LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಸ್ತೆ ಅಗಲೀಕರಣ ಕಾಮಗಾರಿಗೆ ವೇಗ ನೀಡಿ :ರಮೇಶ್ ಸೂಚನೆ

ಬೆಂಗಳೂರು: ಗುಂಜೂರು–ದೊಮ್ಮಸಂದ್ರ–ವರ್ತೂರು ರಸ್ತೆ ಅಗಲೀಕರಣ ಕಾಮಗಾರಿಗೆ ವೇಗ ನೀಡಿ ಎಂದುಬೆಂಗಳೂರು ಪೂರ್ವ ನಗರ ಪಾಲಿಕೆ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ತಿಳಿಸಿದರು.news_1791445413_1_448.webp

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಗುಂಜೂರು–ದೊಮ್ಮಸಂದ್ರ–ವರ್ತೂರು ರಸ್ತೆ ಅಗಲೀಕರಣ ಕಾಮಗಾರಿಯ ಭೂಸ್ವಾಧೀನ, ಟಿಡಿಆರ್, ರಸ್ತೆ ನಿರ್ಮಾಣ, ಕಾಮಗಾರಿ ತ್ವರಿತಗೊಳಿಸಲು ವಿಶೇಷ ಕಾರ್ಯಪಡೆ ರಚನೆ, ಕಾರ್ಯಪಡೆಯ ಪ್ರಮುಖ ಉದ್ದೇಶಗಳು ಮತ್ತು ಜವಾಬ್ದಾರಿಗಳು, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿಯ ಮೇಲ್ವಿಚಾರಣೆ ಕುರಿತು ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಎಸ್‌ಎಚ್–35ರ ಭಾಗವಾಗಿರುವ ದೊಮ್ಮಸಂದ್ರ–ಗುಂಜೂರು ವರೆಗಿನ 2 ಕಿ.ಮೀ. ಹಾಗೂ ಗುಂಜೂರು–ವರ್ತೂರು ವರೆಗಿನ 1.9 ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆರ್‌ಎಂಪಿ–2015ರ ಅನ್ವಯ ರಸ್ತೆಯನ್ನು 50 ಮೀಟರ್ ಅಗಲೀಕರಿಸುವ ಗುರಿ ಹೊಂದಲಾಗಿದೆ. ಸಾರ್ವಜನಿಕರ ಸುಗಮ ಸಂಚಾರ, ರಸ್ತೆ ಸುರಕ್ಷತೆ ಹಾಗೂ ಉತ್ತಮ ಮೂಲಸೌಕರ್ಯಕ್ಕೆ ಆದ್ಯತೆ ನೀಡಿ, ಬಾಕಿ ಇರುವ ಭೂಸ್ವಾಧೀನ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿ ಕಾಮಗಾರಿಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ಆಯುಕ್ತರು ನಿರ್ದೇಶನ ನೀಡಿದರು. 

*ನಾಲ್ಕು ಪಥದ ರಸ್ತೆ ಪೂರ್ಣಗೊಳಿಸಲು ಸೂಚನೆ*

ದೊಮ್ಮಸಂದ್ರ ಭಾಗದ ಕಾಮಗಾರಿ ಪೂರ್ಣಗೊಂಡಿದ್ದು, ಗುಂಜೂರು–ದೊಮ್ಮಸಂದ್ರ ರಸ್ತೆಯ 2 ಕಿ.ಮೀ. ಪೈಕಿ ಸುಮಾರು 1.4 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಉಳಿದ 600 ಮೀಟರ್ ಪ್ರದೇಶದಲ್ಲಿ ಭೂಸ್ವಾಧೀನ ಹಾಗೂ ಟಿಡಿಆರ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದ ಕಾಮಗಾರಿ ಬಾಕಿ ಉಳಿದಿದೆ. ಆರು ಪಥದ ರಸ್ತೆಗೆ ಕಾಯದೆ, ಲಭ್ಯವಿರುವ ಭೂಮಿಯಲ್ಲಿ ನಾಲ್ಕು ಪಥದ ರಸ್ತೆ (ಚತುಷ್ಪಥ ರಸ್ತೆ) ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ಬಾಕಿ ಇರುವ 600 ಮೀಟರ್ ಪ್ರದೇಶದಲ್ಲಿ ಭೂಮಿಯ ಗಡಿ ಹಾಗೂ ಖಾಸಗಿ ಸ್ವತ್ತಿಗೆ ಸಂಬಂಧಿಸಿದ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ, ಸಂಪೂರ್ಣವಾಗಿ ಹೊಸ ಸರ್ವೇ ನಡೆಸಿ (08-10-2026ರ ಒಳಗೆ) ಸರ್ಕಾರಿ ಹಾಗೂ ಖಾಸಗಿ ಸ್ವತ್ತುಗಳ ಗಡಿಯನ್ನು ಗುರುತಿಸಿ, ಆ ಸ್ಥಳದಲ್ಲೇ ಕಂಬ ಅಥವಾ ಕೆಂಪು ಗುರುತುಗಳ ಮೂಲಕ ಸ್ಪಷ್ಟವಾಗಿ ಗುರುತಿಸುವಂತೆ ನಿರ್ದೇಶನ ನೀಡಿದರು. ಪ್ರತಿ 10–20 ಮೀಟರ್ ಅಂತರದಲ್ಲಿ ಅಗತ್ಯ ಗುರುತುಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.news_1791445413_2_210.webp

*ಟಿಡಿಆರ್ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಚುರುಕು*

143 ಆಸ್ತಿಗಳಿಗೆ ಸಂಬಂಧಿಸಿದ ಟಿಡಿಆರ್ ಅಧಿಸೂಚನೆ ಹಿಂಪಡೆಯಲಾಗಿರುವ ಹಿನ್ನೆಲೆಯಲ್ಲಿ, ಅಧಿಕೃತ ಪ್ರತಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು. ವರ್ತೂರು ಸೇತುವೆ ಭಾಗದ 20 ಆಸ್ತಿಗಳ ಪೈಕಿ 6 ಆಸ್ತಿಗಳಿಗೆ ಟಿಡಿಆರ್ ನೀಡಲಾಗಿದ್ದು, 9 ಆಸ್ತಿಗಳ ಟಿಡಿಆರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಉಳಿದ ಆಸ್ತಿ ಮಾಲೀಕರೊಂದಿಗೆ ಸಭೆ ನಡೆಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಹಾಗೂ ಬಾಕಿ ಇರುವ 9 ಆಸ್ತಿಗಳಿಗೆ ಡಿಆರ್‌ಸಿ (Form-C/DRC) ವಿತರಣೆಯನ್ನು ತ್ವರಿತಗೊಳಿಸುವಂತೆ ಆಯುಕ್ತರು ಸೂಚಿಸಿದರು.

ಸ್ವತ್ತು ಸಂಖ್ಯೆ 34ಕ್ಕೆ (Property No.34) ಸಂಬಂಧಿಸಿದಂತೆ 2013ರ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಮಾಡಿರುವ ಹಿನ್ನೆಲೆಯಲ್ಲಿ, ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಪೊಲೀಸ್ ಭದ್ರತೆಯೊಂದಿಗೆ ಜಾಗದ ಸ್ವಾಧೀನ ಪಡೆಯಲು ಕ್ರಮ ಕೈಗೊಳ್ಳಬೇಕು. ಅದೇ ರೀತಿ, ವಿನಾಯಕ ಥಿಯೇಟರ್‌ನಿಂದ ವಿಶಾಲ್ ಮಾರ್ಟ್‌ವರೆಗೆ ಇರುವ 65 ಆಸ್ತಿಗಳ ಪೈಕಿ 35 ಆಸ್ತಿಗಳಿಗೆ ಪಾವತಿ ಪೂರ್ಣಗೊಂಡಿದ್ದು, ಉಳಿದ 30 ಆಸ್ತಿಗಳ ಪಾವತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಆಯುಕ್ತರು ಸೂಚಿಸಿದರು.

*ಚರಂಡಿ, ಪಾದಚಾರಿ ಮಾರ್ಗ ಹಾಗೂ ವಿದ್ಯುತ್ ಕಂಬ ಸ್ಥಳಾಂತರಕ್ಕೆ ಆದ್ಯತೆ*

ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ತಾತ್ಕಾಲಿಕ ಚರಂಡಿಗಳನ್ನು ಮುಖ್ಯ ಚರಂಡಿಗೆ ಸಂಪರ್ಕಿಸಿ ತೆರವುಗೊಳಿಸುವುದು ಹಾಗೂ ಚರಂಡಿ ಮೇಲ್ಭಾಗದಲ್ಲಿ ಕನಿಷ್ಠ 2 ಮೀಟರ್ ಪಾದಚಾರಿ ಮಾರ್ಗ ಕಲ್ಪಿಸಬೇಕು. ಹಾಗೆಯೇ ಬಾಕಿ ಇರುವ ವಿದ್ಯುತ್ ಕಂಬ ಹಾಗೂ ಒಂದು ಟ್ರಾನ್ಸ್‌ಫಾರ್ಮರ್‌ ಅನ್ನು ತ್ವರಿತವಾಗಿ (4 ದಿನಗಳ ಒಳಗೆ) ಸ್ಥಳಾಂತರಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

*ಪೆಟ್ರೋಲ್ ಬಂಕ್ ದಾಖಲೆಗಳ ಪರಿಶೀಲನೆಗೆ ಸೂಚನೆ*

ಬೆಳ್ಳಂದೂರು ಅಮಾನಿಕೆರೆ ಬಳಿ ರಸ್ತೆ ಹಾಗೂ ರ‍್ಯಾಂಪ್ (ವಯಾಡಕ್ಟ್) ಕಾಮಗಾರಿಗೆ ಅಡಚಣೆಯಾಗಿರುವ ಹೆಚ್‌ಪಿ ಪೆಟ್ರೋಲ್ ಬಂಕ್‌ಗೆ ಸಂಬಂಧಿಸಿದ ಟ್ರೇಡ್ ಲೈಸೆನ್ಸ್, ಕಟ್ಟಡ ಪರವಾನಗಿ ಹಾಗೂ ಒಸಿ ಸೇರಿದಂತೆ ಅಗತ್ಯ ದಾಖಲೆಗಳನ್ನು ತಕ್ಷಣ ಪರಿಶೀಲಿಸಬೇಕು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಸ್ತೆ ಅಗಲೀಕರಣ ಕಾಮಗಾರಿ ಹಲವು ವರ್ಷಗಳಿಂದ ಬಾಕಿ ಇರುವ ಹಿನ್ನೆಲೆಯಲ್ಲಿ, ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಲಭ್ಯವಿರುವ ಜಾಗದಲ್ಲಿ ಕಾಮಗಾರಿಗಳನ್ನು ಯಾವುದೇ ವಿಳಂಬವಿಲ್ಲದೆ ಕೈಗೊಳ್ಳಬೇಕು. ಸಾರ್ವಜನಿಕರ ಸುಗಮ ಸಂಚಾರ, ರಸ್ತೆ ಸುರಕ್ಷತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿ, ಭೂಸ್ವಾಧೀನ, ಟಿಡಿಆರ್ ಹಾಗೂ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಬಾಕಿ ವಿಷಯಗಳನ್ನು ತ್ವರಿತವಾಗಿ ಪರಿಹರಿಸುವಂತೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

*ಕಾರಿಡಾರ್ ಕಾಮಗಾರಿ ತ್ವರಿತಗೊಳಿಸಲು ವಿಶೇಷ ಕಾರ್ಯಪಡೆ ರಚನೆ*

ವರ್ತೂರು ರಸ್ತೆ ಅಭಿವೃದ್ಧಿ ಹಾಗೂ ಎಲಿವೇಟೆಡ್ ಕಾರಿಡಾರ್ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸಲು ಮತ್ತು ಸಂಚಾರ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಲು ಆಯುಕ್ತರ ಅಧ್ಯಕ್ಷತೆಯಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆಯು ಅಪರ ಆಯುಕ್ತರು, ಉಪ ಪೊಲೀಸ್ ಆಯುಕ್ತರು (ಸಂಚಾರ ವಿಭಾಗ), ಮುಖ್ಯ ಅಭಿಯಂತರರು, ಕೆಆರ್‌ಡಿಸಿಎಲ್, ಬೆಸ್ಕಾಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿದ್ದು, ಅವರಿಗೆ ಪ್ರಮುಖ ಜವಾಬ್ದಾರಿಗಳು ನೀಡಲಾಗಿದೆ. 

*ವಿಶೇಷ ಕಾರ್ಯಪಡೆಯ ಪ್ರಮುಖ ಉದ್ದೇಶಗಳು:*

* ವರ್ತೂರು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ನಡುವೆ ಅಗತ್ಯ ಸಮನ್ವಯವನ್ನು ಸಾಧಿಸುವುದು. 
* ಕಾಮಗಾರಿಗಳಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು.   
* ಎಲಿವೇಟೆಡ್ ಕಾರಿಡಾರ್ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸುವುದು, ತಾಂತ್ರಿಕ ಹಾಗೂ ಭೌತಿಕ ಅಡಚಣೆಗಳನ್ನು ಗುರುತಿಸುವುದು ಮತ್ತು ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದು.
* ಬೆಸ್ಕಾಂ ವಿದ್ಯುತ್ ಕಂಬಗಳ ಸ್ಥಳಾಂತರ, ಸಂಚಾರ ನಿರ್ವಹಣೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಸಮನ್ವಯದಿಂದ ಪರಿಹರಿಸುವುದು.   
* ಕಾರ್ಯಪಡೆಯು ನಿಯಮಿತವಾಗಿ ಸಭೆ ನಡೆಸಿ, ಕೈಗೊಂಡ ನಿರ್ಧಾರಗಳ ಅನುಷ್ಠಾನ, ಪ್ರಗತಿ ಹಾಗೂ ಬಾಕಿ ಇರುವ ವಿಷಯಗಳ ಕುರಿತು ವರದಿ ಸಲ್ಲಿಸುವುದು.

ಸಭೆಯಲ್ಲಿ ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಅಭಿಯಂತರರು, ಕೆಆರ್‌ಡಿಸಿಎಲ್, ಬೆಸ್ಕಾಂ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೃಹತ್ ‘ಸೇವಾ ಜ್ಯೋತಿ ಯಾತ್ರೆ’- ಬೈಕ್ ರಾಲಿಗೆ ಚಾಲನೆ – ‘ವಿಕಸಿತ ಭಾರತ – ಸಂಕಲ್ಪ ಸಭೆ’ ಯಶಸ್ವಿಸಾರ್ವಜನಿಕ ಸಾರಿಗೆಯಲ್ಲಿ ನಾವೀನ್ಯತೆ: ಬಿಎಂಟಿಸಿಗೆ ‘ಚೇಂಜ್ ಮೇಕರ್ ಅವಾರ್ಡ್ಹೊಂಡಾ ಕಾರ್ಸ್ ಇಂಡಿಯಾದಿಂದ ಹೊಸ ಹೊಂಡಾ ಎಲಿವೇಟ್ ಬಿಡುಗಡೆಸ್ಟಿಂಗ್ ಬಗ್ಗೆ ಯಾರಿಗೆ ಜ್ಞಾನ ಜಾಸ್ತಿ ಅನ್ನೋದು ಜಗತ್ತಿಗೆ ಗೊತ್ತಿದೆ - ನಿಖಿಲ್ ಕುಮಾರಸ್ವಾಮಿ ಟಾಂಗ್50 ವರ್ಷಗಳಿಂದ ದಲಿತರ ಸಮಸ್ಯೆ ಈಡೇರಿಲ್ಲ ನೀವಾದರೂ ಈಡೇರಿಸ್ತೀರಾ? ನವದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆಯಲ್ಲಿ ದೆಹಲಿ ಪೊಲೀಸರಿಂದ ಗುಂಡಗಿರಿ?ಬ್ಲಾಕ್‌, ಮಂಡಲ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು; ‘ಮತ ಉಳಿಸಿ–ದೇಶ ಉಳಿಸಿ’ ಹೋರಾಟ ತೀವ್ರಗೊಳಿಸಲು ನಿರ್ಧಾರಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಬಳಸಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಸ್ಥಿತಿಗತಿ ಸಮೀಕ್ಷೆಎಸ್.ಬಿಂಗೀಪುರದಲ್ಲಿ ಪಾಲಿಕೆಯ ಪ್ರಾಣಿ ಚಿತಾಗಾರ ಸ್ಥಾಪನೆಗೆ ಯೋಜನೆ: ಆಯುಕ್ತ ಕೆ.ಎನ್. ರಮೇಶ್ಟಿ.ಡಿ.ಆರ್. ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ/ತಾಂತ್ರಿಕ ಕಾರ್ಯಾಗಾರ