LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತಿ ಟೀಚರ್ 7ನೇ ತರಗತಿಗೆ @ 50ರ ಸಂಭ್ರಮ

ಅನಾಯಾಸವಾಗಿ ಅರ್ಧ ಶತಕ ಪೂರೈಸಿದ 2026ರ ಮೊದಲ ಸಿನಿಮಾ ಅಂತ ಖ್ಯಾತಿಗೆ ಒಳಗಾದ *’ಭಾರತಿ ಟೀಚರ್ 7ನೇ ತರಗತಿ’* 50ನೇ ದಿನದ ಸಂಭ್ರಮದ ಸಮಾರಂಭವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು.

ಪೂಜ್ಯಾಯ ಫಿಲಂಸ್ ಅಡಿಯಲ್ಲಿ ಉದ್ಯಮಿ ರಾಘವೇಂದ್ರ ರೆಡ್ಡಿ ಬಂಡವಾಳ ಹೂಡಿದ್ದು, ಗುರುರಾಜ್ ರೆಡ್ಡಿ ಸಹ ನಿರ್ಮಾಪಕರು. ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನದ ಜವಬ್ದಾರಿಯನ್ನು ಎಂ.ಎಲ್.ಪ್ರಸನ್ನ ಹೊತ್ತುಕೊಂಡಿದ್ದಾರೆ. ಸಚಿತ್ ಫಿಲಂಸ್‌ನ ವೆಂಕಟ್ ಗೌಡ ಕ್ರಿಯೇಟಿವ್ ಮುಖ್ಯಸ್ಥರಾಗಿ ಗುರುತಿಸಿಕೊಂಡಿದ್ದಾರೆ. ಹನ್ನೊಂದು ಕೇಂದ್ರಗಳಲ್ಲಿ 25 ದಿವಸ , ಒಂಬತ್ತು ಕೇಂದ್ರಗಳಲ್ಲಿ 500 ದಿವಸ ಮತ್ತು ಇಲ್ಲಿಯವರೆಗೂ ಎರಡು ಲಕ್ಷ ವಿದ್ಯಾರ್ಥಿಗಳು ಚಿತ್ರವನ್ನು ವೀಕ್ಷಿಸಿದ್ದಾರೆ.

ಡಾ.ವಿ.ನಾಗೇಂದ್ರಪ್ರಸಾದ್, ನಟ ಧರ್ಮಕೀರ್ತಿರಾಜ್, ಮೋಹನ್, ರವಿಗೌಡ, ನಿರ್ದೇಶಕರುಗಳಾದ ಜಡೇಶ್.ಕೆ.ಹಂಪಿ, ಓಂಪ್ರಕಾಶ್ ರಾವ್, ಹಿರಿಯ ಪತ್ರಕರ್ತ,ನಟ ಚಕ್ರವರ್ತಿ ಚಂದ್ರಚೂಡ್, ವೀರಕಪುತ್ರ ಶ್ರೀನಿವಾಸ್ ಮುಂತಾದವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡದ ಕೆಲಸವನ್ನು ಶ್ಲಾಘಿಸಿದರು.

ಶಿಕ್ಷಕರಾಗಿ ಸಿಹಿಕಹಿಚಂದ್ರು, ಟೈಟಲ್ ರೋಲ್‌ದಲ್ಲಿ ಕು.ಯಶಿಕಾ, ಗೋವಿಂದೇಗೌಡ, ಅಶ್ವಿನ್‌ಹಾಸನ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾ ಅಂಚನ್, ಬೆನಕಾ ನಂಜಪ್ಪ, ರೋಹಿತ್‌ರಾಘವೇಂದ್ರ, ಸೌಜನ್ಯಸುನಿಲ್, ಎಂ.ಜೆ.ರಂಗಸ್ವಾಮಿ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಎಂ.ಬಿ.ಹಳ್ಳಿಕಟ್ಟಿ, ಸಂಕಲನ ಸುಜಿತ್‌ನಾಯಕ್, ವಾದ್ಯ ಸಂಯೋಜನೆ ಕೆ.ಎಂ.ಇಂದ್ರ, ನೃತ್ಯ ಕಂಬಿರಾಜ್, ಕಾರ್ಯಕಾರಿ ನಿರ್ಮಾಪಕ ದರ್ಶನ್‌ಗೌಡ ಅವರದಾಗಿದೆ.

ಡಾ.ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ಭವಿಷ್ಯದಲ್ಲಿ ಶತದಿನ, ಸಿಲ್ವರ್ ಜುಬ್ಲಿ ಸಂಭ್ರಮದ ದಿನಗಳನ್ನು ನೋಡುವಂತ ಸಾಧ್ಯತೆಗಳು ತುಂಬ ಕಡಿಮೆ ಇದೆ. ಅಂತ ಒಂದು ದೊಡ್ಡ ಪೈಪೋಟಿ ಯುಗದಲ್ಲಿ ಕಾಲಿಟ್ಟು ಆಗಿದೆ. ಸೂಪರ್ ಸ್ಟಾರ್ ಚಿತ್ರಗಳೇ 20-30 ದಿವಸ ಕಾಣೋದು ಕಷ್ಟ. ಇಂಥ ಸಂದರ್ಭದಲ್ಲಿ ಕನ್ನಡ ಪರ, ಮುಂದಿನ ಪೀಳಿಗೆಗೆ ಕಿವಿಮಾತು ಹೇಳುವಂತ, ಕನ್ನಡ ಧ್ವನಿಯಾಗಿ, ಸ್ಪಷ್ಟವಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಒಳ್ಳೆಯ ಅಂಶಗಳನ್ನು ಒಳಗೊಂಡಿರುವ ಚಿತ್ರವನ್ನು ಜನರಿಗೆ ತಲುಪಿಸುವಂತ ಕೆಲಸ ಆಗಬೇಕು. ಅಂತಹುದನ್ನು ಇವರುಗಳು ಮಾಡಿರುವುದು ಶ್ಲಾಘನೀಯ. ಇಂತಹ ಪ್ರಯತ್ನಗಳು ಮತ್ತೆ ಮತ್ತೆ ಆಗಬೇಕು. ಚಿತ್ರ ನೋಡಿದ್ದೇನೆ. ಎಲ್ಲಾ ಪಾತ್ರಗಳ ಪೋಷಣೆಯನ್ನು ಆನಂದಿಸಿದ್ದೇನೆ ಎಂದರು.

ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದು ನನ್ನ ಸೌಭಾಗ್ಯ ಅಂತ ಭಾವಿಸಿದ್ದೇನೆ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ, ಇಷ್ಟು ದೊಡ್ಡ ರೋಲ್ ಸಿಕ್ಕಿರೋದು ಇದೇ ಮೊದಲು. ಇಂತಹ ಪಾತ್ರ ನಿಭಾಯಿಸುತ್ತೇನೆ ಎನ್ನುವ ನಂಬಿಕೆ ಇರಲಿಲ್ಲ. ನಿರ್ದೇಶಕರು ನನ್ನ ಮೇಲೆ ಭರವಸೆ ಇಟ್ಟುಕೊಂಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಇಡೀ ಪಯಣದಲ್ಲಿ ಸಿನಿಮಾ ಬಿಟ್ಟು ಬೇರೇನೂ ಚರ್ಚೆ ನಡೆದೇ ಇಲ್ಲ. ಎಲ್ಲರ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ ಎಂದು ಸಿಹಿಕಹಿ ಚಂದ್ರು ಸಂತಸ ಹಂಚಿಕೊಂಡರು.

*’ಭಾರತಿ ಟೀಚರ್’* ಗೆದ್ದ ಖುಷಿಯಲ್ಲಿ ತಂಡದವರ ಮುಖದಲ್ಲಿ ಸಂತಸ ತಾಂಡವವಾಡುತ್ತಿತ್ತು. ಇಡೀ ಸಿನೆಮಾ ತಂಡಕ್ಕೆ ನೆನಪಿನ ಕಾಣಿಕೆ ನೀಡಿ ಕೃತಜ್ಞರಾದರು.  ಮುಂದೆ ಈ ಚಿತ್ರ ಶತ ದಿನ ಪೂರೈಸಲಿ ಎಂದು ಶುಭ ಹಾರೈಸಿದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ