
ಬೆಂಗಳೂರು: ಜನತಾದಳ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಮೇ 15ರಿಂದ 17ರವರೆಗೆ ಮೂರು ದಿನಗಳ ಕಾಲ ವನಾನು ಬೆಳಕಿನ ಪಂದ್ಯಾವಳಿ ನಡೆಯಲಿದೆ ಎಂದು ಬೆಂಗಳೂರು ಜಿಬಿಎ ಜೆಡಿಎಸ್ ಅಧ್ಯಕ್ಷ ರಮೇಶ್ ಗೌಡ ಅವರು ತಿಳಿಸಿದರು.
ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಜೆಪಿಎಲ್ ಲೋಗೋವನ್ನು ಅನಾವರಣ ಮಾಡಿ ಮಾತನಾಡಿದ ಅವರು, ನಾಡಿನಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವ ಹಾಗೂ ಯುವಕರು ದೇಶದ ಮುಂದಿನ ಪ್ರಜೆಗಳಾಗಲಿದ್ದಾರೆ ಹೀಗಾಗಿ ಎಲ್ಲಾ ರೀತಿಯಿಂದಲೂ ಶಕ್ತಿ ತುಂಬುವ ಸಲುವಾಗಿ ಯುವಕರನ್ನು ಬೆಳೆಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಕ್ರಿಕೆಟ್ ಪಂದ್ಯಾವಳಿಯನ್ನು ರಾಜ್ಯ ಮಟ್ಟದಲ್ಲಿ ಆಯೋಜನೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಕ್ರಿಕೆಟ್ ಅಭಿಮಾನಿಗಳು ಪ್ರೇಮಿಗಳು ಹಾಗೂ ಆಟಗಾರರನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಈ ಕ್ರಿಕೆಟ್ ಪಂದ್ಯಾವಳಿ ಕೇವಲ ಈ ವರ್ಷಕ್ಕೆ ಮಾತ್ರವಲ್ಲದೆ ಮುಂಬರುವ ವರ್ಷಗಳಲ್ಲಿಯೂ ಸಹ ಬೇರೆ ಬೇರೆ ಕ್ರೀಡೆಗಳನ್ನು ಆಯೋಜನೆ ಮಾಡಲಾಗುತ್ತದೆ ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬದ ಹಿನ್ನೆಲೆ ಹಾಗೂ ದೇವೇಗೌಡರ 90 ವರ್ಷ ಪೂರೈಸಿರುವ ಹಿನ್ನೆಲೆ ಒಂದು ರೀತಿ ಹಬ್ಬದ ರೀತಿಯಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲಾಗುತ್ತದೆ ಎಂದರು.
ಜೆಡಿಎಸ್ ರಜಾ ಕೋರ್ ಕಮಿಟಿ ಅಧ್ಯಕ್ಷ ಎಂ ಕೃಷ್ಣಾರೆಡ್ಡಿ ಮಾತನಾಡಿ, ಮೇ 15 ಸಂಜಾ 5:00 ಗಂಟೆಗೆ ಪಂದ್ಯಾವಳಿ ಉದ್ಘಾಟನೆ ಆಗಲಿದೆ ಈ ಒಂದು ಪಂದ್ಯಾವಳಿಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ , ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಉದ್ಘಾಟ ಮಾಡಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಸಹ ಮೇ 16ರಂದು ಪಂದ್ಯಾವಳಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರ್ಧ ಗಂಟೆಗಳ ಕಾಲ ಆಟವನ್ನು ವೀಕ್ಷಣೆ ಮಾಡಲಿದ್ದಾರೆ. ಬೆಳಿಗ್ಗೆ 8ಗಂಟೆಯಿಂದ ಸಂಜೆ 10 ಗಂಟೆಯ ತನಕ ಹೊನಲು ಬೆಳಕಿನ ಆಟ ನಡೆಯಲಿದೆ. ನನ್ನ ಕಡೆಯಿಂದ ಮೂರು ಲಕ್ಷ ರೂಪಾಯಿಯನ್ನು ಆಟಕ್ಕೆ ನೀಡದಿದ್ದೇವೆ ಅದು ಪ್ರಥಮ ಬಹುಮಾನವಾಗಿ ಅದರ ಜೊತೆಗೆ ಶರವಣ ಅವರು ಸಹ ಇದರಲ್ಲಿ ಕೈಜೋಡಿಸಿದ್ದು 2 ಲಕ್ಷವನ್ನು ಸೇರಿಸಿ ಬಹುಮಾನದ ಮೊತ್ತವನ್ನು 5 ಲಕ್ಷಕ್ಕೆ ಏರಿಸಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯಮಟ್ಟದಲ್ಲಿ ಜೆಪಿಎಲ್ ಪಂದ್ಯಾವಳಿ ಮಾದಾವರದಲ್ಲಿ ಮೇ 15ರಂದು ಪ್ರಾರಂಭವಾಗಲಿದ್ದು ಇದರಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಕ್ರಿಕೆಟ್ ಆಸಕ್ತರು ಭಾಗವಹಿಸಲಿದ್ದಾರೆ ಇದು ಒಂದು ಅದ್ಭುತ ಕ್ಷಣ ಎನ್ನಬಹುದಾಗಿದೆ, ಇವಂದು ಕಾರ್ಯಕ್ರಮಕ್ಕೆ ಪ್ರೋತ್ಸಾಹದಾಯಕವಾಗಿ ಶಿರಾ ತಾಲೂಕಿನ ಉದ್ಯಮಿ ಜೀನಿ ಸಂಸ್ಥೆಯವರು ಕ್ರೀಡಾಪಟುಗಳಿಗೆ ಪ್ರೋತ್ಸಾಹದಾಯಕವಾಗಿ ತಮ್ಮ ಕಿಟ್ಟುಗಳನ್ನು ನೀಡಲಿದ್ದಾರೆ. ಶಾಸಕರು ಹಾಗೂ ಮಾಜಿ ಸಚಿವರಾದ ಹೆಚ್ಎಮ್ ರೇವಣ್ಣ ಅವರು ಸಹ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 
ಯುವಕರು ಪಕ್ಷ ಸಂಘಟನೆಯಲ್ಲಿ ಉತ್ಸಾಹ ಭರಿತರಾಗಿ ಮುಂದಿನ ದಿನಗಳಲ್ಲಿ ಪಕ್ಷ ಬೆಳೆಸುವ ನಿಟ್ಟಿನಲ್ಲಿ ಕಾರ್ಯಯೋರ್ಮುಖರಾಗುವ ಕೆಲಸವನ್ನು ಹಿಂದಿನಿಂದಲೇ ಯುವಕರು ಮಾಡಬೇಕಾಗಿದೆ ಅದರಲ್ಲಿ ತೊಡಗಿಸಿ ಕೊಂಡಾಗ ಪಕ್ಷ ಬಲವರ್ಧನೆ ಆಗುತ್ತದೆ. ಚಿನ್ನು ಕ್ರಿಕೆಟ್ ಪಂದ್ಯಾವಳಿಗೆ ಜೆಡಿಎಸ್ ನ ಎಲ್ಲಾ ನಾಯಕರು ಸಹಕಾರವನ್ನು ನೀಡುತ್ತಿದ್ದು ಒಂದು ಉತ್ತಮ ಬೆಳವಣಿಗೆ ಎಂದರು. ಪಂದ್ಯಾವಳಿಯ ಮುತ್ತುವರ್ಜಿಯನ್ನು ಎಂ ಕೃಷ್ಣಾರೆಡ್ಡಿ ಅವರು ವಹಿಸಿಕೊಂಡು ಯುವಕರನ್ನು ಉತ್ತಮ ರೀತಿಯಲ್ಲಿ ಪಕ್ಷ ಸಂಘಟನೆಯಲ್ಲಿ ಬಲಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಜೆಡಿಎಸ್ ರಾಜ್ಯ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಚಂದನ್ ಹಾಗೂ ಜೆಡಿಎಸ್ ಯುವ ಮುಖಂಡ ಪ್ರವೀಣ್ ಕುಮಾರ್ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರುಬ24 ತಂಡಗಳು JPL ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ನಗರದಲ್ಲಿ ವಿವಿಧ ಕಡೆ ಆಟಗಾರರಿಗೆ ಉಳಿದುಕೊಳ್ಳು ಸ್ಥಳಾವಕಾಸ ಮಾಡಲಾಗಿದೆ. ಅಲ್ಲದೆ ಎಲ್ಲಾ ಆಟಗಾರರಿಗೂ ಹಾಗೂ ಕ್ರೀಡಾ ಪ್ರೇಮಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಹೊನಲು ಬೆಳಕಿನಲಗಲಿ ಆಟಗಾರರು ಕ್ರಿಕೆಟ್ ಆಟವನ್ನು ಆಡಲಿದ್ದಾರೆ. ಒಂದೊಂದು ತಂಡಗಳಿಗೆ ಇಂತಿಷ್ಟು ಕಾಲಾವಕಾಶ ನಿಗದಿ ಮಾಡಲಾಗಿದೆ ಆರ್ ಓವರ್ ನಡೆಯಲಿದೆ ಒಂದೊಂದು ತಂಡಕ್ಕೆ ಎರಡು ಮ್ಯಾಚ್ಗಳಾಗಿ ನಡೆಸಲಾಗುತ್ತದೆ. ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಇಡಲಾಗಿದ್ದು ಈಗಾಗಲೇ ಪ್ರಥಮ ಬಹುಮಾನವಾಗಿ 5 ಲಕ್ಷ ಘೋಷಣೆ ಮಾಡಲಾಗಿದೆ ಜೊತೆಗೆ ಟ್ರೋಫಿ ನೀಡಲಾಗುತ್ತದೆ. ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಉತ್ತೇಜನ ನೀಡುವ ಕೆಲಸವನ್ನು ಪಕ್ಷದ ವತಿಯಿಂದ ಮಾಡಲಾಗುತ್ತದೆ. ಪಕ್ಷದ ವತಿಯಿಂದ ಇದೆ ಮೊದಲ ಬಾರಿಗೆ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿದೆ. ಜೆಡಿಎಸ್ ರಾಜ್ಯ ಸಾಮಾಜಿಕ ಜಾಲತಾಣ ವಿಭಾಗ ಹಾಗೂ ಯುವ ಘಟಕದ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಪರಿಷತ್ ಸದಸ್ಯ ಡಾಕ್ಟರ್ ಟಿ ಎ ಶರಣ, ಸೇರಿದಂತೆ ಪಕ್ಷದ ನಾಯಕರು ಕಾರ್ಯಕರ್ತರು ಯುವ ಮುಖಂಡರು ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.