LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸುಖೀಭವ ಟೀಸರ್ ಸಿನೆಮಾ ಹಾಡುಗಳು ಬಿಡುಗಡೆ

ಬೆಂಗಳೂರು:     ಹೊಸಬರ *’ಸುಖೀಭವ’* ಚಿತ್ರದ ಟೀಸರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ದಂಪತಿಗಳಾದ *ಸಂತೋಷ್ ಕುಮಾರ್-ಭಾರ್ಗವಿ ಸಂತೋಷ್, ಮಗನ ಹೆಸರಾದ ವೇದ್ ಆರ್ಯನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ* ಹೂಡಿದ್ದಾರೆ.


      ಯೋಗರಾಜ್‌ಭಟ್ ಸೇರಿದಂತೆ ಅನೇಕರ ಬಳಿ ಸಹಾಯಕರಾಗಿ ಗುರುತಿಸಿಕೊಂಡಿದ್ದ ಮೈಸೂರು ಮೂಲದ *ಎನ್.ಕೆ.ರಾಜೇಶ್‌ನಾಯ್ಡು ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ಆಕ್ಷನ್ ಕಟ್* ಹೇಳಿದ್ದಾರೆ.


      ಸುಖೀಭವ ಹೆಸರಿನಂತೆ ಪ್ರಾರಂಭದಿಂದಲೂ ಯಾವುದೇ ಅಡೆತಡೆ ಇಲ್ಲದೆ ಎಲ್ಲಾ ಕೆಲಸಗಳು ಸುಗಮವಾಗಿ ಮುಗಿದಿದೆ. ಗೆಳಯ, ಹಿತೈಷಿ ’ರಾಬರ್ಟ್’ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸಗೌಡ ಇವರ ಸ್ಪೂರ್ತಿಯಿಂದಲೇ ನಿರ್ಮಾಣ ಮಾಡಿದೆ ಎನ್ನುತ್ತಾರೆ ಸಂತೋಷ್‌ಕುಮಾರ್.


      ನಂತರ ಮಾತನಾಡಿದ ನಿರ್ದೇಶಕರು, ಪ್ರೀತಿ, ಭಾವನೆಗಳು, ಹಾಸ್ಯ ಹಾಗೂ ಮನರಂಜನೆಯಿಂದ ಕೂಡಿದ ಚಿತ್ರವಾಗಿದೆ. ಪ್ರಾರಂಭದಲ್ಲಿ ಬೇರೆ ಟೈಟಲ್ ಇಡಲಾಗಿತ್ತು. ಕಥೆ ಬರೆದು ಮುಗಿಸುವಷ್ಟರಲ್ಲೆ ’ಸುಖೀಭವ’ ಆಯಿತು. ಬದುಕಲ್ಲಿ ಮೊದಲ ಪ್ರೀತಿ ಒಳ್ಳೆಯ ಪ್ರೀತಿ ಎನ್ನುತ್ತಾರೆ. ಒಂದು ಹಂತದಲ್ಲಿ ಅರ್ಥವಾಗಿ, ಅದನ್ನು ಹುಡುಕಿಕೊಂಡು ಹೋದಾಗ, ಅದು ಸಿಗುತ್ತದಾ? ಇಲ್ಲವಾ? ಇವೆಲ್ಲಾವನ್ನು ಸಕರಾತ್ಮಕ ರೀತಿಯಲ್ಲಿ ಏನು ಹೇಳಬೇಕೋ ಅದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದೊಂದು ಬದುಕಿನ ಪಯಣದ ಸಿನಿಮಾ ಎಂಬುದಾಗಿ ಎನ್.ಕೆ.ರಾಜೇಶ್ ನಾಯ್ಡು ಸಣ್ಣದೊಂದು ಮಾಹಿತಿ ಬಿಚ್ಚಿಟ್ಟರು.


        ಬೆಂಗಳೂರಿನ ಮಹೇಂದ್ರ ನಾಯಕ. ಸುಶ್ಮಿತ ನಾಯಕ್ ಹಾಗೂ ವಿಯಾನ್‌ಶಿ ಗ್ಡೆ ನಾಯಕಿಯರು. ಉಳಿದಂತೆ ಗೌರವ್ ಶೆಟ್ಟಿ, ಶೋಭರಾಜ್, ರವಿಶಂಕರ್ ಗೌಡ, ಸುನಿಲ್ ಪುರಾಣಿಕ್, ತುಕಾಲಿಸಂತು, ಮೈತ್ರಿ ಜಗ್ಗಿ ಮುಂತಾದವರು ಅಭಿನಯಿಸಿದ್ದಾರೆ. ಮೂರು ಹಾಡುಗಳಿಗೆ ಪ್ರಮೋದ್ ಮರವಂತೆ, ಕೊನೆಯ ಗೀತೆಗೆ ಸಂತೋಷ್‌ಕುಮಾರ್ ಮತ್ತು ಎನ್.ಕೆ.ರಾಜೇಶ್ ನಾಯ್ಡು ಸಾಹಿತ್ಯ ಒದಗಿಸಿದ್ದಾರೆ. ಬಿ.ಜೆ.ಭರತ್-ಶುಭಮ್-ವಿಯಾನ್.ಎಸ್.ಎ ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ನಟ ಶರಣ್ ’ಬೇಡ ಮಚ್ಚಾ ಬೇಡ’ ಸಾಲಿನ ಗೀತೆಗೆ ಧ್ವನಿಯಾಗಿರುವುದು ವಿಶೇಷ.


      ಛಾಯಾಗ್ರಹಣ ಎಸ್.ಬಿ.ಮಂಜುನಾಥ್ ನಾಯಕ್, ಕಾರ್ಯಕಾರಿ ನಿರ್ಮಾಪಕ ವಿನಯ್.ಎನ್, ಸಂಕಲನ ಮಧುತುಂಬುಕೆರೆ, ಸಾಹಸ ನರಸಿಂಹ ಅವರದಾಗಿದೆ. ಬೆಂಗಳೂರು, ಉಡುಪಿ, ಸಕಲೇಶಪುರ, ಕಳಸ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ