LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರಮ ಇಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲ.

ಬೆಂಗಳೂರು: ಶ್ರಮ ಇಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲ. ಮಹಾತ್ಮ ಗಾಂಧಿಜೀ ಮತ್ತು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ರವರು ಕಾರ್ಮಿಕರ ಕುರಿತು ಅಪಾರ ಒಲುವು ಹೊಂದಿದ್ದರು  ಕಾರ್ಮಿಕರು ದೇಶದ ಸಂಪತ್ತು ಎಂದು ರಾಜ್ಯಾಧ್ಯಕ್ಷರಾದ ಬಿ.ದೇವರಾಜ್ ತಿಳಿಸಿದರು.news_1791194934_1_241.webp

ರಾಜಾಜಿನಗರ, ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು  ಅಸಂಘಟಿತ ಕಾರ್ಮಿಕರ ಒಕ್ಕೂಟದ ರಾಜ್ಯಮಟ್ಟದ ಕಾರ್ಯಗಾರ ಮತ್ತು ನ್ಯಾಷನಲ್ ಟ್ರೇಡ್ ಯೂನಿಯನ್ ಸಹಕಾರದೊಂದಿಗೆ ಸಭೆ ನಡೆಸಲಾಯಿತು. ಅದರಲ್ಲಿ ಭಾಗವಹಿಸಿ ಮಾತನಾಡಿ, ಬೆಂಗಳೂರು ನಗರದಲ್ಲಿ ಅಂದಾಜು 50ಲಕ್ಷ ಮನೆಗಳು ಇದೆ ಇದನ್ನ ಇಂಜನಿಯರ್ ಪ್ಲಾನ್ ಮಾಡಿರಬಹುದು ಆದರೆ ಮನೆ ಕಟ್ಟಲು ಕಾರ್ಮಿಕರು ಬೇಕೇ ಬೇಕು. ಕಾರ್ಮಿಕರು ಸಂಘಟಿತ ಹೋರಾಟ ಮೂಲಕ ತಮ್ಮ ಹಕ್ಕುಗಳನ್ನು ಪಡೆಯುತ್ತಾರೆ. ಅದರೆ ಅಸಂಘಟಿತ ಕಾರ್ಮಿಕ ಸ್ಥಿತಿ ಶೋಚನಿಯ, ಇವರ ಹೋರಾಟದಿಂದ ಲೇಬರ್ ಕಾರ್ಡ್, ವಿದ್ಯಾರ್ಥಿ ವೇತನ, ಸಾಲ ಸೌಲಭ್ಯ ವಿಮೆ ಇನ್ನಿತರೆ ಸೌಲಭ್ಯ ಲಭಿಸುವಂತಾಯಿತು‌ ಎಂದರು.

ಕಾರ್ಮಿಕರಿಗೆ ದೇವರಾಜ್ ಅರಸು ವಸತಿ ನಿಗಮ, ಗೃಹ ಮಂಡಳಿ, ಕೊಳಗೇರಿ ನಿರ್ಮೂಲನ ಮಂಡಳಿಯಿಂದ ಕಾರ್ಮಿಕರಿಗೆ ವಸತಿ ಸೌಲಭ್ಯ ನೀಡಬೇಕು. ಕಾರ್ಮಿಕರರಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯ ಸಕಾಲಕ್ಕೆ ಸಿಗಬೇಕು ಎಂದು ಹೇಳಿದರು.

ಆರಲ್ ಮೂರ್ತಿಯವರು ಮಾತನಾಡಿ, ರಾಜ್ಯ ಸರ್ಕಾರದ ಕಾರ್ಮಿಕರ ಕಲ್ಯಾಣ ಇಲಾಖೆ ಯೋಜನೆಗಳು ಮತ್ತು ಕಾರ್ಮಿಕರ ಕಾನೂನು ಎಲ್ಲ ಕಾರ್ಮಿಕರಿಗೆ ಅರಿವು ಇರಬೇಕು ಎಂದು ಕಳೆದ 15ವರ್ಷಗಳಿಂದ ನಮ್ಮ ಸಂಘಟನೆ ರಾಜ್ಯಾದ್ಯಂತ ಹೋರಾಟ ಮಾಡುತ್ತಿದೆ. ಪ್ರತಿಯೊಬ್ಬ ಕಾರ್ಮಿಕ ದೇಶದ ಸಂಪತ್ತು ಅವನ ಜೀವನ ಹಸನಾಗಬೇಕು ಎಂಬ ನಿರಂತರ ಕಾಳಜಿ.

ಬಳ್ಳಾರಿಯಲ್ಲಿ  ಇ.ಎಸ್.ಐ. ಆಸ್ಪತ್ರೆ ನಿರ್ಮಾಣದಲ್ಲಿ ನಮ್ಮ ಸಂಘಟನೆ ಪ್ರಮುಖ ಪಾತ್ರವಾಗಿದೆ. ತುಮಕೂರುನಲ್ಲಿ 1ಲಕ್ಷ 30ಸಾವಿರ ಕಾರ್ಮಿಕರು ಇದ್ದಾರೆ ಅವರ ಅನುಕೂಲಕ್ಕೆ 5ಎಕರೆ ಪ್ರದೇಶದಲ್ಲಿ  ಕಾರ್ಮಿಕರ ಭವನ ಮತ್ತುಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ದೂರಕಿದೆ.

ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಮತ್ತು ಕಾರ್ಮಿಕರ ಕಾನೂನು ಮತ್ತು ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಶಾಮಣ್ಣ ರೆಡ್ಡಿ* ರವರು ಮನುಷ್ಯ ಪರಿವರ್ತನೆಯಾಗಬೇಕು ಆಗ ಸಮಾಜ ಬದಲಾವಣೆಯಾಗುತ್ತದೆ. ಕಟ್ಟಡ ಮತ್ತು ಬೃಹತ್ ಅಪಾರ್ಟ್ ಮೆಂಟ್ ಮನೆಗಳನ್ನು ಕಾರ್ಮಿಕರು ಕಟ್ಟುತ್ತಾರೆ ಅದರೆ ಉದ್ಘಾಟನೆ ಸಂದರ್ಭದಲ್ಲಿ ಅವರನ್ನ ನೆನಪು ಮಾಡಿಕೊಳ್ಳುವುದಿಲ್ಲ. ಮೊದಲು ಕಟ್ಟಡ ಕಾರ್ಮಿಕರಿಗೆ ಗೌರವ ಸಲ್ಲಬೇಕು ಕಾರ್ಮಿಕರನ್ನ ಗುರುತಿಸುವ ಕಾರ್ಯವಾಗಬೇಕು.  ಪ್ರತಿ ಕಾರ್ಮಿಕರಿಗೆ ಕನಿಷ್ಟ ಕೂಲಿ ಸಿಗಬೇಕು ಎಂದು ಹೇಳಿದರು.

ರಾಜ್ಯಾಧ್ಯಕ್ಷರಾದ ಬಿ.ದೇವರಾಜ್, ಕಾನೂನು ಸಲಹೆಗಾರರಾದ ಆರ್.ಎಲ್.ಮೂರ್ತಿ, ಎನ್.ಎಫ್ ಐ.ಟಿ.ಯು ರಾಜ್ಯಾಧ್ಯಕ್ಷ ವಿ.ವೆಂಕಟೇಶ್ ಮತ್ತು ರಾಷ್ಟ್ರೀಯ ಸಂಘದ ಕಾರ್ಯಾಧ್ಯಕ್ಷರಾದ ಶಾಮಣ್ಣರೆಡ್ಡಿ, ವಿಶ್ವಕರ್ಮ ಮಹಾ ಒಕ್ಕೂಟ ರಾಜ್ಯಾಧ್ಯಕ್ಷರಾದ ವಿಜಯಕುಮಾರ್ ಪತ್ತಾರ್, ರಾಘವ್  ರವರು ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು  ಭಾಗವಹಿಸಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಥಳೀಯ ಸಮಸ್ಯೆಗಳಿಗೆ ಸಚಿವ ಶಿವಲಿಂಗೇಗೌಡ ಅವರಿಂದ ಸ್ಥಳದಲ್ಲೇ ಪರಿಹಾರದ ಭರವಸೆಕೇಂದ್ರ ಸರ್ಕಾರ ಆದಷ್ಟು ಶೀಘ್ರವಾಗಿ ಬರ ಪರಿಹಾರ ಬಿಡುಗಡೆ ಮಾಡಲಿ: ಸಚಿವ ಕೆ. ಎಂ. ಶಿವಲಿಂಗೇಗೌಡ ಆಗ್ರಹಗ್ರಾಮೀಣ ಸೊಗಡು ಹಾಗೂ ಸಂಸ್ಕೃತಿಯ ಪುನರುಜ್ಜೀವನಕ್ಕೆ ಸಚಿವ ಕೆ. ಎಂ. ಶಿವಲಿಂಗೇಗೌಡ ಕರೆ₹2 ಕೋಟಿ ಅನುದಾನಲ್ಲಿ ತಾಳಗುಪ್ಪ ಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಪ್ರಜಾಸೇವೆ ಆಂದೋಲನ: ಸಚಿವ ಮಧು ಬಂಗಾರಪ್ಪರೈತನ ಕಣ್ಣೀರ ಶಾಪ ಸರ್ಕಾರಕ್ಕೆ ತಟ್ಟುತ್ತೆ; ರೈತನನ್ನು ಎದುರು ಹಾಕಿಕೊಂಡ ಯಾವ ಸರ್ಕಾರವೂ ಉಳಿದಿಲ್ಲಯುವಕರಲ್ಲಿ  ನಾಯಕತ್ವ ಗುಣ ಮತ್ತು ಸಂಘಟನೆ ಮಾಡಬೇಕುಶ್ರಮ ಇಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲ.ಸಿಂಗಪುರದಲ್ಲಿ  ನಾರ್ಡಿಕ್, ತಕ್ರಾಲ್, ಜಾಪ್ಫಾ ಸಹಿತ ಹಲವು ಕಂಪನಿ ಜತೆ ಮಾತುಕತೆಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ: ಬಬಲೇಶ್ವರ ತಾ.ನ ನಾಲ್ಕು ಗ್ರಾಮಗಳಿಗೆ ತುರ್ತು ಪರಿಹಾರಕ್ಕೆ ಪತ್ರ