LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಟ್ಲೆ ಸಿನಿಮಾದ ಟ್ರೇಲರ್ ಮತ್ತು ಹಾಡು ಬಿಡುಗಡೆ

ಬೆಂಗಳೂರು: ಕಟ್ಲೆ ಎಂದರೆ ಸರ್ವೇಸಾಮಾನ್ಯವಾಗಿ ಎಲ್ಲರಿಗೂ ತಟ್ಟಂತ ಹೊಳೆಯುವುದು ಬಾಗಿನ ವಸ್ಲು,  ಮನೆಗಳಲ್ಲಿ ದೃಷ್ಟಿ ತಾಗದಿರಲಿ ಕೆಡುಕು ಒಳಗೆ ಬಾರದಿರಲಿ ಎಂದು ಕಟ್ಲೆ ಕಟ್ಟುತ್ತಾರೆ, ಇದ್ಯಾವುದು ಸಹ ಕಟ್ಲೆ ಎನ್ನುವ ಪದದ ಅರ್ಥ ಅಲ್ಲ ಬದಲಿಗೆ ಅವಧಿ ಅಥವಾ ಕಾಲ ಎನ್ನುವ ಶಬ್ದದಿಂದ ಕರೆಯುತ್ತಾರೆ.

ಹಾಸ್ಯ ಕಲಾವಿದ ಕೆಂಪೇಗೌಡ ಮೊದಲಬಾರಿ ನಾಯಕನಾಗಿ ನಟಿಸಿರುವ ’ಕಟ್ಲೆ’ ಚಿತ್ರದ ಟ್ರೇಲರ್ ಮತ್ತು ಹಾಡು ಬಿಡುಗಡೆ ಸಮಾರಂಭ ಉತ್ಸವ್ ಲೆಗೆಸಿಯ ಕಿಕ್ಕಿರಿದ ಸಭಾಂಗಣದಲ್ಲಿ ನೆಡೆಯಿತು. ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಯಣ್, ಮಂಡ್ಯ ಶಾಸಕ ರವಿಕುಮಾರ್‌ಗೌಡ(ಗಾಣಿಗ), ಬಿಗ್‌ಬಾಸ್ ಪ್ರಥಮ್, ಕಾಕ್ರೋಚ್ ಸುಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಇದಕ್ಕೂ ಮುನ್ನ ಕಲಾವಿದರುಗಳು ತಂಡಕ್ಕೆ ಶುಭ ಹಾರೈಸಿದ ತುಣುಕುಗಳು ಬಿತ್ತರಗೊಂಡಿತು.

ಶ್ರೀವಿಧಾ ಅಭಿನಂದನ್ ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಸಕೋಟೆ ಮೂಲದ ಭರತ್‌ಗೌಡ ಮಂಚೂಣಿ ರಾಜಕೀಯ ಪಕ್ಷದ ಕಾರ್ಯಕರ್ತ, ಸಮಾಜ ಸೇವಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಸಿನಿಮಾ ಕೃಷಿಗೆ ಬಂಡವಾಳ ಹೂಡಿರುವುದು ಹೊಸ ಅನುಭವ.

ಸನ್ಮಿತ ಮತ್ತು ಅಮೃತ ನಾಯಕಿಯರು. ಮತ್ತೋಂದು ಮುಖ್ಯ ಪಾತ್ರದಲ್ಲಿ ಹರ್ಷಿಕಾಪೂರ್ಣಚ್ಚಾ. ಇವರೊಂದಿಗೆ ಟೆನ್ನಿಸ್‌ಕೃಷ್ಣ, ತಬಲನಾಣಿ, ಹರೀಶ್‌ರಾಜ್, ಗಣೇಶ್‌ರಾವ್ ಕೇಸರಕರ್,ಪವನ್‌ಕುಮಾರ್, ಬಿರಾದಾರ್, ಎಂ.ಎಸ್.ಉಮೇಶ್,ಯತಿರಾಜ್, ಕರಿಸುಬ್ಬು ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಸಿರ್ಸಿ, ಮಲೆನಾಡು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡಾ.ವಿ.ನಾಗೇಂದ್ರಪ್ರಸಾದ್, ಭರ್ಜರಿಚೇತನ್‌ಕುಮಾರ್ ಹಾಗೂ ಕಿನ್ನಾಳ್‌ರಾಜ್ ಸಾಹಿತ್ಯದ ಗೀತೆಗಳಿಗೆ ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ ಛಾಯಾಗ್ರಹಣ, ಚಲುವಮೂರ್ತಿ ಸಂಕಲನ, ಅಲ್ಟೆಮೇಟ್‌ಶಿವು ಸಾಹಸ, ನೃತ್ಯ ಭಜರಂಗಿಮೋಹನ್ ಅವರದಾಗಿದೆ.

ನಂತರ ಮಾತನಾಡಿದ ನಿರ್ದೇಶಕರು, ಕಟ್ಲೆಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಅದರದೇ ಆದ ಅರ್ಥ ಇರುತ್ತದೆ. ನಮ್ಮ ಸಿನಿಮಾಕ್ಕೆ ಅವಧಿ ಎಂದು ಹೇಳಲಾಗಿದೆ. ಪ್ರತಿಯೊಂದು ಜೀವ ರಾಶಿಗೆ ಕಾಲ ಅನ್ನೋದು ಇರುತ್ತೆ. ಅದು ಸರಿಯಾಗಿ ಆಗಲಿಲ್ಲ ಅಂದ್ರೆ, ಕಾಲಚಕ್ರದಲ್ಲಿ ಸ್ಥಗಿತಗೊಳ್ಳುತ್ತದೆ. ಇದರ ಆಧಾರದ ಮೇಲೆ ಚಿತ್ರ ಸಾಗುತ್ತದೆ. ಪೂರ್ಣ ತಿಳಿಯಲು ನೀವುಗಳು ಟಾಕೀಸ್‌ಗೆ ಬರಬೇಕು. ಕಟ್ಲೆ ಅಳಿಸುತ್ತೆ, ನಗಿಸುತ್ತೆ, ಕಾಡುತ್ತೆ, ಕಾಡಿಸುತ್ತೆ. ಕ್ಲೈಮಾಕ್ಸ್‌ದಲ್ಲಿ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆಂದು ಶ್ರೀವಿಧಾ ಅಭಿನಂದನ್ ಸಣ್ಣದೊಂದು ಮಾಹಿತಿಯನ್ನು ತೆರೆದಿಟ್ಟರು.

ಖುಷಿಯಿಂದ ಮೈಕ್ ತೆಗೆದುಕೊಂಡ ಕೆಂಪೆಗೌಡ, ಹದಿನೆಂಟು ವರ್ಷದ ಸಿನಿಪಯಣದಲ್ಲಿ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಈಗ ಬಡ್ತಿ ಎನ್ನುವಂತೆ ನಾಯಕನಾಗಿ ಅಭಿನಯಿಸಿದ್ದೇನೆ. ನಿರ್ಮಾಪಕರು ಕಾಮಿಡಿ ಕಲಾವಿದನನ್ನು ಹೀರೋ ಪಟ್ಟ ಕಟ್ಟಿ, ದೊಡ್ಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಹಾರರ್,ಥ್ರಿಲ್ಲರ್, ಸೈಕಲಾಜಿಕಲ್ ಎಲ್ಲವು ಇದ್ದರೂ ಸಿನಿಮಾವು ಇದಾಗಿರುವುದಿಲ್ಲ. ಫುಲ್ ಮೀಲ್ಸ್‌ನಂತೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಇಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕೊನೆಯ ದೃಶ್ಯಗಳು ನೋಡುಗರ ಕಣ್ಣನ್ನು ಒದ್ದೆ ಮಾಡಿಸುತ್ತದೆ. ಸಾಹಿತ್ಯ, ಸಂಗೀತ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ. ಮಾಧ್ಯಮದವರು ಕಟ್ಲೆ ಎಲ್ಲರಿಗೂ ತಲುಪುವಂತೆ ಮಾಡಬೇಕೆಂದು ಕೋರಿಕೊಂಡರು.

ಸಚಿತ್ ಫಿಲಂಸ್‌ನ ವಿತರಕ ವೆಂಕಟ್‌ಗೌಡ ಸುಮಾರು 75 ಕೇಂದ್ರಗಳಲ್ಲಿ ತೆರೆಗೆ ತರಲು ಯೋಜನೆ ರೂಪಿಸಿಕೊಂಡಿದ್ದಾರೆ. ಫೆಬ್ರವರಿ ಕಾರ ರಂದು ರಾಜ್ಯದಾದ್ಯಂತ ಬೆಳ್ಳಿತೆರೆಯ ಮೇಲೆ ಪ್ರದರ್ಶನವಾಗಲಿದೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ