ದಾವಣಗೆರೆ: ರಾಜ್ಯದಲ್ಲಿನ ಛಾಯಾಗ್ರಾಹಕರ ಉಳಿವಿಗಾಗಿ ಮತ್ತು ಭವಿಷ್ಯದ ಭರವಸೆಗಾಗಿ ಅವರ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಒತ್ತಾಯಿಸಿದರು. 
ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ಫೋಟೋಗ್ರಾಫರ್ಸ್ ಅಂಡ್ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್. ದಾವಣಗೆರೆ ತಾಲೂಕು ಫೋಟೋಗ್ರಾಫರ್ಸ್ ಆಂಡ್ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ಆಯೋಜಿಸಿದ್ದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಛಾಯಾಗ್ರಾಹಕ 2ನೇ ರಾಜ್ಯ. ಸಮಾವೇಶದಲ್ಲಿ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.
ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಛಾಯಾಗ್ರಾಹಕರು ತೆಗೆಯುವ ಫೋಟೋಗಳು ಸದಾ ಕಾಲ ಜೀವಂತ, ತಾವು ನೋವುಂಡರೂ, ಜನರಿಗೆ ಸ್ಟೈಲ್ ಎನ್ನುತ್ತಾ ಪೊಟೋ ಸೆರೆ ಹಿಡಿದು ಛಾಯಾಗ್ರಾಹಕರು ನೆನಪಿನ ಬುತ್ತಿಯನ್ನು ಪೀಳಿಗೆ ಯಿಂದ ಪೀಳಿಗೆಗೆ ತಲುಪಿಸುವಲ್ಲೂ ಪ್ರಮುಖ ಪಾತ್ರವಹಿಸುತ್ತಾರೆ ಎಂದರು.
ಛಾಯಾಗ್ರಾಹಕರ ಸಮಸ್ಯೆಗಳನ್ನು ಸರ್ಕಾರ, ನಿವಾರಿಸುವ ಕೆಲಸ ಮಾಡಬೇಕಿದೆ. ದೇಶಕ್ಕೆ ಅನೇಕ ದಾರ್ಶನಿಕರ ಹೋರಾಟದಿಂದ ಸ್ವಾತಂತ್ರ್ಯ ಲಭಿಸಿ 80 ವರ್ಷವಾಗಿದೆ. ಒಂದು ಘಟನೆ ಬಗ್ಗೆ ದಿನಗಟ್ಟಲೇ ಉಪನ್ಯಾಸ ಮಾಡಿದರೆ ಅದು ಅರ್ಥವಾಗಲ್ಲ ಆದರೆ, ಅದಕ್ಕೆ ಸಂಬಂಧಿಸಿದ ಒಂದು ಫೋಟೋ ಇಡೀ ಘಟನೆ, ಇತಿಹಾಸವನ್ನೇ ವಿವರಿಸುತ್ತದೆ ಎಂದು ಬಸವಪ್ರಭು ಶ್ರೀ ತಿಳಿಸಿದರು.
ಅವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಫೋಟೋಗ್ರಾಫರ್ಸ್ ಸೇವೆ ಅನನ್ಯ.ತಾವು ಕಷ್ಟದಲ್ಲಿದ್ದರೂ ತಮ್ಮ ವೃತ್ತಿಯಲ್ಲಿ ಉತ್ತಮ ಫೋಟೋ ತೆಗೆಯುವ ಮೂಲಕ ಮಾದರಿಯಾಗಿದ್ದಾರೆ.
ಇನ್ನೊಬ್ಬರಿಗೆ ಖುಷಿ ಕೊಡುವ ಮೂಲಕ ನಿಸ್ವಾರ್ಥವಾಗಿ ಸೇವೆ ಮಾಡುತ್ತಾ ಬಂದಿದ್ದಾರೆ. ಇಂತಹ ಫೋಟೋ, ವಿಡಿಯೋ ಗ್ರಾಫರ್ಸ್‌ಗಳ ಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕು. ಸೂರು. ಆರೋಗ್ಯ, ಶಿಕ್ಷಣ, ಆರ್ಥಿಕ ನೆರವು ಹೀಗೆ ಎಲ್ಲ ರೀತಿಯಲ್ಲೂ ಸರ್ಕಾರ ಛಾಯಾಗ್ರಾಹಕರಿಗೆ ಪ್ರೋತ್ಸಾಹಿಸಲಿ ಎಂದರು.
ನ್ಯಾಷನಲ್ ಮೀಡಿಯಾ ಕೌನ್ಸಿಲ್ ನಿರ್ದೇಶಕ , ಸಂಸ್ಥೆಯ ಮಾಧ್ಯಮ ಸಲಹೆಗಾರ ಮಾಲತೇಶ ಅರಸ್ ಮಾತನಾಡಿ, ಪಿಎಂ-ಸಿಎಂ ಯಾವುದೇ ರಾಜಕೀಯ ಪ್ರತಿನಿಧಿಗಳಿರಲಿ, ಅಂತಹವರ ಕೆಲಸ ಕಾರ್ಯ ಎಲ್ಲರಿಗೂ ಕಾಣುತ್ತಿದ್ದರೆ ಅದಕ್ಕೆ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಕಾರಣ. ರಾಜ್ಯ ಸರ್ಕಾರ ಅನೇಕ ನಿಗಮ ಮಂಡಳಿ ಮಾಡಿ, ಅಧಿಕೃತ ಜಾರಿ ಮಾಡಿದೆ. ಕಳೆದ 4-5 ವರ್ಷದಿಂದ ರಾಜ್ಯದ ಫೋಟೋಗ್ರಾಫರ್ಸ್ ಗಳಿಗೆ ನಿಗಮ ಅಥವಾ ಮಂಡಳಿ ಮಾಡುವಂತೆ ಮನವಿ ಮಾಡಿದ್ದೇವೆ. ಈ ಬಾರಿಯ ಅಧಿವೇಶನದಲ್ಲೇ ಕಡ್ಡಾಯವಾಗಿ ರಾಜ್ಯದ ಫೊಟೋ ಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಗಳಿಗೆ ಛಾಯಾಗ್ರಾಹಕರ ಕಲ್ಯಾಣ ಮಂಡಳಿ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಸ್ಥೆ ಮನವಿ ಸ್ವೀಕರಿಸಿದ ಸಚಿವ ಕೆ.ಎಸ್. ಬಸವಂತಪ್ಪ ಫೋಟೋಗ್ರಾಫರ್ಸ್, ವೀಡಿಯೋ ಗ್ರಾಫರ್ಸ್‌ಗೆ ಏನು ಅವಶ್ಯಕತೆ ಇದೆಯೋ ಅಂತಹದ್ದನ್ನು ತಲುಪಿಸಲು ಸದನದಲ್ಲಿ ಮಾತನಾಡುವೆ.ನಿಮ್ಮಬೇಡಿಕೆಯ ವಿಚಾರವಾಗಿ ಸದನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ. ಸರ್ಕಾರದಿಂದ ಬೇಡಿಕೆಗಳನ್ನು ಈಡೇರಿಸುವ ವಿಚಾರವಾಗಿ ಸರ್ಕಾರದ ಮೇಲೆ ಸಂಪೂರ್ಣ ಒತ್ತಡ ಹೇರಲು ಪ್ರಯತ್ನಿಸುವ ಎಂದು ಭರವಸೆ ನೀಡಿದರು.
ಶಾಸಕ ಬಿ.ಪಿ.ಹರೀಶ ಮಾತನಾಡಿ, ಬೇಡಿಕೆಗಳನ್ನು ಸರ್ಕಾರದ ಮುಂದಿ ಡಲು ಸಂಘಟನೆ ಮುಖ್ಯ. ಅವಶ್ಯಕತೆ ಇರು ವಂತಹದ್ದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಸಂಸ್ಥಾಪಕ ಅಧ್ಯಕ್ಷ ದೇವನಗರಿ ಎಂ.ಮನು, ಜಿಲ್ಲಾಧ್ಯಕ್ಷ ಬಿ.ಮಂಜುನಾಥ, ಕಸಾವ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ವರ್ತಕ ಎಂ.ವಿ.ಜಯಪ್ರಕಾಶ ಮಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಜಿ.ಎಸ್.ಶ್ಯಾಮ್ ಮಾಯಕೊಂಡ, ಗಿರೀಶ ಎಸ್ ದೇವರಮನಿ, ಕೆ.ಟಿ. ಗೋಪಾಲಗೌಡ, ಅನಿಲ ಕುಮಾರ ರಾಯ್ಕರ್, ಶಾಂತಯ್ಯ ಪರಡಿಮಠ, ಸಂತೋಷ ದೊಡ್ಡಮನೆ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ, ಡಾ.ಜಿ.ಎಸ್.ಉಮೇಶ, ಕೋಟ್ಯಾಳ ಸಿದ್ದೇಶ, ಎಂ.ಬಿ. ಚಂದ್ರಮೌಳಿ, ರಾಜಶೇಖರ ಕೊಂಡಜ್ಜಿ,ಡಿ.ರಮೇಶ.ಕೆ.ದೇವೇಂದ್ರ ಪ್ರ. ಡಿ.ರಂಗನಾಥ, ಎಚ್.ವೈ.ಹನುಮಂತ.
ಶರ್ಮ ಕಟ್ಟೂರು. ಮೌನೇಶ್ವರ, ತಿಮ್ಮೇಶ, ಅವಿನಾಶ, ಬಿ.ಎನ್.ವೀರೇಶ ಕುಮಾರ, ಆರ್. ಆರ್.ತಿಪ್ಪೇಸ್ವಾಮಿ, ನಟರಾಜ, ಗಣೇಶ, ಮಲ್ಲೇಶ ಪಟೇಲ್ ಇದ್ದರು. ಚಿತ್ರಕಲಾ ವಿಜೇತರಿಗೆ ಬಹುಮಾನ, ಛಾಯಾಗ್ರಹಣ ಸಾಧಕರಿಗೆ, ವಿವಿಧ ಕ್ಷೇತ್ರದ ಸಾಧಕರಿಗೆ ಕರ್ನಾಟಕ ಸಮಾಜ ಸೇವಾರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸುಮ ಕಲ್ಲೇಶ ಪ್ರಾರ್ಥಿಸಿದರೆ ಸ್ವಾಗತಿಸಿದರೆ, ಸುಕನ್ಯ ಕಾರ್ಯಕ್ರಮ ನಿರೂಪಿಸಿದರು.
ಪೊಟೋ..
ವಿಶ್ವ ಛಾಯಾಗ್ರಹಣ ದಿನಾಚರಣೆ, 2ನೇ ರಾಜ್ಯ ಸಮಾವೇಶ ಕಾರ್ಯಕ್ರಮದಲ್ಲಿ ವಿಡಿಯೋಗ್ರಾಫರ್ಸ್ ಗಳಿಗೆ ಛಾಯಾಗ್ರಾಹಕರ ಕಲ್ಯಾಣ ಮಂಡಳಿ ಸ್ಥಾಪಿಸಲು ಸಚಿವ ಕೆ.ಎಸ್.ಬಸವಂತಪ್ಪರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಮಾಲತೇಶ್ ಅರಸ್ ಅವರಿಗೆ ಕರ್ನಾಟಕ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.