LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೈಬರ್ ಥ್ರಿಲ್ಲರ್ ಅಂಶಗಳ ಒಳಗೊಂಡ ಅಚ್ಯುತ ಅವತಾರಂ

ಸೈಬರ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ *’ಅಚ್ಯುತ ಅವತಾರಂ’* ಚಿತ್ರದ ಫಸ್ಟ್ ಲುಕ್ ಹೊರಬಂದು ಸದ್ದು ಮಾಡಿತ್ತು. ಇದರ ಪ್ರೇರಣೆಯಿಂದಲೇ ಈಗ ಎರಡನೇ ನೋಟವನ್ನು ಅನಾವರಣಗೊಳಿಸಿದ್ದಾರೆ. 2016ರಂದು ಟೆಂಟ್ ಸಿನಿಮಾದಲ್ಲಿ ಮೆಚ್ಚುಗೆ ಪಡೆದು ನಾಗತ್ತಿಹಳ್ಳಿ ಶಿಷ್ಯನೆಂದು ಗುರುತಿಸಿಕೊಂಡಿರುವ ಬೆಂಗಳೂರು ಮೂಲದ ಪುನೀತ್ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ದಶಗಳ ಕೆಲಸ ಮಾಡಿ ಅನುಭವ ಪಡೆದುಕೊಂಡಿದ್ದಾರೆ. ಇದರ ಪ್ರತಿಫಲವೇ ಈ ಸಿನಿಮಾಕ್ಕೆ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿರುವುದು ಹೊಸ ಅನುಭವ. ರಾಯ್ರಾ ವೆಂಚರ‍್ಸ್‌ನ ರಮೇಶ್.ಸಿ.ರುದ್ರಮೂರ್ತಿ ಮತ್ತು ರಾಕೇಶ್.ಆರ್ ಜಂಟಿಯಾಗಿ ಬಂಡವಾಳ ಹೂಡಿದ್ದು, ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬರುತ್ತಿದೆ.

ಅಚ್ಯುತ ಅವತಾರಂನ ವಿಶೇಷ:

ಸಿನಿಮಾವು ಜಾಗತಿಕ ಸೈಬರ್ ಹಗರಣಗಳ ಕತ್ತಲೆಯಾದ, ಅತ್ಯಾಧುನಿಕ ಜಗತ್ತನ್ನು ಆಳವಾಗಿ ಪರಿಶೀಲಿಸುತ್ತದೆ. ಕಾಸರಗೂಡಿನಲ್ಲಿರುವ ಸಾಂಪ್ರದಾಯಿಕ ಹಳ್ಳಿಯ ವಿಶಿಷ್ಟ ಹೃದಯ ಬಡಿತವನ್ನು ಕಂಡುಕೊಳ್ಳುತ್ತದೆ. ಹೆಚ್ಚಿನ ಮಟ್ಟದ ಡಿಜಿಟಲ್, ಸ್ಥಳೀಯ ಸಂಸ್ಕ್ರತಿ ಹಾಗೂ ಸಂಕೀರ್ಣ ಹೈಪರ್‌ಲಿಂಕ್ ನಿರೂಪಣೆಯೊಂದಿಗೆ ಸನ್ನಿವೇಶಗಳು ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತವೆ.

ಸೈಬರ್ ಅಂತರಾಳದ ಅಂತರಂಗವನ್ನು ತೋರಿಸುವ ಅದರ ಮಜುಗಳ ಮೆಲುಕು ಬಹಳ ವಿಶಿಷ್ಟವಾಗಿ ಚಿತ್ರೀಕರಿಸಲಾಗಿದೆ. ಸೈಬರ್ ನಲ್ಲಿ ಆಗುವ ತೊಂದರೆಗಳ ಬಗ್ಗೆ ಜನರಿಗೆ ತಿಳಿಸುವ ಒಂದು ಪ್ರಯತ್ನವನ್ನು  ಸಿನೆಮಾದಲ್ಲಿ ಮಾಡಲಾಗಿದೆ.

ತಾರಾಗಣದಲ್ಲಿ ಮಾಳವಿಕಾ ನಂದನ್, ಅವಿನಾಶ್,ಸೀಮಾ.ಜಿ.ನಾಯರ್ ಸೇರಿದಂತೆ ಮಲಯಾಳಂನ ಕಲಾವಿದರು ನಟಿಸಿದ್ದಾರೆ. ಪ್ರಶಸ್ತಿ ವಿಜೇತ ಆನಂದ್ ಮೀನಾಕ್ಷಿ ಸಂಕಲನ, ಪವನ್ ಪೂವಯ್ಯ, ಕಲೆ ನಾಗರಾಜು-ನವೀನ್, ಸಾಹಿತ್ಯ ಹರೀಶ್ ಮೋಹನನ್ ಅವರದಾಗಿದೆ. ಸದ್ಯ ಚಿತ್ರವು ಡಬ್ಬಿಂಗ್‌ನಲ್ಲಿ ಬ್ಯುಸಿ ಇದ್ಗಳಲ್ಲಿ ಜನರಿಗೆ ತೋರಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ