LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೂಡಾ ನೂತನ ಅಧ್ಯಕ್ಷ ಮಧುಸೂದನ್ ಅವರನ್ನು ಅಭಿನಂದಿಸಿದ ಸಚಿವ ಮಧು ಬಂಗಾರಪ್ಪ

ಬೆಂಗಳೂರು : ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ನೂತನ ಅಧ್ಯಕ್ಷರಾದ ಸಿ.ಜಿ. ಮಧುಸೂದನ್ ಅವರು ಇಂದು ಬೆಂಗಳೂರಿನ ಗೃಹ ಕಚೇರಿಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.news_1791657138_0_606.webp

ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಸೂಡಾ ನೂತನ ಅಧ್ಯಕ್ಷ ಮಧುಸೂದನ್ ಅವರಿಗೆ ಶುಭ ಹಾರೈಸಿ, ಅವರ ನಾಯಕತ್ವದಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ಅವಳಿ ನಗರಗಳು ಮೂಲಸೌಕರ್ಯ, ಸುಸಂಘಟಿತ ನಗರ ಯೋಜನೆ ಹಾಗೂ ಸಮಗ್ರ ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೇರಲಿ ಎಂದು ಆಶಿಸಿದರು.

ಮಧುಸೂದನ್ ಅವರು ಸಚಿವರನ್ನು ಸನ್ಮಾನಿಸಲು ಮುಂದಾದಾಗ, “ನೀವೆಲ್ಲ ಯುವಕರು, ರಾಜಕೀಯದಲ್ಲಿ ಇನ್ನಷ್ಟು ಬೆಳೆಯಬೇಕು. ಈ ಸನ್ಮಾನ ನನಗಲ್ಲ, ನಿಮಗೆ ಸಲ್ಲಬೇಕು” ಎಂದು ಪ್ರೀತಿಯಿಂದ ಹೇಳಿದ ಸಚಿವರು, ಮಧುಸೂದನ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಯುವ ನಾಯಕತ್ವಕ್ಕೆ ಪ್ರೋತ್ಸಾಹ ನೀಡುವಲ್ಲಿ ತಾವು ಸದಾ ಮುಂದೆ ಎಂಬುದನ್ನು ಪ್ರಚುರಪಡಿಸಿದರು.

2002ರಲ್ಲಿ ಎನ್‌ಎಸ್‌ಯುಐ ಸಂಘಟನೆಯ ಮೂಲಕ ರಾಜಕೀಯದಲ್ಲಿ ಸಕ್ರಿಯರಾದ ಸಿ.ಜಿ. ಮಧುಸೂದನ್ ಅವರು, 2010ರಲ್ಲಿ ಶಿವಮೊಗ್ಗ ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಸೂಡಾ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅವರ ರಾಜಕೀಯ ಪಯಣದ ಮಹತ್ವದ ಘಟ್ಟವಾಗಿದೆ.

ಬಳಿಕ ಮಧುಸೂದನ್ ಹಾಗೂ ಶಿವಮೊಗ್ಗದಿಂದ ಆಗಮಿಸಿದ್ದ ಮುಖಂಡರೊಂದಿಗೆ ಉಪಾಹಾರ ಸೇವಿಸುತ್ತಾ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಯುವ ನಾಯಕರು ಸಂಘಟಿತವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.news_1791657142_3_894.webp

“ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎಷ್ಟು ಗಟ್ಟಿಯಾಗಿ ಕಟ್ಟಿಬೆಳೆಸುತ್ತೀರೋ, ಅಷ್ಟು ಪಕ್ಷದ ಶಕ್ತಿ ವೃದ್ಧಿಯಾಗುತ್ತದೆ. ರಾಹುಲ್ ಗಾಂಧಿ ಅವರ ಎಸ್‌ಐಆರ್‌ (ವಿಶೇಷ ತೀವ್ರ ಪರಿಷ್ಕರಣೆ) ವಿರುದ್ಧದ ಹೋರಾಟಕ್ಕೆ ಯುವಕರು ಶಕ್ತಿ ತುಂಬಬೇಕು. ಯುವಕರ ಕೈಗೆ ಅಧಿಕಾರ ನೀಡಬೇಕು ಎಂಬುದು ರಾಹುಲ್ ಗಾಂಧಿ ಅವರ ಆಶಯ. ಆ ಆಶಯಕ್ಕೆ ತಕ್ಕಂತೆ ಯುವ ನಾಯಕರು ನಡೆದುಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಶ್ ಬಾನು, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಆರ್. ಪ್ರಸನ್ನ ಕುಮಾರ್, ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ಚೇತನ್ ಗೌಡ, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ  ಶ್ರೀ ಹರ್ಷಿತ್ ಗೌಡ, ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಶ್ರೀಜಿತ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಯುವ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೂಡಾ ನೂತನ ಅಧ್ಯಕ್ಷ ಮಧುಸೂದನ್ ಅವರನ್ನು ಅಭಿನಂದಿಸಿದ ಸಚಿವ ಮಧು ಬಂಗಾರಪ್ಪಮೋದಿ ಹೆಸರಿನ ರಾಜಕೀಯ ಸರಕು ಖಾಲಿ; ಈಗ SIR ಮೂಲಕ ಮತದಾರರ ಹೆಸರು ಡಿಲೀಟ್ ಮಾಡುವ ಹುನ್ನಾರ: ಸಚಿವ ಮಧು ಬಂಗಾರಪ್ಪ ಆರೋಪಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ; ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಭಾನುವಾರ “ಮಾಣಿಕ್ಯ ಸಂಭ್ರಮ ೨೦೨೬” ಪ್ರಶಸ್ತಿ ಪ್ರದಾನವೋಟ್ ಚೋರಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜಿಗ್ನೇಶ್ ಬಾಗಿ? ರಾಜೀನಾಮೆ ಬಂಧನಕ್ಕೆ ಆಗ್ರಹದಿನೇಶ್ ಗುಂಡೂರಾವ್ ಜನ್ಮದಿನ: ಅಜ್ಮೀರ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಬೃಹತ್ ‘ಸೇವಾ ಜ್ಯೋತಿ ಯಾತ್ರೆ’- ಬೈಕ್ ರಾಲಿಗೆ ಚಾಲನೆ – ‘ವಿಕಸಿತ ಭಾರತ – ಸಂಕಲ್ಪ ಸಭೆ’ ಯಶಸ್ವಿಸಾರ್ವಜನಿಕ ಸಾರಿಗೆಯಲ್ಲಿ ನಾವೀನ್ಯತೆ: ಬಿಎಂಟಿಸಿಗೆ ‘ಚೇಂಜ್ ಮೇಕರ್ ಅವಾರ್ಡ್ಹೊಂಡಾ ಕಾರ್ಸ್ ಇಂಡಿಯಾದಿಂದ ಹೊಸ ಹೊಂಡಾ ಎಲಿವೇಟ್ ಬಿಡುಗಡೆಸ್ಟಿಂಗ್ ಬಗ್ಗೆ ಯಾರಿಗೆ ಜ್ಞಾನ ಜಾಸ್ತಿ ಅನ್ನೋದು ಜಗತ್ತಿಗೆ ಗೊತ್ತಿದೆ - ನಿಖಿಲ್ ಕುಮಾರಸ್ವಾಮಿ ಟಾಂಗ್