರು.
ಪ್ರತಿವರ್ಷವೂ ಸಹ ಶಾಲಾ ಮಕ್ಕಳಿಗೆ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಕಿಟ್ಟಿ ಗಳನ್ನು ನೀಡುತ್ತಾ ಬರಲಾಗುತ್ತದೆ ಹೀಗಾಗಿ ಈ ಬಾರಿಯೂ ಸಹ ಕ್ಷೇತ್ರದ 15 ಶಾಲೆಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ನೀಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದು ಸಮಿತಿಯವರು ತಿಳಿಸಿದರು.
ಉಚಿತ ನೋಟ್ಬುಕು ವಿತರಣೆ ಕಾರ್ಯಕ್ರಮದಲ್ಲಿ ಸೇವಾ ಸಮಿತಿಯವರಾದ ಕೋದಂಡರಾಮ ರೆಡ್ಡಿ,ಶಿವಕುಮಾರಾಯ್ಯ, ಕೆಕೆ ಪ್ರಕಾಶ್, ಉಮಾಶಂಕರ್, ಸ್ವಣ್ಣಪ್ಪ,ಗೋಪಾಲಗೌಡ, ತ್ಯಾಗರಾಜು ಸೇರಿದಂತೆ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಶಾಲೆಯ ಸಿಬ್ಬಂದಿ ವರ್ಗ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮಾಜಿ ಕಾರ್ಪೊರೇಟರ್ ಮಂಜುಳಾ ಸಂಪತ್, ಮೋಹನ್ ಅವರ ಧರ್ಮಪತ್ನಿ ಸೇರಿದಂತೆ ಕಾಂಗ್ರೆಸ್ನ ಮುಖಂಡರು ಕಾರ್ಯಕರ್ತರು ಇದೆ ವೇಳೆ ಉಪಸ್ಥಿತರಿದ್ದರು.