LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾಳಾಚಾರ್ ಅವರ ರಂಗಭೂಮಿ ಬದುಕು @50 ವರ್ಷ

ಬೆಂಗಳೂರು: ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ, ಅದಕ್ಕೆ ತಾಜಾ ಉದಾಹರಣೆ ಹಿರಿಯ ರಂಗವಕರ್ಮಿ ಕಾಳಾಚಾರ್  ಅವರಿಗೆ ಕಲೆ ಕೈಹಿಡಿದು ರಂಗಭೂಮಿಯಲ್ಲಿ ಸಾಕಷ್ಟು ಸೇವೆ ಸಲ್ಲಿಸುವಂತೆ ಮಾಡಿದೆ. ಆದರೆ ಸರ್ಕಾರಗಳು ಮಾತ್ರ ಅವರನ್ನು ಗುರುತಿಸುವ ಕಾರ್ಯ ಮಾಡದಿರುವುದು ಬೇಸರದ ಸಂಗತಿಯಾಗಿದೆ ಎಂದು ಹಿರಿಯ ರಂಗಕರ್ಮಿ ಕಾಳಾಚಾರ್  ತಮ್ಮ ವೇದನೆ ತೋಡಿಕೊಂಡರು.


ಕಾಳಾಚಾರ ಅವರ ಮೂಲತಃ ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ರಾವುತನ ಹಳ್ಳಿಯವರು, ವೃತ್ತಿಯಲ್ಲಿ ಕೃಷಿಕರಾದರು ಸಹ ಪ್ರವೃತ್ತಿಯಲ್ಲಿ ನಾಟಕ ಕಂಪನಿಯನ್ನು ನಡೆಸುವ ಮಾಲೀಕ . ಕೇವಲ ಮಾಲೀಕನಷ್ಟೇ ಅಲ್ಲದೆ ಇಡೀ ರಂಗಭೂಮಿಯ ಚಟುವಟಿಕೆಗಳು ಎಲ್ಲವೂ ಕರಗತ ಮಾಡಿಕೊಂಡಿದ್ದರು .ಕಾಳಿಕಾಂಬ ನಾಟಕ ಡ್ರಾಮಾ ಸೀನರಿ ಎಲ್ಲಾ ಕಡೆಯೂ ಹೆಸರುವಾಸಿಯಾಗಿದೆ. ಅದರ ಮಾಲೀಕರು ಇವರೇ . ರಾಮಾಯಣ ಮಹಾಭಾರತ ಶನಿಪ್ರಭಾವ ದೇವಿ ಮಹಾತ್ಮೆ ಸೇರಿದಂತೆ ನೂರಾರು ಐತಿಹಾಸಿಕ ನಾಟಕಗಳನ್ನು ಮಾಡಿದ್ದಾರೆ ಈಗಲೂ ಮಾಡಿಸುತ್ತಿದ್ದಾರೆ.


ಕೊರೊನಾ ಉಲ್ಬರ್ಣಿಸಿದ ನಂತರ ಸುಮಾರು ಏಳೆಂಟು ವರ್ಷಗಳ ಕಾಲ ತಮ್ಮ ರಂಗಭೂಮಿ ಕಲೆಯನ್ನು ಬಿಟ್ಟಿದ್ದರು, ಇದೀಗ ಅದೇ ನಾಟಕ ಕಂಪನಿಯನ್ನು ತಮ್ಮ ಸಹೋದರರ ಜೊತೆಗೂಡಿ ಹೊಸ ಆಯಾಮದಲ್ಲಿ ಮುಂದುವರಿಸುವ ಮೂಲಕ ಕಲಾಭಿಮಾನಿಗಳನ್ನು ಹುಟ್ಟುಹಾಕುವ ಹಾಗೂ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಲ್ಲದೆ ಎಲೆಮರೆಕಾಯಿಯಂತೆ ರಂಗಭೂಮಿಯಲ್ಲಿ ದುಡಿಯುತ್ತಿದ್ದಾರೆ.


50 ವರ್ಷಗಳ ರಂಗಭೂಮಿ ಪಯಣದ ವಿಚಾರವನ್ನು ಮೆಲುಕು ಹಾಕುತ್ತಾ, ಜಗತ್ತಿನಲ್ಲಿ ಯಾವುದೇ ತಂತ್ರಜ್ಞಾನಗಳು ಬೆಳೆದರೂ ಸಹ ರಂಗಭೂಮಿ ಕಲೆ ಮಾತ್ರ ನಿಂತಿಲ್ಲ. ಇಂದಿಗೂ ಸಹ ಪೌರಾಣಿಕ ನಾಟಕಗಳನ್ನು ನೋಡುವ ಅಭಿಮಾನಿಗಳು ಇದ್ದಾರೆ ಎಂದರು.  ಹಬ್ಬ ಹರಿದಿನ ಉತ್ಸವ ಜಾತ್ರೆ ಬೇಸಿಗೆಯಲ್ಲಿ ನಾಟಕಗಳು ಹೆಚ್ಚಾಗಿ ಮೇಳಸಿದ್ದವು .ಉತ್ತರ ಕರ್ನಾಟಕ ದ ಕೆಲ ಭಾಗಗಳನ್ನು ಬಿಟ್ಟರೆ ಎಲ್ಲಾ ಜಿಲ್ಲೆಗಳಲ್ಲಿ ಸಹ ಪ್ರವಾಸ ಮಾಡಿ ನಾಟಕಗಳನ್ನು ಮಾಡಿದ್ದಾರೆ , ಇದರ ಜೊತೆಗೆ ರಾಜ್ಯದ ಹಕ್ಕ ಪಕ್ಕದಲ್ಲಿರುವ ಆಂಧ್ರ ಹಾಗೂ ತಮಿಳುನಾಡಿನಲ್ಲೂ ಸಹ ತಮ್ಮ ಕಲಾ ನೈಪುಣ್ಯವನ್ನು ಪಸರಿಸಿದ್ದಾರೆ.


ವೃತ್ತಿ ಕೃಷಿ ಪ್ರವೃತ್ತಿ ರಂಗಭೂಮಿ;


ಕಾಳಾಚಾರ ಅವರ ಕುಟುಂಬ ರೈತಾಪಿ ಹಿನ್ನೆಲೆಯಲ್ಲಿ ಇದ್ದರೂ ಸಹ ಪ್ರೌವೃತ್ತಿಯಲ್ಲಿ ರಂಗಭೂಮಿ ಕಸುಬಾಗಿ ಮಾರ್ಪಟ್ಟಿದೆ. ನಾಟಕ ಕಲೆಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಕಾಳಾಚಾರ ಅವರು ಅವಿರತವಾಗಿ ಶ್ರಮಿಸಿದ್ದಾರೆ. ಕಾಳಾಚಾರ್ ಅವರ ಗರಡಿಯಲ್ಲಿ ಬೆಳೆದ ಅದೆಷ್ಟೋ ಮಂದಿ ಕಲಾವಿದರು ಸ್ವಂತ ಡ್ರಾಮಾ ಸೀನರಿಗಳನ್ನು ಇಟ್ಟುಕೊಂಡು ಎತ್ತರವಾಗಿ ಬೆಳೆದಿದ್ದಾರೆ ಎಂದರು.


ಕಾಳಾಚಾರ ಅವರಿಗೆ ಈಗ ವಯಸ್ಸು 75 ಇದ್ದರೂ ಸಹ ವೃತ್ತಿ ಬದುಕಿನಲ್ಲಿ ಮೇಕಪ್ನಲ್ಲಿ ವಸ್ತ್ರಲಂಕಾರದಲ್ಲಿ ಮೂರ್ತಿ ಕೆತ್ತನೆಯಲ್ಲಿ ಕಲಾವಿದರ ವಸ್ತ್ರಾಭರಣಗಳನ್ನು ನಿರ್ಮಾಣ ಮಾಡುವುದರಲ್ಲಿ ಎತ್ತಿದ ಕೈ. ಕಾಳಾಚಾರ್ ಅವರ ಗರಡಿಯಲ್ಲಿ ಒಟ್ಟು 20 ಜನ ಕೆಲಸ ಮಾಡುತ್ತಿದ್ದಾರೆ. ಎರಡು ಲಾರಿಗಳನ್ನು ಹೊಂದಿದ್ದಾರೆ. ಈಗಿನ ಆಧುನಿಕ ಶೈಲಿಗೆ ಹೊಂದಿಕೊಳ್ಳುವಂತೆ ತಮ್ಮ ಡ್ರಾಮಾ ಸೀನರಿಯನ್ನು ಒಗ್ಗೂಡಿಸಿಕೊಂಡಿದ್ದಾರೆ. ಒಂದು ನಾಟಕ ನಡೆಸಬೇಕಾದರೆ ಕನಿಷ್ಠ ಸುಮಾರು 5 ಲಕ್ಷ ಖರ್ಚು ವೆಚ್ಚಗಳು ಆಗುತ್ತವೆ ಎಂದರು.  ನಾಟಕದಲ್ಲಿ ಅಭಿನಯಿಸುವ ಕಲಾವಿದರ ಎಲ್ಲಾ ಪರಿಕರಗಳನ್ನು ಕಾಳಾಚಾರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಕೇವಲ ಪಾತ್ರಧಾರಿಗಳ ಕಿರೀಟಗಳನ್ನು ಮಾತ್ರ ಮದ್ರಾಸ್ ನಿಂದ ತರಿಸಿಕೊಳ್ಳುತ್ತಿದ್ದಾರೆ.


ಕೆಲವು ವರ್ಷಗಳಿಂದ ಕಾಳಿಕಾಂಬ ಡ್ರಾಮಾ ಸೀನರಿ ಕಂಪನಿ ನಿಷ್ಕ್ರಿಯವಾಗಿತ್ತು,  ಇದೀಗ ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ವಡ್ಡರ ಹಳ್ಳಿಯಲ್ಲಿ ಜಗಮಗಿಸುವ ವಿದ್ಯುತ್ ದೀಪಗಳಿಂದ ಹೊಸ ಆಯಾಮದಲ್ಲಿ ಶ್ರೀ ವಿನಾಯಕ ಕೃಪಾ ಪೋಷಿತ ನಾಟಕ ಮಂಡಳಿಯವರಿಂದ ಶ್ರೀ ಕೃಷ್ಣ ಸಂದಾನ ಅರ್ಥಾತ್ ಕುರುಕ್ಷೇತ್ರ ನಾಟಕವನ್ನು ಆಯೋಜನೆ ಮಾಡಲಾಯಿತು. ಕಲಾವಿದರು ಅದ್ಭುತವಾಗಿ ತಮ್ಮ ಪ್ರತಿಭೆಗಳನ್ನು ರಂಗ ಸಜ್ಜಿಗೆ ಮೇಲೆ ಅದ್ಭುತವಾಗಿ ನಟನೆ ಮಾಡಿದರು. ಸುತ್ತಮುತ್ತಲಿನ ನೂರಾರು ಸಂಖ್ಯೆಯಲ್ಲಿ ಕಲಾಭಿಮಾನಿಗಳು ನಾಟಕ ವೀಕ್ಷಣೆ ಮಾಡಿದರು.


ಇನ್ನು ಹಿರಿಯ ರಂಗಕರ್ಮಿ ಕಾಳಾಚಾರ್ ಅವರ ಸ್ನೇಹಿತರು ಹಾಗೂ ಹಿತೈಷಿಗಳು, ರಂಗ ನಿರ್ದೇಶಕರಾದ ಶಿವಲಿಂಗಮೂರ್ತಿ ಹೆಚ್ ಜಿ ಅವರು ತನು ಮನ ಧನ ಎಲ್ಲವನ್ನು ಅರ್ಪಿಸಿದ್ದಾರೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ