LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಂಜು ಪಾಂಡವಪುರ ನಿರ್ದೇಶನದಲ್ಲಿ " ಮಣ್ಣಿನ ಮಗ ಮಾರ್ಗದರ್ಶಿ " ರೈತ ಸಾಧಕನ ಕುರಿತ ಸಾಕ್ಷಾಚಿತ್ರ

ಬೆಂಗಳೂರು: ಮಾತಂಗಿ ದೀವಟಿಗೆ, ಹಿರಿಮನೆ ಎಸ್ಟೇಟ್, ನಿರ್ಗಮನದ ಹಾದಿಯಲ್ಲಿ, ಭ್ರoಗದ ಬೆನ್ನೇರಿ, ಸ್ಮಶಾನ ಮೌನ... ಎಂಬ ಕಲಾತ್ಮಕ ಸಿನಿಮಾಗಳನ್ನು, ನಿರ್ದೇಶಿಸಿದ, ಸಾಹಿತಿ, ಹಾಗೂ ರಂಗಕರ್ಮಿ ಮಂಜು ಪಾಂಡವಪುರ ಪ್ರಸ್ತುತ ಹೊಸ ಆಯಾಮದಲ್ಲಿ ರೈತರ ವಿಷಯ ಆಯ್ಕೆ ಮಾಡಿಕೊಂಡು ಮಣ್ಣಿನ ಮಗ ಮಾರ್ಗದರ್ಶಿ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದರು.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಗ್ರಾಮದ ಪ್ರಗತಿಪಥ ರೈತ ದಯಾನಂದ ಮೂರ್ತಿಯವರ ಕೃಷಿ ಜೀವನವನ್ನು ಆಧರಿಸಿ ಈ ಸಾಕ್ಷ್ಯ ಚಿತ್ರ ನಿರ್ಮಾಣವಾಗುತ್ತಿದೆ.

ಈ ಸಾಕ್ಷ್ಯಚಿತ್ರದ ಮಹೂರ್ತವು ಚಳ್ಳೆಕೆರೆಯ ಸಾಯಿಬಾಬಾ ಮಂದಿರದಲ್ಲಿ ಜರುಗಿ, ಸ್ಥಳೀಯ ಐಮಂಗಲ ಗುರುಪೀಠದ ಶ್ರೀ ಹರಳಯ್ಯ ಸ್ವಾಮೀಜಿ ಕ್ಯಾಮರಾ ಚಾಲನೆ ಮಾಡುವ ಮೂಲಕ ಶುಭ ಹಾರೈಸಿದರು. ಹಾಗೆಯೇ ಸಾಕ್ಷ ಚಿತ್ರದ ಮುಖಪುಟವನ್ನು ಬಿಡುಗಡೆಗೊಳಿಸಿ ಸಮಾಜಕ್ಕೆ ರೈತರ ಅನುಭವಿಸುತ್ತಿರುವ ಹಾಗೂ ಕಷ್ಟ ಪಡುತ್ತಿರುವ ಪರಿಶ್ರಮ ವಿಚಾರದ ಬಗ್ಗೆ ಸರ್ಕಾರಗಳಾಗಲಿ ಸಂಘ ಸಂಸ್ಥೆಗಳಾಗಲಿ ಜನಪ್ರತಿನಿಧಿಗಳಾಗಲಿ ತಿಳಿಸುವ ನಿಟ್ಟಿನಲ್ಲಿ ಹೊಸ ಆಲೋಚನೆಗಳ ಮೂಲಕ ರೈತರನ್ನು ಕೇಂದ್ರ ಬಿಂದುವಾಗಿರಿಸಿಕೊಂಡು ಸಾಕ್ಷಾತ್ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.

ನಂತರದ ದಿನ ಚಳ್ಳಕೆರಿಯ ಪ್ರವಾಸಿ ಮಂದಿರದಲ್ಲಿ ಈ ಸಾಕ್ಷ್ಯ ಚಿತ್ರದ ಬಗ್ಗೆ ಪತ್ರಿಕಾಗೋಷ್ಠಿ ಜರುಗಿ ಕನ್ನಡ ಚಲನಚಿತ್ರದ ಸಾಹಿತಿ ಹಾಗೂ ಸಂಗೀತ ನಿರ್ದೇಶಕ ವಿ.ಮನೋಹರ್ ಭಾಗವಹಿಸಿ ಸಮಾಜಕ್ಕೆ ಅನ್ನ ನೀಡುವ ಈ ದಯಾನಂದ ಮೂರ್ತಿಯವರ ಕೃಷಿ ಕ್ಷೇತ್ರದ ಸಾಧನೆಯನ್ನು ಶ್ಲಾಘಿಸಿ ಮುಂದೆ ಇವರ ಬಗ್ಗೆ ವಿಶೇಷವಾದಂತಹ ಚಲನಚಿತ್ರವೇ ನಿರ್ಮಾಣ ಆಗಬೇಕೆಂದರು.
ಈ ಸಾಕ್ಷ್ಯಚಿತ್ರದ ನಿರ್ದೇಶಕ ಮಂಜು ಪಾಂಡವಪುರ ಮಾತನಾಡಿ ಮುಂದೊಂದು ದಿನ ಸಮಾಜದಲ್ಲಿ ಕೃಷಿ ಕುಂಠಿತವಾಗಿ ಎಲ್ಲರ ಬಳಿಯೂ ಹೇರಳವಾಗಿ ಹಣ ಇರುತ್ತದೆ, ಮೈತುಂಬ ಚಿನ್ನ ಕೂಡ ಇರುತ್ತದೆ, ಆದರೆ ಅನ್ನ,ಆಹಾರ ಇರುವುದಿಲ್ಲ. ಇದಕ್ಕೆ ಬೇಡಿಕೆ ಹೆಚ್ಚಾಗುವ ನಿರ್ಮಾಣ ಉಂಟಾಗುತ್ತದೆ. ಎಂಬ ವಿಷಯಗಳನ್ನು ತಿಳಿಸಿದರು. ಹಾಗಾಗಿ ಈ ರೀತಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸಮಾಜಕ್ಕೆ ಬೀದಿ ನಾಟಕಗಳು, ಕಿರು ಚಿತ್ರ, ಸಾಕ್ಷ್ಯ ಚಿತ್ರ, ಮತ್ತು ಚಲನಚಿತ್ರಗಳನ್ನು ನಿರ್ದೇಶಿಸುವ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಅಲ್ಲಿ ನೆರೆದಿದ್ದ ಎಲ್ಲ ಪತ್ರಕರ್ತರು ಹಾಗೂ ಸಾಹಿತಿಗಳ ಮುಂದೆ ಹಂಚಿಕೊಂಡರು.

ಸಾಕ್ಷಾ ಚಿತ್ರದ ಚಿತ್ರೀಕರಣವು ಚಳ್ಳಕೆರೆ, ದೇವರ ಮರಿಕುಂಟೆ, ಕಸ್ತೂರಿ ತಿಮ್ಮನಹಳ್ಳಿ, ದೊಡ್ಡೇರಿ ಹಾಗೆ ಹಿರಿಯೂರು ತಾಲೂಕಿನ ರಂಗೇನಹಳ್ಳಿ, ಸಿದ್ದಯ್ಯನ ಕೋಟೆ, ಮತ್ತು ಕಂದಿಕೆರೆ ಗ್ರಾಮಗಳಲ್ಲಿ ಜರುಗಿತು.

ಮುಹೂರ್ತದ ಸಂದರ್ಭದಲ್ಲಿ ಸಿ ಶಿವಲಿಂಗಪ್ಪ, ಸಾಹಿತಿ ಹಾಗೂ ಉಪನ್ಯಾಸಕರಾದ ವೀರಣ್ಣ, ಮಕ್ಕಳ ವೈದ್ಯರಾದ ಚಂದ್ರ ನಾಯಕ, ಎಂ ಶಿವಲಿಂಗಪ್ಪ, ಬಿವಿ ಚಿದಾನಂದಮೂರ್ತಿ, ಉಮಾಪತಿ, ಶಿವನ್ನಾಪೂರ್ಣ, ಮೀನಾಕ್ಷಮ್ಮ, ರೈತ ಮಹಿಳೆ ಕೆಂಚಮ್ಮ ಅಂಬಾಲಪ್ಪ, ಪತ್ರಕರ್ತ ಸುರೇಶ್ ಬೆಳಗೆರೆ, ದಯಾನಂದ, ಹಾಗೂ ಚಳ್ಳಕೆರೆಯ ಪ್ರಮುಖ ಸಾಹಿತಿಗಳು, ಪತ್ರಕರ್ತರು ಭಾಗವಹಿಸಿದ್ದರು.

ಮುಹೂರ್ತದ ಮಾಹಿತಿಯನ್ನು ಕನ್ನಡ ಗಂಗಾಧರ್, ಸುರೇಶ ಬೆಳಗೆರೆ, ಮುಳ್ಳಿನ ಗುಲಾಬಿಯ ಚಿದಾನಂದ ಬಿವಿ ಮಾಧ್ಯಮಕ್ಕೆ ಪರಿಚಯಿಸಿ, ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಇನ್ನಿತರ ಪತ್ರಕರ್ತರುಗಳ ಜೊತೆ ಈ ಚಿತ್ರದ ಬಗ್ಗೆ ಸಮರ್ಪಕವಾಗಿ ಸುದ್ದಿಯನ್ನು ಹಂಚಿಕೊಂಡರು.

ತಾಂತ್ರಿಕತೆಯಲ್ಲಿ ಈ ಚಿತ್ರದ ಸ್ಕ್ರಿಪ್ಟ್ ಬರಹವನ್ನು ಬಾಗಲಕೋಟೆಯ ಪ್ರವೀಣ್ ರಾಜ್ ಸೊನ್ನದ, ಡಾ.ವೀಣಾ ಕಲ್ಮಠ, ಛಾಯಗ್ರಹಣ ಚಿತ್ರೆ ಶ್, ಗ್ರಾಫಿಕ್ಸ್ ಪ್ರಹ್ಲಾದ್, ಸಂಕಲನ ಚಿತ್ರೇಶ್, ಡಾಕ್ಯುಮೆಂಟರಿ ನಿರ್ಮಾಣ,  ನಿರ್ದೇಶನ ಮಂಜು ಪಾಂಡವಪುರ ಈ ಚಿತ್ರದ ಭಾಗಿಗಳಾಗಿದ್ದಾರೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ